ಬೆಂಗಳೂರಿನ ಅಲ್ಟ್ರಾವೊಯಿಲೆಟ್ ಕಂಪನಿಯಿಂದ ಶೀಘ್ರದಲ್ಲೇ ಎಲೆಕ್ಟ್ರಿಕ್ ಬೈಕ್ ಬಿಡುಗಡೆ!

By Web DeskFirst Published Oct 15, 2019, 6:56 PM IST
Highlights

ಬೆಂಗಳೂರು ಮೂಲದ ಸ್ಟಾರ್ಟ್ ಅಪ್ ಕಂಪನಿ ನೂತನ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ನೂತನ ಬೈಕ್ ಹಲವು ವಿಶೇಷತೆಗಳನ್ನೊಳಗೊಂಡಿದೆ. 

ಬೆಂಗಳೂರು(ಅ.15): ಎಲೆಕ್ಟ್ರಿಕ್ ಮೋಟಾರು ಕಂಪನಿ ಹಾಗೂ ಸ್ಟಾರ್ಟ್ ಆಪ್‌ಗಳಲ್ಲಿ ಬೆಂಗಳೂರು ಮುಂಚೂಣಿಯಲ್ಲಿದೆ. ಈಗಾಗಲೇ ಬೆಂಗಳೂರು ಮೂಲಕ ಎದರ್ ಕಂಪನಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ಇದೀಗ ಮತ್ತೊಂದು ಬೆಂಗಳೂರು ಕಂಪನಿ ಎಲ್ಟ್ರಾವೊಯಿಲೆಟ್ ಆಟೋಮೊಟೀವ್ ಕಂಪನಿ ಅತ್ಯಾಕರ್ಷಕ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ.

ಇದನ್ನೂ ಓದಿ: ಮತ್ತೆ ರಸ್ತೆಗಳಿಯುತ್ತಿದೆ ಹಮಾರ ಬಜಾಜ್; ಅ.16ಕ್ಕೆ ಚೇತಕ್ ಇ ಸ್ಕೂಟರ್ ಲಾಂಚ್!

ಟಿವಿಎಸ್ ಮೋಟಾರ್ ಸಹಭಾಗಿತ್ವದಲ್ಲಿ ಅಲ್ಟ್ರಾವೊಯಿಲೆಟ್ ನೂತನ F77 ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡುತ್ತಿದೆ. ನವೆಂಬರ್ 13 ರಂದು ನೂತನ ಬೈಕ್ ಮಾರುಕಟ್ಟೆ ಪ್ರವೇಶಿಸುತ್ತಿದೆ. ಈ ಬೈಕ್ ಬೆಲೆ 2 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

ಇದನ್ನೂ ಓದಿ: ಲೈಸೆನ್ಸ್, ದಾಖಲೆ ಯಾವುದೂ ಬೇಡ; ಬಿಡುಗಡೆಯಾಗಿದೆ 35,000 ರೂಪಾಯಿ ಬೈಕ್!

ಹೊಚ್ಚ ಹೊಸ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಂತಸವಾಗುತ್ತಿದೆ. ಇದು ಹೈ ಪರ್ಫಾಮೆನ್ಸ್ ಎಲೆಕ್ಟ್ರಿಕ್ ಬೈಕ್ ಆಗಿದ್ದು, ಇದು ಟಿವಿಎಸ್ ಅಪಾಚೆ RR 310, KTM RC 390, ಸುಜುಕಿ ಜಿಕ್ಸರ್ 250 ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ ಎಂದು  ಅಲ್ಟ್ರಾವೊಯಿಲೆಟ್ ಸಂಸ್ಥಾಪಕ ನಿರ್ದೇಶಕ ನಾರಾಯಣ ಸುಬ್ರಮನಿಯಂ ಹೇಳಿದರು.

25 kW ಎಲೆಕ್ಟ್ರಿಕ್ ಮೋಟಾರ್ ಬಳಸಲಾಗಿದೆ. ಹೀಗಾಗಿ ಆಪಾಚೆ RR 310 ಬೈಕ್‌ನಷ್ಟೇ ಶಕ್ತಿ ಶಾಲಿಯಾಗಿದೆ. ಆದರೆ ಆದರೆ ಮೈಲೇಜ್ ರೇಂಜ್, ಚಾರ್ಚಿಂಗ್ ಕುರಿತ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.

click me!