ಬೆಂಗಳೂರಿಗೆ ಮತ್ತೆ ಅಲರ್ಟ್, ಮುಂದಿನ 3 ಗಂಟೆ ಭಾರಿ ಮಳೆ, 40 ಕಿ.ಮಿ ವೇಗದಲ್ಲಿ ಗಾಳಿ!

By Chethan Kumar  |  First Published Jun 2, 2024, 10:23 PM IST

ಭಾನುವಾರ ಬೆಂಗಳೂರಿನಲ್ಲಿ ಸುರಿದ ಮಳೆಗೆ ಹಲವು ಅವಾಂತರ ಸೃಷ್ಟಿಯಾಗಿದೆ. ಆದರೆ ಇದರ ಬೆನ್ನಲ್ಲೇ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮುಂದಿನ 3 ಗಂಟೆ ಭಾರಿ ಮಳೆ ಸುರಿಯಲಿದೆ ಎಂದು ಎಚ್ಚರಿಸಿದೆ. ಇಷ್ಟೇ ಅಲ್ಲ ಗಾಳಿಯ ವೇಗ ಹೆಚ್ಚಿರುವ ಕಾರಣ ಸುರಕ್ಷಿತ ಪ್ರದೇಶದಲ್ಲಿರಲು ಸೂಚಿಸಿಲಾಗಿದೆ.


ಬೆಂಗಳೂರು(ಜೂನ್ 02) ಭಾನುವಾರ ಸಂಜೆಯಿಂದ ಸುರಿಯುತ್ತಿರುವ ಭಾರಿ ಮಳೆಗೆ ಬೆಂಗಳೂರಿನ ಪ್ರಮುಖ ರಸ್ತೆಗಳು ಜಲಾವೃತಗೊಂಡಿದೆ. ಹಲವು ಮರಗಳು ಧರೆಗುರುಳಿದೆ. ಅಂಡರ್ ಪಾಸ್ ಜಲಾವೃತಗೊಂಡಿದೆ. ವಾಹನಗಳು, ಅಂಗಡಿ ಮುಂಗಟ್ಟುಗಳ ಮೇಲೆ ಮರ ಉರುಳಿ ಬಿದ್ದಿದೆ. ಇದೀಗ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ಮುಂದಿನ 3 ಗಂಟೆ ಕಾಲ ಬೆಂಗಳೂರಿನಲ್ಲಿ ಭಾರಿ ಮಳೆ ಸುರಿಯಲಿದೆ. ಗಾಳಿ ವೇಗ 40 ಕಿ.ಮೀ ಇರಲಿದೆ. ಹೀಗಾಗಿ ಮತ್ತಷ್ಟು ಅವಾಂತರ ಸೃಷ್ಟಿಯಾಗಲಿದೆ ಎಂದು ಇಲಾಖೆ ಎಚ್ಚರಿಸಿದೆ.

ಗುಡುಗು, ಮಿಂಚು ಸೇರಿ ಅತೀವ ಗಾಳಿಯೊಂದಿಗೆ ಮಳೆ ಸುರಿಯಲಿದೆ. 40 KM ವೇಗದಲ್ಲಿ ಗಾಳಿ ಬೀಸುತ್ತಿರುವ ಕಾರಣ ಮತ್ತಷ್ಟು ಮರಗಳು ಧರೆಗುರುಳುವ ಸಾಧ್ಯತೆ ಇದೆ. ಮರ, ವಿದ್ಯುತ್ ಕಂಬ, ಕೌಂಪೌಂಡ್ ಬಳಿ ನಿಲ್ಲಬೇಡಿ, ಅನವಶ್ಯಕವಾಗಿ ಹೊರಬರಬೇಡಿ ಎಂದು ಸೂಚನೆ ನೀಡಲಾಗಿದೆ. 

Tap to resize

Latest Videos

ಬೆಂಗಳೂರು ಮಳೆಗೆ ಅವಾಂತರ, ಮೆಟ್ರೋ ಹಳಿ ಮೇಲೆ ಬಿದ್ದ ಮರದಿಂದ ರೈಲು ಸೇವೆ ಸ್ಥಗಿತ!

