Bounce Infinity Electric Vehicle : ಬೌನ್ಸ್‌ನಿಂದ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉತ್ಪಾದನೆ

By Kannadaprabha NewsFirst Published Nov 25, 2021, 2:00 PM IST
Highlights
  • ಗ್ರಾಹಕರಿಗೆ ಬಾಡಿಗೆ ಆಧಾರದಲ್ಲಿ ವಿದ್ಯುತ್ ಚಾಲಿತ (ಇ.ವಿ) ದ್ವಿಚಕ್ರ ವಾಹನಗಳನ್ನು ಒದಗಿಸುತ್ತಿದ್ದ ‘ಬೌನ್ಸ್’
  • ‘ಬೌನ್ಸ್’ ಇದೀಗ ವಿದ್ಯುತ್ ಚಾಲಿತ ದ್ವಿಚಕ್ರ ವಾಹನ ಉತ್ಪಾದನೆಗೆ ಇಳಿದಿದೆ

  ಬೆಂಗಳೂರು (ನ.25):  ಗ್ರಾಹಕರಿಗೆ ಬಾಡಿಗೆ (Rent) ಆಧಾರದಲ್ಲಿ ವಿದ್ಯುತ್ ಚಾಲಿತ ( Electric Vehicle ) ದ್ವಿಚಕ್ರ ವಾಹನಗಳನ್ನು (Two Wheeler) ಒದಗಿಸುತ್ತಿದ್ದ ‘ಬೌನ್ಸ್’ ಇದೀಗ ವಿದ್ಯುತ್ ಚಾಲಿತ ದ್ವಿ ಚಕ್ರ ವಾಹನ ಉತ್ಪಾದನೆಗೆ ಇಳಿದಿದೆ. ‘ಬೌನ್ಸ್ ಇನ್ಫಿನಿಟಿ’ (Bounce Infinity )ಎಂಬ ಹೆಸರಿನ ಈ ವಿದ್ಯುತ್ ಚಾಲಿತ ದ್ವಿ ಚಕ್ರ ವಾಹನ ಡಿ.2ರಿಂದ ಮಾರುಕಟ್ಟೆಗೆ ಬರಲಿದೆ. ಈ ಕುರಿತು ಪ್ರಕಟಣೆ ಹೊರಡಿಸಿರುವ ಬೌನ್ಸ್ ಕಂಪೆನಿ, ‘ಬೌನ್ಸ್ ಇನ್ಫಿನಿಟಿ’ ಸ್ಕೂಟರ್‌ನ್ನು (Scooter) ಡಿ.2ರಂದು ದೇಶದಾದ್ಯಂತ ಲೋಕಾರ್ಪಣೆ ಮಾಡುವುದಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಕೇವಲ 499 ರು.ಗಳನ್ನು ಪಾವತಿಸಿ ಕಾಯ್ದಿರಿಸಲು ಅವಕಾಶ ಕಲ್ಪಿಸಿದೆ. ಅಲ್ಲದೆ, 2022ರ ಜನವರಿಯಿಂದ ವಾಹನಗಳನ್ನು (Vehicle) ಗ್ರಾಹಕರಿಗೆ ಪೂರೈಕೆಗೆ ವ್ಯವಸ್ಥೆ ಮಾಡುತ್ತಿದೆ.

ಬ್ಯಾಟರಿ(Battery) ರಹಿತ ಸ್ಕೂಟರ್ ಇವೆ: ಬೌನ್ಸ್  ಇನ್ಫಿನಿಟಿ ದಲ್ಲಿ ಬ್ಯಾಟರಿ ರಹಿತ ದ್ವಿ ಚಕ್ರ ವಾಹನಗಳ (Vehicle) ಖರೀದಿಸಬಹುದು. ಬಳಿಕ ಬ್ಯಾಟರಿಗಳನ್ನು ಬಾಡಿಗೆಗೆ ( Rent) ಪಡೆಯಬಹುದು. ಈ ವಾಹನಗಳಿಗೆ ಪ್ರತ್ಯೇಕವಾಗಿ ಬ್ಯಾಟರಿ ಅಳವಡಿಸಿಕೊಳ್ಳಬಹುದಾಗಿದ್ದು, ಪ್ಯಾನಾಸಾನಿಕ್ (Panasonic) ಮತ್ತು ಎಲ್ ಜಿ (LG) ಕಂಪೆನಿಗಳ ಬ್ಯಾಟರಿಗಳನ್ನು ವಾಹನಗಳಿಗೆ ಬಳಕೆ ಮಾಡಿಕೊಳ್ಳಬಹುದಾಗಿದೆ. 

