ಸ್ಯಾಂಡಲ್‌ವುಡ್ ಸ್ಟಾರ್ ಶಿವರಾಜ್ ಕುಮಾರ್ ದುಬಾರಿ ಕಾರು ಖರೀದಿಸಿದ್ದಾರೆ. ಪುನೀತ್ ರಾಜ್‌ಕುಮಾರ್ ಲ್ಯಾಂಬೋರ್ಗಿನಿ ಖರೀದಿಸಿದ ಬೆನ್ನಲ್ಲೇ ಶಿವರಾಜ್ ಕುಮಾರ್ ಕೂಡ ಕಾರು ಖರೀದಿಸಿದ್ದಾರೆ. ಶಿವಣ್ಣ ಖರೀದಿಸಿದ ಕಾರು ಯಾವುದು? ಇದರ ಬೆಲೆ ಎಷ್ಟು? ಈ ಕಾರಿನ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ವಿವರ.
ಬೆಂಗಳೂರು(ಮಾ.19): ಸ್ಯಾಂಡಲ್‌ವುಡ್ ನಟರು ಇತ್ತೀಚೆಗೆ ಒಬ್ಬರ ಮೇಲೊಬ್ಬರು ಐಷಾರಾಮಿ ಕಾರು ಖರೀದಿಸುತ್ತಿದ್ದಾರೆ. ಮಹಿಳಾ ದಿನಾಚರಣೆಗೆ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ತಮ್ಮ ಪತ್ನಿಗೆ ದುಬಾರಿ ಲ್ಯಾಂಬೋರ್ಗಿನಿ ಉರುಸ್ ಕಾರು ಗಿಫ್ಟ್ ನೀಡಿದ್ದರು. ಇದೀಗ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಐಷಾರಾಮಿ ವೋಲ್ವೋ S-90 ಕಾರು ಖರೀದಿಸಿದ್ದಾರೆ.
undefined
ಇದನ್ನೂ ಓದಿ: ಮಡದಿಗೆ ಐಷಾರಾಮಿ ಕಾರು ಗಿಫ್ಟ್ ನೀಡಿದ ಪುನೀತ್!
ದುಬಾರಿ ಬೆಲೆ ಕಾರು ಖರೀದಿಸಿದ ಶಿವರಾಜ್ ಕುಮಾರ್ ಕುಟುಂಬ ಸದಸ್ಯರ ಜೊತೆ ಪೂಜೆ ಸಲ್ಲಿಸಿದರು. ಬಳಿಕ ಶಿವರಾಜ್ ಕುಮಾರ್‌ಗೆ ಕಾರಿನ ಕುರಿತು ವಿವರಣೆ ನೀಡಲಾಯ್ತು. ವೋಲ್ವೋ S-90 ಕಾರಿನ ವಿಶೇಷತೆ, ಫೀಚರ್ಸ್, ಇತರಾ ಕಾರಿಗಿಂತ ಈ ಕಾರ ಭಿನ್ನ ಹೇಗೆ ಅನ್ನೋ ಡೆಮೋ ನೀಡಲಾಯಿತು.
ಇದನ್ನೂ ಓದಿ: ಪ್ರಿಯಾಂಕ ಚೋಪ್ರಾಗೆ 3 ಕೋಟಿ ಕಾರು ಗಿಫ್ಟ್ ನೀಡಿದ ನಿಕ್ ಜೋನಸ್!
ಶಿವರಾಜ್ ಕುಮಾರ್ ಖರೀದಿಸಿದ ವೋಲ್ವೋ S-90 ಕಾರು ಡೀಸೆಲ್ ಇಂಜಿನ್ ಹೊಂದಿದೆ. ಮರ್ಸಿಡೀಸ್ ಬೆಂಝ್ E-Class, ಆಡಿ A6, BMW 5-ಸೀರಿಸ್, ನ್ಯೂ ಜಾಗ್ವಾರ್ XF ಕಾರಿಗೆ ಪ್ರತಿಸ್ಪರ್ಧಿಯಾಗಿರೋ ಈ ಕಾರಿನ ಬೆಲೆ ಬರೋಬ್ಬರಿ 1 ಕೋಟಿ ರೂಪಾಯಿ.
ಇದನ್ನೂ ಓದಿ: ಅಮಿತಾಬ್ ಬಚ್ಚನ್ ರೋಲ್ಸ್ ರಾಯ್ಸ್ ಮಾರಾಟ- ಬೆಂಗಳೂರಿಗೆ ಬಂತು ದುಬಾರಿ ಕಾರು!
