ಪ್ರತಿದಿನ ಗಿಡಕ್ಕೆ ನೀರು ಹಾಕಿದರೆ, ಸುಖೀ ದಾಂಪತ್ಯ ಪ್ರಾಪ್ತಿ!

By Sathish Kumar KH  |  First Published Jan 13, 2025, 2:57 PM IST

ದಾಂಪತ್ಯದಲ್ಲಿನ ಕಲಹಗಳನ್ನು ನಿವಾರಿಸಲು ಜ್ಯೋತಿಷ್ಯ ಶಾಸ್ತ್ರವು ಪರಿಣಾಮಕಾರಿ ಪರಿಹಾರಗಳನ್ನು ಒದಗಿಸುತ್ತದೆ. ಜ್ಯೋತಿಷ್ಯ ಶಾಸ್ತ್ರ ಈ ಐದು ಸರಳ ಪರಿಹಾರಗಳನ್ನು ಪಾಲಿಸಿ ಸುಖೀ ದಾಂಪತ್ಯ ನಿಮ್ಮದಾಗಿಸಿಕೊಳ್ಳಿ. 


ಭಾರತೀಯ ಸಂಪ್ರದಾಯದಲ್ಲಿ ವಿವಾಹಕ್ಕೆ ಹಾಗೂ ದಾಂಪತ್ಯಕ್ಕೆ ಭಾರೀ ಮಹತ್ವ ನೀಡಲಾಗುತ್ತದೆ. ಜೀವನಪೂರ್ತಿ ಜೊತೆಗಿರುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡು ಅವರೊಂದಿಗೆ ಸಂಸಾರ ಮಾಡುವುದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಆದರೆ, ಜೀವನ ಪೂರ್ತಿ ಜೊತೆಗಿರುವ ಸಂಗಾತಿಯೊಂದಿಗೆ ಆಗಾಗ ಜಗಳಗಳು ಆಗುವುದು ಹಾಗೂ ಹೊಂದಾಣಿಕೆ ಮಾಡಿಕೊಳ್ಳುವುದು ಸಹಜ. ಆದರೆ, ಜಗಳ ದಾಂಪತ್ಯವನ್ನೇ ಕಡಿದುಕೊಳ್ಳುವ ಹಂತಕ್ಕೆ ಹೋಗಬಾರದು. ಕೆಲವರು ಹೊಂದಾಣಿಕೆ ಮತ್ತು ಪ್ರೀತಿಯಿಂದ ಜೀವನ ಮಾಡಿದ್ದರ ಬದಲಾಗಿ ಕಿತ್ತಾಡಿಕೊಂಡಿದ್ದೇ ಹೆಚ್ಚು. ಹೀಗಾಗಿ, ನೀವು ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಸೂಚಿಸಿರುವ ಈ ಕ್ರಮಗಳನ್ನು ಅನುಸರಿಸುವ ಮೂಲಕ ನಿಮ್ಮ ದಾಂಪತ್ಯದಲ್ಲಿ ಜಗಳವನ್ನು ಕೊನೆಗೊಳಿಸಿ ಸುಂದರ ಜೀವನವನ್ನು ನಡೆಸಬಹುದು.

ವೈವಾಹಿಕ ಜೀವನದಲ್ಲಿನ ದಾಂಪತ್ಯ ಕಲಹಕ್ಕೆ ಹಲವು ಕಾರಣಗಳಿರಬಹುದು. ಆದರೆ, ಜ್ಯೋತಿಷ್ಯ ಶಾಸ್ತ್ರದಲ್ಲಿ ಸುಖಿ ಸಂಸಾರಕ್ಕೆ ಹಲವು ಪರಿಹಾರ ಮಾರ್ಗಗಳನ್ನು ಹೇಳಲಾಗಿದೆ. ಅದರಲ್ಲಿ ಅತ್ಯಂತ ಸುಲಭ, ಸರಳ ಹಾಗೂ ವೆಚ್ಚದಾಯಕವಲ್ಲದ 5 ಪರಿಹಾರಗಳು ಇಲ್ಲಿವೆ ನೋಡಿ. ಈ ಜ್ಯೋತಿಷ್ಯ ಶಾಸ್ತ್ರದ ಪರಿಹಾರಗಳನ್ನು ಅನುಸರಿಸುವ ಮೂಲಕ ನಿಮ್ಮ ದಾಂಪತ್ಯದಲ್ಲಿಯೂ ಕಲಹಗಳನ್ನು ತೊಡೆದುಹಾಕಿ ಸುಂದರ ಸಂಸಾರವನ್ನು ನಡೆಸಲು ನೀವೇ ದಾರಿ ಕಂಡುಕೊಳ್ಳಿ..

Tap to resize

Latest Videos

ಮರ, ಗಿಡಕ್ಕೆ ನೀರು ಹಾಕಿ: ಸಂತೋಷದ ದಾಂಪತ್ಯಕ್ಕೆ ಗುರು ಉತ್ತಮ ಸ್ಥಾನದಲ್ಲಿರಬೇಕು. ಇದಕ್ಕಾಗಿ ಪ್ರತಿ ಗುರುವಾರ ಗಂಡ ಹೆಂಡತಿ ಇಬ್ಬರೂ ತುಳಸಿ ಮರಕ್ಕೆ ಅರಿಶಿನ ಬೆರೆಸಿದ ನೀರನ್ನು ಸುರಿಯಬೇಕು. ಇದನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ದಾಂಪತ್ಯದಲ್ಲಿ ಸಂತೋಷ ತರುತ್ತದೆ ಮತ್ತು ದೈನಂದಿನ ಜಗಳಗಳು ನಿಲ್ಲುತ್ತವೆ.

