ಸುಂದರವಾಗಿರೋ ಮಹಿಳೆ ಸಾಧ್ವಿಯಾಗಿದ್ದು ಏಕೆ? ವೈರಲ್ ಆಯ್ತು ವಿಡಿಯೋ

By Roopa Hegde  |  First Published Jan 13, 2025, 1:08 PM IST

ಮಹಾ ಕುಂಭ ಮೇಳದಲ್ಲಿ ಸುಂದರ ಸಾಧ್ವಿಯ ವಿಡಿಯೋ ಒಂದು ವೈರಲ್ ಆಗಿದೆ. ಅವರ ಮೇಕಪ್ ಟ್ರೋಲ್ ಆಗಿದ್ದು, ಯುಟ್ಯೂಬರ್ ಪ್ರಶ್ನೆ ಕೇಳುವ ವಿಧಾನವನ್ನು ಬಳಕೆದಾರರು ಖಂಡಿಸಿದ್ದಾರೆ. 
 


ಮಹಾ ಕುಂಭಮೇಳ 2025ಕ್ಕೆ (Maha Kumbh Mela 2025) ಚಾಲನೆ ಸಿಕ್ಕಿದೆ. ಭಾರತ (India)ದ ಮೂಲೆ ಮೂಲೆಗಳಿಂದ ಸಾವಿರಾರು ಭಕ್ತರು ಮಹಾ ಕುಂಭ ಮೇಳದಲ್ಲಿ ಭಾಗಿಯಾಗ್ತಿದ್ದಾರೆ. ದೇಶ ಮಾತ್ರವಲ್ಲ ವಿದೇಶದಿಂದಲೂ ಭಕ್ತರ ಆಗಮನವಾಗ್ತಿದೆ. ಪ್ರಯಾಗ್ ರಾಜ್ ನಲ್ಲಿ ಮಹಾ ಕುಂಭಮೇಳದ ಸಂಭ್ರಮ ಮನೆ ಮಾಡಿದೆ. ಮಹಾ ಕುಂಭಮೇಳದಲ್ಲಿ ಅನೇಕ ವಿಷ್ಯಗಳು ಜನರ ಗಮನ ಸೆಳೆಯುತ್ತಿವೆ. ನಾಗಾ ಸಾಧುಗಳ ಒಂದೊಂದೇ ಕಥೆಗಳು ಈ ಸಮಯದಲ್ಲಿ ಹೊರಗೆ ಬರ್ತಿವೆ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಅನೇಕ ನಾಗಾ ಸಾಧುಗಳು ಇಲ್ಲಿ ಕಾಣ ಸಿಗ್ತಿದ್ದಾರೆ. ಈ ಮಧ್ಯೆ ಸುಂದರ ಸಾಧ್ವಿಯೊಬ್ಬರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 

ವಿಡಿಯೋದಲ್ಲಿ ಯುಟ್ಯೂಬರ್, ಸಾಧ್ವಿ (Sadhvi) ಜೊತೆ ಮಾತನಾಡ್ತಿದ್ದಾರೆ. ನೀವು ಇಷ್ಟೊಂದು ಸುಂದರವಾಗಿದ್ದೀರಿ, ಯಾಕೆ ಸಾಧ್ವಿ ಜೀವನವನ್ನು ಸ್ವೀಕರಿಸಿದ್ರಿ ಎಂದು ನೇರವಾಗಿ ಪ್ರಶ್ನೆ ಕೇಳ್ತಾರೆ ನಿರೂಪಕಿ. ನೆಮ್ಮದಿಗಾಗಿ ಸಾಧ್ವಿ ಜೀವನ ಆಯ್ಕೆ ಮಾಡಿಕೊಂಡಿರುವುದಾಗಿ ಸಾಧ್ವಿ ಹೇಳೋದನ್ನು ನೀವು ಕೇಳ್ಬಹುದು. ವಿಡಿಯೋ ಪ್ರಕಾರ, ಸಾಧ್ವಿ ಉತ್ತರಾಖಂಡದಿಂದ ಬಂದಿದ್ದಾರೆ. ಅವರು ಆಚಾರ್ಯ ಮಹಾಮಂಡಲೇಶ್ವರರ ಶಿಷ್ಯೆ. ಅವರು ಕಳೆದ ಎರಡು ವರ್ಷಗಳಿಂದ ಈ ಸಾಧ್ವಿ ಜೀವನವನ್ನು ನಡೆಸುತ್ತಿರೋದಾಗಿ ಹೇಳಿದ್ದಾರೆ.

