BS6 ಕೆಟಿಎಂ 250 ಡ್ಯೂಕ್ ಬೈಕ್ ಬಿಡುಗಡೆ; ಪ್ರಮುಖ 5 ಬದಲಾವಣೆ!

By Suvarna News  |  First Published Feb 2, 2020, 5:47 PM IST

ಆಸ್ಟ್ರಿಯಾ ಮೋಟಾರ್‌ಸೈಕಲ್ ಕೆಟಿಎಂ ಡ್ಯೂಕ್ ಭಾರತದಲ್ಲಿ ತನ್ನ ಬೈಕ್‌ಗಳನ್ನು BS6 ಎಂಜಿನ್‌ಗೆ ಅಪ್‌ಗ್ರೇಡ್ ಮಾಡುತ್ತಿದೆ. ಇದೀಗ KTM ಡ್ಯೂಕ್ 250 ಬೈಕನ್ನು   BS6 ಎಂಜಿನ್‌ಗೆ ಪರಿವರ್ತಿಸಿ ಬಿಡುಗಡೆ ಮಾಡಿದೆ. ನೂತನ ಕೆಟಿಎಂ ಡ್ಯೂಕ್ 250 ಬೈಕ್‌ ಬೆಲೆ ಹಾಗೂ ಬದಲಾವಣೆ ಏನು? ಇಲ್ಲಿದೆ  ವಿವರ


ನವದೆಹಲಿ(ಫೆ.02): ಸುಪ್ರೀಂ ಕೋರ್ಟ್ ಆದೇಶದಂತೆ ಎಪ್ರಿಲ್ 1 ರಿಂದ ಭಾರತದಲ್ಲಿ ಮಾರಾಟವಾಗುವ ಎಲ್ಲಾ ನೂತನ ವಾಹನಗಳು BS6 ಎಮಿಶನ್ ಎಂಜಿನ್ ಹೊಂದಿರಬೇಕು. ಹೀಗಾಗಿ ಎಲ್ಲಾ ಕಂಪನಿಗಳು ವಾಹನಗಳನ್ನು ಅಪ್‌ಗ್ರೇಡ್ ಮಾಡುತ್ತಿದೆ. ಇದೀಗ KTM ಡ್ಯೂಕ್ 250 ಬೈಕ್ ಕೆಲ ಬದಾವಣೆಯೊಂದಿಗೆ ಅಪ್‌ಗ್ರೇಡ್ ಆಗಿದೆ.

ಇದನ್ನೂ ಓದಿ: 30ಸಾವಿರಕ್ಕೆ ಬುಕ್ ಮಾಡಿ KTM ಡ್ಯೂಕ್ 790 ಬೈಕ್!

Tap to resize

Latest Videos

undefined

ಎಂಜಿನ್ ಹಾಗೂ ಪವರ್‌ನಲ್ಲಿ ಬದಲಾವಣೆ ಇಲ್ಲ:
ನೂತನ KTM ಡ್ಯೂಕ್ 250 ಬೈಕ್‌ನಲ್ಲಿ ಕೆಲ ಬದಲಾವಣೆ ಮಾಡಿದರೂ ಎಂಜಿನ್ ಹಾಗೂ ಪವರ್‌ನಲ್ಲಿ ಬದಲಾವಣೆಗಳಾಗಿಲ್ಲ. 248.8 cc ಸಿಂಗಲ್ ಸಿಲಿಂಡರ್, 4 ವೇಲ್ವ್, ಲಿಕ್ವಿಡ್ ಕೂಲ್ಡ್, ಫ್ಯುಯೆಲ್ ಇಂಜೆಕ್ಟ್,  DOHC ಮೋಟಾರ್  BS6 ಎಮಿಶನ್ ಎಂಜಿನ್ ಹೊಂದಿದೆ.  30 PS ಪವರ್ ಹಾಗೂ 24 Nm  ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.

ಬಜಾಜ್ ಪಲ್ಸರ್ 150 vs KTM 125 ಡ್ಯೂಕ್ ರೇಸ್- ಅಚ್ಚರಿ ಫಲಿತಾಂಶ!

ಹೊಸದಾಗಿ ಸೇರ್ಪಡೆ:
ನೂತನ  KTM ಡ್ಯೂಕ್ 250 ಬೈಕ್‌ನಲ್ಲಿ ಮುಂಭಾಗದಲ್ಲಿ WP ಫೋರ್ಕ್ಸ್, ಸ್ಲಿಪ್ಪರ್ ಕ್ಲಚ್, ಹೊಂದಿಸಬಲ್ಲ ಮೋನೋ ಶಾಕ್ಸ್ ಹೊಂದಿದೆ.

ಡ್ಯುಯೆಲ್ ಚಾನೆಲ್ ABS
ನೂತನ ಬೈಕ್ ಡ್ಯುಯೆಲ್ ಚಾನೆಲ್ ABS(ಆ್ಯಂಟಿ ಲಾಕ್ ಬ್ರೇಕ್ ಸಿಸ್ಟಮ್) ಹೊಂದಿದೆ. 

BS6 ರಾಯಲ್ ಎನ್‌ಫೀಲ್ಡ್ ಬೈಕ್ ಬಿಡುಗಡೆ; ಬೆಲೆ ಏರಿಕೆ!

ಹೊಸ ಕಲರ್:
ಸದ್ಯ ಮಾರುಕಟ್ಟೆಯಲ್ಲಿರುವ KTM ಡ್ಯೂಕ್ 250 ಬೈಕ್ ಆರೇಂಜ್ ಹಾಗೂ ಬಿಳಿ ಬಣ್ಣದಿಂದ ಕೂಡಿತ್ತು. ಒಂದೇ ಕಲರ್ ಮಾತ್ರ ಲಭ್ಯವಿತ್ತು. ಇದೀಗ ಸಿಲ್ವರ್ ಮೆಟಾಲಿಕ್ ಹಾಗೂ ಡಾರ್ಕ್ ಗಲ್ವಾನೊ ಕಲರ್ ಸೇರಿಕೊಂಡಿದೆ.

ಬೆಲೆ:
BS4 ಬೈಕ್ ಬೆಲೆ 1,97,248 ರೂಪಾಯಿ(ಎಕ್ಸ್ ಶೋ ರೂಂ). BS6 ಎಮಿಶನ್ ಎಂಜಿನ್‌ನಿಂದ ಇದೀಗ ನೂತನ ಬೈಕ್ ಬೆಲೆ 2,00,576 ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದೆ.
 

click me!