ತಾಯಿಗೆ 1.87 ಕೋಟಿ ರೂ ಕಾರು ಗಿಫ್ಟ್ ನೀಡಿದ ಸಲ್ಮಾನ್ - ದುಬಾರಿ ಕಾರಿನ ವಿಶೇಷತೆ ಇಲ್ಲಿದೆ!

By Web Desk  |  First Published Feb 18, 2019, 4:12 PM IST

ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ತಾಯಿಗಾಗಿ ಬರೋಬ್ಬರಿ 1.87 ಕೋಟಿ ರೂಪಾಯಿ ಮೌಲ್ಯದ ಕಾರು ಉಡುಗೊರೆಯಾಗಿ ನೀಡಿದ್ದಾರೆ. ಈ ದುಬಾರಿ ಕಾರು ಹಲವು ವಿಶೇಷತೆಗಳನ್ನ ಒಳಗೊಂಡಿದೆ. ಆದರೆ ಸಲ್ಮಾನ್ ನೀಡಿದ ಕಾರನ್ನ ತಾಯಿ ಉಪಯೋಗಿಸುತ್ತಿಲ್ಲ. ಇಲ್ಲಿದೆ ಹೆಚ್ಚಿನ ವಿವರ.


ಮುಂಬೈ(ಫೆ.18): ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್, ತಾಯಿಗೆ 1.87 ಕೋಟಿ(ಎಕ್ಸ್ ಶೋ ರೂಂ) ರೂಪಾಯಿ ಮೌಲ್ಯದ ರೇಂಜ್ ರೇವರ್ LWB ಕಾರು ಗಿಫ್ಟ್ ನೀಡಿದ್ದಾರೆ. ದಿನನಿತ್ಯದ ಬಳಕೆಗಾಗಿ ಸಲ್ಮಾನ್ ಖಾನ್ ತಾಯಿ ಕಾರು ಖರೀದಿಸಲು ಮುಂದಾಗಿದ್ದರು. ಇದನ್ನ ಅರಿತ ಸಲ್ಮಾನ್ ಖಾನ್ ತಾಯಿಗೆ ರೇಂಜ್ ರೋವರ್ ಸ್ಪೆಷಲ್ ಎಡಿಶನ್ ಕಾರನ್ನ ಉಡುಗೊರೆಯಾಗಿ ನೀಡಿದ್ದಾರೆ.

ಇದನ್ನೂ ಓದಿ: ಕಿರಿಕ್ ಪಾರ್ಟಿ, ಉಪ್ಪಿ-2, ಅಣ್ಣಾ ಬಾಂಡ್, ರಾಜರಥದ ಹಿಂದಿನ ಶಕ್ತಿ ಕಣ್ಮರೆ

Tap to resize

Latest Videos

undefined

ರೇಂಜ್ ರೋವರ್ ಆಟೋಬಯೋಗ್ರಫಿ LWB ಎಡಿಶನ್ ಕಾರು ಇತರ ಕಾರಿಗಿಂತ ಗಾತ್ರದಲ್ಲೂ ದೊಡ್ಡದಾಗಿದೆ. 5.2 ಮೀಟರು ಉದ್ದವಿರುವ ಈ ಕಾರು ವಿಶ್ವದ ಅತೀ ಉದ್ದನೆಯ SUV ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕಾರಿನ ಸೀಟುಗಳನ್ನ 20 ವಿಧವಾಗಿ ಎಡ್ಜಸ್ಟ್ ಮಾಡಬುಹುದು. ಅತ್ಯಂದ ದೊಡ್ಡ ಪನೋರಮಿಕ್ ಸನ್‌ರೂಫ್ ಹೊಂದಿದೆ.

ಇದನ್ನೂ ಓದಿ: ಟಾಟಾ ನೆಕ್ಸಾನ್ ಮೇಲೆ ಬ್ತಿತು ಪಿಲ್ಲರ್ - ಸುರಕ್ಷತಾ ಕಾರಿನ ಪ್ರಯಾಣಿಕರೆಲ್ಲರು ಸೇಫ್

ಸಲ್ಮಾನ್ ಖಾನ್, ತಾಯಿಗೆ ಉಡುಗೊರೆ ನೀಡಿರುವ ರೇಂಜ್ ರೋವರ್ LWB ಅಟೋಬಯೋಗ್ರಫಿ ಎಡಿಶನ್ ಕಾರು 3.0 ಲೀಟರ್, V6 ಡಿಸೇಲ್ ಎಂಜಿನ್ ಹೊಂದಿದೆ. 254 Bhp ಪವರ್ ಹಾಗೂ 600 Nm ಪೀಕ್ ಟಾರ್ಕ್ ಉತ್ಪಾದಿಸೋ ಸಾಮರ್ಥ್ಯ ಹೊಂದಿದೆ. ಈ ಕಾರಿನ ಗರಿಷ್ಠ ವೇಗ 209 ಕಿ.ಮೀ ಪ್ರತಿ ಗಂಟೆಗೆ. ಗರಿಷ್ಠ ಸುರಕ್ಷತೆ ಹೊಂದಿರುವ ಈ ಕಾರು, ABS, EBD ಬ್ರೇಕ್ ಸಿಸ್ಟಮ್, ಏರ್‌ಬ್ಯಾಗ್ ಸೇರಿದಂತೆ ಎಲ್ಲಾ ರೀತಿಯ ಸುರಕ್ಷತಾ ನಿಯಮಗಳನ್ನ ಪಾಲಿಸಿದ ವಾಹನ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.

ಇದನ್ನೂ ಓದಿ: ಭಾರತೀಯ ಸೇನೆಗೆ ಬೇಕಿದೆ ಆಡ್‌ಆರ್ಮರ್ ಬುಲೆಟ್‌ಫ್ರೂಫ್ ವಾಹನ!

ರೇಂಜ್ ರೋವರ್ LWB ಅಟೋಬಯೋಗ್ರಫಿ ಬೆಲೆ 1.87 ಕೋಟಿ ರೂಪಾಯಿ(ಎಕ್ಸ್ ಶೋ ರೂಂ). ಆದರೆ ಸಲ್ಮಾನ್ ನೀಡಿರು ಈ ಉಡುಗೊರೆಯನ್ನ ತಾಯಿ ಬಳಸುತ್ತಿಲ್ಲ. ಕಾರಣ ಸಲ್ಮಾನ್ ತಾಯಿಗೆ ನಿತ್ಯದ ಬಳಕೆಗಾ ಸಣ್ಣ ಕಾರಿನ ಅವಶ್ಯಕತೆ ಇತ್ತು. ಮುಂಬೈ ಮಹಾನಗರದಲ್ಲಿನ ಟ್ರಾಫಿಕ್‌ನಲ್ಲಿ ದೊಡ್ಡ ಕಾರಿನಲ್ಲಿ ಪ್ರಯಾಣ ಮತ್ತಷ್ಟು ಕಷ್ಟವಾಗಲಿದೆ. ಹೀಗಾಗಿ ಸಲ್ಮಾನ್ ನೀಡಿದ ಕಾರನ್ನ ತಾಯಿ ಬಳಕೆ ಮಾಡುತ್ತಿಲ್ಲ. ಇದೀಗ ಸಲ್ಮಾನ್ ಖಾನ್ ತಾಯಿಗಾಗಿ ಹೊಸ ಕಾರು ಖರೀದಿಸಲು ಮುಂದಾಗಿದ್ದಾರೆ.
 

click me!