Tap to resize

Latest Videos

ಒನ್ಲಿ ಫ್ಯಾನ್ಸ್ ಮಾಡೆಲ್ or ಜ್ಯೋತಿಷಿ ಬೆಸ್ಟ್, 90 ಗಂಟೆ ಕೆಲಸ ಚರ್ಚೆ ಬೆನ್ನಲ್ಲೇ 19ರ ಯುವತಿ

ಯುಟ್ಯೂಬ್ ವಿಡಿಯೋ (YouTube video) ಪ್ರಕಾರ, ಸಾಧ್ವಿ ಹಿಂದೆ ನಟಿಯಾಗಿದ್ದರು. ಅವರ ವಯಸ್ಸು 30 ವರ್ಷ. ಜೀವನದಲ್ಲಿ ಬಹಳಷ್ಟು ಕೆಲಸವನ್ನು ಅವರು ಮಾಡಿದ್ದಾರೆ. ನಟಿಯಾಗಿದ್ದರು. ನಿರೂಪಕಿಯಾಗಿದ್ದರು. ದೇಶ ವಿದೇಶವನ್ನು ಸುತ್ತಿದ್ದಾರೆ. ಎಲ್ಲವನ್ನು ಮಾಡಿದ್ರೂ ಅವರಿಗೆ ಶಾಂತಿ ಸಿಕ್ಕಿರಲಿಲ್ಲ. ಹೆಸರು ಮತ್ತು ಖ್ಯಾತಿ ಇತ್ತು. ಆದ್ರೆ ಶಾಂತಿ ಇರಲಿಲ್ಲ.  ಭಕ್ತಿಯು ಅವರನ್ನು ಸೆಳೆಯಿತು. ಜನರಿಂದ ದೂರ ಸರಿದು ದೇವರನ್ನು ಆಶ್ರಯಿಸಲು ಪ್ರಾರಂಭಿಸಿದ್ರು. ಭಜನೆಗಳು, ಕೀರ್ತನೆಗಳು ಮತ್ತು ಮಂತ್ರಗಳು ಅವರ ಜೀವನಕ್ಕೆ ಶಾಂತಿ ನೀಡಲು ಶುರು ಮಾಡಿತ್ತು. ಹಾಗಾಗಿಯೇ ಸಾಧ್ವಿ ಜೀವನ ಶುರು ಮಾಡಿದ್ದಾಗೆ ಅವರು ಹೇಳಿಕೊಂಡಿದ್ದಾರೆ. 

