Weekly Love Horoscope:ಈ ವಾರ ವೃಷಭ ರಾಶಿಗೆ ಪ್ರೀತಿ ವ್ಯಕ್ತಪಡಿಸಲು ಅಡ್ಡಿ, ಆತಂಕ!

By Chirag Daruwalla  |  First Published Jan 1, 2023, 10:37 AM IST

ತಾರೀಖು 2 ಜನವರಿ 2023ರಿಂದ 8 ಜನವರಿ 2023ರವರೆಗೆ ದ್ವಾದಶ ರಾಶಿಗಳ ಪ್ರೇಮ ಜೀವನ ಹೇಗಿರಲಿದೆ? ಯಾವ ರಾಶಿಯ ಅವಿವಾಹಿತರಿಗೆ ವಿಶೇಷ ವ್ಯಕ್ತಿಯ ಭೇಟಿ ಸಾಧ್ಯವಾಗುತ್ತದೆ? ಯಾವ ರಾಶಿಯ ವೈವಾಹಿಕ ಜೀವನ ಹೇಗಿರಲಿದೆ? 


ಮೇಷ(Aries)
ಪ್ರೇಮಿಗಳಿಗೆ ಈ ಸಮಯ ಶುಭದಾಯಕ. ಹಾಗೆಯೇ ನಿಮ್ಮ ಪ್ರೇಮ ಜೀವನದಲ್ಲಿ ಖುಷಿ ತರಲಿದೆ. ವೈವಾಹಿಕ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೂ ಈ ವಾರ ಪರಸ್ಪರ ಮಾತನಾಡಿಕೊಳ್ಳುವ ಮೂಲಕ ಬಗೆಹರಿಸಿಕೊಳ್ಳಲಿದ್ದೀರಿ. ಇದಾದ ಬಳಿಕ ನಿಮ್ಮ ಸಂಬಂಧದಲ್ಲಿ ಹೊಸತನ ಕಾಣಿಸಿಕೊಳ್ಳಲಿದೆ. ಕಚೇರಿ ಕೆಲಸದಿಂದ ಬಿಡುವು ಪಡೆದು ಮನೆಯಲ್ಲಿ ಹೆಚ್ಚಿನ ಸಮಯ ಕಳೆಯುವ ಕಾರಣ ಸಂಗಾತಿಯೊಂದಿಗಿನ ನಿಮ್ಮ ಸಂಬಂಧ ಹೆಚ್ಚು ಬಲಗೊಳ್ಳಲಿದೆ. 

ವೃಷಭ(taurus)
ಪ್ರಯತ್ನದ ಹೊರತಾಗಿಯೂ ನಿಮ್ಮ ಸಂಗಾತಿಯೊಂದಿಗೆ ಅಗತ್ಯ ಸಂವಹನ ಸ್ಥಾಪಿಸುವಲ್ಲಿ ವಿಫಲರಾಗುತ್ತೀರಿ. ಏಕೆಂದರೆ ಈ ಸಮಯದಲ್ಲಿ ನಿಮ್ಮ ಪ್ರೀತಿಪಾತ್ರರಿಗೆ ನಿಮ್ಮ ಪ್ರೀತಿಯನ್ನು ವಿವರಿಸಲು ಕಷ್ಟವಾಗಬಹುದು. ಇದಕ್ಕೆ ನಿಮ್ಮದೇ ಕೆಲವು ಪರಿಸ್ಥಿತಿಗಳು ಅಥವಾ ಪ್ರತಿಕೂಲ ಸನ್ನಿವೇಶಗಳು ಕಾರಣವಾಗಿರಬಹುದು. ಇಂಥ ಪರಿಸ್ಥಿತಿಯಲ್ಲಿ ನಿಮ್ಮ ಪ್ರಯತ್ನ ನಿಲ್ಲಿಸಬೇಡಿ. ಅಗತ್ಯ ಬಿದ್ದರೆ ಪ್ರಶಾಂತ ಹಾಗೂ ಸುಂದರವಾದ ಸ್ಥಳಕ್ಕೆ ನಿಮ್ಮ ಪ್ರೇಮಿಗಳೊಂದಿಗೆ ಭೇಟಿ ನೀಡಿ ಅಲ್ಲಿ ಅವರೊಂದಿಗೆ ಇನ್ನೊಮ್ಮೆ ಸಂವಹನ ನಡೆಸಲು ಪ್ರಯತ್ನಿಸಿ. ಈ ವಾರದ ಪ್ರಾರಂಭದಲ್ಲಿ ಕುಟುಂಬ ಸದಸ್ಯರು ನಿಮ್ಮ ಹಾಗೂ ಸಂಗಾತಿಯ ನಡುವೆ ವೈಮನಸ್ಸು ಮೂಡಿಸುವ ಸಾಧ್ಯತೆ ಇದೆ. 

