ಈ ರಾಶಿಯ ಬಾಸ್ ತುಂಬಾ ಫ್ರೆಂಡ್ಲಿಯಾಗಿರುತ್ತಾರೆ

By Suvarna News  |  First Published Apr 11, 2022, 7:45 PM IST

ಕಚೇರಿಯಲ್ಲಿ ಸ್ವಲ್ಪ ಖುಷಿಯಾಗಿ, ರಿಲ್ಯಾಕ್ಸ್ ಆಗಿ ಕೆಲಸ ಮಾಡುವ ವಾತಾವರಣವಿದ್ದರೆ ಅದಕ್ಕಿಂತ ನೆಮ್ಮದಿ ಬೇರೊಂದಿಲ್ಲ. ಆದರೆ, ಅಂತಹ ಬಾಸ್ ಎಲ್ಲರಿಗೂ ಸಿಗಬೇಕಲ್ಲ? ಕೆಲವು ರಾಶಿಗಳ ಜನರಷ್ಟೇ ಮುಕ್ತ ಮನಸ್ಸಿನ ಉತ್ತಮ ಬಾಸ್ ಆಗಿರಬಲ್ಲರು. 
 


ಒತ್ತಡ (Stress) ಆಧುನಿಕ ಜೀವನದ ಸಂಗಾತಿ. ಯಾರಿಗೂ ಒತ್ತಡ ತಪ್ಪಿದ್ದಲ್ಲ. ತಮ್ಮದೇ ಕೆಲಸ (Work), ಬ್ಯುಸಿನೆಸ್ (Business), ಉದ್ಯಮ (Entrepreneur) ಮಾಡಿಕೊಂಡಿರುವವರಾಗಲೀ, ಉದ್ಯೋಗದ ನಿಮಿತ್ತ ಬೇರೊಬ್ಬರ ಕೈಕೆಳಗೆ ದುಡಿಯುವವರಾಗಲೀ ಯಾರೂ ಒತ್ತಡದಿಂದ ಮುಕ್ತರಲ್ಲ. ಅದರಲ್ಲೂ ಇಂದಿನ ಕಾರ್ಪೋರೇಟ್ (Corporate) ಜಗತ್ತು ಒತ್ತಡಕ್ಕೆ ಮತ್ತೊಂದು ಹೆಸರು. ಕಾರ್ಪೋರೇಟ್ ಉದ್ಯೋಗಿಗಳ ಒತ್ತಡ ಹೇಳಿಮುಗಿಯುವಂಥದ್ದಲ್ಲ. ಕಚೇರಿಯ ಬಾಸ್ (Boss) ಯಾವ ರೀತಿ ಇದ್ದಾರೆ, ಅವರ ವರ್ತನೆ ಹೇಗಿದೆ ಎನ್ನುವುದರ ಮೇಲೂ ಈ ಒತ್ತಡ ನಿರ್ಧಾರವಾಗುತ್ತದೆ. 

ಕೆಲವು ಬಾಸ್ ಗಳಿರುತ್ತಾರೆ. ಉದ್ಯೋಗಿಗಳು ಮಾಡಿದ ಯಾವೊಂದು ಕೆಲಸವನ್ನೂ ಮೆಚ್ಚಿಕೊಳ್ಳುವುದಿಲ್ಲ. ಬದಲಿಗೆ ಮೂದಲಿಸುತ್ತಾರೆ. ಎಲ್ಲರೆದುರು ಮರ್ಯಾದೆ ತೆಗೆಯುತ್ತಾರೆ. ಪದೇ ಪದೆ ತಮ್ಮ ವಿಚಾರವನ್ನು ಬದಲಿಸುತ್ತ ಕೆಲಸಗಾರರಲ್ಲೂ ಗೊಂದಲ ಮೂಡಿಸಿ ಒಟ್ಟಾರೆ ವಾತಾವರಣವನ್ನೇ ಹಾಳು ಮಾಡುತ್ತಾರೆ. ಆದರೆ, ಕೆಲವು ಬಾಸ್ ಗಳು ಹಾಗಲ್ಲ. ವರ್ಕ್ ಪ್ಲೇಸ್ (Work Place) ನಲ್ಲಿ ಧನಾತ್ಮಕ (Positive) ವಾತಾವರಣಕ್ಕೆ ಕಾರಣರಾಗುತ್ತಾರೆ. ಅಂತಹ ಬಾಸ್ ಗಳು ಈ ನಾಲ್ಕೇ ರಾಶಿಗಳಲ್ಲಿ (Zodiac Sign) ಸಿಗಬಲ್ಲರು. ಇವರು ಯಾವುದೇ ಪೂರ್ವಗ್ರಹವಿಲ್ಲದೆ, ಮುಕ್ತ ಮನಸ್ಸಿನಿಂದ ಕೆಲಸಗಾರರನ್ನು ಹುರಿದುಂಬಿಸಬಲ್ಲರು, ಅವರ ಸಾಮರ್ಥ್ಯವನ್ನು ಗುರುತಿಸಬಲ್ಲರು. ಅಂತಹ ರಾಶಿಗಳು ಯಾವುವು ಎಂದು ನೋಡಿಕೊಳ್ಳಿ. ನಿಮ್ಮ ಬಾಸ್ ಏನಾದರೂ ಈ ರಾಶಿಗಳಿಗೆ ಸೇರಿದ್ದರೆ ನಿಮ್ಮಷ್ಟು ಅದೃಷ್ಟವಂತರು ಬೇರ್ಯಾರೂ ಇಲ್ಲ ಎಂದು ತಿಳಿದುಕೊಳ್ಳಿ.