1969 CC, 4 ಸಿಲಿಂಡರ್, ಟರ್ಬೋಚಾರ್ಜಡ್ ಡೀಸೆಲ್ ಎಂಜಿನ್, 190 hp ಪವರ್ ಹಾಗೂ 400 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಅಟೋಮ್ಯಾಟಿಕ್ ಟ್ರಾನ್ಸಮಿಶನ್(AMT) ಹೊಂದಿರುವ ವೋಲ್ವೋ S-90 ಕಾರಿನ ಗರಿಷ್ಠ ವೇಗ 230 KMPH.
ಇದನ್ನೂ ಓದಿ: ಶಾರುಖ್ ಖಾನ್ ಮೊದಲ ಕಾರಿನ ರಹಸ್ಯ - ಕಿಂಗ್ ಖಾನ್ ಬಳಿ ಇತ್ತು ಚೀಪ್ ಕಾರು!
LED ಹೆಡ್‌ಲ್ಯಾಂಪ್ಸ್, LED ಟೈಲ್ ಲ್ಯಾಂಪ್ಸ್, 3-zone ಆಟೋಮ್ಯಾಟಿಕ್ ಕ್ಲೆಮೇಟ್ ಕಂಟ್ರೋಲ್, ಎಲೆಕ್ಟ್ರಿಕ್ ಎಡ್ಜಸ್ಟೇಬಲ್ ಸೀಟ್, ಸನ್‌ರೂಫ್, ಡಿಜಿಟಲ್ ಇನ್ಸ್ಟ್ರುಮೆಂಟಲ್ ಕ್ಲಸ್ಟರ್, ಅಡಾಪ್ಟೀವ್ ಕ್ರೂಸ್ ಕಂಟ್ರೋಲ್, 8 ಇಂಚು ಡಿಜಿಟಲ್ ಡ್ರೈವರ್ ಡಿಸ್‌ಪ್ಲೆ, 9 ಇಂಜು ಸೆಂಟರ್ ಡಿಸ್‌ಪ್ಲೇ (ಟಚ್ ಸ್ಕ್ರೀನ್), ಸ್ಟೀರಿಂಗ್ ವೀಲ್ಹ್ ಬಟನ್ಸ್, ವಾಯ್ಸ್ ಕಂಟ್ರೋಲ್ ಸೇರಿದಂತೆ ಹತ್ತು ಹಲವು ಫೀಚರ್ಸ್ ಈ ಕಾರಿನಲ್ಲಿದೆ.
ಇನ್ನು ಸುರಕ್ಷತೆಯಲ್ಲೂ ವೋಲ್ವೋ S-90 ಕಾರು ಅಗ್ರಸ್ಥಾನದಲ್ಲಿದೆ. ಏರ್‌ಬ್ಯಾಗ್, ಪ್ಯಾಸೆಂಜರ್ ಏರ್‌ಬ್ಯಾಗ್, ಸೈಡ್ ಏರ್‌ಬ್ಯಾಗ್, ABS(ಅ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್),EBD(ಎಲೆಕ್ಟ್ರಾನಿಕ್ ಬ್ರೇಕ್‌ಫೋರ್ಸ್ ಡಿಸ್ಟ್ರಿಬ್ಯೂಶನ್), ಬ್ರೇಕ್ ಅಸಿಸ್ಟ್, ಹಿಲ್ ಅಸಿಸ್ಟ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಪ್ರೊಗ್ರಾಂ, ಟ್ರಾಕ್ಷನಲ್ ಕಂಟ್ರೋಲ್, ಸೆಂಟ್ರಲ್ ಲಾಂಕಿಂಗ್, ಚೈಲ್ಡ್ ಸೇಫ್ಟಿ ಲಾಕ್, ಪವರ್ ಡೂರ್ ಲಾಕ್, ಅಟೋಮ್ಯಾಟಿಕ್ ಹೆಡ್‌ಲ್ಯಾಂಪ್ಸ್, ಟನ್ ಇಂಡೀಕೇಶನ್ ಆನ್ ORVM, ರೈನ್ ಸೆನ್ಸಿಂಗ್ ವೈಪರ್ಸ್ ಹಾಗೂ ಅತ್ಯಾಧುನಿಕ ಸುರಕ್ಷಾ ಫೀಚರ್ಸ್ ಹೊಂದಿದೆ.