
ಬೆಂಗಳೂರು: ಬೈಕ್‌ನಲ್ಲಿ ಸಂಚರಿಸುವಾಗ ಹಿಂಬದಿ ಸವಾರರಿಗೂ ಹೆಲ್ಮೆಟ್ ಕಡ್ಡಾಯ ಹೆಲ್ಮೆಟ್ ಹಾಕದೇ ಹೋದರೆ ಟ್ರಾಫಿಕ್ ಪೊಲೀಸರು ದಂಡ ವಿಧಿಸುತ್ತಾರೆ. ಟ್ರಾಫಿಕ್ ಪೊಲೀಸರು ಗಮನಿಸದೇ ಹೋದರೂ ಟ್ರಾಫಿಕ್ ಕ್ಯಾಮರಾಗಳು ಸುಮ್ಮನೇ ಬಿಡಲ್ಲ, ಫೋಟೋ ತೆಗೆದು ಚಲನ್ ಮನೆಗೆ ಕಳುಹಿಸುತ್ತವೆ. ಹೀಗಿರುವಾಗ ಟ್ರಾಫಿಕ್ ಪೊಲೀಸರು ಹಾಗೂ ಕ್ಯಾಮರಾಗಳಿಗೆ ಮಂಕುಬೂದಿ ಎರಚಲು ಕೇರಳದ ಯುವಕನೋರ್ವ ತಲೆಗೆ ಬಾಣಲೆ ಹಾಕಿಕೊಂಡು ಹೋಗಿದ್ದು, ಈ ಘಟನೆಯ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದು, ನೆಟ್ಟಿಗರು ಹಲವು ಕಾಮೆಂಟ್ ಮಾಡಿದ್ದಾರೆ. ಈತ ಬೈಕ್‌ನಲ್ಲಿ ಹೋಗುತ್ತಿದ್ದರೆ ಹಿಂಬದಿ ವಾಹನ ಸವಾರರು ಯಾರೋ ಈ ದೃಶ್ಯವನ್ನು ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಿ ಪೋಸ್ಟ್ ಮಾಡಿದ್ದಾರೆ.
ಬೆಂಗಳೂರಿನ ರೂಪೇನ ಅಗ್ರಹಾರದಲ್ಲಿ ಭಾರಿ ಸಂಚಾರ ದಟ್ಟಣೆ ವೇಳೆ ಸೆರೆಯಾದ ದೃಶ್ಯ ಇದಾಗಿದೆ. ಕರ್ನಾಟಕ ಪೋರ್ಟ್‌ಪೋಲಿಯೋ ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವೀಡಿಯೋ ಪೋಸ್ಟ್ ಆಗಿದ್ದು, ಪೀಕ್ ಬೆಂಗಳೂರು ಕ್ಷಣ! ಹಾಸ್ಯ ಸಿನಿಮಾದಲ್ಲಿ ನೇರವಾಗಿ ಕಂಡುಬರುವ ದೃಶ್ಯದಂತೆ, ರೂಪೇನ ಅಗ್ರಹಾರದ ಬಳಿ ಹಿಂಬದಿ ಸವಾರನೊಬ್ಬ ಹೆಲ್ಮೆಟ್‌ಗೆ ಬದಲಾಗಿ ಹುರಿಯಲು ಬಳಸುವ ಬಾಣಲೆಯಿಂದ ತಲೆಯನ್ನು ಮುಚ್ಚಿಕೊಂಡು ಟ್ರಾಫಿಕ್ ಚಲನ್‌ನಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಕಂಡುಬಂದಿದೆ. ಹೌದು, ಹುರಿಯುವ ಬಾಣಲೆ. ಏಕೆಂದರೆ ಜೀವನವು ನಿಮಗೆ ಗುಂಡಿಗಳನ್ನು ನೀಡಿದಾಗ, ನೀವು ಅಡುಗೆ ಪಾತ್ರೆಗಳನ್ನು ಹಿಡಿಯುತ್ತೀರಿ. ಈ ದೃಶ್ಯವು ನೋಡುಗರನ್ನು ಮತ್ತು ಸಂಚಾರ ಪೊಲೀಸರನ್ನು ದಿಗ್ಭ್ರಮೆಗೊಳಿಸಿದೆ. ಏಕೆಂದರೆ ಬೈಕ್ ಸವಾರ ತನ್ನ ಅಡುಗೆ ಪಾತ್ರೆಯನ್ನು ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್‌ನಂತೆ ಆತ್ಮವಿಶ್ವಾಸದಿಂದ ಬ್ಯಾಲೆನ್ಸ್ ಮಾಡಿದ್ದಾನೆ. ಆದರೆ ನಿಜವಾಗಿ ಇದು ತಮಾಷೆಯಲ್ಲ, ಇದು ಭಯಾನಕ.
