ಹೈವೇ ರಸ್ತೆಗಳಲ್ಲಿ ಸ್ಪೀಡ್ ಲಿಮಿಟ್ ಕುರಿತು ಸ್ಪಷ್ಟವಾಗಿ ಬರೆದಿರುತ್ತಾರೆ. ಆದರೆ ಹೆಚ್ಚಿನವರು ಇದನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಇನ್ಮುಂದೆ ಹೀಗೆ ಮಾಡಿದರೆ ದಂಡ ಖಚಿತ. ಯಾಕೆ ಅನ್ನೋದು ಇಲ್ಲಿದೆ.
ನವದೆಹಲಿ(ಮಾ.19): ಹೈವೇ ರಸ್ತೆಯಲ್ಲಿ ಅತೀ ವೇಗದ ವಾಹನ ಚಾಲನೆ ಅಪಾಯಕ್ಕೆ ಕಾರಣವಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಲು ಇದೀಗ ಗೂಗಲ್ ಸಹಾಯ ಪಡೆದಿದೆ. ಗೂಗಲ್ ಮ್ಯಾಪ್ ಆವಿಷ್ಕರಿಸಿರುವ ನೂತನ ಗೂಗಲ್ ಸ್ಪೀಡ್ ಕ್ಯಾಮರ ಭಾರತದಲ್ಲಿ ಹೈಸ್ಪೀಡ್ ಮಾಹಿತಿ ನೀಡಲಿದೆ.
ಇದನ್ನೂ ಓದಿ: ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!
ಅಮೇರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ರಷ್ಯಾ, ಬ್ರೆಝಿಲ್, ಮೆಕ್ಸಿಕೋ, ಕೆನಡಾ ಹಾಗೂ ಇಂಡೋನೇಷಿಯಾಗಳಲ್ಲಿ ಗೂಗಲ್ ಮ್ಯಾಪ್ ಆವಿಷ್ಕರಿಸಿರುವ ನೂತನ ಸ್ಪೀಡ್ ಕ್ಯಾಮರ ಮೂಲಕ ಹೈವೇಗಳಲ್ಲಿ ವಾಹನದ ಸ್ಪೀಡ್ ಮೇಲೆ ಹದ್ದಿಣ ಕಣ್ಣಿಡಲಾಗುತ್ತಿದೆ. ಇದೀಗ ಇದೇ ತಂತ್ರಜ್ಞಾನ ಭಾರತದಲ್ಲೂ ಬರಲಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ - ಸಂಕಷ್ಟದಲ್ಲಿ ಮಾಲೀಕ!
ಗೂಗಲ್ ಮ್ಯಾಪ್ ಸ್ಪೀಡ್ ಕ್ಯಾಮರಾದಿಂದ ಹೈವೇಗಳಲ್ಲಿ ವಾಹನದ ವೇಗ, ಕಾರಿನ ರಿಜಿಸ್ಟ್ರೇಶನ್ ನಂಬರ್, ಎಷ್ಟು ಕಡೆ ನಿಯಮ ಉಲ್ಲಂಘನೆ ಮಾಡಿದ್ದಾರೆ, ಯಾವ ಸ್ಥಳಗಳಲ್ಲಿ ವಾಹನ ನಿಲುಗಡೆಯಾಗಿದೆ ಅನ್ನೋ ಎಲ್ಲಾ ಮಾಹಿತಿಗಳು ಈ ಗೂಗಲ್ ಮ್ಯಾಪ್ ಸ್ಪೀಡ್ ಕ್ಯಾಮರ ನೀಡಲಿದೆ. ಸ್ಪೀಡ್ ಕ್ಯಾಮರ ಅಳವಡಿಸೋ ಮೂಲಕ ಭಾರತ ಕೂಡ ಅಮೇರಿಕಾ, ಇಂಗ್ಲೆಂಡ್ ಒಳಗೊಂಡ ದೇಶಗಳಲ್ಲಿರುವ ಆಧುನಿಕ ತಂತ್ರಜ್ಞಾನ ಬಳಕೆ ಮಾಡೋ ದೇಶ ಅನ್ನೋ ಹೆಗ್ಗಳಿಕೆಗೆ ಪಾತ್ರವಾಗಲಿದೆ.