
ಕಳೆದ ಒಂದರೆಡು ವರ್ಷಗಳಿಂದ ವಿಶ್ವಾದ್ಯಂತ ಏನೇನೋ ಘಟನೆಗಳು ಸಂಭವಿಸುತ್ತಲೇ ಇವೆ. ಎಲ್ಲೆಲ್ಲೂ ಯುದ್ಧ, ಪ್ರವಾಹ, ಭೂಕಂಪದಂಥ ನೈಸರ್ಗಿಕ ವಿಕೋಪ, ಯಾವ ದೇಶಕ್ಕೆ ಯಾವ ಕ್ಷಣದಲ್ಲಿ ಏನಾದರೂ ಆಗಬಹುದಾದ ಆತಂಕ ಇದ್ದೇ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವೆಯೂ ಯುದ್ಧ ಭೀತಿ ಇತ್ತು. ಆದ್ರೆ Operation Sindoorವನ್ನು ಭಾರತ ಅತ್ಯಂತ ಸೂಕ್ಷ್ಮವಾಗಿ ಹಾಗೂ ಇಡೀ ವಿಶ್ವವೇ ನಿಬ್ಬೆರಗಾಗುವಂತೆ ನಡೆಸಿದ್ದರಿಂದ ಭಾರತೀಯರು ನೆಮ್ಮದಿಯಿಂದ ಇರುವಂತಾಗಿದೆ. ಆದರೆ ಹೊರಗಿನ ಶತ್ರುಗಳಿಗಿಂತಲೂ ಒಳಗಿನ ಶತ್ರುಗಳೇ ಹೆಚ್ಚಾಗಿರುವ ಈ ಕಾಲ ಘಟ್ಟದಲ್ಲಿ ವೈರಿಗಳೊಂದಿಗೆ ಕೈಜೋಡಿಸಿ ಯಾವ ಸಮಯದಲ್ಲಿ ಏನು ಬೇಕಾದರೂ ಮಾಡುವ ಆತಂಕ ಭಾರತಕ್ಕೆ ಇದ್ದೇ ಇದೆ. ಇದಾಗಲೇ ವಿದೇಶಗಳಿಗೆ ಹೋಗಿ ಭಾರತದ ಮರ್ಯಾದೆಯನ್ನು ಹರಾಜು ಹಾಕುವ ವಿಫಲ ಪ್ರಯತ್ನಗಳೂ ನಡೆದಿವೆ. ಆದ್ದರಿಂದ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗುವ ಸ್ಥಿತಿ ತಲೆದೋರಿದೆ.
ಇವುಗಳ ನಡುವೆಯೇ, ಅಮೆರಿಕದಲ್ಲಿಯೂ ವಿಚಿತ್ರ ಪರಿಸ್ಥಿತಿ ತಲೆದೋರಿದೆ. ಭಾರತ ತನ್ನ ಸ್ನೇಹಿತ ಎಂದು ಹೇಳುತ್ತಲೇ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕಿತಾಪತಿ ಮಾಡುತ್ತಿರುವುದು ತಿಳಿದೇ ಇದೆ. ವಿನಾಶಕಾಲೇ ವಿಪರೀತ ಬುದ್ಧಿ ಎನ್ನುವಂತೆ ಆಗಿದೆ ಸದ್ಯ ಅವರ ಸ್ಥಿತಿ. ಡೊನಾಲ್ಡ್ ಟ್ರಂಪ್ USA ಕೊನೆಯ ಅಧ್ಯಕ್ಷ ಎಂದು ಇದಾಗಲೇ ಕೆಲವು ಜ್ಯೋತಿಷಿಗಳು ಭವಿಷ್ಯ ನುಡಿದಾಗಿದೆ. ಕಾಲಜ್ಞಾನಿಗಳೂ ಇದನ್ನು ಹೇಳಿಯಾಗಿದೆ. ಹಾಗಾದರೆ ಇದರ ಅರ್ಥವೇನು? ಟ್ರಂಪ್ ಕೊನೆಯ ಅಧ್ಯಕ್ಷ ಎಂದರೆ ಅದಕ್ಕೇನು ಅರ್ಥ ಎನ್ನುವುದು ಬಹುತೇಕ ಯಾರಿಗೂ ತಿಳಿಯದಾಗಿದೆ.