ಈ ನಾಲ್ಕು ಲಕ್ಷಣ ಇರೋ ಪುರುಷರು ಅದೃಷ್ಟಶಾಲಿಗಳು… ಇವರು ಮುಟ್ಟಿದ್ದೆಲ್ಲಾ ಚಿನ್ನ

ಎಕ್ಸ್ ಖಾತೆಯಲ್ಲಿ ಈ ಸಂದರ್ಶನದ ಸಣ್ಣ ವಿಡಿಯೋ ಒಂದನ್ನು ಹಂಚಿಕೊಳ್ಳಲಾಗಿದೆ. @Babymishra_ ಎಂಬ ಬಳಕೆದಾರರು ವಿಡಿಯೋ ಪೋಸ್ಟ್ ಮಾಡಿದ್ದಾರೆ. ವಿಡಿಯೋ ವೇಗವಾಗಿ ವೈರಲ್ ಆಗಿದೆ. ವೀಡಿಯೊ 5 ಲಕ್ಷ 25 ಸಾವಿರಕ್ಕೂ ಹೆಚ್ಚು ವೀವ್ಸ್ ಪಡೆದಿದೆ. ಏಳೂವರೆ ಸಾವಿರಕ್ಕೂ ಹೆಚ್ಚು ಲೈಕ್‌ ಸಿಕ್ಕಿದೆ. ಅಷ್ಟೇ ಅಲ್ಲ ನೂರಾರು ಮಂದಿ ಇದಕ್ಕೆ ಕಮೆಂಟ್ ಮಾಡಿದ್ದಾರೆ. ಬಹುತೇಕ ಬಳಕೆದಾರರಿಗೆ ಸಾಧ್ವಿ ಸೌಂದರ್ಯ ಹಾಗೂ ಮೇಕಪ್ ಮೇಲೆ ಕಣ್ಣು ಬಿದ್ದಿದೆ. ಸಾಧ್ವಿ ತುಂಬಾ ಮೇಕಪ್ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ. ಸಾಧ್ವಿ, ಶೃಂಗಾರ ಮಾಡ್ಕೊಳ್ಬಹುದಾ? ಅವರು ಮೇಕಪ್, ಐಬ್ರೋ ಎಲ್ಲ ಮಾಡಿದ್ದು, ಇದು ಸಾಧ್ವಿ ಜೀವನಕ್ಕೆ ವಿರುದ್ಧವಲ್ಲವೆ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಸಾಧ್ವಿ ಮೇಕಪ್ ಮಾಡುವುದು ಸೂಕ್ತವಲ್ಲ, ಇವರು ಸಾಧ್ವಿಯಲ್ಲ, ಸಾಧ್ವಿಯಂತೆ ನಟಿಸುತ್ತಿದ್ದಾರೆಂದು ಮತ್ತೆ ಕೆಲವರು ಕಮೆಂಟ್ ಮಾಡಿದ್ದಾರೆ. ಜೀವನದಲ್ಲಿ ಎಲ್ಲ ಅನುಭವಿಸಿದ ಮೇಲೆ ಇವರು ಸಾಧ್ವಿಯಾಗಿದ್ದಾರೆ ಎಂದು ಒಬ್ಬರು ಕಮೆಂಟ್ ಮಾಡಿದ್ರೆ ಮತ್ತೆ ಕೆಲವರು, ಶಾಂತಿ ಹುಡುಕಿ ಪ್ರಯೋಜವಿಲ್ಲ. ಅದು ನಮ್ಮಲ್ಲಿಯೇ ಸಿಗುವಂತಹದ್ದು ಎಂದಿದ್ದಾರೆ. ಸಾಧ್ವಿ ಮೇಕಪ್ ಮಾತ್ರವಲ್ಲ ನಿರೂಪಕಿ ಪ್ರಶ್ನೆಯನ್ನು ಬಳಕೆದಾರರು ಖಂಡಿಸಿದ್ದಾರೆ. ಸುಂದರವಾಗಿದ್ದಾರೆ ಅಂದ್ರೆ ಸಾಧ್ವಿ ಆಗ್ಬಾರದಾ? ಕುರೂಪಿಗಳು ಮಾತ್ರ ಸಾಧ್ವಿಗಳಾಗ್ಬೇಕಾ? ಸಾಧ್ವಿ ಬಳಿ ಇಂಥ ಪ್ರಶ್ನೆ ಕೇಳೋದು ಎಷ್ಟು ಸೂಕ್ತ ಎಂದು ಬಳಕೆದಾರರು ಕೋಪ ವ್ಯಕ್ತಪಡಿಸಿದ್ದಾರೆ. 

 

About For Viral Video

महाकुंभ में आई बहुत ही खूबसूरत साध्वी
पत्रकार ने पूछा आप इतनी सुन्दर हैं तो साध्वी क्यों बनीं? pic.twitter.com/dEzhqNfqY6

— Shubhangi Pandit (@Babymishra_)
click me!