
ಇದೇ 22ರಿಂದ ನವರಾತ್ರಿ ಹಬ್ಬದ ಆರಂಭ. ಹಿಂದೂಗಳ ಹಬ್ಬ ಎಂದರೆ ಅದಕ್ಕೊಂದು ಪೌರಾಣಿಕ ಕಥೆ ಇದ್ದೇ ಇರುತ್ತದೆ. ಅದರಲ್ಲಿಯೂ ಹಿಂದೂ ಧರ್ಮದಲ್ಲಿ ಮಹಿಳೆಗೆ ವಿಶೇಷ ಸ್ಥಾನಮಾನ ಇರುವ ಕಾರಣ, ದೇವಿಗೇ ಹೆಚ್ಚಿನ ಪ್ರಾಮುಖ್ಯತೆ ಇದೆ. ಹಲವು ಹಬ್ಬಗಳು ದೇವಿಯ ಹೆಸರಿನಲ್ಲಿಯೇ ನಡೆಯುತ್ತದೆ. ಅದೇ ರೀತಿ 9 ದಿನಗಳವರೆಗೆ ನಡೆಯುವ ಈ ಹಬ್ಬದ ಹಿನ್ನೆಲೆ ಕೂಡ ದೇವಿಯೇ. ಆದರೆ ಇಂದಿನ ಹೆಚ್ಚಿನ ಮಕ್ಕಳಿಗೆ ಹಬ್ಬಗಳ ಬಗ್ಗೆ ಅರಿವೇ ಇಲ್ಲ. ನಮ್ಮ ದೇವಾನುದೇವತೆಗಳ ಬಗ್ಗೆ ತಿಳಿದುಕೊಳ್ಳುವ ಕುತೂಹಲ ಕೆಲವರಿಗೆ ಇದ್ದರೂ, ಅವರ ಅಪ್ಪ-ಅಮ್ಮಂದಿರಿಗೇ ಈ ಬಗ್ಗೆ ತಿಳಿಯದೇ ಇರುವುದು ಮತ್ತೊಂದು ದೊಡ್ಡ ದುರಂತ. ಇದನ್ನೇ ಬಂಡವಾಳ ಮಾಡಿಕೊಂಡು, ಹಿಂದೂ ದೇವತೆಗಳನ್ನೇ ಗುರಿಯಾಗಿಸಿಕೊಂಡು, ಇಂದು ಹಿಂದೂ ಹೆಣ್ಣುಮಕ್ಕಳ ಹಾದಿ ತಪ್ಪಿಸುತ್ತಿರುವುದು ಗುಟ್ಟಾಗೇನೂ ಉಳಿದಿಲ್ಲ.
ಆದ್ದರಿಂದ ದೇವರ ಮೇಲೆ ನಂಬಿಕೆ ಇರಲಿ, ಬಿಡಲಿ. ಕೊನೆಯ ಪಕ್ಷ ಪೌರಾಣಿಕ ಹಿನ್ನೆಲೆ, ಹಬ್ಬಗಳ ಮಹತ್ವದ ಬಗ್ಗೆ ಮಕ್ಕಳಿಗೆ ತಿಳಿಸುವುದು ಅತ್ಯಂತ ಅವಶ್ಯಕವಾಗಿದೆ. ಇದೀಗ ನವರಾತ್ರಿಯ ಹಬ್ಬದ ಸಡಗರವಾಗಿರುವ ಕಾರಣ, ಹಬ್ಬಕ್ಕೆ ಇರುವ ಹಿನ್ನೆಲೆ ಏನು, 9 ರಾತ್ರಿಗಳು ಯಾಕೆ? ಇದರಲ್ಲಿ ನವದುರ್ಗೆಯರನ್ನು ಪೂಜಿಸುವುದು ಏಕೆ ಎನ್ನುವ ಬಗ್ಗೆ ಎಲ್ಲರಿಗೂ ಅರ್ಥವಾಗುವ ರೀತಿಯಲ್ಲಿ ಮಾಡಲಾದ AI ವಿಡಿಯೋ ಒಂದು ವೈರಲ್ ಆಗಿದ್ದು, ಇದು ಅತ್ಯಂತ ಚಿಕ್ಕ ಹಾಗೂ ಚೊಕ್ಕದಾಗಿ ನವರಾತ್ರಿಯ ಮಹತ್ವವನ್ನು ತಿಳಿಸುತ್ತಿದೆ.
