ಅರಳಿ ಮರ ಅದಕ್ಕೊಂದು ಕಟ್ಟೆ ಊರಿಗೆ ತರುತ್ತೆ ಶೋಭೆ. ಅಷ್ಟಕ್ಕೂ ಈ ಅರಳಿ ಮರಕ್ಕೆ ಸುತ್ತು ಬರುವುದರಿಂದ ಆರೋಗ್ಯದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಹಳೆ ಆಚಾರಕ್ಕಿಲ್ಲಿದೆ ಹೊಸ ವಿಚಾರ.
ಅರಳಿಮರ ಹಿಂದೂಗಳಿಗೆ ದೈವ ಸಮಾನ. ಸಾಮಾನ್ಯವಾಗಿ ಎಲ್ಲಾ ದೇವಸ್ಥಾನಗಳ ಹೊರಗೂ ಒಂದು ಅರಳಿ ಮರ ಇರುತ್ತದೆ. ಅದರಡಿಗೆ ನಾಗ, ಭೂತ, ನವಗ್ರಹ ಇತ್ಯಾದಿ ದೈವಗಳನ್ನು ಪ್ರತಿಷ್ಠೆ ಮಾಡಿರುತ್ತಾರೆ. ದೇವಸ್ಥಾನಕ್ಕೆ ಬಂದವರು ಅರಳಿಮರಕ್ಕೆ ಪ್ರದಕ್ಷಿಣೆ ಹಾಕದೆ ಹೋಗುವುದಿಲ್ಲ. ಜ್ಯೋತಿಗಳೂ ಯಾವುದಾದರೂ ದೋಷ ನಿವಾರಣೆಗೆ ಅಥವಾ ಸಂತಾನಪ್ರಾಪ್ತಿಗೆ ಪ್ರತಿದಿನ ಅರಳಿಮರಕ್ಕೆ ಇಂತಿಷ್ಟು ಪ್ರದಕ್ಷಿಣೆ ಮಾಡಿ ಎನ್ನುವುದುಂಟು. ಇದು ಕೇವಲ ಧಾರ್ಮಿಕ ನಂಬಿಕೆಯಷ್ಟೇ ಅಲ್ಲ, ವೈಜ್ಞಾನಿಕವಾಗಿಯೂ ಮಹತ್ವದ್ದು.
ಹಳೆ ಆಚಾರ ಹೊಸ ವಿಚಾರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
undefined
ಅರಳಿ ಮರ ಸಸ್ಯ ಪ್ರಭೇದಗಳಲ್ಲೇ ಅತ್ಯಂತ ವಿಶಿಷ್ಟ ಸಸ್ಯ. ಬೇರೆಲ್ಲಾ ಮರಗಳು ಉತ್ಪಾದಿಸುವುದಕ್ಕಿಂತ ಅದೆಷ್ಟೋ ಹೆಚ್ಚಿನ ಪ್ರಮಾಣದ ಆಮ್ಲಜನಕವನ್ನು ಅರಳಿ ಮರ ಉತ್ಪಾದಿಸಿ ಹೊರ ಸೂಸುತ್ತದೆ. ಆದ್ದರಿಂದಲೇ ಹಿರಿಯರು ಪ್ರತಿ ಊರಿನಲ್ಲೂ ಒಂದೆರಡು ಅರಳಿಮರವನ್ನು ಬೆಳೆಸಿರುತ್ತಿದ್ದರು. ಅದನ್ನು ಜನರು ಕಡಿಯಬಾರದು ಎಂದು ಅದಕ್ಕೆ ದೈವತ್ವದ ರೂಪ ನೀಡಿ, ಉಪನಯನ ಇತ್ಯಾದಿ ಸಂಸ್ಕಾರಗಳನ್ನು ಮಾಡುವ ಮೂಲಕ ಭಯ-ಭಕ್ತಿಯಿಂದ ರಕ್ಷಿಸುತ್ತಿದ್ದರು.
- ಒಂದು ಅರಳಿ ಮರ ಇದ್ದರೆ ಹತ್ತಿಪ್ಪತ್ತು ಮನೆಗಳಿರುವ ಒಂದು ಪುಟ್ಟ ಊರಿನ ಗಾಳಿ ಶುದ್ಧವಾಗಿರುತ್ತದೆ. ಈ ಮರ ತನ್ನ ಸುತ್ತಮುತ್ತಲ ಗಾಳಿಯಲ್ಲಿರುವ ಸೂಕ್ಷ್ಮ ಕ್ರಿಮಿ ಕೀಟಗಳನ್ನೂ ನಾಶಪಡಿಸುತ್ತದೆ.ಅರಳಿಮರಕ್ಕೆ ಪ್ರದಕ್ಷಿಣೆ ಹಾಗುವುದರಿಂದ ಒಳ್ಳೆಯ ಪ್ರಾಣವಾಯು ಸಿಗುತ್ತದೆ. - ಇಂದು ಒಳ್ಳೆಯ ಗಾಳಿ ಸಿಗುವುದು ಕೂಡ ದುರ್ಲಭವಾಗಿರುವುದರಿಂದ ನಿಸ್ಸಂಶಯವಾಗಿ ಅರಳಿ ಮರದ ಕೆಳಗೆ ಒಂದಷ್ಟು ಹೊತ್ತು ಕಳೆಯುವುದು ಲಾಭಕಾರಿ.
- ಇನ್ನು ಸಂತಾನಪ್ರಾಪ್ತಿಗೆ ಹೀಗೆ ಮಾಡಿ ಎಂದು ಹೇಳುವುದಕ್ಕೆ ಕಾರಣ ಒಳ್ಳೆಯ ಪ್ರಾಣವಾಯು ಹಾಗೂ ವ್ಯಾಯಾಮ ಸಿಗುವುದರಿಂದ ದೇಹ ಆರೋಗ್ಯಪೂರ್ಣವಾಗಿ, ಸಂತಾನೋತ್ಪತ್ತಿಯ ಅಂಗಗಳು ಚುರುಕಾಗುತ್ತವೆ.
- ಬೊಜ್ಜಿನ ಕಾರಣದಿಂದ ಫಲವತ್ತತೆ ಕುಂದಿದರೆ, ಈ ವ್ಯಾಯಾಮ ದೇಹದ ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಬೊಜ್ಜು ಕರಗುವುದರಿಂದಲೂ ಸಂತಾನಭಾಗ್ಯ ಸಿಗಬಹುದು.
ಗಂಡಸರೇಕೆ ಜುಟ್ಟು ಬಿಡಬೇಕು?
ಬೆಳಗ್ಗೆ ಎದ್ದು ಸೂರ್ಯನಿಗೇಕೆ ನಮಸ್ಕರಿಸಬೇಕು?
ದೇವಸ್ಥಾನದ ಒಳಗೆ ಚಪ್ಪಲಿ ಹಾಕಬಾರದೇಕೆ?
- ಮಹಾಬಲ ಸೀತಾಳಬಾವಿ