ಬೆಂಗಳೂರು : ರೋಗಿ ಇಲ್ಲದಿದ್ರೂ ಸೈರನ್ ಹಾಕೊಂಡ್ ಬಂದು ಸ್ಕೂಟರ್‌ಗೆ ಆಂಬುಲೆನ್ಸ್ ಡಿಕ್ಕಿ: ದಂಪತಿ ಸಾವು

Published : Nov 02, 2025, 01:26 PM IST
Ambulence accident in bengaluru

ಸಾರಾಂಶ

Richmond Circle fatal crash: ಬೆಂಗಳೂರಿನ ರಿಚ್‌ಮಂಡ್ ಸರ್ಕಲ್‌ನಲ್ಲಿ ರೋಗಿಗಳಿಲ್ಲದೇ ಇದ್ದರೂ ಸೈರನ್ ಹಾಕಿಕೊಂಡು ವೇಗವಾಗಿ ಬಂದ ಆಂಬುಲೆನ್ಸ್ ರೆಡ್ ಸಿಗ್ನಲ್ ಜಂಪ್ ಮಾಡಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಸ್ಕೂಟರ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ರೋಗಿಗಳಿಲ್ಲದಿದ್ದರೂ ಸೈರನ್ ಹಾಕೊಂಡು ವೇಗವಾಗಿ ಬಂದ ಆಂಬುಲೆನ್ಸ್‌ನ ಅವಾಂತರ

ಸಂಕಷ್ಟದ ಸಮಯದಲ್ಲಿ ಜೀವ ಉಳಿಸಬೇಕಾದ ಆಂಬುಲೆನ್ಸೇ ಜೀವ ತೆಗೆದಿದೆ.  ಒಳಗೆ ರೋಗಿಗಳು ಇಲ್ಲದೇ ಇದ್ದರೂ ಸೈರ್ ಹಾಕೊಂಡು  ವೇಗವಾಗಿ ಸಾಗುತ್ತಿದ್ದ ಆಂಬುಲೆನ್ಸ್ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಬೆಂಗಳೂರಿನ ರಿಚ್‌ಮಂಡ್ ಸರ್ಕಲ್‌ನಲ್ಲಿ ಈ ಘಟನೆ ನಡೆದಿದೆ. ರೆಡ್ ಸಿಗ್ನಲ್ ಜಂಪ್ ಮಾಡಿ ಮುಂದೆ ಹೋದ ಆಂಬುಲೆನ್ಸ್ ನಿಯಂತ್ರಣ ಕಳೆದುಕೊಂಡಿದ್ದು, ಸಿಗ್ನಲ್‌ನಲ್ಲಿ ನಿಲ್ಲಿಸಲ್ಪಟ್ಟಿದ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಈ ವೇಳೆ ಸ್ಕೂಟರ್‌ನಲ್ಲಿದ್ದ ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರನ್ನು ಸ್ಕೂಟರ್ ರೈಡ್ ಮಾಡ್ತಿದ್ದ 40 ವರ್ಷದ ಇಸ್ಮಾಯಿಲ್ ಮತ್ತು ಅವರ ಪತ್ನಿ ಸಮೀನ್ ಬಾನು ಎಂದು ಗುರುತಿಸಲಾಗಿದೆ.

ಹಲವು ವಾಹನಗಳಿಗೆ ಡಿಕ್ಕಿ: ಸ್ಕೂಟರ್‌ನಲ್ಲಿದ್ದ ದಂಪತಿ ಸಾವು

ಶನಿವಾರ ರಾತ್ರಿ 11:00 ಗಂಟೆ ಸುಮಾರಿಗೆ ನಗರದ ರಿಚ್ಮಂಡ್ ವೃತ್ತದ ಬಳಿ ಈ ಘಟನೆ ನಡೆದಿದ್ದು, ವೇಗವಾಗಿ ಬಂದ ಆಂಬ್ಯುಲೆನ್ಸ್ ಹಿಂದಿನಿಂದ ಡಿಕ್ಕಿ ಹೊಡೆದ ಸಮಯದಲ್ಲಿ ಹಲವು ವಾಹನ ಸವಾರರು ಸಿಗ್ನಲ್‌ನಲ್ಲಿ ತಮ್ಮ ವಾಹನಗಳನ್ನು ನಿಲ್ಲಿಸಿದ್ದರು. ಆಂಬುಲೆನ್ಸ್ ಬಂತಲ್ಲ ಎಂದು ಅವರು ಹಾದಿ ಮಾಡಿಕೊಡುವ ಪ್ರಯತ್ನದಲ್ಲಿದ್ದರು. ಅಷ್ಟರಲೇ ಈ ಆಂಬುಲೆನ್ಸ್ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿದೆ. ಆಂಬುಲೆನ್ಸ್  ಎಷ್ಟು ವೇಗವಾಗಿತ್ತೆಂದರೆ ಅದು ಮೂರು ದ್ವಿಚಕ್ರವಾಹನಗಳಿಗೆ ಡಿಕ್ಕಿ ಹೊಡೆದು, ಅವುಗಳಲ್ಲಿ ಒಂದನ್ನು ಕೆಲವು ಮೀಟರ್‌ಗಳವರೆಗೆ ದೂರ ಎಳೆದುಕೊಂಡು ಹೋಗಿ ನಂತರ ಪೊಲೀಸ್ ಔಟ್‌ಪೋಸ್ಟ್‌ಗೆ ಡಿಕ್ಕಿ ಹೊಡೆದ ನಂತರ ನಿಂತಿದೆ.

