ರಾಜಕೀಯ ಮುಖಂಡರು ತಮಗೆ ಬೇಕಾದ ರೀತಿಯಲ್ಲಿ ಕಾರು ಮಾಡಿಫಿಕೇಶನ್ ಮಾಡಿಸುತ್ತಾರೆ. ತಮ್ಮ ಪ್ರಯಾಣ, ಸಾರ್ವಜನಿಕ ಸಭೆ, ಕಾರ್ಯಕ್ರಮಗಳಿಗೆ ತೆರಳಲು ತಮ್ಮ ಕಾರನ್ನು ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಾರೆ. ಇದು ಚುನಾವಣಾ ಪ್ರಚಾರದ ವೇಳೆ ಮಾಡಿಫಿಕೇಶನ್ ಕಾರನ್ನು ಹೆಚ್ಚಾಗಿ ಬಳಸುತ್ತಾರೆ. ಇದೀಗ ಟಾಟಾ ಹೆಕ್ಸಾ ಕಾರನ್ನು ರಾಜಕೀಯ ನಾಯಕರಿಗಾಗಿ ಮಾಡಿಫೈ ಮಾಡಲಾಗಿದೆ. ಈ ಕಾರಿನ ಲುಕ್ ಹಾಗೂ ವಿಶೇಷತೆ ಇಲ್ಲಿದೆ.
ನವದೆಹಲಿ(ಫೆ.02): ರಾಜಕೀಯ ಮುಖಂಡರು ಕಚೇರಿ ಕೆಲಸ, ಕ್ಷೇತ್ರದ ಜನರ ಜೊತೆ ಚರ್ಚೆ, ಸಾರ್ವಜನಿಕ ಕಾರ್ಯಕ್ರಮ ಸೇರಿದಂತೆ ದಿನವಿಡಿ ಬ್ಯುಸಿಯಾಗಿರುತ್ತಾರೆ. ಹೀಗಾಗಿ ತಾವು ಪ್ರಯಾಣ ಮಾಡುವ ಕಾರಿನಲ್ಲಿ ಹೆಚ್ಚಿನ ಎಲ್ಲಾ ಸೌಲಭ್ಯಗಳನ್ನು ಅಳವಡಿಸಿಕೊಂಡಿರುತ್ತಾರೆ. ಇದಕ್ಕಾಗಿ ಕಾರನ್ನು ಮಾಡಿಫೈ ಮಾಡಿಸುತ್ತಾರೆ. ಇದೀಗ ರಾಜಕಾರಣಿಗಳಿಗಾಗಿ ಟಾಟಾ ಹೆಕ್ಸಾ ಪೊಲಿಟೀಶನ್ ಎಡಿಶನ್ ಕಾರು ಡಿಸೈನ್ ಮಾಡಲಾಗಿದೆ.
ಇದನ್ನೂ ಓದಿ: ಕಾರಿಗೆ 4.9 ಲಕ್ಷ ರೂಪಾಯಿ ದಂಡ- ತಲೆ ತಿರುಗಿ ಬಿದ್ದ ಮಾಲೀಕ!
ತಮಿಳುನಾಡಿನ ಕಿಟ್ ಆಪ್ ಆಟೋಮೊಟೀವ್ ಟಾಟಾ ಹೆಕ್ಸಾ ಕಾರನ್ನು ರಾಜಕಾರಣಿಗಳಿಗಾಗಿ ಡಿಸೈನ್ ಮಾಡಿದೆ. ಈ ಕಾರನ್ನು ರಾಜಕಾರಣಿಗಳ ಚುನಾವಣೆ ಸಂದರ್ಭ ಹಾಗೂ ಪ್ರಚಾರವನ್ನು ಗಮನದಲ್ಲಿಟ್ಟುಕೊಂಡು ಮಾಡಿಫಿಕೇಶನ್ ಮಾಡಲಾಗಿದೆ. ಟಾಟಾ ಹೆಕ್ಸಾ XE ವೇರಿಯೆಂಟ್ ಕಾರನ್ನು ಮಾಡಿಫೈ ಮಾಡಲಾಗಿದೆ.
