
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2026ನೇ ಇಸವಿ ಹಲವು ರಾಶಿಗಳಿಗೆ ಮಹತ್ವದ ಬದಲಾವಣೆಗಳನ್ನು ತರುವ ವರ್ಷವಾಗಲಿದೆ. ಅದರಲ್ಲೂ ರಾಹು ಗ್ರಹದ ಸಂಚಾರ ಹಲವರ ಜೀವನದಲ್ಲಿ ಅನಿರೀಕ್ಷಿತ ತಿರುವುಗಳನ್ನು ತರಲಿದೆ. 2026ರ ಬಹುತೇಕ ಕಾಲ ರಾಹು ಕುಂಭ ರಾಶಿಯಲ್ಲಿ ಸಂಚಾರ ಮಾಡುತ್ತಾನೆ ಮತ್ತು ಡಿಸೆಂಬರ್‌ನಲ್ಲಿ ಮಕರ ರಾಶಿಗೆ ಪ್ರವೇಶಿಸುತ್ತಾನೆ. ರಾಹು ಆಧ್ಯಾತ್ಮಿಕತೆ, ಬುದ್ಧಿಮಂದತೆ, ಮಹತ್ವಾಕಾಂಕ್ಷೆ, ತ್ವರಿತ ನಿರ್ಧಾರ ಮತ್ತು ಅಚಾನಕ್ ಫಲಿತಾಂಶಗಳ ಪ್ರತಿನಿಧಿ ಎಂದು ಹೇಳಲಾಗುತ್ತದೆ. 2026ರಲ್ಲಿ ರಾಹು ಗ್ರಹವು ಬಹುತೇಕ ರಾಶಿಗಳಿಗೆ ಅವಕಾಶಗಳ ಜೊತೆಗೆ ಎಚ್ಚರಿಕೆಯ ಸಂದೇಶವನ್ನೂ ನೀಡುತ್ತದೆ. ತ್ವರಿತ ನಿರ್ಧಾರಕ್ಕಿಂತ ವಿವೇಕ, ಸಹನೆ ಮತ್ತು ಯೋಜನೆಯೇ ಈ ವರ್ಷದ ಯಶಸ್ಸಿನ ಗುಟ್ಟು ಎಂದು ತಿಳಿಸುತ್ತದೆ. 2026ರಲ್ಲಿ ರಾಹು ಗ್ರಹದ ಪ್ರಭಾವ ಯಾವ ರಾಶಿಗೆ ಹೇಗಿರಲಿದೆ ಅನ್ನೋದನ್ನ ನೋಡೋಣ.
2026ರಲ್ಲಿ ಮೇಷ ರಾಶಿಯವರಿಗೆ ರಾಹು ಸಾಮಾಜಿಕ ಜೀವನ ಮತ್ತು ಕೆಲಸದ ಕ್ಷೇತ್ರದಲ್ಲಿ ಹೆಚ್ಚು ಪ್ರಭಾವ ಬೀರುತ್ತದೆ. ಹೊಸ ಪರಿಚಯಗಳು, ದೊಡ್ಡ ಅವಕಾಶಗಳು ಕಾಣಿಸಿಕೊಳ್ಳಬಹುದು. ಆದರೆ ಯಾರನ್ನಾದರೂ ಕುರುಡಾಗಿ ನಂಬುವುದು ಅಪಾಯಕಾರಿಯಾಗಬಹುದು. ಹಣಕಾಸು ವಿಷಯದಲ್ಲಿ ಜಾಗರೂಕತೆ ಅಗತ್ಯ.
ವೃಷಭ ರಾಶಿ (Taurus)
ವೃಷಭ ರಾಶಿಯವರಿಗೆ ರಾಹು ವೃತ್ತಿ ಜೀವನದಲ್ಲಿ ಏರುಪೇರು ತರುತ್ತದೆ. ಕೆಲಸದಲ್ಲಿ ಹೆಸರು ಬರಬಹುದು, ಆದರೆ ಒತ್ತಡ ಕೂಡ ಹೆಚ್ಚಾಗುತ್ತದೆ. ಮೇಲಧಿಕಾರಿಗಳ ಜೊತೆ ಸಂಭಾಷಣೆಯಲ್ಲಿ ಎಚ್ಚರಿಕೆ ಬೇಕು. ಅನಾವಶ್ಯಕ ವೆಚ್ಚಗಳನ್ನು ಕಡಿಮೆ ಮಾಡುವುದು ಉತ್ತಮ.
ಮಿಥುನ ರಾಶಿ (Gemini)
ಈ ವರ್ಷ ಮಿಥುನ ರಾಶಿಯವರಿಗೆ ರಾಹು ಹೊಸ ಆಲೋಚನೆಗಳು, ವಿದೇಶ ಸಂಪರ್ಕ ಮತ್ತು ಕಲಿಕೆಗೆ ಒಳ್ಳೆಯ ಫಲ ನೀಡುತ್ತದೆ. ಆದರೆ ಕಾನೂನು ಸಂಬಂಧಿತ ವಿಷಯಗಳು ಅಥವಾ ದಾಖಲೆಗಳಲ್ಲಿ ಎಚ್ಚರ ತಪ್ಪಿದರೆ ಸಮಸ್ಯೆ ಎದುರಾಗಬಹುದು.
ಕರ್ಕಾಟಕ ರಾಶಿಯವರಿಗೆ 2026 ರಾಹು ಆರ್ಥಿಕ ಮತ್ತು ಮಾನಸಿಕ ಬದಲಾವಣೆಗಳನ್ನು ತರುತ್ತದೆ. ಅಕಸ್ಮಾತ್ ಲಾಭ ಸಾಧ್ಯತೆ ಇದ್ದರೂ, ಸಾಲ ಮತ್ತು ಸಾಲಕೊಡುಗೆ ವಿಚಾರದಲ್ಲಿ ಎಚ್ಚರಿಕೆ ಬಹಳ ಮುಖ್ಯ. ಮನಸ್ಸಿನಲ್ಲಿ ಗೊಂದಲ ಹೆಚ್ಚಾಗುವ ಸಾಧ್ಯತೆ ಇದೆ.
ಸಿಂಹ ರಾಶಿ (Leo)
ಸಿಂಹ ರಾಶಿಯವರಿಗೆ ರಾಹು ದಾಂಪತ್ಯ ಮತ್ತು ಪಾಲುದಾರಿಕೆ ವಿಷಯಗಳಲ್ಲಿ ಪ್ರಭಾವ ಬೀರುತ್ತದೆ. ಸಂಬಂಧಗಳಲ್ಲಿ ತಪ್ಪು ಅರ್ಥೈಸುವಿಕೆ ಉಂಟಾಗಬಹುದು. ತಾಳ್ಮೆ ಮತ್ತು ಸಂವಹನಕ್ಕೆ ಹೆಚ್ಚಿನ ಮಹತ್ವ ಕೊಟ್ಟರೆ ಸಮಸ್ಯೆಗಳನ್ನು ತಪ್ಪಿಸಬಹುದು.
ಕನ್ಯಾ ರಾಶಿ (Virgo)
ಕನ್ಯಾ ರಾಶಿಯವರಿಗೆ ಅನಾರೋಗ್ಯ ಮತ್ತು ಕೆಲಸದ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಅತಿಯಾಗಿ ಕೆಲಸ ಮಾಡುವುದು ದೇಹದ ಮೇಲೆ ಪರಿಣಾಮ ಬೀರುತ್ತದೆ. ದಿನಚರಿಯಲ್ಲಿ ಶಿಸ್ತು ಮತ್ತು ಆರೋಗ್ಯದ ಕಡೆ ಗಮನ ಕೊಡುವುದು ಒಳಿತು.
ತುಲಾ ರಾಶಿ (Libra)
ತುಲಾ ರಾಶಿಯವರಿಗೆ ರಾಹು ಪ್ರೀತಿ, ಸೃಜನಶೀಲತೆ ಮತ್ತು ಹೊಸ ಆಲೋಚನೆಗಳಿಗೆ ಉತ್ತೇಜನ ನೀಡುತ್ತದೆ. ಆದರೆ ಭಾವನಾತ್ಮಕ ನಿರ್ಧಾರಗಳು ಕೆಲವೊಮ್ಮೆ ಹಿನ್ನಡೆಯಾಗಬಹುದು. ಮಕ್ಕಳ ವಿಚಾರದಲ್ಲಿ ಹೆಚ್ಚು ಗಮನ ಬೇಕಾಗುತ್ತದೆ.
ವೃಶ್ಚಿಕ ರಾಶಿ (Scorpio)
2026ರಲ್ಲಿ ವೃಶ್ಚಿಕ ರಾಶಿಯವರಿಗೆ ರಾಹು ಕುಟುಂಬ ಮತ್ತು ಆಸ್ತಿ ಸಂಬಂಧಿತ ವಿಷಯಗಳಲ್ಲಿ ಪ್ರಭಾವ ಬೀರುತ್ತದೆ. ಮನೆಮಠದ ವಿಚಾರಗಳಲ್ಲಿ ಅಸಮಾಧಾನ ಉಂಟಾಗಬಹುದು. ಶಾಂತವಾಗಿ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ.
ಧನು ರಾಶಿಯವರಿಗೆ ರಾಹು ಸಂವಹನ, ಪ್ರಯಾಣ ಮತ್ತು ಮಾಧ್ಯಮ ಕ್ಷೇತ್ರದಲ್ಲಿ ಲಾಭ ನೀಡಬಹುದು. ಹೊಸ ಯೋಜನೆಗಳು ಆರಂಭವಾಗಬಹುದು. ಆದರೆ ಮಾತಿನಲ್ಲೇ ವಿವಾದ ಹುಟ್ಟುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ಅಗತ್ಯ.
ಮಕರ ರಾಶಿ (Capricorn)
ಮಕರ ರಾಶಿಯವರಿಗೆ ಹಣಕಾಸು ವಿಷಯಗಳು 2026ರಲ್ಲಿ ಪ್ರಮುಖವಾಗುತ್ತವೆ. ಆದಾಯದ ಹೊಸ ಮೂಲಗಳು ಕಾಣಿಸಿಕೊಳ್ಳಬಹುದು. ಆದರೆ ಅನಾವಶ್ಯಕ ಆಸೆಗಳಿಂದ ನಷ್ಟವಾಗುವ ಸಾಧ್ಯತೆ ಇದೆ. ಹೂಡಿಕೆಯಲ್ಲಿ ಎಚ್ಚರಿಕೆ ವಹಿಸಬೇಕು.
ಕುಂಭ ರಾಶಿ (Aquarius)
ಕುಂಭ ರಾಶಿಯವರ ಮೇಲೆ ರಾಹು ಅತ್ಯಂತ ಪ್ರಬಲವಾಗಿ ಕಾರ್ಯನಿರ್ವಹಿಸುತ್ತದೆ. ವ್ಯಕ್ತಿತ್ವದಲ್ಲಿ ಬದಲಾವಣೆ, ಹೊಸ ದಿಕ್ಕಿನ ಜೀವನ, ದೊಡ್ಡ ನಿರ್ಧಾರಗಳು ಈ ವರ್ಷ ಕಂಡುಬರುತ್ತವೆ. ಸರಿಯಾದ ಮಾರ್ಗ ಆಯ್ಕೆ ಮಾಡಿದರೆ ಅಪಾರ ಯಶಸ್ಸು ಸಾಧ್ಯ.
ಮೀನ ರಾಶಿ (Pisces)
ಮೀನ ರಾಶಿಯವರಿಗೆ ರಾಹು ಆಂತರಿಕ ಚಿಂತನೆ, ಆಧ್ಯಾತ್ಮ ಮತ್ತು ರಹಸ್ಯ ವಿಷಯಗಳ ಕಡೆ ಗಮನ ಸೆಳೆಯುತ್ತದೆ. ಮನಸ್ಸಿನಲ್ಲಿ ಅಶಾಂತಿ ಹೆಚ್ಚಾಗಬಹುದು. ಧ್ಯಾನ, ಪ್ರಾರ್ಥನೆ ಮತ್ತು ಧನಾತ್ಮಕ ಚಿಂತನೆ ಸಹಾಯ ಮಾಡುತ್ತದೆ.