ಮಹತ್ತರ ಬದಲಾವಣೆಯೊಂದಿಗೆ ಬರುತ್ತಿದೆ ಹ್ಯುಂಡೈ ಕ್ರೆಟಾ ಕಾರು!

Suvarna News   | Asianet News
Published : Feb 01, 2020, 08:18 PM IST
ಮಹತ್ತರ ಬದಲಾವಣೆಯೊಂದಿಗೆ ಬರುತ್ತಿದೆ ಹ್ಯುಂಡೈ ಕ್ರೆಟಾ ಕಾರು!

ಸಾರಾಂಶ

ಹ್ಯುಂಡೈ ಮೋಟಾರ್ ಕಂಪನಿಯ ಅತ್ಯಂತ ಜನಪ್ರಿಯ ಹಾಗೂ ಮಾರಾಟದಲ್ಲೂ ದಾಖಲೆ ಬರೆದಿರುವ ಕ್ರೆಟಾ SUV ಕಾರು ಇದೀಗ ಹೊಸ ಅವತಾರದಲ್ಲಿ ಬಿಡುಗಡೆಯಾಗಲಿದೆ. ಕಾರಿನ ವಿನ್ಯಾಸದಲ್ಲಿ ಮಹತ್ತರ ಬದಲಾವಣೆ ಮಾಡಲಾಗಿದೆ. ನೂತನ ಹ್ಯುಂಡೈ ಕ್ರೆಟಾ ವಿವರ ಇಲ್ಲಿದೆ.

ನವದೆಹಲಿ(ಫೆ.01): ಭಾರತದ ರಸ್ತೆಗಳಲ್ಲಿ ಓಡಾಡುವ SUV ಕಾರುಗಳ ಪೈಕಿ ಹ್ಯುಂಡೈ ಕ್ರೆಟಾ ಮುಂಚೂಣಿಯಲ್ಲಿದೆ. ಇತ್ತೀಚೆಗೆ ಹ್ಯುಂಡೈ ಕ್ರೆಟಾ ಕಾರು ತೀವ್ರ ಸ್ಪರ್ಧೆ ಎದುರಿಸುತ್ತಿದೆ. ಕಿಯಾ ಸೆಲ್ಟೋಸ್ ಹಾಗೂ ಎಂಜಿ ಹೆಕ್ಟರ್ ಕಾರಿನಿಂದ ಕ್ರೆಟಾ ಮಾರಾಟಕ್ಕೂ ಹೊಡೆತ ನೀಡಿತ್ತು. ಇದೀಗ ಕ್ರೆಟಾ ಹೊಸ ವಿನ್ಯಾಸದೊಂದಿಗೆ ಬರುತ್ತಿದೆ.

ಇದನ್ನೂ ಓದಿ: ಕೊರೊನಾ ವೈರಸ್‌ನಿಂದ ಭಾರತದಲ್ಲಿ MG ಹೆಕ್ಟರ್ ಕಾರು ಮಾರಾಟ ಕುಸಿತ?

ನೂತನ ಕ್ರೆಟಾ ಹೆಚ್ಚು ಸ್ಪೋರ್ಟೀವ್, ಅಗ್ರೆಸ್ಸೀವ್ ಲುಕ್ ಪಡೆದುಕೊಂಡಿದೆ. ಸಂಪೂರ್ಣವಾಗಿ ಆಧುನಿಕ ಶೈಲಿ ಹಾಗೂ ವಿನ್ಯಾಸ ಹಾಗೂ ಫೀಚರ್ಸ್ ಅಳವಡಿಸಿಕೊಂಡಿದೆ. ಮುಂಭಾದಲ್ಲಿ ಕಾಸ್ಕೇಡಿಂಗ್ ಗ್ರಿಲ್, ಪ್ರೊಜೆಕ್ಟರ್ ಹೆಡ್‌ಲ್ಯಾಂಪ್ಸ್, LED DRLs , 17 ಇಂಚಿನ ಅಲೋಯ್ ವೀಲ್ಹ್ ಜೊತೆಗೆ ಬೋಲ್ಡ್ ಲುಕ್ ಕಾರಿನ ವಿಶೇತೆಯಾಗಿದೆ. ಹ್ಯುಂಡೈ ನೂತನ ಕ್ರೆಟಾ ಕಾರಿನ ಸ್ಕೆಚ್ ಬಿಡುಗಡೆ ಮಾಡಿದೆ. 

