122KM ರಾಯಲ್ ಎನ್‌ಫೀಲ್ಡ್ ರೈಡ್ ಮಾಡಿದ ಅರುಣಾಚಲ CM!

By Web Desk  |  First Published Oct 15, 2019, 9:30 PM IST

ಘಾಟ್ ರಸ್ತೆಯಲ್ಲಿ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಬರೋಬ್ಬರಿ 122 ಕಿ.ಮೀ ಬೈಕ್ ರೈಡ್ ಮಾಡೋ ಮೂಲಕ, ಭಾರತದ ಯಾವೊಬ್ಬ  ಸಿಎಂ ಮಾಡದ ಸಾಧನೆ ಮಾಡಿದ್ದಾರೆ. ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ಮೂಲಕ ಪ್ರಯಾಣ ಮಾಡಿದ್ದಾರೆ. ಅಷ್ಟಕ್ಕೂ CM ಬೈಕ್ ರೈಡ್ ಮಾಡಿದ್ದೇಕೆ? ಇಲ್ಲಿದೆ ವಿವರ.


ಪಾಸಿಘಾಟ್(ಅ.15): ಮುಖ್ಯಮಂತ್ರಿ ವಿಮಾನ ಪ್ರಯಾಣ, ಕಾರು ಪ್ರಯಾಣ ಮಾಡುತ್ತಲೇ ಇರುತ್ತಾರೆ. ಇನ್ನು ಕೆಲ ರ್ಯಾಲಿ, ಅಭಿಯಾನದಲ್ಲಿ ಒಂದೆರಡು ಕಿಲೋಮೀಟರ್ ಬೈಕ್, ಸ್ಕೂಟರ್ ಚಲಾಯಿಸಿ ಗಮನಸೆಳೆದಿದ್ದಾರೆ. ಆದರೆ ಅರುಣಾಚಲ ಪ್ರದೇಶ ಮುಖ್ಯಮಂತ್ರಿ ಪೆಮ ಖಂಡು ಬರೋಬ್ಬರಿ 122 ಕಿ.ಮೀ ಬೈಕ್ ರೈಡ್ ಮಾಡಿದ್ದಾರೆ. ಅದೂ ಕೂಡ ಘಾಟಿ ಪ್ರದೇಶದಲ್ಲಿ ಬೈರ್ ರೈಡ್ ಮಾಡಿ ಸಂಚಲನ ಮೂಡಿಸಿದ್ದಾರೆ.

Latest Videos

undefined

ಇದನ್ನೂ ಓದಿ: ಹೊಸ ಟ್ರಾಫಿಕ್ ನಿಯಮ; ಟ್ರೋಲ್ ಆಯ್ತು ಸಾರಿಗೆ ಸಚಿವರ ಹೆಲ್ಮೆಟ್ ರಹಿತ ಪ್ರಯಾಣ!

ಅರುಣಾಚಲ ಪ್ರದೇಶದ ಪ್ರಸಿದ್ಧ ಘಾಟ್ ಯಿಂಗ್‌ಕಿಯೊಂಗ್‌ನಿಂದ ಪಾಸಿಘಾಟ್ ವರೆಗಿನ 122 ಕಿ.ಮೀ ದೂರ ಪೆಮ ಖಂಡು ಬೈಕ್ ರೈಡ್ ಮಾಡಿದ್ದಾರೆ. ಮುಖ್ಯಮಂತ್ರಿ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ ರೈಡ್ ಮಾಡಿದ್ದಾರೆ. 

ಇದನ್ನೂ ಓದಿ: ನೇಪಾಳ ಎಂದು ಚೀನಾ ತಲುಪಿದ್ರು; ಭಾರತೀಯ ಬೈಕರ್ಸ್‌ಗೆ ಗಡಿಯಲ್ಲಿ ಸಂಕಷ್ಟ!

ಪೆಮ ಖಂಡು ಇಷ್ಟು ಸಾಹಸ ಮಾಡಲು ಕಾರಣವಿದೆ. ಅರುಣಾಚಲ ಪ್ರದೇಶ ಪ್ರವಾಸೋದ್ಯವನ್ನು ಉತ್ತೇಜಿಸಲು ಮುಖ್ಯಮಂತ್ರಿ ಸ್ವತಃ ಬೈಕ್ ರೈಡ್ ಮಾಡಿದ್ದಾರೆ. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಾಗೂ ವಿಡೀಯೋಗನ್ನು ಪೋಸ್ಟ್ ಮಾಡಿದ್ದಾರೆ. ಇಷ್ಟೇ ಅಲ್ಲ ಬೈಕರ್ಸ್‌ಗೆ ಅರುಣಾಚಲ ಪ್ರದೇಶ ಅತ್ಯುತ್ತಮ ತಾಣ ಎಂದಿದ್ದಾರೆ.

ಇದನ್ನೂ ಓದಿ: ಬೈಕ್, ಪೆಟ್ರೋಲ್ ನಂದು, ಬಿದ್ರೆ ಸಾಯೋದು ನಾನು- ಹಿಡಿಯೋಕೆ ನೀವ್ಯಾರು?

 

ಅರುಣಾಚಲ ಮುಖ್ಯಮಂತ್ರಿ ರೈಡ್‌ಗೆ ಬಳಸಿದ ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್ 2018ರಲ್ಲಿ ಬಿಡುಗಡೆಯಾಗಿದೆ. ಟ್ವಿನ್ ಸಿಲಿಂಡರ್ ಬೈಕ್ ಇದಾಗಿದ್ದು, 647 cc, ಫ್ಯುಯೆಲ್ ಇಂಜೆಕ್ಟೆಡ್, ಆಯಿಲ್, ಏರ್ ಕೂಲ್ಡ್  ಎಂಜಿನ್ ಹೊಂದಿದೆ.  47 Bhp ಪವರ್ ಹಾಗೂ 52 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ.  6 ಮ್ಯಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿದೆ.

ಟೆಲಿಸ್ಕೋಪಿಕ್ ಫ್ರಂಟ್ ಫೋರ್ಕ್, ಡ್ಯುಟಯೆಲ್ ಗ್ಯಾಲ್ ಚಾರ್ಜಡ್ ರೇರ್ ಶಾಕ್ ಅಬ್ಸರ್ಬ್ಸ್, ಫ್ರಂಟ್ ಹಾಗೂ ರೇರ್ ಡಿಸ್ಕ್ ಬ್ರೇಕ್, ಡ್ಯಯೆಲ್ ಚಾನೆಲ್ ಆ್ಯಂಟಿ ಲಾಕ್ ಬ್ರೇಕಿಂಗ್ ಸಿಸ್ಟಮ್ ಹೊಂದಿದೆ. ಈ ಬೈಕ್ ಬೆಲೆ 2.37 ಲಕ್ಷ ರೂಪಾಯಿ(ಎಕ್ಸ ಶೋ ರೂಂ).


 

click me!