ರಗಳೆಯಿಂದ ಹೊರ ಬರಲಿದ್ದೀರಿ, ಸಿಹಿ ಸುದ್ದಿಯೂ ನಿಮಗಿದೆ: ದಿನ ಭವಿಷ್ಯ

Published : Sep 07, 2019, 07:20 AM ISTUpdated : Sep 07, 2019, 07:32 AM IST
ರಗಳೆಯಿಂದ ಹೊರ ಬರಲಿದ್ದೀರಿ, ಸಿಹಿ ಸುದ್ದಿಯೂ ನಿಮಗಿದೆ: ದಿನ ಭವಿಷ್ಯ

ಸಾರಾಂಶ

ಸೆಪ್ಟೆಂಬರ್ 07, 2019 ಶುಕ್ರವಾರ : ಶುಭ ಶುಕ್ರವಾರ ಯಾರಿಗೆ ಶುಭದಾಯಕ, ತಿಳಿಯಿರಿ ರಾಶಿ ಫಲದ ಮೂಲಕ

ಮೇಷ: ನಿಮ್ಮ ಸ್ನೇಹಿತರಿಗೆ ಆತ್ಮವಿಶ್ವಾಸ ತುಂಬುವಲ್ಲಿ ನಿಮ್ಮ ಪಾತ್ರ ದೊಡ್ಡದು. ರಗಳೆಗಳಿಂದ ಹೊರ ಬರಲಿದ್ದೀರಿ. ಸಂತೋಷ ಹೆಚ್ಚಾಗಲಿದೆ

ವೃಷಭ: ಪದೇ ಪದೇ ಕಾಡುತ್ತಿದ್ದ ಸಮಸ್ಯೆಗೆ ಇಂದು ಶಾಶ್ವತವಾದ ಪರಿಹಾರ ದೊರೆಯಲಿದೆ. ಒಳ್ಳೆಯ ಕಾರ್ಯಕ್ಕೆ ಒಳ್ಳೆಯ ಫಲ ಇದ್ದೇ ಇದೆ.

ಮಿಥುನ: ವಸ್ತುಗಳನ್ನು ಕೊಳ್ಳುವಾಗ ಗುಣ ಮಟ್ಟಕ್ಕೆ ಒತ್ತು ನೀಡಿ, ಸಂಬಂಧಗಳನ್ನು ಮಾಡುವಾಗ ವ್ಯಕ್ತಿತ್ವಕ್ಕೆ ಒತ್ತು ನೀಡಿ. ಕಾಲ ಬದಲಾಗಲಿ

ಕಟಕ: ನನಗೇ ಯಾಕೆ ಇಷ್ಟೊಂದು ಕಷ್ಟ ಎಂದು ಕೊರಗುತ್ತಾ ಕೂರುವುದಕ್ಕೆ ಬದಲಾಗಿ, ಧೈರ್ಯದಿಂದ ಮುಂದೆ ಸಾಗುತ್ತಿರಿ. ಶುಭಫಲ.

ಸಿಂಹ: ದೃಷ್ಟಿಕೋನವನ್ನು ಬದಲಾಯಿಸಿಕೊಂಡು ಮುಂದೆ ಸಾಗಿ. ದೊಡ್ಡ ಕಾರ್ಯಗಳು ಶುರುವಾಗುವುದು ಸಣ್ಣ ಪ್ರಯತ್ನದಿಂದಲೇ

ಕನ್ಯಾ: ಅವಸರದಲ್ಲಿ ಮಾಡಿದ ಕೆಲಸಗಳು ಪೂರ್ಣ ಫಲವನ್ನು ನೀಡುವುದಿಲ್ಲ. ಕಾಲವೇ ನಿಮ್ಮ ಹಲವು ಪ್ರಶ್ನೆಗಳಿಗೆ ಉತ್ತರ ನೀಡಲಿದೆ.

ತುಲಾ: ಮನಸ್ಸನ್ನು ಹಿಡಿತದಲ್ಲಿ ಇಟ್ಟುಕೊಂಡು ಕಾರ್ಯರಂಗಕ್ಕೆ ಇಳಿಯಿರಿ. ಅನಿವಾರ್ಯತೆಗೆ ಸಿಲುಕಿ ಇಷ್ಟವಿಲ್ಲದ ಕೆಲಸ ಮಾಡಬೇಕಾದೀತು.

ವೃಶ್ಚಿಕ: ಆರೋಗ್ಯದ ವಿಚಾರದಲ್ಲಿ ಹೆಚ್ಚು ನಿಗಾ ವಹಿಸಿ. ತಪ್ಪನ್ನು ಖಂಡಿಸಿ, ತಪ್ಪು ಮಾಡಿದ ವ್ಯಕ್ತಿಯನ್ನಲ್ಲ. ಇಂದು ಸಿಹಿ ಸುದ್ದಿ ಕೇಳಲಿದ್ದೀರಿ.

ಧನುಸ್ಸು: ಪರರ ಸೇವೆಯಲ್ಲಿ ತೊಡಗಿಕೊಳ್ಳಲಿದ್ದೀರಿ. ಶುಭ ಸಮಾರಂಭಗಳ ಭಾಗವಾಗಿ ನೀವು ಕಾರ್ಯ ನಿರ್ವಹಿಸಲಿದ್ದೀರಿ. ಶುಭ ಫಲ

ಮಕರ: ಬೇಡವೆಂದರೂ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಅವಕಾಶಗಳು ಹುಡುಕಿಕೊಂಡು ಬರಲಿವೆ. ಸ್ವಂತ ಬುದ್ಧಿಯಿಂದ ಆಲೋಚನೆ ಮಾಡಿ.

ಕುಂಭ: ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗ ಹಿರಿಯರೊಂದಿಗೆ ಚರ್ಚೆ ಮಾಡಿ. ಮನಸ್ಸಿಗೆ ಬಂದಂತೆ ಮಾತನಾಡುವುದು ಬೇಡ.

ಮೀನ: ಸರಿ ಇಲ್ಲ ಎಂದುಕೊಂಡ ಕೆಲಸವನ್ನು ಮಾಡದೇ ಇರುವುದೇ ಉತ್ತಮ. ಇಡೀ ದಿನ ಆಲಸ್ಯ ಆವರಿಸಿಕೊಳ್ಳಲಿದೆ. ಧೈರ್ಯ ಇರಲಿ

PREV
click me!

Recommended Stories

ಸೂರ್ಯ ಮತ್ತು ಗುರುವಿನ ವಿಶೇಷ ಸಂಯೋಜನೆ, ಈ 5 ರಾಶಿಗೆ ಹೊಸ ಉದ್ಯೋಗ, ಸಂಪತ್ತಿನ ಸುರಿಮಳೆ
ಅಕ್ರಮ ಸಂಬಂಧ ಹೊಂದಿದ ಗಂಡಸರಿಗೆ ಗರುಡ ಪುರಾಣದಲ್ಲಿ ಅತಿಕ್ರೂರ ಶಿಕ್ಷೆ; 45 ಸಿನಿಮಾ ಟ್ರೇಲರ್ ಅಷ್ಟೇ!