ನವರಾತ್ರಿ ಇದು ದೇವಿಯನ್ನು ಆರಾಧಿಸುವ ಹಿಂದೂ ಧರ್ಮದ ಹಬ್ಬ. ಇದನ್ನು ಕರ್ನಾಟಕದಲ್ಲಿ ದಸರಾ ಎಂದೂ, ಪಶ್ಚಿಮ ಬಂಗಾಳ ಸೇರಿದಂತೆ ಕೆಲವೆಡೆ ದುರ್ಗಾ ಪೂಜಾ ಎಂದೂ ಆಚರಿಸಲಾಗುತ್ತದೆ. ನವರಾತ್ರಿಯೆಂದರೆ ಒಂಬತ್ತು (ನವ) ರಾತ್ರಿಗಳು, ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇಯ ದಿನ 'ವಿಜಯ ದಶಮಿ', ಈ ದಿನ ಶಮಿವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ಕರ್ನಾಟಕದ ಆಚರಣೆಯ ಪದ್ಧತಿ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಪ್ರತಿನಿಧಿಸುತ್ತದೆ ಮತ್ತು ಸ್ತ್ರೀ ಶಕ್ತಿಯ ಆರಾಧನೆಯಾಗಿದೆ. ನವರಾತ್ರಿಯ ಒಂಬತ್ತು ರಾತ್ರಿಗಳು ದೇವಿಯ ಒಂಬತ್ತು ವಿಭಿನ್ನ ಅವತಾರಗಳನ್ನು ಪೂಜಿಸಲು ಮೀಸಲಾಗಿದೆ. ಹತ್ತನೇ ದಿನ, ಅಂದರೆ ವಿಜಯದಶಮಿ ಅಥವಾ ದಸರಾ ಎಂದು ಕರೆಯಲ್ಪಡುವ ದಿನದಂದು, ಮಹಿಷಾಸುರನ ಮೇಲೆ ದುರ್ಗಾದೇವಿಯ ವಿಜಯವನ್ನು ಸಂಭ್ರಮಿಸಲಾಗುತ್ತದೆ.
ನವರಾತ್ರಿಯ ಇತಿಹಾಸವು ಪ್ರಾಚೀನ ಕಾಲದಿಂದಲೂ ಇದೆ. ಆರಂಭದಲ್ಲಿ ಇದು ಸುಗ್ಗಿಯ ಕಾಲವನ್ನು ಗುರುತಿಸುವ ಹಬ್ಬವಾಗಿತ್ತು. ಹಿಂದೂ ಪುರಾಣಗಳು ಬೆಳೆದಂತೆ, ಇದು ದುರ್ಗೆಯ ಆರಾಧನೆ ಮತ್ತು ದುಷ್ಟ ಶಕ್ತಿಗಳ ವಿರುದ್ಧದ ಹೋರಾಟದೊಂದಿಗೆ ಬೆಸೆದುಕೊಂಡಿದೆ. ಇದು ಸಂಸ್ಕೃತಿ ಮತ್ತು ಏಕತೆಯನ್ನು ಪ್ರತಿಬಿಂಬಿಸುವ ಜನಪ್ರಿಯ ಹಬ್ಬವಾಗಿದೆ
ಅಷ್ಟಕ್ಕೂ ನವರಾತ್ರಿಯ ಬಗ್ಗೆ ವಿಭಿನ್ನ ರೀತಿಯ ಪೌರಾಣಿಕ ಕಥೆಗಳಿವೆ. ಇದರಲ್ಲಿ ಮುಖ್ಯವಾದದ್ದು ಮಹಿಷಾಸುರನ ವಧೆಯ ಕಥೆ. ದುಷ್ಟ ರಾಕ್ಷಸ ಮಹಿಷಾಸುರನು ತನ್ನ ಶಕ್ತಿಯಿಂದ ಸ್ವರ್ಗ ಮತ್ತು ಭೂಮಿಯಲ್ಲಿ ಅನಾಹುತವನ್ನು ಸೃಷ್ಟಿಸಿದ್ದನು. ದೇವತೆಗಳು ಒಗ್ಗೂಡಿ, ತಮ್ಮ ಶಕ್ತಿಯನ್ನು ದೇವತೆ ದುರ್ಗೆಗೆ ವಹಿಸಿದರು. ದುರ್ಗೆಯು ಮಹಿಷಾಸುರನನ್ನು ಒಂಬತ್ತು ರಾತ್ರಿಗಳ ಕಾಲ ಯುದ್ಧ ಮಾಡಿ ಕೊನೆಗೆ ವಿಜಯಶಾಲಿಯಾದಳು. ಅದರ ವಿಡಿಯೋ ಅನ್ನು ದಿ ಟೆಂಪಲ್ ಗರ್ಲ್ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಲಾಗಿದೆ.