ರೋಗಿಗಳಿಲ್ಲದೇ ಇದ್ದರೂ ಸೈರನ್: ಆಂಬುಲೆನ್ಸ್ ಮಗುಚಿ ಹಾಕಿ ಸಾರ್ವಜನಿಕರ ಆಕ್ರೋಶ

ಈ ದುರಂತದಲ್ಲಿಇಬ್ಬರು ಸಾವನ್ನಪ್ಪಿದ್ರೆ ಇನ್ನಿಬ್ಬರು ಗಂಭೀರ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಗ್ನಲ್‌ನಲ್ಲಿ ವಾಹನಗಳಿಗೆ ಡಿಕ್ಕಿ ಹೊಡೆದ ನಂತರ ಪೊಲೀಸ್ ಔಟ್‌ಪೋಸ್ಟ್‌ಗೆ ಡಿಕ್ಕಿ ಹೊಡೆದು ಆಂಬುಲೆನ್ಸ್ ನಿಂತಿದೆ. ಘಟನೆಯ ನಂತರ ಆಕ್ರೋಶಗೊಂಡ ಜನ ಆಂಬುಲೆನ್ಸನ್ನು ಮಗುಚಿ ಹಾಕಿ ಆಕ್ರೋಶ ಹೊರ ಹಾಕಿದ್ದಾರೆ. ಈ ಆಂಬುಲೆನ್ಸ್‌ನಲ್ಲಿ ಯಾರೂ ರೋಗಿಗಳು ಇರಲಿಲ್ಲ, ಹಾಗಿದ್ದೂ ಚಾಲಕ ಅಷ್ಟೊಂದು ವೇಗದಲ್ಲಿ ಸೈರನ್ ಹಾಕಿಕೊಂಡು ಬರುವ ಅಗತ್ಯವೇನಿತ್ತು ಎಂದು ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಂಬುಲೆನ್ಸ್ ಚಾಲಕನ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಆಂಬುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಪೊಲೀಸ್ ಔಟ್‌ಪೋಸ್ಟ್ ಕೂಡ ಜಖಂ ಆಗಿದೆ. 

ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದು, ಅಪಘಾತದ ಕಾರಣದ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಆಂಬ್ಯುಲೆನ್ಸ್ ಚಾಲಕ ಅಶೋಕ್ ಅವರನ್ನು ವಶಕ್ಕೆ ಪಡೆಯಲಾಗಿದ್ದು, ಅವರ ವಿರುದ್ಧ ಎಫ್‌ಐಆರ್ ಕೂಡ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು: ಡಂಬಲ್ಸ್‌ನಿಂದ ಹೊಡೆದು ವಿಜಯವಾಡದ ಯುವಕನಿಂದ ಚಿತ್ರದುರ್ಗದ ಸಹೋದ್ಯೋಗಿ ಕೊಲೆ

ಇದನ್ನೂ ಓದಿ: 4 ನೇ ಕ್ಲಾಸ್ ಹುಡುಗಿಗೆ ಸಾಯುವಂತದ್ದು ಏನಾಗಿತ್ತು: ಶಾಲಾ ಕಟ್ಟಡದಿಂದ ಹಾರಿ ಪ್ರಾಣ ಬಿಟ್ಟ ಬಾಲಕಿ

PREV
Read more Articles on
click me!

Recommended Stories

ಬೆಂಗಳೂರು ಅಪಾರ್ಟ್‌ಮೆಂಟ್‌ನ 16 ಕುಟುಂಬಗಳಿಗೆ ರೌಡಿಸಂ ದರ್ಶನ; ಮಾಟ-ಮಂತ್ರ ಮಾಡಿಸಿ ಕಿರುಕುಳ!
'63% ಭ್ರಷ್ಟಾಚಾರ' ಹೇಳಿಕೆ ವಿವಾದ: 'ನನ್ನ ಹೇಳಿಕೆ ತಿರುಚಲಾಗಿದೆ' ಉಪಲೋಕಾಯುಕ್ತ ನ್ಯಾ. ವೀರಪ್ಪ ಸ್ಪಷ್ಟನೆ