ಮಲಗುವ ಕೋಣೆಯಲ್ಲಿ ರಾಧಾಕೃಷ್ಣ ಫೋಟೋ ಹಾಕಿ: ಮನೆಯ ಮುಖ್ಯ ಭಾಗವೆಂದರೆ ಮಲಗುವ ಕೋಣೆ. ಏಕೆಂದರೆ ಗಂಡ ಹೆಂಡತಿ ಇಬ್ಬರೂ ಇಲ್ಲಿ ಹೆಚ್ಚು ಸಮಯ ಕಳೆಯುತ್ತಾರೆ. ಮಲಗುವ ಕೋಣೆಯಲ್ಲಿ ರಾಧಾಕೃಷ್ಣರ ಫೋಟೋ ಇಡುವುದರಿಂದ ದಂಪತಿಯ ನಡುವೆ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಜೊತೆಗೆ, ಇಬ್ಬರ ನಡುವೆ ಮೂಡುವ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. ಇದು ನಿಮ್ಮ ಪ್ರೀತಿಯ ಜೀವನದ ಮೇಲೆ ಪರಿಣಾಮ ಬೀರುತ್ತದೆ, ಜಗಳಗಳು ನಿಲ್ಲುತ್ತವೆ.

ಇದನ್ನೂ ಓದಿ: ಕುಡಿದು ಬಂದ ವರನ ರಂಪಾಟ, ಮಗಳ ಮದುವೆ ಕ್ಯಾನ್ಸಲ್ ಮಾಡಿದ ತಾಯಿಯ ನಿರ್ಧಾರಕ್ಕೆ ನೆಟ್ಟಿಗರ ಮೆಚ್ಚುಗೆ

ಪ್ರತಿ ಗುರುವಾರ ಹಳದಿ ಬಟ್ಟೆ ಧರಿಸಿ: ಗಂಡ ಮತ್ತು ಹೆಂಡತಿ ಇಬ್ಬರೂ ಹಳದಿ ಬಟ್ಟೆಗಳನ್ನು ಧರಿಸಿ ಮತ್ತು ಗುರುವಿನ (ಗುರು ರಾಘವೇಂದ್ರ) ದೇವಸ್ಥಾನಕ್ಕೆ ಪ್ರತಿ ಗುರುವಾರ ಹೋದರೆ ಗುರು ಗ್ರಹವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಈ ಪರಿಹಾರದಿಂದಾಗಿ, ನಿಮ್ಮ ಜೀವನದಲ್ಲಿ ಸಮಸ್ಯೆಗಳು ಕ್ರಮೇಣ ಕಡಿಮೆಯಾಗುತ್ತವೆ.

11 ಬಾರಿ ಈ ಮಂತ್ರವನ್ನು ಪಠಿಸಿ: 
ನಮ್ಮ ಜಗಳ ಈಗಾಗಲೇ ವಿಕೋಪಕ್ಕೆ ತಲುಪಿದ್ದು, ಯಾವುದೇ ಪರಿಹಾರಗಳು ಕೆಲಸ ಮಾಡುತ್ತಿಲ್ಲವೆಂದಾದಲ್ಲಿ ಪತಿ-ಪತ್ನಿ ಪ್ರತಿದಿನ ಈ ಮಂತ್ರವನ್ನು ಪಠಿಸಬೇಕು. ಪತಿ-ಪತ್ನಿಯರಿಬ್ಬರೂ ಪ್ರತಿದಿನ ಬೆಳಗ್ಗೆ ಕೆಳಗೆ ಕೊಟ್ಟಿರುವ ಮಂತ್ರವನ್ನು 11 ಬಾರಿ ಪಠಿಸಿದರೆ ಅವರ ಜೀವನದಲ್ಲಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಮತ್ತು ಯಾವುದೇ ಸಮಸ್ಯೆ ಬರುವುದಿಲ್ಲ.
ಮಂತ್ರ- 'ಓಂ ಕಾಮದೇವಾಯ ವಿದ್ಮಹೇ, ರತಿ ಪ್ರಿಯಾಯೈ ಧೀಮಹಿ ತನ್ನೋ ಅನಂಗ ಪ್ರಚೋದಯಾತ್'

ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಕಾಯ್ದೆ ಮಹಿಳೆಗೆ ಸಿಕ್ಕ ನ್ಯಾಯಕ್ಕಿಂತ ಪುರುಷನಿಗಾದ ಅನ್ಯಾಯವೇ ಹೆಚ್ಚಾ?

ಹುಣ್ಣಿಮೆಯ ದಿನ ಪಾಯಸ ನೈವೇದ್ಯ ಮಾಡಿ: ಪ್ರತಿ ತಿಂಗಳ ಹುಣ್ಣಿಮೆಯಂದು ಮನೆಯಲ್ಲಿ ಹಸುವಿನ ಹಾಲಿನೊಂದಿಗೆ ಪಾಯಸ ಮಾಡಿ. ಮೊದಲು ಇದನ್ನು ಲಕ್ಷ್ಮಿ ದೇವಿಗೆ ಅರ್ಪಿಸಿ. ನಂತರ ಅದನ್ನು ಪ್ರಸಾದವೆಂದು ಪರಿಗಣಿಸಿ ಮತ್ತು ಪತಿ-ಪತ್ನಿಯರು ಜೊತೆಯಲ್ಲಿ ತಿನ್ನಿರಿ. ಈ ರೀತಿ ಮಾಡುವುದರಿಂದ ದಾಂಪತ್ಯದಲ್ಲಿಯೂ ಸಂತೋಷ ಸಿಗುತ್ತದೆ.

click me!