ನೂತನ ಮಾರುತಿ ವ್ಯಾಗನ್‌ಆರ್ ಕಾರು ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕುತೂಹಲ ಕೆರಳಿಸಿರುವ ವ್ಯಾಗನ್‌ಆರ್ ಕಾರಿನ ವಿಶೇಷತೆ ಏನು? ಇಲ್ಲಿದೆ ಸಂಪೂರ್ಣ ಮಾಹಿತಿ.
ಬೆಂಗಳೂರು(ಜ.04): ಮಾರುತಿ ಸುಜುಕಿ ಸಂಸ್ಥೆ ಬಹುನಿರೀಕ್ಷಿತ ನೂತನ ವ್ಯಾಗನ್ಆರ್ ಕಾರು ಜನವರಿ 23ಕ್ಕೆ ಬಿಡುಗಡೆಯಾಗಲಿದೆ. ಇದೇ ದಿನಾಂಕ ಟಾಟಾ ಕಂಪೆನಿಯ ಹರಿಯರ್ SUV ಕಾರು ಕೂಡ ಬಿಡುಗಡೆಯಾಗಲಿದೆ. ಹ್ಯುಂಡೈ ಸ್ಯಾಂಟ್ರೋ, ಟಾಟಾ ಟಿಯಾಗೋ ಸೇರಿದಂತೆ ಹಲವು ಸಣ್ಣ ಕಾರುಗಳಿಗೆ ಪೈಪೋಟಿ ನೀಡಲಿರುವ ನೂತನ ವ್ಯಾಗನ್ಆರ್ ಕಾರಿನಲ್ಲಿ ಹಲವು ವಿಶೇಷತೆಗಳಿವೆ.
undefined
ಎಂಜಿನ್
ನೂತನ ವ್ಯಾಗನ್ಆರ್ ಕಾರಿನಲ್ಲಿ 4 ಸಿಲಿಂಡರ್ ಬಳಸಲಾಗಿದೆ. ಮಾರುತಿ ಸಂಸ್ಥೆಯ ಇಗ್ನಿಸ್,ಡಿಸೈರ್ ಹಾಗೂ ಬಲೆನೋ ಕಾರಿನಲ್ಲಿ ಇದೇ ಎಂಜಿನ್ ಬಳಸಲಾಗಿದೆ. 1061 ಸಿಸಿ, 1.2 ಲೀಟರ್ ಎಂಜಿನ್ 83bhp ಪವರ್ ಹಾಗೂ 113 Nm ಟಾರ್ಕ್ ಉತ್ವಾದಿಸಲಿದೆ.
ಇದನ್ನೂ ಓದಿ: ಮೇಡ್ ಇನ್ ಇಂಡಿಯಾ- ಟಾರ್ಕ್ T6X ಎಲೆಕ್ಟ್ರಿಕ್ ಬೈಕ್ ಶೀಘ್ರದಲ್ಲೇ ಬಿಡುಗಡೆ!
ಅಟೋಮ್ಯಾಟಿಕ್
ನೂತನ ಮಾರುತಿ ವ್ಯಾಗನ್‌ಆರ್ ಕಾರು AMT(ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್) ವೇರಿಯೆಂಟ್ ಕೂಡ ಲಭ್ಯವಿದೆ. ಈ ಮೂಲಕ ಹೈಎಂಡ್ ಕಾರುಗಳಿಗೂ ಭಾರಿ ಪೈಪೋಟಿ ನೀಡಲಿದೆ.
ಹೊಸ ವಿನ್ಯಾಸ
ನೂತನ ಮಾರತಿ ವ್ಯಾಗನ್‌ಆರ್ ಕಾರು ಹೊಚ್ಚ ಹೊಸ ವಿನ್ಯಾಸ ಹೊಂದಿದೆ. ಹಳೇ ಕಾರುಗಿಂತ ಭಿನ್ನವಾಗಿ ಕಾಣಿಸಲಿದೆ. ಆಕರ್ಷಕ ವಿನ್ಯಾಸ, ಇಂಟಿರಿಯರ್ ಹೊಂದಿದೆ. ಹಳೇ ಕಾರಿಗಿಂತ 56mm ಉದ್ದ ಹಾಗೂ 145mm ಅಗಲ ಹೊಂದಿದೆ.
ಇದನ್ನೂ ಓದಿ: ರಸ್ತೆ ನಿಯಮ ಉಲ್ಲಂಘಿಸಿದರೆ ದಂಡ ಖಚಿತ - ಫೋಟೋ ಚಲನ್ ಜಾರಿ!
ಹೊಸ ಫೀಚರ್ಸ್
ಟಚ್ ಸ್ಕ್ರೀನ್, ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆ್ಯಂಡ್ರಾಯ್ಡ್ ಆಟೋ ಪ್ಲೇ, ಆ್ಯಪಲ್ ಕಾರ್ ಪ್ಲೇ, ಸ್ಟ್ರೇರಿಂಗ್ ಮೌಂಟೆಡ್ ಕಂಟ್ರೋಲ್, ಸೆಮಿ ಡಿಜಿಟಲ್ ಸ್ಪೀಡೋ ಮಿಟರ್ ಸೇರಿದಂತೆ ಹಲವು ಹೊಸ ಫೀಚರ್ಸ್‌ಗಳನ್ನ ಅಳವಡಿಸಲಾಗಿದೆ.
ಗರಿಷ್ಠ ಸುರಕ್ಷತೆ
ಕೇಂದ್ರ ಸರ್ಕಾರದ ನೂತನ ನಿಯಮ ಪಾಲಿಸಿರುವ ವ್ಯಾಗನ್‌ಆರ್, ಎಬಿಎಸ್ (ABS) ಬ್ರೇಕ್, ಡ್ಯುಯೆಲ್ ಏರ್‍ಬ್ಯಾಗ್, ರೇರ್ ಪಾರ್ಕಿಂಗ್ ಸೆನ್ಸಾರ್, ಸ್ಪೀಡ್ ಅಲರ್ಟ್ ಸೇರಿದಂತೆ ಸುರಕ್ಷತೆ ಫೀಚರ್ಸ್‌ಗಳನ್ನ ಎಲ್ಲಾ ವೇರಿಯೆಂಟ್ ಕಾರುಗಳಲ್ಲಿ ಲಭ್ಯವಿದೆ.
ಇದನ್ನೂ ಓದಿ: ಮಂಜು ಮುಸುಕಿದ ವಾತಾವರಣದಲ್ಲಿ ಸೇಫ್ ಡ್ರೈವಿಂಗ್- ಇಲ್ಲಿದೆ ಟಿಪ್ಸ್!
7 ವೇರಿಯೆಂಟ್‌ಗಳಲ್ಲಿ ಲಭ್ಯ
ನೂತನ ವ್ಯಾಗನ್ಆರ್ ಕಾರು 7 ವೇರಿಯೆಂಟ್ ಕಾರುಗಳಲ್ಲಿ ಲಭ್ಯವಿದೆ. Lxi, Vxi, Vxi AGS, Zxi, Zxi AGS ಜನಪ್ರಿಯ ವೇರಿಯೆಂಟ್ ಜೊತೆಗೆ ಟಾಪ್ ಮಾಡೆಲ್ ಕೂಡ ಲಭ್ಯವಿದೆ.