ಹುರಿಯುವ ಪ್ಯಾನ್ ಆಮ್ಲೆಟ್ ಮಾಡಬಹುದು, ಆದರೆ ತಲೆ ಬುರುಡೆಯನ್ನು ಉಳಿಸುವುದಿಲ್ಲ. ಹೆಲ್ಮೆಟ್‌ಗಳು ಫ್ಯಾಷನ್ ವಸ್ತುಗಳಲ್ಲ ಅಥವಾ ವೈರಲ್ ರೀಲ್‌ಗೆ ಬಳಸುವಂತದ್ದಲ್ಲ, ಅವು ಜೀವರಕ್ಷಕವಾಗಿವೆ. ಆದ್ದರಿಂದ, ಅಲ್ಲಿರುವ ಪ್ರತಿಯೊಬ್ಬ ಕ್ರಿಯೇಟಿವ್ ಆತ್ಮಕ್ಕೂ ಜುಗಾಡ್ ಅನ್ನು ಬಿಟ್ಟುಬಿಡಿ, ಹೆಲ್ಮೆಟ್ ಧರಿಸಿ. ಏಕೆಂದರೆ ಬೆಂಗಳೂರಿನ ಟ್ರಾಫಿಕ್‌ಗಿಂತ ಕಠಿಣ ಹಾಗೂ ಅಗತ್ಯವಾದ ಏಕೈಕ ವಿಷಯವೆಂದರೆ ರಸ್ತೆಗುರುಳಿದ ನಂತರ ನಿಮ್ಮ ತಲೆ. ಬುದ್ಧಿವಂತರಾಗಿರಿ, ಸುರಕ್ಷಿತವಾಗಿರಿ ಮತ್ತು ಹುರಿಯುವ ಪ್ಯಾನ್ ಅನ್ನು ಅದು ಇರಬೇಕಾದ ಸ್ಥಳದಲ್ಲಿ ಇರಿಸಿ ಅಡುಗೆಮನೆಯಲ್ಲಿ, ನಿಮ್ಮ ತಲೆಯ ಮೇಲೆ ಅಲ್ಲ ಎಂದು ಬರೆದುಕೊಂಡಿದ್ದಾರೆ.
ಈ ವೀಡಿಯೋ ನೋಡಿದ ಅನೇಕರು, ಹಲವು ತಮಾಷೆಯ ಕಾಮೆಂಟ್ ಮಾಡಿದ್ದಾರೆ. ಈತನ ಪತ್ನಿ ಅಡುಗೆ ಮನೆಯಲ್ಲಿದ್ದ ಪಾತ್ರೆ ಏನಾಯ್ತು ಎಂದು ಹುಡುಕುತ್ತಿರಬಹುದು ಎಂದು ಕಾಮೆಂಟ್ ಮಾಡಿದ್ದಾರೆ. ಚಲನ್ ತಪ್ಪಿಸಿಕೊಳ್ಳಲು ಕಡಾಯ್ ಬಳಸಿ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಕೆಲವರು ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆದೇಶಿಸಿದ್ದಾರೆ. ಬೆಂಗಳೂರು ಪೊಲೀಸರು ಈ ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದು, ಕ್ರಮದ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ರಾಜಸ್ಥಾನದ ಪುಷ್ಕರ್ ಮೇಳದಲ್ಲಿ 21 ಕೋಟಿ ಮೌಲ್ಯದ ಕೋಣ ಹಠಾತ್ ಸಾವು
ಇದನ್ನೂ ಓದಿ: ಟ್ಯೂಷನ್‌ಗೆ ಬರ್ತಿದ್ದ ಪುಟ್ಟ ಮಕ್ಕಳಿಗೆ ಲೈಂ*ಗಿಕ ಕಿರುಕುಳ: ಟ್ಯೂಷನ್ ಶಿಕ್ಷಕನಿಗೆ ಜೈಲು