ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 7 ದಿನ ಬಾಕಿ; ಮಹಾದಾಸೋಹಕ್ಕೆ ಭರದ ಸಿದ್ಧತೆ

By Kannadaprabha NewsFirst Published Jan 1, 2023, 12:44 PM IST
Highlights

ಕೋವಿಡ್‌ ಕಾರಣಕ್ಕಾಗಿ ಕಳೆದೆರಡು ವರ್ಷಗಳಿಂದ ಸರಳವಾಗಿ ನಡೆದಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆ ಮೀರಿ ಭಕ್ತಸಾಗರ ಸೇರುವ ಸಾಧ್ಯತೆ ಇರುವುದನ್ನು ಮನಗಂಡಿರುವ ಗವಿಸಿದ್ದೇಶ್ವರ ಸ್ವಾಮಿಗಳು ಪ್ರತಿ ವರ್ಷಕ್ಕಿಂತಲೂ ದೊಡ್ಡ ಪ್ರಮಾಣದ ತಯಾರಿ ನಡೆಸಿದ್ದಾರೆ. ಮಹಾದಾಸೋಹ ಜಾಗವನ್ನು ಪ್ರತಿವರ್ಷಕ್ಕಿಂತಲೂ ದುಪ್ಪಟ್ಟು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗಿದೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ(ಜ.1) : ಕೋವಿಡ್‌ ಕಾರಣಕ್ಕಾಗಿ ಕಳೆದೆರಡು ವರ್ಷಗಳಿಂದ ಸರಳವಾಗಿ ನಡೆದಿರುವ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವ ಈ ಬಾರಿ ಅದ್ಧೂರಿಯಾಗಿ ನಡೆಯಲಿದೆ. ಜಾತ್ರಾ ಮಹೋತ್ಸವಕ್ಕೆ ಈ ಬಾರಿ ನಿರೀಕ್ಷೆ ಮೀರಿ ಭಕ್ತಸಾಗರ ಸೇರುವ ಸಾಧ್ಯತೆ ಇರುವುದನ್ನು ಮನಗಂಡಿರುವ ಗವಿಸಿದ್ದೇಶ್ವರ ಸ್ವಾಮಿಗಳು ಪ್ರತಿ ವರ್ಷಕ್ಕಿಂತಲೂ ದೊಡ್ಡ ಪ್ರಮಾಣದ ತಯಾರಿ ನಡೆಸಿದ್ದಾರೆ. ಮಹಾದಾಸೋಹ ಜಾಗವನ್ನು ಪ್ರತಿವರ್ಷಕ್ಕಿಂತಲೂ ದುಪ್ಪಟ್ಟು ವ್ಯಾಪ್ತಿಯಲ್ಲಿ ನಿರ್ಮಾಣ ಮಾಡುವ ಕಾರ್ಯ ಭರದಿಂದ ಸಾಗಿದೆ.

ಮಠದ ಹಿಂಬದಿಯಲ್ಲಿ ನಾಲ್ಕಾರು ಎಕರೆ ಪ್ರದೇಶದಲ್ಲಿ ಇರುತ್ತಿದ್ದ ಮಹಾದಾಸೋಹ ಮಂಟಪವನ್ನು ಈ ಬಾರಿ ಮತ್ತಷ್ಟುವಿಸ್ತರಣೆ ಮಾಡಿದ್ದು, ಊಟದ ಕೌಂಟರ್‌ಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲಾಗುತ್ತಿದೆ.

ಕೊಪ್ಪಳ ಅಜ್ಜನ ಜಾತ್ರೆಗಾಗಿ ಸಿದ್ಧವಾಗುತ್ತಿವೆ 4 ಲಕ್ಷ ಶೇಂಗಾ ಹೋಳಿಗೆ!

5 ಲಕ್ಷ ಮಿರ್ಚಿ:

ಭಕ್ತರಿಗೆ ಪ್ರಸಾದದ ಜತೆಗೆ ಮಿರ್ಚಿ ಕೊಡುವ ಪದ್ಧತಿಯನ್ನು ಮಿರ್ಚಿ ಬಜ್ಜಿ ಸೇವಾ ಸಮಿತಿ ನಡೆಸಿಕೊಂಡು ಬಂದಿದೆ. ಈ ಹಿಂದಿನ ವರ್ಷಗಳಲ್ಲಿ ಮೂರು ಲಕ್ಷ ಮಿರ್ಚಿ ತಯಾರಿಸಲಾಗಿತ್ತು. ಈ ಬಾರಿ ಬರೋಬ್ಬರಿ 5 ಲಕ್ಷ ಮಿರ್ಚಿ ತಯಾರಿಸಲು ಮುಂದಾಗಿದೆ. ಇದಕ್ಕೆ 25 ಕ್ವಿಂಟಲ್‌ ಕಡಲೆ ಹಿಟ್ಟು ಬೇಕಾಗಲಿದೆ.

ಭಕ್ತರಿಗೆ ಶೇಂಗಾ ಹೋಳಿಗೆ ನೀಡಲು ಮುಂದಾಗಿದ್ದು, ಕಳೆದೊಂದು ವಾರದಿಂದ ನೂರಾರು ಮಹಿಳೆಯರು, ಪುರುಷರು ಸುಮಾರು 4 ಲಕ್ಷ ಶೇಂಗಾ ಹೋಳಿಗೆ ತಯಾರಿಯಲ್ಲಿ ತೊಡಗಿದ್ದಾರೆ.