ಇದನ್ನೂ ಓದಿ: ಕೇಂದ್ರ ಬಜೆಟ್ 2020; ಆಟೋಮೊಬೈಲ್ ಕ್ಷೇತ್ರ ಕೇಳಿದ್ದೇನು? ಸಿಕ್ಕಿದ್ದೇನು?.

ಡ್ಯುಯೆಲ್ ಸನ್‌ರೂಫ್ ಸೇರಿದಂತೆ ಹಲವು ಫೀಚರ್ಸ್ ಈ ಕಾರಿನಲ್ಲಿದೆ. ಟಾಪ್ ಮಾಡೆಲ್ ಕಾರಿನಲ್ಲಿ   6-ಏರ್‌ಬ್ಯಾಗ್, ಹಾಗೂ ಬೇಸ್ ಮಾಡೆಲ್ ಕಾರಿನಲ್ಲಿ ಡ್ಯುಯೆಲ್ ಏರ್‌ಬ್ಯಾಗ್,  ABS (ಆ್ಯಂಟಿ ಲಾಕ್ ಬ್ರೇಕ್)  EBD (ಎಲೆಕ್ಟ್ರಾನಿಕ್ ಬ್ರೇಕ್ ಫೋರ್ಸ್ ಡಿಸ್ಟ್ರಿಬ್ಯೂಶನ್) ಸ್ಪೀಡ್ ಅಲರ್ಟ್, ರೇರ್ ಸೆನ್ಸಾರ್ ಹಾಗೂ ಕ್ಯಾಮರ, ಸೀಟ್ ಬೆಲ್ಟ್ ಅಲರಾಂ ಎಲ್ಲಾ ಕಾರುಗಳಲ್ಲಿ ಲಭ್ಯವಿದೆ. 

​​​​​​​

ಇದನ್ನೂ ಓದಿ:ಭಾರತದಲ್ಲಿ ನಡೆಯಲಿರುವ ಆಟೋ ಎಕ್ಸ್ಪೋ 2020ಗೆ ಕೊರೊನಾ ಭೀತಿ!.

ನೂತನ ಕಾರು 1.5 ಲೀಟರ್ ಡೀಸೆಲ್ ಎಂಜಿನ್ ಹಾಗೂ 1.4 ಲೀಟರ್ ಟರ್ಬೋ ಪೆಟ್ರೋಲ್ ಎಂಜಿನ್‌ನಲ್ಲಿ ಬಿಡುಗಡೆಯಾಗಲಿದೆ. ನೂತನ ಕ್ರೆಟಾ ಬೆಲೆ ಬಹಿರಂಗವಾಗಿಲ್ಲ. ಸದ್ಯ ಮಾರುಕಟ್ಟೆಯಲ್ಲಿರುವ ಕ್ರೆಟಾ ಕಾರಿನ ಬೆಲೆ 9.6 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ) ಆರಂಭವಾಗಲಿದೆ. ಮಾರ್ಚ್‌ನಲ್ಲಿ ನೂತನ ಕಾರು ಬಿಡುಗಡೆಯಾಗಲಿದೆ. 

PREV
click me!

Recommended Stories

ಚಾಲನೆಯಲ್ಲಿದ್ದಾಗಲೇ ಪ್ರಜ್ಞೆ ಕಳೆದುಕೊಂಡ ಚಾಲಕ: ವಿಮಾನ ಟೇಕಾಫ್‌ದಂತೆ ಮೇಲೇರಿದ ಮರ್ಸಿಡಿಸ್: ವೀಡಿಯೋ
ಕಾಂತಾರ ನಟನಿಗೆ ದೈವದ ಅಭಯ, 1.5 ಕೋಟಿ ರೂ ವೆಲ್‌ಫೈರ್ ಕಾರಿನಲ್ಲಿ ಕಾಣಿಸಿಕೊಂಡ ರಿಷಬ್ ಶೆಟ್ಟಿ