ಇದನ್ನೂ ಓದಿ: We want Modi... ನೇಪಾಳದಲ್ಲಿ ಯುವಕರ ಘೋಷಣೆ- ಓಲಿ ಬೇಡ ನಮಗೂ ಮೋದಿ ಬೇಕೆಂದ ವಿಡಿಯೋ ವೈರಲ್
ಈ ಬಗ್ಗೆ ಖ್ಯಾತ ಜ್ಯೋತಿಷಿಯೊಬ್ಬರು ಸವಿಸ್ತಾರವಾಗಿ ಈ ಭವಿಷ್ಯದ ಕುರಿತು ತಿಳಿಸಿದ್ದಾರೆ. ಇದರ ಜೊತೆಗೆ ದೀದೀ ಎಂದೇ ಫೇಮಸ್ ಆಗಿರೋ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ಬಿಹಾರದಲ್ಲಿ ಎನ್ಡಿಎ ಸರ್ಕಾರದ ಮುಖ್ಯಮಂತ್ರಿಯಾಗಿರೋ ನಿತೀಶ್ ಕುಮಾರ್ ಅವರ ಭವಿಷ್ಯದ ಬಗ್ಗೆಯೂ ಇವರು ನುಡಿದಿದ್ದಾರೆ. ಮಾತ್ರವಲ್ಲದೇ, ಭಾರತದ ಬಗ್ಗೆಯೂ ಹೇಳಿದ್ದಾರೆ. ಇಲ್ಲಿ ಒಂದೊಂದಾಗಿ ಈ ಬಗ್ಗೆ ವಿವರಿಸಲಾಗಿದೆ.
ಮೊದಲನೆಯದ್ದಾಗಿ ಭಾರತದ ಬಗ್ಗೆ ಹೇಳುವುದಾದರೆ, ಇನ್ನೆರಡು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದ ಹೆಸರನ್ನು ವಿಶ್ವಸಂಸ್ಥೆಯ ಸೆಕ್ಯುರಿಟಿ ಕೌನ್ಸೆಲ್ನಲ್ಲಿ ಸೇರಿಸುತ್ತಾರೆ. ಭಾರತಕ್ಕೆ ವಿಟೋ ಪವರ್ ಸಿಗಲಿದೆ. ಈಗ ಐದು ರಾಷ್ಟ್ರಗಳಿಗೆ ಮಾತ್ರ ಈ ಪವರ್ ಸಿಕ್ಕಿದ್ದು, ಭಾರತ 6ನೇ ರಾಷ್ಟ್ರವಾಗಲಿದೆ. ಈ ಮೂಲಕ ಮತ್ತೆ ಇಡೀ ವಿಶ್ವದಲ್ಲಿ ಭಾರತ ಇನ್ನಷ್ಟು ಉನ್ನತ ಸ್ಥಾನಕ್ಕೆ ಹೋಗಲಿದೆ. "ವೀಟೋ ಪವರ್" ಎಂದರೆ "ಅಧಿಕಾರವನ್ನು ತಿರಸ್ಕರಿಸುವ ಅಥವಾ ನಿರ್ಬಂಧಿಸುವ ಶಕ್ತಿ". ವಿಶ್ವಸಂಸ್ಥೆಯ (UN) ಭದ್ರತಾ ಮಂಡಳಿಯ ಐದು ಕಾಯಂ ಸದಸ್ಯ ರಾಷ್ಟ್ರಗಳು ಯಾವುದೇ ಪ್ರಸ್ತಾವಿತ ನಿರ್ಣಯಕ್ಕೆ ತಡೆಯೊಡ್ಡಲು ಈ ಶಕ್ತಿಯನ್ನು ಬಳಸಿಕೊಳ್ಳುತ್ತಿವೆ. ಇದೀಗ 6ನೇ ರಾಷ್ಟ್ರವಾಗಿ ಹೊರಹೊಮ್ಮಲಿದೆ ಭಾರತ ಎಂದಿದ್ದಾರೆ ಅವರು.
ಇನ್ನು ಡೊನಾಲ್ಡ್ ಟ್ರಂಪ್ ಅವರು USA ಕೊನೆಯ ಅಧ್ಯಕ್ಷ ಆಗಲಿದ್ದಾರೆ. ಇನ್ನೆರಡು ವರ್ಷಗಳಲ್ಲಿ ಯುಎಸ್ಎ ಛಿದ್ರ ಛಿದ್ರ ಆಗಲಿದೆ ಎಂದಿದ್ದಾರೆ. ಇದಾಗಲೇ ಹಲವರಿಗೆ ತಿಳಿದಿರುವಂತೆ USA ಎಂದರೆ United States of America. ಇದರ ಅಡಿಯಲ್ಲಿ 50 ಖಂಡಗಳಿವೆ. ಇದಕ್ಕೆ ಸದ್ಯ ಟ್ರಂಪ್ ಅಧ್ಯಕ್ಷ. ಆದರೆ ಇನ್ನೆರಡು ವರ್ಷಗಳಲ್ಲಿ ಕೆಲವು ಖಂಡಗಳು ಪ್ರತ್ಯೇಕಗೊಳ್ಳಲಿದೆ. ಹಿಂದೊಮ್ಮೆ USSR (Union of Soviet Socialist Republics)ಗೆ ಆದ ಗತಿಯೇ ಯುಎಸ್ಎಗೂ ಆಗಲಿದೆ. ರಾಜ್ಯಗಳು ಪ್ರತ್ಯೇಕಗೊಂಡಾದ ಅದು USA ಆಗಿ ಉಳಿಯಲಾರದು ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Narendra Modi ರಾಜಕೀಯ ಸನ್ಯಾಸ ? ಮುಂದಿನ ಪ್ರಧಾನಿ ಯಾರು? ದೇಶಕ್ಕೇನಾಗಲಿದೆ? ಈ ಭವಿಷ್ಯವಾಣಿ ಕೇಳಿ...
ಪಶ್ಚಿಮ ಬಂಗಾಳದಲ್ಲಿ ಇದಾಗಲೇ ಭಾರಿ ಪ್ರತಿಭಟನೆಗಳು ನಡೆಯುತ್ತಿವೆ. ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯದ ವಿರುದ್ಧ ಜನರು ಸಿಡಿದೆದ್ದಿದ್ದಾರೆ. ಇದೇ ಕಾರಣಕ್ಕೆ ಬರುವ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಆಯ್ಕೆ ಆಗುವುದಿಲ್ಲ, ಅವರು ಸೋಲುತ್ತಾರೆ. ಪಶ್ಚಿಮ ಬಂಗಾಳದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ ಎಂದು ಇವರು ಹೇಳಿದ್ದಾರೆ. ಅದೇ ರೀತಿ, ಶೀಘ್ರದಲ್ಲಿ ಬಿಹಾರದ ವಿಧಾನಸಭೆಗೆ ಚುನಾವಣೆ ಇದೆ. ಸದ್ಯ ಅಲ್ಲಿ ಎನ್ಡಿಎ ಅಭ್ಯರ್ಥಿ ನಿತೀಶ್ ಕುಮಾರ್ ಮುಖ್ಯಮಂತ್ರಿ. ಆದರೆ ಅವರು ಈ ಚುನಾವಣೆಯ ಬಳಿಕ ಮುಖ್ಯಮಂತ್ರಿ ಆಗುವುದಿಲ್ಲ. ಅಲ್ಲಿ ಕೂಡ BJPಯ ಅಭ್ಯರ್ಥಿಯೇ ಗೆಲುವು ಸಾಧಿಸಿ ಸಿಎಂ ಆಗುತ್ತಾರೆ ಎಂದಿದ್ದಾರೆ. ಅದೇ ರೀತಿ ದೆಹಲಿಯ ಮುಖ್ಯಮಂತ್ರಿ ರೇಖಾ ಗುಪ್ತಾ ಕೂಡ ತಮ್ಮ ಅಧಿಕಾರಾವಧಿಯನ್ನು ಪೂರ್ಣಗೊಳಿಸುವುದಿಲ್ಲ ಎಂದಿದ್ದಾರೆ. ಎಲ್ಲದ್ದಕ್ಕೂ ಕಾಲವೇ ಉತ್ತರಿಸಬೇಕಿದೆ.