ಮಹಾದಾಸೋಹದಲ್ಲಿ ಪ್ರತಿವರ್ಷ ಭಕ್ತರಿಗೆ ಮಿರ್ಚಿ ಬಜ್ಜಿ ನೀಡಲಾಗುತ್ತದೆ. ಈ ಬಾರಿ ಇದರ ಪ್ರಮಾಣ ಹೆಚ್ಚಳ ಮಾಡಲಾಗಿದ್ದು, ಸುಮಾರು 5 ಲಕ್ಷ ಮಿರ್ಚಿ ಬಜ್ಜಿ ಮಾಡುವುದಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಸಂತೋಷ ದೇಶಪಾಂಡೆ, ಮಿರ್ಚಿ ಸೇವಾ ಸಮಿತಿ ಸಂಚಾಲಕ

ಜಾತ್ರೆಗೆ ಭಕ್ತಸಾಗರ ಹೆಚ್ಚಳವಾಗುವ ಸಾಧ್ಯತೆ ಇರುವುದರಿಂದ ಮಹಾದಾಸೋಹದ ವ್ಯಾಪ್ತಿಯನ್ನು ವಿಸ್ತರಣೆ ಮಾಡಲಾಗುತ್ತಿದ್ದು, ಹಿಂದಿನ ವರ್ಷಗಳಿಗಿಂತಲೂ ದುಪ್ಪಟ್ಟು ಮಾಡಲಾಗುತ್ತಿದೆ. ಅಡುಗೆ ಕೋಣೆಯಿಂದ ಹಿಡಿದು ಬಡಿಸುವ ಜಾಗ ಮತ್ತು ಕೌಂಟರ್‌ಗಳ ಸಂಖ್ಯೆ ಹೆಚ್ಚಳ ಮಾಡಲಾಗುತ್ತಿದೆ.

ರಾಮನಗೌಡ ಶಿಕ್ಷಕರು ಹಾಗೂ ದಾಸೋಹ ಉಸ್ತುವಾರಿ

ಗವಿಸಿದ್ದೇಶ್ವರ ಜಾತ್ರೆ: ಅಗತ್ಯ ಭದ್ರತೆ ಒದಗಿಸಿ: ಡಿಸಿ

ನಗರದಲ್ಲಿ ಬಹುದೊಡ್ಡ ಪ್ರಮಾಣದಲ್ಲಿ ನಡೆಯುವ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ನಗರದ ಹಾಗೂ ಸುತ್ತ್ತಲಿನ ಗ್ರಾಮಗಳಿಂದ ಲಕ್ಷಾಂತರ ಭಕ್ತರು ಆಗಮಿಸುವುದರಿಂದ ಯಾವುದೇ ರೀತಿಯ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಸೂಕ್ತ ಪೊಲೀಸ್‌ ಬಂದೋಬಸ್‌್ತ ಒದಗಿಸಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶಬಾಬು ಅವರು ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಅವಶ್ಯಕತೆ ಇರುವಲ್ಲಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಜಾತ್ರಾ ಸ್ಥಳದಲ್ಲಿ 3 ಔಟ್‌ ಪೊಲೀಸ್‌ ಸ್ಟೇಷನ್‌ ನಿರ್ಮಿಸಬೇಕು. ರಥೋತ್ಸವಕ್ಕೆ ಆಗಮಿಸುವ ವೃದ್ಧರು, ಅಂಗವಿಕಲರಿಗೆ ಪಾರ್ಕಿಂಗ್‌ ಸ್ಥಳದಿಂದ ರಥೋತ್ಸವ ಸ್ಥಳಕ್ಕೆ ಸುಸಜ್ಜಿತ ಮತ್ತು ಪರವಾನಗಿ ಹೊಂದಿದ ಆಟೋಗಳನ್ನು ಗುರುತಿಸಬೇಕು. ಗವಿಮಠ ಸಂಸ್ಥೆಯಿಂದ ನೀಡಲ್ಪಟ್ಟಲೇಬಲ್‌ಗಳು ಅಂಟಿಸಿದ ಆಟೋಗಳನ್ನು ನಿರ್ಬಂಧಿತ ಸ್ಥಳಕ್ಕೆ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು.

ಬಡ ಮಕ್ಕಳನ್ನ ಓದಿಸಲು ಗವಿಸಿದ್ಧ ನನ್ನ ಜೋಳಿಗೆಗೆ ಶಕ್ತಿ ಕೊಡಲಿ: ಕಣ್ಣೀರು ಹಾಕಿದ ಗವಿಮಠ ಶ್ರೀ

ಜಾತ್ರೆಗೆ ಆಗಮಿಸುವ ವಾಹನಗಳ ನಿಲುಗಡೆಗೆ ಸ್ಥಳವನ್ನು ಗುರುತಿಸಿ, ಪಾರ್ಕಿಂಗ್‌ ನಕಾಶೆಯ ಬ್ಯಾನರ್‌ಗಳನ್ನು ಅಳವಡಿಸಬೇಕು. ವಾಹನಗಳ ನಿಯಂತ್ರಣಕ್ಕಾಗಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸುವುದು ಮತ್ತು ಅವಶ್ಯಕವಿದ್ದಲ್ಲಿ ಗೃಹರಕ್ಷಕರನ್ನು ನಿಯೋಜಿಸುವುದರ ಬಗ್ಗೆಯೂ ಹಾಗೂ ವಿಶೇಷ ಅಹ್ವಾನಿತರನ್ನು ಕರೆತರಲು ವ್ಯವಸ್ಥೆಯನ್ನು ಮಾಡಲು ಕ್ರಮ ವಹಿಸಬೇಕು ಎಂದು ಜಿಲ್ಲಾಧಿಕಾರಿಗಳು ಜಿಲ್ಲಾ ಪೊಲೀಸ್‌ ಇಲಾಖೆಗೆ ತಿಳಿಸಿದ್ದಾರೆ.

click me!