Tap to resize

Latest Videos

ಮಿಥುನ(Gemini)
ಪ್ರೇಮ ಭವಿಷ್ಯದ ಪ್ರಕಾರ ಈ ವಾರ ನಿಮ್ಮ ಹಾಗೂ ನಿಮ್ಮ ಸಂಗಾತಿಯ  ನಡುವಿನ ಸಂಬಂಧದಲ್ಲಿ ಪ್ರಗತಿ ಕಂಡುಬರಲಿದೆ.  ಈ ಬೆಳವಣಿಗೆಯ ಕಾರಣದಿಂದ ನಿಮ್ಮ ಪವಿತ್ರ ಸಂಬಂಧದಲ್ಲಿ ಎದುರಾಗುವ ಎಲ್ಲ ಸಮಸ್ಯೆಗಳಿಂದ ಹೊರಬರಲು ಸಾಧ್ಯವಾಗಲಿದೆ. ಇದರಿಂದ ನಿಮ್ಮ ಸಂಗಾತಿಯೊಂದಿಗೆ ಸುಮಧುರ ಕ್ಷಣಗಳನ್ನು ಕಳೆಯಲು ಅವಕಾಶ ಲಭಿಸಲಿದೆ. ಈ ವಾರ ವೈವಾಹಿಕ ಬದುಕಿನಲ್ಲಿ ಎಲ್ಲವೂ ಸುಗಮವಾಗಿ ಸಾಗುವ ಕಾರಣ ನಿಮ್ಮ ಸ್ವಭಾವದಲ್ಲಿ ಕೂಡ ಚೈತನ್ಯ ಕಂಡುಬರಲಿದೆ. 

ಕಟಕ(Cancer)
ಪ್ರಣಯದ ವಿಚಾರದಲ್ಲಿ ನಿಮ್ಮ ಜೀವನ ಹೊಸ ತಿರುವು ಪಡೆದುಕೊಳ್ಳಲಿದೆ. ಪ್ರೇಮಿಗಳು ಕೆಲವು ದೊಡ್ಡ ಪ್ರತಿಜ್ಞೆಗಳನ್ನು ಕೈಗೊಳ್ಳುವ ಅಥವಾ ನಿಮ್ಮಿಂದ ಏನಾದರೂ ನಿರೀಕ್ಷಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕೆ ಸಂಬಂಧಿಸಿ ನೀವು ನಿಮ್ಮ ಪ್ರೇಮಿಯಿಂದ ಸ್ವಲ್ಪ ಕಾಲಾವಕಾಶ ಕೋರಬೇಕು. ಯಾವುದೇ ಅವಸರದ ನಿರ್ಣಯಗಳನ್ನು ಕೈಗೊಳ್ಳಬೇಡಿ. ಇಥ ಪರಿಸ್ಥಿತಿಯಲ್ಲಿ ನಿಮ್ಮ ದ್ವಂದ್ವ ನಿಮ್ಮ ಸಂಗಾತಿಯ ಚಿಂತೆಗೂ ಕಾರಣವಾಗುವ ಸಾಧ್ಯತೆ ಇದೆ. ಈ ವಾರ ನಿಮ್ಮ ಸಂಗಾತಿಯ ಹುಟ್ಟುಹಬ್ಬ ಅಥವಾ ನಿಮ್ಮ ವಿವಾಹ ವಾರ್ಷಿಕೋತ್ಸವವನ್ನು ಮರೆಯುವ ಸಾಧ್ಯತೆ ಇದೆ. ಇದರಿಂದ ನಿಮ್ಮ ಸಂಗಾತಿಯೊಂದಿಗೆ ವೈಮನಸ್ಸು ಮೂಡಲಿದೆ. ಆದರೆ, ಅವರಿಗೆ ಸರ್ಪ್ರೈಸ್ ಉಡುಗೊರೆ ನೀಡುವ ಮೂಲಕ ಅವರ ಕೋಪವನ್ನು ಕಡಿಮೆ ಮಾಡಲು ನಿಮಗೆ ಸಾಧ್ಯವಾಗಲಿದೆ. 

ತೆಂಗಿನಕಾಯಿ ಈ ರೀತಿ ಪೂಜಿಸಿದ್ರೆ ನಿಮ್ಮ ಅದೃಷ್ಟ ಬದಲಾಗುತ್ತೆ!

ಸಿಂಹ(Leo)
ನೀವು ನಿಮ್ಮ ಗೆಳೆಯನೊಂದಿಗೆ ಡೇಟ್ ಮೇಲೆ ತೆರಳುತ್ತಿದ್ದರೆ, ಆ ಸಮಯದಲ್ಲಿ ಮೊಬೈಲ್ ಬಳಕೆ ತಗ್ಗಿಸಿ ಸಂಪೂರ್ಣ ಗಮನವನ್ನು ಅವರ ಮೇಲೆ ಕೇಂದ್ರೀಕರಿಸಿ. ಒಂದು ವೇಳೆ ನೀವು ಮೊಬೈಲ್ ನಲ್ಲಿ ಹೆಚ್ಚಿನ ಸಮಯ ಕಳೆದರೆ ನಿಮ್ಮ ಸಂಗಾತಿಗೆ ಬೇಸರ ಮೂಡಲಿದೆ. ಅಲ್ಲದೆ, ಈ ವಿಚಾರವಾಗಿ ಇಬ್ಬರ ನಡುವೆ ದೊಡ್ಡ ವಿವಾದ ಸೃಷ್ಟಿಯಾಗಲಿದೆ. ನಿಮ್ಮ ಸಂಗಾತಿಯೊಂದಿಗೆ ಕೆಲವು ಮುಖ್ಯ ವಿಚಾರಗಳನ್ನು ಹಂಚಿಕೊಳ್ಳಲು ನಿಮಗೆ ಮರೆತು ಹೋಗಬಹುದು. ಈ ಬಗ್ಗೆ ಅವರಿಗೆ ನಿಮ್ಮ ಕುಟುಂಬ ಸದಸ್ಯರು ಅಥವಾ ಆತ್ಮೀಯ ಸ್ನೇಹಿತರಿಂದ ಮಾಹಿತಿ ದೊರೆತು ಬೇಸರ ಮೂಡಬಹುದು. ಇದರಿಂದ ನೀವು ಯಾವುದೋ ವಿಚಾರವನ್ನು ಮುಚ್ಚಿಡುತ್ತಿದ್ದೀರಿ ಎಂಬ ಭಾವನೆ ನಿಮ್ಮ ಸಂಗಾತಿಯಲ್ಲಿ ಮೂಡಬಹುದು. ಹೀಗಾಗಿ ಇಂಥ ಯಾವುದೇ ಕೆಲಸಗಳನ್ನು ಮಾಡದೆ ನಿಮ್ಮ ಸಂಗಾತಿಯೊಂದಿಗೆ ಎಲ್ಲ ವಿಚಾರಗಳನ್ನು ಹಂಚಿಕೊಳ್ಳಿ. 

ಕನ್ಯಾ(Virgo)
ಈ ವಾರ ನಿಮ್ಮ ಸಂಗಾತಿಯನ್ನು ಖುಷಿಪಡಿಸಲು ಪ್ರಯತ್ನಿಸುತ್ತೀರಿ.  ಮೂರನೇ ವ್ಯಕ್ತಿಯಿಂದ ನಿಮ್ಮಿಬ್ಬರ ನಡುವೆ ಅಂತರ ಏರ್ಪಟ್ಟಿದ್ದರೆ, ಅದು ದೂರವಾಗಲಿದೆ.  ಪ್ರೀತಿಯ ಕಾಳಜಿ ಮರಳಿ ಪಡೆಯುತ್ತೀರಿ ಹಾಗೂ ಪ್ರೀತಿಯ ಬಣ್ಣಗಳನ್ನು ಮತ್ತೆ ಆಸ್ವಾದಿಸುತ್ತೀರಿ. ವಿವಾಹಿತರ ಬದುಕಿನಲ್ಲಿ ಹೊಸ ಅತಿಥಿಯ ಆಗಮನದ ಸೂಚನೆ ಸಿಗಲಿದೆ. ಈ ಕಾರಣದಿಂದ ನಿಮ್ಮ ವೈವಾಹಿಕ ಜೀವನ ಹಾಗೂ ಕುಟುಂಬದಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಲಿದೆ. ಮನೆಯಲ್ಲಿ ಖುಷಿಯ ವಾತಾವರಣ ಕಂಡುಬರಲಿದೆ. 

ತುಲಾ(Libra)
ನಿಮ್ಮ ಬದುಕಿನಲ್ಲಿ ಕೆಲವು ಪ್ರಗತಿಗಳು ಕಾಣಿಸುವ ಸಾಧ್ಯತೆ ಇದೆ. ನಿಮ್ಮ ವೈವಾಹಿಕ ಜೀವನದಲ್ಲಿ ಬೇಸರ ಮೂಡಬಹುದು. ಇಂಥ ಪರಿಸ್ಥಿತಿಯಲ್ಲಿ ಮನಸ್ಸನ್ನು ಕೆಡಿಸಿಕೊಳ್ಳದೆ ಪ್ರತಿ ಸಂಬಂಧವು ಹಳೆಯದಾಗುತ್ತದೆ ಎಂಬ ವಾಸ್ತವವನ್ನು ಅರ್ಥ ಮಾಡಿಕೊಳ್ಳಬೇಕು. ನಿಮ್ಮ ವೈವಾಹಿಕ ಜೀವನವನ್ನು ಮಧುರವಾಗಿಸುವ ಕೆಲವು ಮಾರ್ಗಗಳ ಬಗ್ಗೆ ಯೋಚಿಸಿ. ಹೀಗೆ ಮಾಡೋದ್ರಿಂದ ನಿಮ್ಮ ಸಂಬಂಧ ಮತ್ತೆ ಹೊಸತನ ಪಡೆದುಕೊಳ್ಳುತ್ತದೆ. 

ವೃಶ್ಚಿಕ(Scorpio)
ಈ ವಾರ ನಿಮ್ಮ ಸಂಗಾತಿ ನಿಮ್ಮಿಂದ ಸಲಹೆ ಪಡೆಯುವ ಸಾಧ್ಯತೆ ಇದೆ. ಆದರೆ, ನಿಮ್ಮ ಸಲಹೆಯಿಂದ ಅವರನ್ನು ಸಂತೃಪ್ತಿ ಪಡಿಸಲು ಸಾಧ್ಯವಾಗೋದಿಲ್ಲ. ನಿಮ್ಮಿಬ್ಬರ ವೈಯಕ್ತಿಕ ಪ್ರೇಮ ಸಂಬಂಧದಲ್ಲಿ ನಕಾರಾತ್ಮಕ ಪ್ರಭಾವ ಎದ್ದು ಕಾಣಲಿದೆ. ಏನೂ ಮಾತನಾಡದೆ ನಮ್ಮ ಸಂಗಾತಿ ಏನೆಲ್ಲ ಮಾಡಿದ್ದಾರೆ ಎಂಬುದನ್ನು ನಾವು ಆಗಾಗ ಮರೆಯುತ್ತೇವೆ. ಇಂಥ ಸಂದರ್ಭಗಳಲ್ಲಿ ಆಗಾಗ ಅವರಿಗೆ ಉಡುಗೊರೆಗಳನ್ನು ನೀಡುವ ಮೂಲಕ ಖುಷಿಪಡಿಸಿ. 

ಧನು(Sagittarius) 
ನಿಮ್ಮ ಪ್ರೀತಿ ವಿಚಾರದಲ್ಲಿ ಮುಕ್ತವಾಗಿ ಮಾತನಾಡುವ ಗುಣ ಬೆಳೆಸಿಕೊಳ್ಳಿ. ಏಕೆಂದರೆ ಹೀಗೆ ಮಾಡೋದ್ರಿಂದ ಮಾತ್ರ ನಿಮ್ಮ ಸಂಗಾತಿಯೊಂದಿಗಿನ ವೈಮನಸ್ಸನ್ನು ಕೊನೆಗೊಳಿಸಿ, ಸಂಬಂಧ ಮುಂದುವರಿಸಲು ಸಾಧ್ಯವಾಗಲಿದೆ. ಇದಕ್ಕಾಗಿ ನಿಮ್ಮ ಕೆಲಸದಿಂದ ಸ್ವಲ್ಪ ವಿರಾಮ ಪಡೆದು, ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವ ಮೂಲಕ ತಪ್ಪು ತಿಳಿವಳಿಕೆಯನ್ನು ದೂರ ಮಾಡಿ. ನಿಮ್ಮ ತಾಯಿ ಹಾಗೂ ಪತ್ನಿ ನಡುವಿನ ವೈಮನಸ್ಸು ದೂರವಾಗಿ ನಿಮಗೆ ನಿರಾಳತೆ ದೊರೆಯಲಿದೆ. ಇದರಿಂದ ನಿಮ್ಮ ವೈವಾಹಿಕ ಬದುಕು ಕೂಡ ಸಕಾರಾತ್ಮಕ ಮಾರ್ಗದಲ್ಲಿ ಮುಂದೆ ಸಾಗುತ್ತದೆ.

ಕಿಚನ್‌ನಲ್ಲಿರೋ ಈ ಮಸಾಲೆ 2023ರಲ್ಲಿ ನಿಮ್ಮ ಅದೃಷ್ಟವನ್ನೇ ಬದಲಾಯಿಸುತ್ತೆ

ಮಕರ(Capricorn)
ಪ್ರೇಮ ಜೀವನದಲ್ಲಿ ನಿಮ್ಮಿಬ್ಬರ ನಂಬಿಕೆ ಬಲಪಡಿಸಲು ಇದು ಸೂಕ್ತ ಸಮಯ. ಈ ಸಮಯದಲ್ಲಿ ನಿಮ್ಮ ಸಂಗಾತಿ  ಮನಸ್ಸಿನಲ್ಲಿರೋದನ್ನು ಮುಕ್ತವಾಗಿ ನಿಮ್ಮೊಂದಿಗೆ ಹಂಚಿಕೊಳ್ಳಲು ಯಾವುದೇ ತೊಂದರೆ ಅನುಭವಿಸೋದಿಲ್ಲ. ಇದರಿಂದ ಆತನ ಜೀವನಕ್ಕೆ ಸಂಬಂಧಿಸಿದ ಅನೇಕ ಗುಟ್ಟುಗಳು ನಿಮಗೆ ತಿಳಿಯಲಿವೆ. ವಿವಾಹಿತರ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಪರಸ್ಪರ ಮಾತನಾಡುವ ಮೂಲಕ ಅದನ್ನು ಬಗೆಹರಿಸಿಕೊಳ್ಳುತ್ತೀರಿ. ಆ ಬಳಿಕ ನಿಮ್ಮ ಸಂಬಂಧದಲ್ಲಿ ಹೊಸತನ ಕಾಣಿಸಿಕೊಳ್ಳಲಿದೆ.

