ಗರಿಷ್ಠ ಸೇಫ್ಟಿ ಟಾಟಾ ನೆಕ್ಸಾನ್ ಕಾರಿಗೆ ಮತ್ತೆರೆಡು ಫೀಚರ್ಸ್ ಸೇರ್ಪಡೆ!

By Web Desk  |  First Published Feb 18, 2019, 11:46 AM IST

ಗರಿಷ್ಠ ಸುರಕ್ಷತೆ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಟಾಟಾ ನೆಕ್ಸಾನ್ ಕಾರಿಗೆ ಮತ್ತೆರಡು ಸುರಕ್ಷತಾ ಫೀಚರ್ಸ್ ಸೇರಿಸಿಕೊಳ್ಳಲಾಗಿದೆ. ಟಾಟಾ ನೆಕ್ಸಾನ್ ಅಳವಡಿಸಿ ನೂತನ ಸೇಫ್ಟಿ ಫೀಚರ್ಸ್ ಯಾವುದು? ಇಲ್ಲಿದೆ ವಿವರ.


ನವದೆಹಲಿ(ಫೆ.18): ಭಾರತದ ಗರಿಷ್ಠ ಸುರಕ್ಷತೆಯ ಕಾರು ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಿರೋ ಟಾಟಾ ನೆಕ್ಸಾನ್ ಕಾರಿಗೆ ಮತ್ತೆರಡು ಸುರಕ್ಷತಾ ಫೀಚರ್ಸ್ ಸೇರಿಸಲಾಗಿದೆ.   ಈ ಮೂಲಕ  BNVSAP( Bharat New Vehicle Safety Assessment Program) ನೂತನ ನಿಯಮ ಪಾಲಿಸಿದೆ. ಟಾಟಾ ನೆಕ್ಸಾನ್ ಎಲ್ಲಾ ಸುರಕ್ಷತಾ ನಿಯಮ ಪಾಲಿಸಿದ ಭಾರತದ ಮೊದಲ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ.   

ಇದನ್ನೂ ಓದಿ: ಟಾಟಾ ನೆಕ್ಸಾನ್ ಮೇಲೆ ಬ್ತಿತು ಪಿಲ್ಲರ್ - ಸುರಕ್ಷತಾ ಕಾರಿನ ಪ್ರಯಾಣಿಕರೆಲ್ಲರು ಸೇಫ್

Latest Videos

undefined

ಟಾಟಾ ನೆಕ್ಸಾನ್ ಕಾರಿಗೆ ನೂತನವಾಗಿ ಪ್ಯಾಸೆಂಜರ್ ಸೀಟ್ ಬೆಲ್ಟ್ ವಾರ್ನಿಂಗ್ ಹಾಗೂ ಸ್ಪೀಡ್ ವಾರ್ನಿಂಗ್ ಫೀಚರ್ಸ್ ಸೇರ್ಪಡಿಸಲಾಗಿದೆ. ಸದ್ಯ ಕಾರು ಚಾಲಕ ಸೀಟ್ ಬೆಲ್ಟ್ ಹಾಕದಿದ್ದರೆ ವಾರ್ನಿಂಗ್ ನೀಡತ್ತದೆ. ಆದರೆ ಟಾಟಾ ನೆಕ್ಸಾನ್ ಕಾರಿನ ನೂತನ ಫೀಚರ್‌ನಿಂದ ಡ್ರೈವರ್ ಪಕ್ಕ ಸೀಟು ಹಾಗೂ ಹಿಂಬದಿ ಸೀಟಿನ ಪ್ರಯಾಣಿಕರು ಸೀಟ್ ಬೆಲ್ಟ್ ಹಾಕದಿದ್ದರೆ ಅಲರಾಂ ಬಡಿದುಕೊಳ್ಳುತ್ತೆ.

ಇದನ್ನೂ ಓದಿ: ಭಾರತೀಯ ಸೇನೆಗೆ ಬೇಕಿದೆ ಆಡ್‌ಆರ್ಮರ್ ಬುಲೆಟ್‌ಫ್ರೂಫ್ ವಾಹನ!

ಸ್ಪೀಡ್ ವಾರ್ನಿಂಗ್ ಫೀಚರ್‌ನಿಂದ ಕಾರು ಪ್ರತಿ ಗಂಟೆಗೆ 80 ಕಿ.ಮೀ ವೇಗ ದಾಟಿದರೆ ಸಿಂಗಲ್ ಬೀಪ್ ಸೌಂಡ್ ಅಲರಾಂ ಬಡಿದುಕೊಳ್ಳುತ್ತೆ. ಇನ್ನೂ 120 ಕಿ.ಮೀ ವೇಗ ದಾಟಿದರೆ ಸತತ ಅಲರಾಂ ಬಡಿದುಕೊಳ್ಳುತ್ತೆ.  BNVSAP ನಿಯಮದ ಪ್ರಕಾರ ಎಲ್ಲಾ ಕಾರುಗಳು ಪ್ಯಾಸೆಂಜರ್ ಸೀಟ್ ಬೆಲ್ಟ್ ಹಾಗೂ ಸ್ಪೀಡ್ ಅಲರಾಂ ಫೀಚರ್ ಸೇರಿಸಿಕೊಳ್ಳಲೇಬೇಕು. ಇದೀಗ ಟಾಟಾ ಈ ಫೀಚರ್ಸ್ ಸೇರ್ಪಡೆಗೊಳಿಸಿದೆ.

ಇದನ್ನೂ ಓದಿ: ಎಲೆಕ್ಟ್ರಿಕ್ ಕಾರು ಖರೀದಿಸುವವರಿಗೆ ಕೇಂದ್ರ ಸರ್ಕಾರ ನೀಡಲಿದೆ 50 ಸಾವಿರ ರೂ!

ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆಯಲ್ಲಿ ಟಾಟಾ ನೆಕ್ಸಾನ್ ಕಾರು 5 ಸ್ಟಾರ್ ರೇಟಿಂಗ್ ಪಡೆದಿದೆ. ಇದು ಅತ್ಯಂತ ಗರಿಷ್ಠ ಅಂಕವಾಗಿದೆ. ಈ ಮೂಲಕ ಭಾರತದಲ್ಲಿ ಗರಿಷ್ಠ ಅಂಕ ಪಡೆದ ಏಕೈಕ ಕಾರು ಅನ್ನೋ ಹೆಗ್ಗಳಿಕೆಗೆ ಟಾಟಾ ನೆಕ್ಸಾನ್ ಕಾರು ಪಾತ್ರವಾಗಿದೆ.
 

click me!