ರಾಜಧಾನಿಯ ವಾಹನ ಸವಾರರು ನಿಟ್ಟುಸಿರುಬಿಟ್ಟಿದ್ದಾರೆ. ಬರೋಬ್ಬರಿ 1.5 ಲಕ್ಷ ಚಲನ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವದೆಹಲಿ(ಅ.15): ಹೊಸ ಟ್ರಾಫಿಕ್ ನಿಯಮದಿಂದ ಸ್ವೀಡ್ ಲಿಮಿಟ್ ಕ್ರಾಸ್ ಆದರೆ ಇ ಚಲನ್ ಪ್ರಿಂಟ್ ಆಗಿ ಬಿಡುತ್ತೆ. ಓವರ್ ಸ್ಪೀಡ್ ಸಾಧನದಲ್ಲಿ ವಾಹನದ ಸಂಖ್ಯೆ ದಾಖಲಾಗುತ್ತೆ. ಅಷ್ಟೇ ವೇಗದಲ್ಲಿ ದಂಡದ ಚಲನ್ ಖಾತೆಯಲ್ಲಿ ಜಮಾ ಆಗಿರುತ್ತೆ. ಇದೀಗ ಸ್ಪೀಡ್ ನಿಯಮ ಉಲ್ಲಂಘಿಸಿದ 1.5 ಲಕ್ಷ ವಾಹನ ಸವಾರರ ಇ ಚಲನ್ ರದ್ದು ಮಾಡಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ: ದುಬಾರಿ ಟ್ರಾಫಿಕ್ ದಂಡ; ಮೋದಿ ತವರಲ್ಲೇ ಪ್ರತಿಭಟನೆ!
1.5 ಲಕ್ಷ ಇ ಚಲನ್ ರದ್ದು ಮಾಡುತ್ತಿರುವು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ. ರಾಷ್ಟ್ರೀಯ ಹೆದ್ದಾರಿ 24ರಲ್ಲಿ ಓವರ್ ಸ್ವೀಡ್ ಮಶಿನ್ ಅಳವಡಿಸಲಾಗಿದೆ. ಈ ಮಶಿನ್‌ಗೂ ಮುನ್ನ ಸ್ಪೀಡ್ ಲಿಮಿಟ್ ಬೋರ್ಡ್ ಹಾಕಲಾಗಿದೆ. ಇದರಲ್ಲಿ 70 ಕಿ.ಮೀ ಎಂದು ನಿಗದಿ ಮಾಡಲಾಗಿದೆ. ಆದರೆ ಓವರ್ ಸ್ಪೀಡ್ ಮಶಿನ್‌ನಲ್ಲಿ 60ಕ್ಕೆ ನಿರ್ಬಂಧ ಹಾಕಲಾಗಿದೆ. ಹೀಗಾಗಿ 60 ಕಿ.ಮೀ ವೇಗ ದಾಟಿದ ಎಲ್ಲಾ ವಾಹನಗಳಿಗೆ ಮಶಿನ್ ಇ ಚಲನ್ ಜಾರಿ ಮಾಡಿದೆ.
ಇದನ್ನೂ ಓದಿ: ಹೊಸ ಟ್ರಾಫಿಕ್ ನಿಯಮ; ಹೊರಬಿತ್ತು ಕುತೂಹಲಕಾರಿ ಮಾಹಿತಿ!
ಸಣ್ಣ ತಪ್ಪಿನಿಂದ ಈ ರೀತಿ ಆಗಿದೆ. ಹೀಗಾಗಿ ದೆಹಲಿ ಪೊಲೀಸರು 1.5 ಲಕ್ಷ ಇ ಚಲನ್ ರದ್ದು ಮಾಡಲು ಮುಂದಾಗಿದ್ದಾರೆ. PWD ಅಳವಡಿಸಿರುವ ಬೋರ್ಡ್‌ನಲ್ಲಿ 70 ಕಿ.ಮೀ ಎಂದು ದಾಖಲಿಸಿದ್ದಾರೆ. ಈ ಬೋರ್ಡ್ ಬದಲಿಸಲು ಟ್ರಾಫಿಕ್ ಪೊಲೀಸರು PWDಗೆ ಸೂಚಿಸಿದ್ದಾರೆ. ವೇಗದ ಮಿತಿಯನ್ನು 60 ಕಿ.ಮೀ ಎಂದು ನಮೂದಿಸಲು ಪೊಲೀಸರು ಸೂಚಿಸಿದ್ದಾರೆ.
ಸದ್ಯ ಪ್ರಶ್ನೆ ಇದಲ್ಲ, ಈಗಾಗಲೇ ಓವರ್ ಸ್ಪೀಡ್ ಎಂದು ದಂಡ ವಸೂಲಿ ಮಾಡಿದವರಿಗೆ, ಹಣ ಹಿಂತಿರಿಗಿಸುವುದು ಹೇಗೆ? ಈ ಕುರಿತು ದೆಹಲಿ ಪೊಲೀಸರು ಯಾವುದೇ ಯೋಜನೆ ಹಾಕಿಲ್ಲ.