ಕುಂಭ(Aquarius)
ಹಣಕಾಸಿನ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಸಂಗಾತಿಯೊಂದಿಗೆ ಈ ವಾರ ವಾಗ್ವಾದ ನಡೆಸುತ್ತೀರಿ. ಈ ಸಮಯದಲ್ಲಿ ಕೂಡ ಎಂದಿನಂತೆ ನೀವು ನಿಮ್ಮ ಸಂಗಾತಿಗೆ ಪಾಠಗಳನ್ನು ಮಾಡುತ್ತೀರಿ. ಇದರಿಂದ ನಿಮ್ಮ ಸಂಗಾತಿ ಕೋಪಗೊಂಡು ನಿಮಗೆ ಕೆಟ್ಟ ಪದಗಳನ್ನು ಬಳಸಿ ಹೀಯಾಳಿಸಬಹುದು. ಈ ರಾಶಿಯ ವಿವಾಹೀತರ ಬದುಕಿನಲ್ಲಿ ಈ ವಾರ ರೊಮ್ಯಾನ್ಸ್ ಹಾಗೂ ಪ್ರೀತಿ ದೂರ. ಆದರೆ, ಈ ಎಲ್ಲ ವಿವಾದಗಳ ಹೊರತಾಗಿಯೂ ನೀವಿಬ್ಬರೂ ಒಬ್ಬರನ್ನು ಬಿಟ್ಟು ಇನ್ನೊಬ್ಬರು ಬದುಕಲಾರಿರಿ. ಹೀಗಾಗಿ ನಿಮ್ಮ ಮನಸ್ಸಿನಲ್ಲಿರುವ ನೋವನ್ನು ದೂರ ಮಾಡುವ ನಿಟ್ಟಿನಲ್ಲಿ ಹೆಜ್ಜೆಯಿಡಿ. 

ಮೀನ(Pisces)
ಈ ರಾಶಿಯ ಜನರು ಇಂದು ತಮ್ಮ ಪ್ರೀತಿಪಾತ್ರರೊಂದಿಗೆ ರೊಮ್ಯಾಂಟಿಕ್ ಆಗಿ ಸಮಯ ಕಳೆಯುತ್ತಾರೆ. ನಿಮ್ಮ ಪ್ರೇಮ ಜೀವನದಲ್ಲಿ ಇಂದು ಸ್ಥಿರತೆ ಇರಲಿದೆ. ಹೀಗಾಗಿ ಈ ಸಮಯದಲ್ಲಿ ಇತರ ಕ್ಷೇತ್ರಗಳಲ್ಲಿ ಕೂಡ ಉತ್ತಮ ಪ್ರದರ್ಶನ ತೋಪರ್ಡಿಸಲು ಸಾಧ್ಯವಾಗಲಿದೆ. ವಿವಾಹಿತರ ಬದುಕಿನಲ್ಲಿ ಈ ವಾರ ಅತ್ಯಂತ ವಿಶೇಷವಾಗಿರಲಿದೆ. ನಿಮ್ಮ ಸಂಗಾತಿಯೊಂದಿಗೆ ಪ್ರೀತಿಯ ಆಳವನ್ನು ನೀವು ಅರಿಯುತ್ತೀರಿ. ಇದರಿಂದ ನೀವು ಪರಸ್ಪರ ಪ್ರೀತಿ ಹಾಗೂ ಅಕ್ಕರೆ ವ್ಯಕ್ತಪಡಿಸುತ್ತೀರಿ. 

click me!