ವಾಹನದ ವಿಶೇಷತೆಯೆಂದರೆ ಇದು ತೆಗೆದು ಹಾಕಬಹುದಾದ ಬ್ಯಾಟರಿ ಹೊಂದಿರುವುದು. ಸಾಮಾನ್ಯವಾಗಿ ಈ ಮಾದರಿಯ ವಾಹನಗಳಲ್ಲಿ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ. ಆದರೆ, ಈ ವಾಹನದಲ್ಲಿ ಆ ಕಾರ್ಯ ಮಾಡಬಹುದು. ಜತೆಗೆ, ಚಾರ್ಜಿಂಗ್ ಕಡಿಮೆಯಾಗಿರುವ ಬ್ಯಾಟರಿ ಹಿಂದಿರುಗಿಸಿ ಮತ್ತೊಂದು ಬ್ಯಾಟರಿ ಪಡೆದುಕೊಳ್ಳಬಹುದಾಗಿದ್ದು, ಈ ವೇಳೆ ಬ್ಯಾಟರಿಯ ಚಾರ್ಜ್ ಮಾಡುವುದಕ್ಕೆ ಅಗತ್ಯವಿರುವ ವೆಚ್ಚ ಮಾತ್ರ ಪಾವತಿ ಮಾಡಬೇಕಾಗುತ್ತದೆ. 

ಬೆಂಗಳೂರು (Bengaluru) ಮೂಲದ ‘ಬೌನ್ಸ್ ಇನ್ಫಿನಿಟಿ’ ದ್ವಿ ಚಕ್ರವಾಹನಗಳ ಉತ್ಪಾದನೆಗಾಗಿ ರಾಜಸ್ಥಾನದ ಭೀವಾಡಿಯಲ್ಲಿರುವ ‘22ಮೋಟರ್‌ಸ್’ನ ಉತ್ಪಾದನಾ ಘಟಕವನ್ನು ಖರೀದಿಸಿದೆ. ಈ ಘಟಕದಲ್ಲಿ ಪ್ರತಿ ವರ್ಷ 1,80,000 ದ್ವಿಚಕ್ರವಾಹನಗಳ ಉತ್ಪಾದನೆಗೆ ಅವಕಾಶವಿದ್ದು, ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಪೂರೈಕೆ ಮಾಡಲಿದೆ. ಜೊತೆಗೆ, ಬೇಡಿಕೆಗೆ ಅನುಗುಣವಾಗಿ ದಕ್ಷಿಣ ಭಾರತದಲ್ಲಿ ಮತ್ತೊಂದು ಉತ್ಪಾದನಾ ಘಟಕ ಪ್ರಾರಂಭಿಸುವ ಚಿಂತನೆ ನಡೆಸಿದೆ. ಬೌನ್‌ಸ್ ಕಂಪೆನಿಯಿಂದ ಭಾರತದಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ದ್ವಿಚಕ್ರ ವಾಹನಗಳ ಉತ್ಪಾದನೆಗಾಗಿ ಒಟ್ಟು 100 ದಶಲಕ್ಷ ಡಾಲರ್‌ಗಳ ಬಂಡವಾಳ ಹೂಡಲು ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದೆ.

ಸುಜುಕಿ ಅವೆನಿಸ್ 125 ಸ್ಕೂಟರ್ ಲಾಂಚ್, ಬೆಲೆ ಎಷ್ಟು? : 