Tap to resize

Latest Videos

•    ವೃಷಭ (Taurus)
ಕೆಲಸದ ಸ್ಥಳದಲ್ಲಿ ಸದಾಕಾಲ ಹುರುಪಿನಿಂದ ಕೂಡಿದ್ದು, ಅದ್ಭುತ ಹಾಗೂ ದೃಢವಾದ ಕಾರ್ಯನೀತಿ ಹೊಂದಿರುವ ಬಾಸ್ ಇವರು. ಎಂಥದ್ದೇ ಪರಿಸ್ಥಿತಿ ಬರಲಿ, ಕೈ ಚೆಲ್ಲುವುದಿಲ್ಲ. ತಮ್ಮ ಕೈಕೆಳಗಿನ ಉದ್ಯೋಗಿಗನ್ನು ಹುರಿದುಂಬಿಸುವ ವಂಡರ್ ಫುಲ್ ಬಾಸ್ ಎಂದರೆ ಇವರೇ. ಉದ್ಯೋಗಿಗಳು ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಖಾಸಗಿ ಪರಿಸ್ಥಿತಿಗಳನ್ನು ಸಹ ಪರಿಗಣಿಸುತ್ತಾರೆ. ಅವರ ಕಷ್ಟಸುಖಗಳಿಗೆ ಕಿವಿಯಾಗುತ್ತಾರೆ. ಅವರಿಗೆ ಸ್ವಲ್ಪ ರಿಲ್ಯಾಕ್ಸ್ ನೀಡಲೆಂದು ತಾವೇ ಅವರ ಕೆಲಸವನ್ನೂ ಮಾಡಿಕೊಡುವಷ್ಟು ಉದಾರಿಗಳಾಗಿರುತ್ತಾರೆ.

•    ತುಲಾ (Libra)
ವೃತ್ತಿಪರತೆ ಹಾಗೂ ಪ್ರೌಢತೆಯಲ್ಲಿ ತುಲಾ ರಾಶಿಯವರನ್ನು ಮೀರಿಸಲು ಸಾಧ್ಯವಿಲ್ಲ. ಇವರು ಯಾರಿಗೂ ಹೆಚ್ಚಿನ ಒತ್ತಡ ಹೇರುವುದಿಲ್ಲ. ಅದ್ಯಾವುದೇ ಕೆಲಸವಾಗಲಿ ಶೇ.100ರಷ್ಟು ಪೂರ್ಣಗೊಳಿಸುತ್ತಾರೆ. ತಮ್ಮ ಸಾಫಲ್ಯವನ್ನು ಕೆಲಸಗಾರರಿಗೆ ಅರ್ಪಿಸಲು ಇವರಿಗೆ ಯಾವುದೇ ಮುಜುಗರ ಇರುವುದಿಲ್ಲ. ಮುಕ್ತ ಕಂಠದಿಂದ ಶ್ಲಾಘಿಸುತ್ತಾರೆ. ಉತ್ತಮ ಕಾರ್ಯಕ್ಕೆ ಬಹುಮಾನವನ್ನೂ ನೀಡುತ್ತಾರೆ. 

