ಹ್ಯುಂಡೈ ಕ್ರೆಟಾ ಕಾರಿಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ ಕಾರು ಬಿಡುಗಡೆಯಾಗುತ್ತಿದೆ ಕಾಂಪಾಕ್ಟ್ ಕ್ರಾಸ್ಓವರ್ SUV ಕಾರು ಪ್ರೀಯರನ್ನು ಮೋಡಿ ಮಾಡಲಿದೆ. ನೂತನ ಕಾರಿನ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಮಾ.17): ಹ್ಯುಂಡೈ ಕ್ರೆಟಾ ಭಾರತದಲ್ಲಿ ಕಾರು ಪ್ರೀಯರನ್ನ ಮೋಡಿ ಮಾಡಿದೆ. SUV ಕಾರು ವಿಭಾಗದಲ್ಲಿ ಕ್ರೆಟಾ ಅತ್ಯುತ್ತಮ ಕಾರು ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿದೆ. ಇದೀಗ ಹ್ಯುಂಡೈ ಕ್ರೆಟಾಗೆ ಪ್ರತಿಸ್ಪರ್ಧಿಯಾಗಿ ಟೊಯೊಟಾ SUV ಕಾರು ಬಿಡುಗಡೆ ಮಾಡುತ್ತಿದೆ.
ಇದನ್ನೂ ಓದಿ: ಮಾರುತಿ ಸುಜುಕಿ ಎಸ್ಟೀಮ್ ಕಾರಿಗೆ ಹೊಸ ಲುಕ್ - ಸಂಕಷ್ಟದಲ್ಲಿ ಮಾಲೀಕ!
undefined
ಕಾಂಪಾಕ್ಟ್ ಕ್ರಾಸ್ಓವರ್ ಕಾರು ಉತ್ಪಾದನೆ ಮಾಡಲು ಟೊಯೊಟಾ ತಯಾರಿ ಆರಂಭಿಸಿದೆ. 1.2-ಟರ್ಬೋಚಾರ್ಜ್ ಪೆಟ್ರೋಲ್ ಎಂಜಿನ್ ಹಾಗೂ 1.8 ಲೀಟರ್ ಪೆಟ್ರೋಲ್ ಹೈಬ್ರಿಡ್ ಎಂಜಿನ್ ವೇರಿಯೆಂಟ್‌ನಲ್ಲಿ ನೂತನ SUV ಕಾರು ಬಿಡುಗಡೆಯಾಗಲಿದೆ.
ಇದನ್ನೂ ಓದಿ: ಟೆಸ್ಲಾ ತಂತ್ರಜ್ಞಾನಕ್ಕೆ ಮೋದಿ ಮೆಚ್ಚುಗೆ- ಭಾರತಕ್ಕೆ ಕಾಲಿಡುತ್ತಿದೆ ಅಮೇರಿಕ ಕಾರು!
2020ಕ್ಕೆ ಟೊಯೊಟಾ ನೂತನ SUV ಕಾರು ಬಿಡುಗಡೆಯಾಗಲಿದೆ. ಮೊದಲು ಥಾಯ್‌ಲೆಂಡ್‌ನಲ್ಲಿ ಕಾರು ಬಿಡುಗಡೆಯಾಗಲಿದ್ದು, ಬಳಿಕ ಭಾರತದ ರಸ್ತೆಗಿಳಿಯಲಿದೆ. ಸದ್ಯ ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿಯನ್ನು ಕಂಪನಿ ಬಹಿರಂಗ ಪಡಿಸಿಲ್ಲ.