
ವಾಸ್ತು ಶಾಸ್ತ್ರದ ಪ್ರಕಾರ, ಅಡುಗೆಮನೆಯು ಇಡೀ ಮನೆಯ ಶಕ್ತಿಯನ್ನು ಕೇಂದ್ರೀಕರಿಸುವ ಸ್ಥಳವಾಗಿದೆ. ಈ ಸ್ಥಳವನ್ನು ಪವಿತ್ರವೆಂದು ಪರಿಗಣಿಸಲಾಗುತ್ತದೆ. ಇದು ಯಾವಾಗಲೂ ಸಕಾರಾತ್ಮಕ ಶಕ್ತಿಯಿಂದ ಕೂಡಿರುತ್ತದೆ. ಇದು ಅಡುಗೆ ಮಾಡಲು ಮಾತ್ರವಲ್ಲದೆ, ಮನೆಯಲ್ಲಿ ಸಂತೋಷ, ಆರೋಗ್ಯ ಮತ್ತು ಸಮೃದ್ಧಿಯ ಕೇಂದ್ರವಾಗಿದೆ. ಅಡುಗೆಮನೆಯಲ್ಲಿ ಇರಿಸಲಾದ ಪ್ರತಿಯೊಂದು ವಸ್ತು ಮತ್ತು ಅದರ ದಿಕ್ಕು ನೇರವಾಗಿ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದರೆ ಕೆಲವರು ಅಡುಗೆಮನೆಯಲ್ಲಿ ಕೆಲವು ಸ್ಥಳಗಳಲ್ಲಿ ವಸ್ತುಗಳನ್ನು ಇಡುತ್ತಾರೆ ಮತ್ತು ಅದನ್ನು ತ್ಯಾಜ್ಯ ವಸ್ತುಗಳಿಡುವ ಪ್ಲೇಸ್ ಆಗಿ ಬಳಸುತ್ತಾರೆ.
ಮಹಿಳೆಯರು ಸಾಮಾನ್ಯವಾಗಿ ಅಡುಗೆಮನೆಯ ಯಾವುದಾದರೂ ಒಂದು ಮೂಲೆಯನ್ನು ವೇಸ್ಟ್ ಆಗಿರುವ ವಸ್ತುಗಳನ್ನು ಸಂಗ್ರಹಿಸಲು ಬಳಕೆ ಮಾಡಿಕೊಳ್ಳುತ್ತಾರೆ. ಅಂತಹ ಒಂದು ಸ್ಥಳವೆಂದರೆ ಅಡುಗೆಮನೆಯ ಸಿಂಕ್. ಮಹಿಳೆಯರು ಸಾಮಾನ್ಯವಾಗಿ ಇಡೀ ಮನೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ವಸ್ತುಗಳನ್ನು ಸಿಂಕ್ ಅಡಿಯಲ್ಲಿ ಬಿಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ, ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ವಸ್ತುಗಳನ್ನು ಅಡುಗೆಮನೆಯ ಸಿಂಕ್ ಅಡಿಯಲ್ಲಿ ಸಂಗ್ರಹಿಸಬಾರದು. ಆದ್ದರಿಂದ ಈ ಲೇಖನದಲ್ಲಿ ಯಾವ ವಸ್ತುಗಳನ್ನು ಅಡುಗೆಮನೆಯ ಸಿಂಕ್ ಅಡಿಯಲ್ಲಿ ಇಡಬಾರದು ಎಂದು ನೋಡೋಣ..
ಅಡುಗೆಮನೆಯು ಅಚ್ಚುಕಟ್ಟಾಗಿ ಕಾಣುವಂತೆ ಮಾಡಲು ನಾವು ಕಸದ ಬುಟ್ಟಿಯನ್ನು ಸಿಂಕ್ ಅಡಿಯಲ್ಲಿ ಇಡುತ್ತೇವೆ. ಆದರೆ ವಾಸ್ತು ಶಾಸ್ತ್ರದ ಪ್ರಕಾರ, ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಸಿಂಕ್ ನೀರಿನ ಅಂಶದೊಂದಿಗೆ ಸಂಬಂಧಿಸಿದೆ ಎಂದು ನಂಬಲಾಗಿದೆ ಮತ್ತು ವರುಣ ದೇವರು ನೀರಿನಲ್ಲಿ ವಾಸಿಸುತ್ತಾನೆ ಎಂದು ನಂಬಲಾಗಿದೆ. ಆದ್ದರಿಂದ ಸಿಂಕ್ ಅಡಿಯಲ್ಲಿ ಕಸದ ಡಬ್ಬಿ ಇಡುವುದು ಶುಭವಲ್ಲ. ಇದನ್ನು ವರುಣ ದೇವರಿಗೆ ಮಾಡಿದ ಅವಮಾನವೆಂದು ಪರಿಗಣಿಸಲಾಗುತ್ತದೆ. ಸಿಂಕ್ ಬಳಿಯ ಡ್ರೈನೇಜ್‌ನಿಂದ ಬರುವ ಕೊಳಕು ಮತ್ತು ಕಸ ಎರಡೂ ನಕಾರಾತ್ಮಕತೆಯು ಸೇರಿ ಇನ್ನಷ್ಟು ನೆಗೆಟಿವಿಟಿ ಉಂಟುಮಾಡುತ್ತದೆ. ಇದು ಕುಟುಂಬ ಸದಸ್ಯರ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಹಠಾತ್ ವೆಚ್ಚಗಳು ಮತ್ತು ಮಾನಸಿಕ ಒತ್ತಡವೂ ಹೆಚ್ಚಾಗಬಹುದು.