ಇದನ್ನೂ ಓದಿ: ಪ್ರವಾಹ ಸಂತ್ರಸ್ತರನ್ನು ಕಾಪಾಡಿದ ಜೀಪ್‌ಗೆ ಹಾಕಿದ್ರು ದಂಡ!
ಕಾರಿನ ಮುಂಭಾಗದಲ್ಲಿ ಅತೀ ದೊಡ್ಡ ಗಾತ್ರದಲ್ಲಿ ಬುಲ್ ಬಾರ್ ಬಳಸಲಾಗಿದೆ. ಬುಲ್ ಬಾರ್ ಮೇಲೆ ಉದ್ದನೆಯ ರಾಡ್ ಬಳಸಲಾಗಿದೆ. ಈ ಸ್ಟಿಕ್‌ನಲ್ಲಿ ರಾಜಕಾರಣಿಗಳ ಪಕ್ಷದ ಧ್ವಜ ಬಳಸುವ ಸೌಲಭ್ಯ ಕಲ್ಪಿಸಲಾಗಿದೆ. ಕೆಳಬಾಗದಲ್ಲಿ ಹೆಲ್ಲಾ ಫಾಗ್ ಲ್ಯಾಂಪ್ಸ್ ಬಳಸಲಾಗಿದೆ.
ಇದನ್ನೂ ಓದಿ:
ಹೆಕ್ಸಾ 6 ಸೀಟರ್ ಕಾರಾಗಿದ್ದು, ಈ ಕಾರನ್ನು 5 ಸೀಟರ್‌ಗೆ ಬದಲಾಯಿಸಲಾಗಿದೆ. ಈ ಮೂಲಕ ಒಳಭಾಗದಲ್ಲಿ ಹೆಚ್ಚು ಸ್ಥಳವಕಾಶ ಕಲ್ಪಿಸಲಾಗಿದೆ. ಮಧ್ಯ ಭಾಗದ ಸೀಟನ್ನು ಸರಿಸಲಾಗಿದೆ. ಹೀಗಾಗಿ ಸನ್‌ರೂಫ್ ಮೂಲಕ ರಾಜಕಾರಣಿ ನಿಲ್ಲಬಹುದು. ಸನ್‌ರೂಫ್ ಹೊರಭಾಗದಲ್ಲಿ ಆರ್ಮ್ ರಾಡ್ ಬಳಸಲಾಗಿದ್ದು, ರಾಜಕಾರಣಿ ಪ್ರಚಾರ ಹಾಗೂ ರೋಡ್ ಶೋ ವೇಳೆ ಹಿಡಿದು ನಿಲ್ಲಲು ಅವಕಾಶವಿದೆ.
ಇದನ್ನೂ ಓದಿ: ಮಾರುತಿ ಜಿಪ್ಸಿಗೆ ರೋಲ್ಸ್ ರಾಯ್ಸ್ ಲುಕ್; ಹೊಸ ನಿಯಮದಿಂದ ಕಾರು ಮಾರಾಟಕ್ಕೆ!
4 ಸ್ಪೀಕರ್ ಇಡಲಾಗಿದ್ದು, ರಾಜಕಾರಣಿಯ ಪ್ರಚಾರ, ಘೋಷಣೆ ಸೇರಿದಂತೆ ಯಾವುದೇ ಮಾಹಿತಿ ಹಂಚಿಕೊಳ್ಳಲು ಕಾರಿನಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ. ಕಾರಿನ ಎಂಜಿನ್, ಪವರ್‌ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
(ಕಾರು ಮಾಡಿಫಿಕೇಶನ್ ನಿಯಮ ಉಲ್ಲಂಘನೆ)
ಫೆಬ್ರವರಿ 2ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ವಿಕ್ ಮಾಡಿ