ಸುಜುಕಿ ಅವೆನಿಸ್ 125 ಸ್ಕೂಟರ್ 125 ಸಿಸಿ ಸಿಂಗಲ್ ಸಿಲಿಂಡರ್, ಏರ್ ಕೂಲ್ಡ್ ಫುಯೆಲ್ ಇಂಜೆಕ್ಟಡ್ ಎಂಜಿನ್‌ನೊಂದಿಗೆ ಬರುತ್ತದೆ. ಈ ಎಂಜಿನ್ 6750 ಆರ್‌ಪಿಎಂನಲ್ಲಿ ಗರಿಷ್ಠ  8.6 ಬಿಎಚ್‌ಪಿ ಪವರ್ ಉತ್ಪಾದಿಸಿದರೆ, 5,500 ಆರ್‌ಪಿಎಂನಲ್ಲಿ ಗರಿಷ್ಠ 10 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಹಾಗಾಗಿ, ಎಂಜಿನ್ ಎಳೆಯುವ ಶಕ್ತಿಯನ್ನು ಹೆಚ್ಚಿದೆ ಎಂದು ಹೇಳಬಹುದು. ಅಂದಾಜು 106 ಕೆಜಿಯಷ್ಟು ತೂಕವನ್ನು ಈ ಸ್ಕೂಟರ್ ಹೊಂದಿದೆ. ಎಂಜಿನ್ ಸಿವಿಟಿ ಯುನಿಟ್‌ನೊಂದಿಗೆ ಸಂಯೋಜಿತಗೊಂಡಿದೆ. 

ಮಸ್ಕಲರ್ ಫ್ರಂಟ್ ಏಪ್ರಾನ್‌ನೊಂದಿಗೆ ಸ್ಕೂಟರ್‌ನ ಮುಂಬದಿ ಲುಕ್ ಸ್ಪೋರ್ಟಿಯಾಗಿದೆ. ಟ್ರೆಪ್‌ಯೋಡಿಲ್ ಹೆಡ್‌ಲ್ಯಾಂಪ್ (Headlamp) ಸೌಂದರ್ಯವನ್ನು ಹೆಚ್ಚಿಸಿವೆ. ಸ್ಕೂಟರ್‌ ಮುಂಬದಿಯಿಲ್ಲಿ ಟೆಲೆಸ್ಕಾಪಿಕ್ ಫೋರ್ಕ್ಸ್ ಮತ್ತು ಹಿಂಬದಿಯಲ್ಲಿ ಸಿಂಗಲ್ ಶಾಕ್‌ಅಬ್ಸವರ್ ಹೊಂದಿದೆ. ಹ್ಯಾಂಡಲ್‌ಬಾರ್ ಕಾವಲ್‌ನಲ್ಲಿ ಟರ್ನ್ ಇಂಡಿಕೇಟರ್‌ಗಳನ್ನು ಅಳವಡಿಸಲಾಗಿದೆ. ಸೈಡ್ ಪ್ಯಾನಲ್‌ಗಳು ಚರುಕುನೋಟವನ್ನು ಹೊಂದಿವೆ. ಮೋಟಾರ್‌ಸೈಕಲ್ ಪ್ರೇರಿತ ಟರ್ನ್ ಇಂಡಿಕೇಟರ್‌ಗಳೊಂದಿಗೆ ಎಲ್‌ಇಡಿ (LED) ಟೇಲ್ ಲೈಟ್ಸ್ ಸ್ಕೂಟರ್‌  ಹಿಂಬದಿಯ ಲುಕ್ ಅನ್ನು ಹೆಚ್ಚಿಸಿವೆ. 

ಪವರ್‌ಫುಲ್ ಎಂಜಿನ್ ಜೊತೆಗೆ ಅವೆನಿಸ್ 125 ಸ್ಕೂಟರ್ ಹಲವು ವಿಶಿಷ್ಟ ಫೀಚರ್‌ಗಳನ್ನು ಹೊಂದಿದೆ ಎಂದು ಹೇಳಬಹುದು.  ಸುಜುಕಿ ರೈಡ್ ಕನೆಕ್ಟ್ (Suzuki Raid Connect) ಮೂಲಕ ಬ್ಲೂಟೂತ್‌ನೊಂದಿಗೆ ಪೂರ್ಣ ಪ್ರಮಾಣದ ಡಿಜಿಟಲ್ ಕ್ಲಸ್ಟರ್ ಒಳಗೊಂಡಿದೆ. ಈ ಯುನಿಟ್‌ ಅನ್ನು ಮಾಲೀಕರ ಸ್ಮಾರ್ಟ್‌ಪೋನ್ ಜತೆಗೆ ಸಂಪರ್ಕಿಸಬಹುದು. ಆ ಮೂಲಕ ಟರ್ನ್ ಬೈ ಟರ್ನ್ ನ್ಯಾವಿಗೇಷನ್, ಮೆಸೆಜ್, ಕಾಲ್ ಅಲರ್ಟ್‌ಗಳನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

click me!