ಪೊರಕೆ
ಮನೆಯಿಂದ ನಕಾರಾತ್ಮಕ ಶಕ್ತಿ ತೆಗೆದುಹಾಕಲು ಪೊರಕೆ ಒಂದು ಸಾಧನ. ಆದ್ದರಿಂದ ನೀವು ಪೊರಕೆಯನ್ನು ಮನೆಯಲ್ಲಿ ಕೆಲವು ಸ್ಥಳಗಳಲ್ಲಿ ಇಡಬೇಕು ಎಂದು ಹೇಳಲಾಗುತ್ತದೆ. ಪೊರಕೆಯನ್ನು ಬೇರೆ ಯಾರೂ ನೋಡದ ಸ್ಥಳದಲ್ಲಿ ಇಡಬೇಕು. ಈ ಕಾರಣಕ್ಕಾಗಿ ಅನೇಕ ಜನರು ಪೊರಕೆಯನ್ನು ಮರೆಮಾಡಿ ಸಿಂಕ್ ಅಡಿಯಲ್ಲಿ ಇಡುತ್ತಾರೆ. ಆದರೆ ವಾಸ್ತು ನಿಯಮಗಳ ಪ್ರಕಾರ, ಹಾಗೆ ಮಾಡುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ನಕಾರಾತ್ಮಕ ಶಕ್ತಿ ಹರಡುತ್ತದೆ. ಸಿಂಕ್ ಅಡಿಯಲ್ಲಿ ಪೊರಕೆ ಇಡುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಇದಕ್ಕೆ ಒಂದು ಕಾರಣವೆಂದರೆ ಸಿಂಕ್ ನೀರಿನ ಅಂಶದೊಂದಿಗೆ ಸಂಬಂಧಿಸಿದೆ. ಏಕೆಂದರೆ ಪೊರಕೆ ಭೂಮಿಯ ಅಂಶವನ್ನು ಸಂಕೇತಿಸುತ್ತದೆ ಮತ್ತು ಎರಡೂ ಪರಸ್ಪರ ವಿರುದ್ಧವಾಗಿವೆ. ಈ ಕಾರಣಕ್ಕಾಗಿ ಸಿಂಕ್ ಅಡಿಯಲ್ಲಿ ಪೊರಕೆ ಇಡುವುದನ್ನು ನಿಷೇಧಿಸಲಾಗಿದೆ.
ಅಡುಗೆಮನೆಯ ಸಿಂಕ್ ಅಡಿಯಲ್ಲಿ ಕೊಳಕು ಪಾತ್ರೆಗಳನ್ನು ಎಂದಿಗೂ ಇಡಬಾರದು. ಏಕೆಂದರೆ ಹಾಗೆ ಮಾಡುವುದರಿಂದ ನಿಮ್ಮ ರಾಹು ಹಾಳಾಗಬಹುದು. ವಾಸ್ತುದಲ್ಲಿ ಕೊಳಕು ಪಾತ್ರೆಗಳನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅವು ನಕಾರಾತ್ಮಕ ಶಕ್ತಿ ಮತ್ತು ಅಶುದ್ಧತೆಯ ಜೊತೆಗೆ ಬ್ಯಾಕ್ಟೀರಿಯಾವನ್ನು ವೃದ್ಧಿಗೊಳಿಸುತ್ತವೆ. ಆದ್ದರಿಂದ ನೀವು ಅಡುಗೆಮನೆಯ ಸಿಂಕ್ ಅಡಿಯಲ್ಲಿ ಕೊಳಕು ಪಾತ್ರೆಗಳನ್ನು ಇರಿಸಿದಾಗ ಸ್ಥಳವು ಹೆಚ್ಚು ಕಲುಷಿತಗೊಳ್ಳುತ್ತದೆ. ಇದರಿಂದಾಗಿ ಅಡುಗೆಮನೆಯ ಸಕಾರಾತ್ಮಕ ಶಕ್ತಿಯು ಕಳೆದುಹೋಗಲು ಪ್ರಾರಂಭಿಸುತ್ತದೆ. ಆದ್ದರಿಂದ ಕೊಳಕು ಪಾತ್ರೆಗಳನ್ನು ಎಂದಿಗೂ ಸಿಂಕ್ ಅಡಿಯಲ್ಲಿ ಬಿಡಬಾರದು ಅಥವಾ ರಾತ್ರಿ ವೇಳೆ ತೆರೆದಿಡಬಾರದು. ನಕಾರಾತ್ಮಕ ಶಕ್ತಿಯು ಹರಿಯದಂತೆ ಯಾವಾಗಲೂ ಪಾತ್ರೆಗಳನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿ.