Bengaluru: ಮನೆಯಲ್ಲಿ ನೀರಿಲ್ಲ, ಆಫೀಸ್‌ಗೆ ಬಂದು ಬ್ರಶ್‌ ಮಾಡಿದ ಉದ್ಯೋಗಿ!

Published : Jun 06, 2024, 11:06 PM IST
Bengaluru: ಮನೆಯಲ್ಲಿ ನೀರಿಲ್ಲ, ಆಫೀಸ್‌ಗೆ ಬಂದು ಬ್ರಶ್‌ ಮಾಡಿದ ಉದ್ಯೋಗಿ!

ಸಾರಾಂಶ

ಬೆಂಗಳೂರಿನಲ್ಲಿ ಮಳೆ ಆಗುತ್ತಿದ್ದರೂ, ಕಾವೇರಿ ನೀರು ಇನ್ನೂ ಸಮರ್ಪಕವಾಗಿ ಪೂರೈಕೆ ಆಗುತ್ತಿಲ್ಲ. ಬೆಂಗಳೂರಿನಲ್ಲಿ ಉದ್ಯೋಗಿಯೊಬ್ಬ ಮನೆಯಲ್ಲಿ ನೀರಿಲ್ಲದ ಕಾರಣಕ್ಕೆ ಆಫೀಸ್‌ಗೆ ಬಂದು ಬ್ರಶ್‌ ಮಾಡಿದ ಫೋಟೋ ಸಖತ್‌ ವೈರಲ್‌ ಆಗುತ್ತಿದೆ.  

ಬೆಂಗಳೂರು (ಜೂ.6):  ಉದ್ಯಾನಗರಿಯಲ್ಲಿ ಭಾರೀ ಮಳೆಯಾಗುತ್ತಿದೆ. ಕಳೆದ ವಾರ ಒಂದು ದಿನ ಬಂದ ಮಳೆ ಇಡೀ ಬೆಂಗಳೂರನ್ನೇ ಕಂಗಾಲು ಮಾಡು ಬಿಟ್ಟಿತ್ತು. ಇಷ್ಟೆಲ್ಲಾ ಇದ್ದರೂ ಬೆಂಗಳೂರಿನಲ್ಲಿ ನೀರಿನ ಬರ ಮುಂದುವರಿದಿದೆ. ಸಿಲಿಕಾನ್‌ ಸಿಟಿಯ ಕೆಲವು ಭಾಗದ ಮನೆಗಳಿಗೆ ಇಂದಿಗೂ ನೀರುನ ಸಮಸ್ಯೆ ಇದೆ ಎನ್ನುವ ಅರ್ಥದ ಸೋಶಿಯಲ್‌ ಮೀಡಿಯಾ ಪೋಸ್ಟ್‌ಗಳು ಬಂದಿವೆ. ಬೆಂಗಳೂರಿನಲ್ಲಿ ನೀರಿನ ಬಿಕ್ಕಟ್ಟು ಇರುವ ಕಾರಣಕ್ಕೆ ಉದ್ಯೋಗಿಯೊಬ್ಬ ಆಫೀಸ್‌ಗೆ ತೆರಳಿ ಅಲ್ಲಿ ಬ್ರಶ್‌ ಮಾಡಿರುವ ಘಟನೆ ನಡೆದಿದೆ. ಆತ ಹಂಚಿಕೊಂಡಿರುವ ಪೋಸ್ಟ್‌ ಸೋಶಿಯಲ್‌ ಮೀಡಿಯಾದಲ್ಲಿ ವೈರರಲ್‌ ಆಗಿದೆ. ರಿಷಬ್‌ ಶ್ರೀವಾಸ್ತವ ಎನ್ನುವ ವ್ಯಕ್ತಿ ಈ ಕುರಿತಾಗಿ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ತಮ್ಮ ಆಫೀಸ್‌ನ ವಾಷ್‌ರೂಮ್‌ನಲ್ಲಿ ಬ್ರಶ್‌ ಮಾಡುತ್ತಿರುವ ಫೋಟೋವನ್ನು ಸ್ವತಃ ಅವರೇ ಹಂಚಿಕಂಡಿದ್ದಾರೆ. 'ಇದು ಬೆಂಗಳೂರಿನ ಪೀಕ್‌ ಮೂಮೆಂಟ್‌, ಮನೆಯಲ್ಲಿ ನೀರಿಲ್ಲದ ಕಾರಣ ಇಂದು ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬಂದಿದ್ದೇನೆ..' ಎಂದು ಅವರು ಶೀರ್ಷಿಕೆ ನೀಡಿದ್ದಾರೆ.