ಇದನ್ನೂ ಓದಿ: Vastu tips: ಮನೆಯಲ್ಲಿ ಪಾಸಿಟಿವ್ ಎನರ್ಜಿಗೆ ದಾಸವಾಳ ಸೂತ್ರ

•    ಸಿಂಹ (Leo)
ಸಿಂಹ ರಾಶಿಗಳ ಜನರು ಕಟ್ಟುನಿಟ್ಟಿನ ಶಿಸ್ತನ್ನು ಪಾಲಿಸುವವರಾಗಿದ್ದರೂ ದಯಾಳುವಾಗಿರುತ್ತಾರೆ, ಪರೋಪಕಾರಿ ಗುಣ ಹೊಂದಿರುತ್ತಾರೆ. ಕಚೇರಿಯಲ್ಲಿ ತಮ್ಮ ಟೀಮ್ ನಲ್ಲಿ ತುಂಬ ಮುಕ್ತವಾಗಿರುತ್ತಾರೆ. ಸಿಂಹ ರಾಶಿಗಳ ಬಾಸ್ ಗಳನ್ನು ನೀವು ನಂಬಬಹುದು. ಎಲ್ಲರಿಗೂ ಟ್ರೀಟ್ ಕೊಡಿಸುವಲ್ಲಿ ಇವರೇ ಮುಂದು. ಕೆಲಸದ ಸ್ಥಳದಲ್ಲಿನ ಬೇಸರ ಹೋಗಲಾಡಿಸಲು ಸದಾಕಾಲ ಏನಾದರೊಂದು ಮೋಜಿನ ಮಾರ್ಗಗಳನ್ನು ಹುಡುಕುತ್ತಾರೆ. ಕೆಲಸಕ್ಕೆ ಸಂಬಂಧಿಸಿ ಏನಾದರೂ ಸಮಸ್ಯೆ ಎದುರಾದಲ್ಲಿ ಅದಕ್ಕೆ ನಿಖರವಾದ ಪರಿಹಾರ ಹುಡುಕುತ್ತಾರೆ. ತಮ್ಮ ಜನರ ಕಷ್ಟನಷ್ಟಗಳ ಕುರಿತು ಮುಕ್ತವಾಗಿ ಕೇಳಿಸಿಕೊಂಡು ಪರಿಹರಿಸಲು ಯತ್ನಿಸುತ್ತಾರೆ. 

ಇದನ್ನೂ ಓದಿ: Kissing as per Astrology: ಯಾವ ಜನ್ಮರಾಶಿಯ ವ್ಯಕ್ತಿ Kiss ಮಾಡುವುದು ಹೇಗೆ?

•    ಕರ್ಕಾಟಕ (Cancer)
ಇತರರ ಬಗ್ಗೆ ಅತ್ಯಂತ ದಯಾಪರ ನಿಲುವು ಹೊಂದಿರುವವರೆಂದರೆ ಕರ್ಕಾಟಕ ರಾಶಿಯ ಬಾಸ್ ಗಳು. ಕೆಲಸದಲ್ಲಿ ತಮ್ಮ ಉದ್ಯೋಗಿಗಳು ಕಂಫರ್ಟ್ ಆಗಿರಬೇಕೆಂದು ಬಯಸುತ್ತಾರೆ, ಅಷ್ಟೇ ಅಲ್ಲ, ಅದಕ್ಕಾಗಿ ಕಚೇರಿಯ ನಿಯಮಗಳನ್ನೂ ಮುರಿಯಬಲ್ಲರು. ಸಹೋದ್ಯೋಗಿಗಳ ಕೆಲಸಗಳನ್ನೂ ತಮ್ಮದೇ ಎನ್ನುವಂತೆ ಮಾಡುತ್ತಾರೆ. ಜವಾಬ್ದಾರಿಯಿಂದ ಸ್ವಲ್ಪವೂ ಹಿಂದೆ ಸರಿಯುವುದಿಲ್ಲ. ರಾತ್ರಿ ಅಧಿಕ ಸಮಯ ಕೆಲಸ ಮಾಡುವ ಬಾಸ್ ಗಳಲ್ಲಿ ಈ ರಾಶಿಯವರೇ ಮುಂದೆ. ತಮ್ಮ ಟೀಮ್ ಅಧಿಕ ಸಮಯ ಕೆಲಸ ಮಾಡಬೇಕೆಂದು ಬಯಸದೇ ಇದ್ದರೂ ತಾವು ಮಾತ್ರ ಕಮಿಟ್ ಆಗಿ ಕೆಲಸ ಪೂರ್ಣಗೊಳಿಸುವಲ್ಲಿ ಸಿದ್ಧಹಸ್ತರಾಗಿರುತ್ತಾರೆ. 

click me!