ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಉಗುಳಿದ ಆಟೋ ಚಾಲಕ!

By Vinutha Perla  |  First Published Jun 4, 2024, 12:59 PM IST

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ಮೇಲೆ ಆಟೋರಿಕ್ಷಾ ಚಾಲಕನೊಬ್ಬ ಉಗುಳಿದ್ದಾನೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಇಂದಿರಾನಗರದಲ್ಲಿ ಈ ಘಟನೆ ನಡೆದಿರುವುದಾಗಿ ಮಾಹಿತಿಯನ್ನು ಪೋಸ್ಟ್ ಮಾಡಿದ್ದಾರೆ.


ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ನನ್ನ ಮೇಲೆ ಆಟೋರಿಕ್ಷಾ ಚಾಲಕನೊಬ್ಬ ಉಗುಳಿದ್ದಾನೆ ಎಂದು ಬೆಂಗಳೂರಿನ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಸಾಫ್ಟ್‌ವೇರ್ ಇಂಜಿನಿಯರ್ ಆಗಿರುವ ಪರಿಶಿ ಅವರು ಬಿಳಿ ಶರ್ಟ್ ಮತ್ತು ಕಪ್ಪು ಪ್ಯಾಂಟ್ ಧರಿಸಿರುವ ತಮ್ಮ ಎರಡು ಫೋಟೋಗಳನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರ ಬಲಗೈ ಮತ್ತು ಅಂಗಿಯ ಹಿಂಭಾಗದಲ್ಲಿ ಕೆಂಪು ಉಗುಳಿನ ಗುರುತು ಇರುವುದನ್ನು ನೋಡಬುದು.

ಯುವತಿ 'ಇಂದಿರಾನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಒಬ್ಬ ಆಟೋ ಡ್ರೈವರ್ ನನ್ನ ಮೇಲೆ ಉಗುಳಿದನು' ಎಂದು ಶೀರ್ಷಿಕೆ ನೀಡಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಗಮನ ಸೆಳೆದ ನಂತರ, ಬೆಂಗಳೂರು ನಗರ ಪೊಲೀಸರು ಹೆಚ್ಚಿನ ಮಾಹಿತಿಗಳನ್ನು ಹಂಚಿಕೊಳ್ಳುವಂತೆ ಯುವತಿಗೆ ಮೆಸೇಜ್ ಮಾಡಿದ್ದಾರೆ. 'ದಯವಿಟ್ಟು ನಿರ್ದಿಷ್ಟ ಪ್ರದೇಶದ ವಿವರಗಳನ್ನು ಮತ್ತು ನಿಮ್ಮ ಸಂಪರ್ಕ ಸಂಖ್ಯೆಯನ್ನು ಡಿಎಂ ಮೂಲಕ ಒದಗಿಸಿ' ಎಂದು ಬೆಂಗಳೂರು ನಗರ ಪೊಲೀಸರು ಕಾಮೆಂಟ್ ಮಾಡಿದ್ದಾರೆ.

Latest Videos

undefined

Interesting Facts : ಇಲ್ಲಿನ‌ ಜನ‌ ಕಾರ್ ಲಾಕ್ ಮಾಡೋದೇ ಇಲ್ಲ, ಕಾರಣ ಹೇಳ್ತೀವಿ ಕೇಳಿ!

ಬೆಂಗಳೂರು ನಗರದ ಸ್ಟಾರ್ಟ್ಅಪ್ ಹಬ್‌ಗಳಲ್ಲಿ ಒಂದೆಂದು ಪರಿಗಣಿಸಲಾದ ಇಂದಿರಾನಗರದಲ್ಲಿ ಈ ಘಟನೆ ನಡೆದಿರುವುದು ಸಿಲಿಕಾನ್ ಸಿಟಿ ಮಂದಿಯಲ್ಲಿ ಆತಂಕಕ್ಕೆ ಕಾರಣವಾಗಿದೆ. ಫೋಟೋಗಳನ್ನು ನೋಡಿದ ಇತರ ಎಕ್ಸ್‌ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಇದೇ ರೀತಿಯ ಘಟನೆ ತಮಗೂ ನಡೆದಿದೆ ಎಂದು ಕೆಲವರು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ. 

ಒಬ್ಬ ಬಳಕೆದಾರರು, 'ನೀವು ಆಟೋರಿಕ್ಷಾದ ನಂಬರ್ ಪ್ಲೇಟ್‌ನ್ನು ಗಮನಿಸಿದ್ದೀರಾ, ಗೊತ್ತಿದ್ದರೆ ತಕ್ಷಣ ಅದನ್ನು ಪೊಲೀಸರಿಗೆ ತಿಳಿಸಿ. ಅವರು ಸಿಸಿಟಿವಿಯಿಂದ ಸಂಖ್ಯೆಯನ್ನು ಮರುಪಡೆಯಲು ಪ್ರಯತ್ನಿಸುತ್ತಾರೆ. ಈ ರೀತಿಯ ವರ್ತನೆಗೆ ಶಿಕ್ಷೆಯಾಗಬೇಕು' ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬ ಬಳಕೆದಾರರು, 'ನನಗೂ ಒಮ್ಮೆ ನಡೆದುಕೊಂಡು ಹೋಗುತ್ತಿದ್ದಾಗ ಹೀಗಾಯಿತು. ಬಸ್‌ ಡ್ರೈವರ್ ನನ್ನ ಭುಜ, ತೋಳಿನ ಮೇಲೆ ಉಗುಳಿದನು' ಎಂದು ಹೇಳಿದ್ದಾರೆ.

Bengaluru: ಆಟೋ ಚಾರ್ಜ್ ಕೊಟ್ಟಿಲ್ಲವೆಂದು ಯುವತಿಯನ್ನು ಎಳೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದ ಚಾಲಕ

ಇನ್ನೊಬ್ಬರು, 'ಆ ಕ್ಷಣದಲ್ಲಿ ನೀವು ಅನುಭವಿಸಿದ ಅಸಹ್ಯವನ್ನು ನಾನು ಊಹಿಸಲು ಸಾಧ್ಯವಾಗಲಿಲ್ಲ' ಎಂದು ಪ್ರತಿಕ್ರಿಯೆ ನೀಡಿದ್ದಾರೆ. 'ಇಂದಿರಾನಗರದಲ್ಲಿಯೂ ಇಂಥಾ ಘಟನೆಗಳು ಆಗುತ್ತಿದೆಯಾ' ಎಂದು ಮತ್ತೊಬ್ಬರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

While walking around Indiranagar, an auto driver spat on me, and it happened to be the day I wore a white shirt pic.twitter.com/34WM8P8S4S

— Parishi (@parishi_twts)
click me!