ಇನ್ನು ಇದಕ್ಕೆ ಕೆಲವರು ಬಹಳ ತಮಾಷೆಯಾಗಿ ಕಾಮೆಂಟ್‌ ಮಾಡಿದ್ದಾರೆ. ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿತ್ತು. ಆಗ ಎರಡು ಬಕೆಟ್‌ಅನ್ನು ಮನೆಯ ಹೊರಗಡೆ ಇಟ್ಟಿದ್ದರೆ ಸಾಕಿತ್ತು ಎಂದು ಆತನಿಗೆ ಸಲಹೆ ನೀಡಿದ್ದಾರೆ. ಎಲೆಕ್ಷನ್‌ ದಿನ ವೋಟ್‌ ಮಾಡೋದು ಬಿಟ್ಟು ಹುಡುಗೀರ ಜೊತೆ ಪಿಕ್‌ನಿಕ್‌ಗೆ ಹೋಗುವ ನಿಮ್ಮಂಥವರಿಗೆ ತೊಳಿಯೋಕು ಕೂಡ ನೀರು ಸಿಗಬಾರದು ಎಂದು ಮತ್ತೊಬ್ಬರು ಕಾಮೆಂಟ್‌ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನೀರಿನ ಸಮಸ್ಯೆಗೆ ನೀವು ಕಂಡುಕೊಂಡಿರುವ ಉಪಾಯ ಬಹಳ ಉತ್ತಮವಾಗಿ ಎಂದು ಮತ್ತೊಬ್ಬರು ಬರೆದಿದ್ದರೆ, ಎಲ್ಲಾ ಕಚೇರಿಗಳಿಗೆ ಸರ್ಕಾರ ನೀಡುತ್ತಿರುವುದು ಟ್ರೀಟೆಡ್‌ ವಾಟರ್‌. ಹೀಗೆ ಮಾಡ್ಕೊಂಡು ಏನಾದರೂ ಕಾಯಿಲೆ ಬರಬಹುದು ಎಂದು ಪೋಸ್ಟ್‌ ಮಾಡಿದ್ದಾರೆ.

ಕಳೆದ ವರ್ಷ ರಾಜ್ಯದಲ್ಲಿ ಮುಂಗಾರು ದೊಡ್ಡ ಮಟ್ಟದಲ್ಲಿ ಕೈಕೊಟ್ಟಿದ್ದರಿಂದ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿತ್ತು. ಅದಲ್ಲದೆ, ತಮಿಳುನಾಡು-ಕರ್ನಾಟಕದ ನಡುವಿನ ಕಾವೇರಿ ಜಗ್ಗಾಟದ ನಡುವೆ ರಾಜಧಾನಿಗೆ ನೀರಿನ ಬಿಕ್ಕಟ್ಟು ಎದುರಾಗಿತ್ತು. ಬೆಂಗಳೂರಿನ ಪ್ರಮುಖ ನಗರಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದರಿಂದ ಸರ್ಕಾರದ ವತಿಯಿಂದಲೇ ಕೆಲವೆಡೆ ಬೋರ್‌ ಕೊರೆಸಲಾಗಿತ್ತು. ಕೆಲವು ಏರಿಯಾಗಳಿಗೆ ಸರ್ಕಾರದ ವತಿಯಿಂದಲೇ ನೀರು ಹಂಚಿಕೆ ಮಾಡಲಾಗಿತ್ತು.

ಮನೆಯವರ ಮುಂದೆ ನೋಡಲಾಗದ ಒಂದು ಕನ್ನಡ ಸಿನಿಮಾ ಯಾವುದು? ಇದಕ್ಕೆ ಬಂದ ಉತ್ತರ ನೋಡಿದ್ರಾ..

ಇನ್ನು ಈ ವ್ಯಕ್ತಿಯ ಪೋಸ್ಟ್‌ ನೋಡಿ, ಈತ ಹೇಳುತ್ತಿರುವುದು ನಿಜವೋ ಅಥವಾ ಜನರ ಗಮನ ಸೆಳೆಯುವ ನಿಟ್ಟನಲ್ಲಿ ಈ ರೀತಿ ಪೋಸ್ಟ್‌ ಹಾಕಿದ್ದಾನೆಯೇ ಎನ್ನುವುದು ಕುತೂಹಲದ ಪ್ರಶ್ನೆಯಾಗಿದೆ.

'ಲೇ ನಾಯಿ..' ಎಂದವನಿಗೆ ಮುಟ್ಟಿನೋಡಿಕೊಳ್ಳುವಂತ ಉತ್ತರ ನೀಡಿದ ರೀಲ್ಸ್‌ ರಾಣಿ ಭೂಮಿಕಾ ಬಸವರಾಜ್‌!

 

PREV
Read more Articles on
click me!

Recommended Stories

ಕನಕ ಗುರುಪೀಠದ ಶ್ರೀ ಸಿದ್ದರಾಮಾನಂದ ಸ್ವಾಮೀಜಿ ವಿಧಿವಶ: ಸಿಎಂ, ಡಿಸಿಎಂ ಸಂತಾಪ- ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ
₹1000+ ಕೋಟಿ ಸೈಬರ್‌ ವಂಚನೆ : ಸ್ವಾಮೀಜಿ.ಕಾಂ, ನಿಯೋ ಸಿಸ್ಟಮ್‌ ಹೆಸರಲ್ಲಿ ಜಾಲ ಪತ್ತೆ