ಸಾಷ್ಟಾಂಗ ನಮಸ್ಕಾರ ಏಕೆ ಮಾಡಬೇಕು?

By Web Desk  |  First Published Sep 7, 2019, 1:44 PM IST

ಅನೇಕ ಹಳೆ ಆಚಾರಗಳಿಗೆ ವೈಜ್ಞಾನಿಕ ಕಾರಣಗಳಿವೆ. ಒಳ್ಳೆಯ ಉದ್ದೇಶದಿಂದಲೇ ಕೆಲವು ಆಚರಣೆಗಳನ್ನು ಜಾರಿಗೆ ತರಲಾಗಿದ್ದು, ಅನಿವಾರ್ಯ ಕಾರಣಗಳಿಂದ ಅವನ್ನು ಮಾನವ ಈಗೀಗ ಅನುಸರಿಸುತ್ತಿಲ್ಲ. ಅಷ್ಟಕ್ಕೂ ದೇವರಿಗೆ ಸಾಷ್ಟಾಂಗ ನಮಸ್ಕಾರ ಮಾಡಲೇನು ಕಾರಣ?


ನಮಸ್ಕಾರದಲ್ಲಿ ಎರಡು ವಿಧ. ಒಂದು- ಹಸ್ತ ನಮಸ್ಕಾರ. ಇನ್ನೊಂದು ಸಾಷ್ಟಾಂಗ ನಮಸ್ಕಾರ. ಹಿರಿಯರನ್ನೂ, ಗೌರವಾನ್ವಿತರನ್ನೂ ಭೇಟಿ ಮಾಡಿದಾಗ ಸಾಮಾನ್ಯವಾಗಿ ಕೈ ಜೋಡಿಸಿ ನಮಸ್ಕಾರ ಮಾಡುತ್ತೇವೆ. ದೇವರಿಗೆ ನಮಸ್ಕಾರ ಮಾಡುವಾಗ ಸಾಷ್ಟಾಂಗ ಮಾಡುತ್ತೇವೆ. ಇವೆರಡೂ ನಮಸ್ಕಾರಗಳ ಆಶಯಗಳು ವಾಸ್ತವವಾಗಿ ಬೇರೆ ಬೇರೆ ಇವೆ. 

ಕೈಗಳನ್ನು ಜೋಡಿಸಿ ಮಾಡುವ ನಮಸ್ಕಾರ ಗೌರವ ಸೂಚಕ. ಪರಿಚಿತರು ಎದುರಾದಾಗ ಅವರನ್ನು ಮಾತನಾಡಿಸುವುದಕ್ಕೆ ಅಥವಾ ಅಪರಿಚಿತರನ್ನು ಮೊದಲ ಬಾರಿ ಪರಿಚಯ ಮಾಡಿಕೊಳ್ಳುವುದಕ್ಕೂ ಹೀಗೆ ಕೈ ಮುಗಿಯುವುದು ಬಳಕೆಯಲ್ಲಿದೆ. ಗೌರವ ಸೂಚಿಸುವುದು ಹಾಗೂ ಪರಸ್ಪರ ಮಾತನಾಡುವ ಮೊದಲು ಅದಕ್ಕೊಂದು ಶುರುವಾತು ನೀಡುವುದಷ್ಟೇ ಇದರ ಉದ್ದೇಶ. ಇನ್ನು, ದೇವರ ಮುಂದೆ ನಿಂತು ಹೀಗೆ ಕೈಮುಗಿದರೆ ಅದು ಭಕ್ತಿಯೂ ಹೌದು, ಗೌರವ ಸಮರ್ಪಣೆಯೂ ಹೌದು.

Tap to resize

Latest Videos

undefined

ಆದರೆ, ಸಾಷ್ಟಾಂಗ ನಮಸ್ಕಾರದ ಉದ್ದೇಶ ಕೇವಲ ಭಕ್ತಿ ಅಥವಾ ಗೌರವವಲ್ಲ. ಅದು ಸಂಪೂರ್ಣ ಶರಣಾಗತಿ. ದೇವರಿಗೆ ಪೂರ್ತಿಯಾಗಿ ಶರಣಾಗದ ಹೊರತು ಆತ ಒಲಿಯುವುದಿಲ್ಲ ಎಂಬ ನಂಬಿಕೆ ಇದೆಯಷ್ಟೆ. ಹಾಗಾಗಿ ನಮ್ಮ ದೇಹದ ಎಂಟು ಅಂಗಗಳನ್ನೂ ಬಳಸಿ ಆತನಿಗೆ ಶರಣಾಗುವುದು ಸಾಷ್ಟಾಂಗ ನಮಸ್ಕಾರ- ಅಷ್ಟ ಅಂಗ ಸಹಿತ ನಮಸ್ಕಾರ.

ಶೇಕ್‌ಹ್ಯಾಂಡ್‌ಗಿಂತ ನಮಸ್ಕಾರವೇಕೆ ಒಳ್ಳೆಯದು?

 ಆ ಎಂಟು ಅಂಗಗಳು ಯಾವುವು? 
ಎದೆ, ತಲೆ, ಮನಸ್ಸು, ಕಣ್ಣು, ಮಾತು, ಕೈ, ಕಾಲು ಹಾಗೂ ಕಿಹಿ. ಎದೆ, ತಲೆ, ಕೈ, ಕಾಲು, ಕಿವಿಯನ್ನೇನೋ ನೆಲಕ್ಕೆ ತಾಗಿಸಿ ಶರಣಾಗತಿ ಸೂಚಿಸಬಹುದು. ಮನಸ್ಸು, ಕಣ್ಣು ಹಾಗೂ ಮಾತನ್ನು ಹೇಗೆ ಶರಣಾಗಿಸುವುದು? ಅಂದರೆ ಮನಸ್ಸಿನಲ್ಲಿ ದೇವರನ್ನು ಧ್ಯಾನಿಸುತ್ತಾ, ಕಣ್ಣಿನಲ್ಲಿ ಆತನನ್ನೇ ತುಂಬಿಕೊಂಡು, ಬಾಯಿಯಲ್ಲಿ ಪ್ರಾರ್ಥಿಸುತ್ತಾ ನಮಸ್ಕಾರ ಮಾಡುವುದು. ಇದು ನಿಜವಾದ ಸಾಷ್ಟಾಂಗ ನಮಸ್ಕಾರ. ಇದನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾಡುವುದರ ಇನ್ನೊಂದು ಪ್ರಯೋಜನವೆಂದರೆ ವ್ಯಾಯಾಮ.

ದೇವರ ಪೂಜೆಗೆ ಹೂವುಗಳನ್ನೇಕೆ ಬಳಸುತ್ತೇವೆ?

ಸಾಷ್ಟಾಂಗ ನಮಸ್ಕಾರವನ್ನು ಸಾಮಾನ್ಯವಾಗಿ ಪುರುಷರು ಮಾಡುತ್ತಾರೆ. ಮಹಿಳೆಯರು ಮಾಡುವುದಿಲ್ಲ. ಮಹಿಳೆಯರು ಗರ್ಭ ಧರಿಸಿರುವಾಗ ಅಥವಾ ಮಕ್ಕಳಿಗೆ ಹಾಲನ್ನು ಕುಡಿಸುತ್ತಿರುವ ಸಂದರ್ಭದಲ್ಲಿ ಸಾಷ್ಟಾಂಗ ನಮಸ್ಕಾರ ಮಾಡುವುದು ಕಷ್ಟವಾಗುತ್ತದೆ.

- ಮಹಾಬಲ ಸೀತಾಳಬಾವಿ

click me!