ಬೆಂಗಳೂರಿನಲ್ಲಿ ಇಂದು ಸಂಜೆಯಿಂದ ಇದುವರೆಗೆ 69mm ಮಳೆಯಾಗಿದೆ. ಎಲ್ಲೆಡೆ ನೀರು ತುಂಬಿಕೊಂಡಿದೆ. ಮಳೆಯಿಂದ ಧರೆಗುರುಳಿದ ಮರಗಳ ತೆರವು ಕಾರ್ಯಗಳು ನಡೆಯುತ್ತದೆ. ಇತ್ತ ಎಂಜಿ ರಸ್ತೆ ಹಾಗೂ ಟ್ರಿನಿಟಿ ಮೆಟ್ರೋ ನಿಲ್ದಾಣದ ನಡುವೆ ಮೆಟ್ರೋ ಹಳಿ ಮೇಲೆ ಮರ ಬಿದ್ದ ಪರಿಮಾಣ ಮೆಟ್ರೋ ಸಂಚಾರ ಕೂಡ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಶಾಸಕ ಎನ್ಎ ಹ್ಯಾರಿಸ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ನನ್ನ ಕ್ಷೇತ್ರದಲ್ಲಿ ಮರ ಬಿದ್ದಿರೋದ್ರಿಂದ ಕಳೆದ ಎರಡು ಗಂಟೆಯಿಂದ ಇಲ್ಲೇ ಇದ್ದೇನೆ. ನಮಗೆ ಮಳೆ ಬೇಕು, ಅದರೆ ಹೆಚ್ಚು ಮಳೆ ಬಂಜಾಗ ಕೆಲವೊಮ್ಮೆ ಅವಾಂತರವಾಗುತ್ತದೆ. ರಸ್ತೆ ಹಾಗೂ ಮೆಟ್ರೋ ಎರಡೂ ಕೂಡ ಸ್ಥಗಿತಗೊಂಡಿದೆ. ಬಿದ್ದಿರುವ ಮರಳಗಳ  ತೆರವು ಕಾರ್ಯಾಚರಣೆ ತ್ವರಿತವಾಗಿ ನಡೆಯುತ್ತಿದೆ.  ಇವತ್ತು ರಾತ್ರಿಯೇ ರಸ್ತೆ ಕ್ಲಿಯರ್ ಆಗಲಿದೆ. ಮೆಟ್ರೋ ಸಂಚಾರ ನಾಳೆ ಬೆಳೆಗ್ಗೆಯಿಂದ ಎಂದಿನಂತೆ ಕಾರ್ಯನಿರ್ವಹಿಸಲಿದೆ ಎಂದು ಎನ್ಎ ಹ್ಯಾರಿಸ್ ಹೇಳಿದ್ದರೆ.  

ಕೆಲಕಾಲ ಬಿಡುವು ನೀಡಿದ್ದ ಮಳೆ ಮತ್ತೆ ಅಬ್ಬರಿಸಲು ಆರಂಭಿಸಿದೆ. ಹವಾಮಾನ ಇಲಾಖೆ ಸೂಚನೆಯಿಂತೆ ಮಳೆ ಬೆಂಬಿಡದೆ ಸುರಿಯುತ್ತಿದೆ. ಜೆ.ಪಿ.ನಗರದ ಇಂದಿರಾ ಗಾಂಧಿ ಸರ್ಕಲ್ ಜಂಕ್ಷನ್ ಬಳಿ ಮರ, ವಿದ್ಯುತ್ ಕಂಬ ನೆಲಕ್ಕೆ ಉರುಳಿದೆ. ಇದರಿಂದ ಸಂಚಾರ ಬಂದ್ ಆಗಿದೆ. ಇತ್ತ ವಿದ್ಯುತ್ ಕೂಡ ಸಂಪರ್ಕ ಕಡಿದುಕೊಂಡಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದೆ. ಹಲವು ಮನೆಗಳಿಗೆ ನೀರು ನುಗ್ಗಿದೆ. 

ಮುಂಗಾರು ಸಿದ್ಧತೆಯಲ್ಲಿ ರಾಜ್ಯ ಸರ್ಕಾರ ವಿಫಲ: ಮಾಜಿ ಸಿಎಂ ಬೊಮ್ಮಾಯಿ
 

click me!