ನವರಾತ್ರಿ, ಎಂದರೆ ಒಂಬತ್ತು ರಾತ್ರಿಗಳು, ಶಕ್ತಿ ಸ್ವರೂಪಳಾದ ದುರ್ಗೆಯನ್ನು ಪೂಜಿಸಲು ಮೀಸಲಾಗಿದೆ. ಈ ಹಬ್ಬವು ದೈವಿಕ ಸ್ತ್ರೀ ಶಕ್ತಿಯನ್ನು ಗೌರವಿಸುವ ಮೂಲಕ ಕೆಟ್ಟ ಶಕ್ತಿಗಳನ್ನು ನಾಶಪಡಿಸುತ್ತದೆ. ಒಂಬತ್ತು ಅವತಾರಗಳು: ನವರಾತ್ರಿಯ ಒಂಬತ್ತು ದಿನಗಳಲ್ಲಿ, ದೇವಿಯ ಒಂಬತ್ತು ವಿಭಿನ್ನ ರೂಪಗಳನ್ನು, ಅಂದರೆ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿ ದಿನವೂ ಒಂದು ವಿಶಿಷ್ಟ ಅವತಾರವನ್ನು ಆರಾಧಿಸಲಾಗುತ್ತದೆ. ಹತ್ತನೇ ದಿನವನ್ನು ವಿಜಯದಶಮಿ ಅಥವಾ ದಸರಾ ಎಂದು ಆಚರಿಸಲಾಗುತ್ತದೆ. ಈ ದಿನ ದುರ್ಗೆಯು ಮಹಿಷಾಸುರನನ್ನು ಸೋಲಿಸಿದ ವಿಜಯವನ್ನು ಸಂಭ್ರಮಿಸಲಾಗುತ್ತದೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ.
ಇದನ್ನೂ ಓದಿ: 21ರಂದು ವರ್ಷದ ಕೊನೆಯ ಸೂರ್ಯಗ್ರಹಣ: ಯಾರ ಗ್ರಹಗತಿ ಹೇಗಿದೆ? ನಿಮ್ಮ ರಾಶಿಯ ಮೇಲೆ ಪ್ರಭಾವ ಏನು?
ಕರ್ನಾಟಕದ ಮೈಸೂರು ದಸರಾ ಇಲ್ಲಿನ ಪ್ರಮುಖ ಆಕರ್ಷಣೆಯಾಗಿದ್ದು, ಚಾಮುಂಡೇಶ್ವರಿ ದೇವಿಯ ಮೂರ್ತಿಯ ಮೆರವಣಿಗೆ ನಡೆಸಲಾಗುತ್ತದೆ. ಬನ್ನಿ ಮರಕ್ಕೆ ಪೂಜೆ ಸಲ್ಲಿಸಿ ಶಮಿ ವಿನಿಯೋಗ ಮಾಡಲಾಗುತ್ತದೆ. ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ದುರ್ಗಾ ಪೂಜೆಯ ರೂಪದಲ್ಲಿ ಆಚರಿಸಲ್ಪಡುತ್ತದೆ. ದುರ್ಗಾ ದೇವಿಯ ವಿಜಯವನ್ನು ಸಂಭ್ರಮಿಸಲಾಗುತ್ತದೆ. ಗುಜರಾತ್‌ನಲ್ಲಿ ಗರ್ಬಾ ಮತ್ತು ದಾಂಡಿಯಾ ನೃತ್ಯಗಳು ಪ್ರಮುಖ ಆಕರ್ಷಣೆಯಾಗಿವೆ.