ಬ್ಲ್ಯಾಕ್​ ಮ್ಯಾಜಿಕ್​ ಹೇಗೆ ತಿಳಿಯೋದು? ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಹಾಕಿದ್ರೆ ಸಮಸ್ಯೆನಾ?

By Suchethana D  |  First Published Jun 3, 2024, 5:46 PM IST

ಬ್ಲ್ಯಾಕ್​ ಮ್ಯಾಜಿಕ್​ ಅನ್ನೋದು ಇದ್ಯಾ? ಅದನ್ನು ತಿಳಿಯೋದು ಹೇಗೆ ಇತ್ಯಾದಿಗಳ ಕುರಿತು ವಿವರಿಸಿದ್ದಾರೆ ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಡಾ. ಶೀಲಾ ಎಂ. ಬಜಾಜ್​.
 


ಬ್ಲ್ಯಾಕ್​ ಮ್ಯಾಜಿಕ್​ ಇದೆ ಎಂದು ನಂಬದವರ ಕೆಲವರಿದ್ದಾರೆ. ಆದರೆ ಒಳ್ಳೆಯದ್ದು ಇದ್ದ ಮೇಲೆ ಕೆಟ್ಟದ್ದು ಇದ್ದೇ ಇರುತ್ತದೆ ಎನ್ನುವುದು ಹಲವರ ಅಭಿಮತ. ಇದಕ್ಕೆ ತಕ್ಕನಾಗಿ ಇದಾಗಲೇ ಹಲವಾರು ರೀತಿಯಲ್ಲಿ ಘಟನೆಗಳೂ ಸಂಭವಿಸುತ್ತಿರುವುದು ಇದೆ. ಕೆಲವು ಪ್ರದೇಶಗಳು ಈ ಬ್ಲ್ಯಾಕ್​ ಮ್ಯಾಜಿಕ್​ ಮಾಡುವುದಕ್ಕಾಗಿಯೇ ಫೇಮಸ್​ ಆಗಿವೆ, ತನ್ನ ಶತ್ರುಗಳನ್ನು ನಾಶಪಡಿಸುವುದಕ್ಕಾಗಿ, ಯಾವುದೋ ಕಾರ್ಯ ಸಿದ್ಧಿಸಿಕೊಳ್ಳುವುದಕ್ಕಾಗಿ... ಹೀಗೆ ಹಲವು ಕಾರಣಗಳಿಗೆ ಬ್ಲ್ಯಾಕ್​ ಮ್ಯಾಜಿಕ್​ ಮೊರೆ ಹೋಗುವವರು ಇದ್ದಾರೆ. ಆದರೆ ಇದು ಹೆಚ್ಚಿನದ್ದಾಗಿ ಬೆರೆಯವರಿಗೆ ಹಾನಿ ಮಾಡುವುದಕ್ಕಾಗಿಯೇ ಮಾಡಲಾಗುತ್ತದೆ. ಅದೇ  ಇನ್ನೊಂದೆಡೆ, ಬೇರೆಯವರ ಮೇಲೆ ಹಲವು ವರ್ಷ ಇದನ್ನು ಪ್ರಯೋಗಿಸಿದವರು, ಒಂದಲ್ಲೊಂದು ದಿನ ತಾವೇ ಅದರ ಸುಳಿಗೆ ಬಿದ್ದು ಪಶ್ಚಾತ್ತಾಪ ಪಟ್ಟು, ಮಾನ- ಮರ್ಯಾದೆಯನ್ನು ಸಾರ್ವಜನಿಕವಾಗಿ ಕಳೆದುಕೊಳ್ಳಬೇಕಾಗುತ್ತದೆ ಎಂದೂ ಹೇಳಲಾಗುತ್ತದೆ.

ಅದೇನೇ ಇರಲಿ. ಸೋಷಿಯಲ್​ ಮೀಡಿಯಾದಲ್ಲಿ ಸದಾ ಆ್ಯಕ್ಟೀವ್​ ಆಗಿರುವ ಹಲವರು ತಮ್ಮ ಫೋಟೋ, ವಿಡಿಯೋಗಳನ್ನು ಶೇರ್ ಮಾಡುತ್ತಲೇ ಇರುವುದು ಮಾಮೂಲು. ಆದರೆ ನಿಮ್ಮ ಮೇಲೆ ಕಣ್ಣಿಟ್ಟಿರುವವರು ಇದರ ಪ್ರಯೋಜನವನ್ನೂ ಪಡೆಯಬಹುದು ಎಂದು ಎಚ್ಚರಿಸಿದ್ದಾರೆ ಖ್ಯಾತ ಸಂಖ್ಯಾಶಾಸ್ತ್ರಜ್ಞರಾಗಿರುವ ಡಾ. ಶೀಲಾ ಎಂ. ಬಜಾಜ್​ ಅವರು. ರ್ಯಾಪಿಡ್​ ರಶ್ಮಿ ಯೂಟ್ಯೂಬ್​ ಚಾನೆಲ್​ಗೆ ಅವರು ನೀಡಿರುವ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಈ ಕುರಿತು ಶೇರ್​ ಮಾಡಿಕೊಂಡಿದ್ದಾರೆ. ಸೋಷಿಯಲ್​  ಮೀಡಿಯಾಗಳಲ್ಲಿ ಹಾಕುವ ಫೋಟೋಗಳು ಬ್ಲ್ಯಾಕ್​ಮ್ಯಾಜಿಕ್​ ಮಾಡಲು ಅಷ್ಟರಮಟ್ಟಿಗೆ ಪ್ರಭಾವ ಬೀರದ್ದರೂ ಅದರಿಂದ ಖಂಡಿತ ಹಾನಿಯಂತೂ ಇದೆ ಎನ್ನುತ್ತಾರೆ ಅವರು.

Tap to resize

Latest Videos

ಮದುವೆಯಾಗೋಕೆ ಇಷ್ಟವೇ ಇಲ್ಲ ಎನ್ನುತ್ತಲೇ ಕಾರಣ ಬಿಚ್ಚಿಟ್ಟ ಆ್ಯಂಕರ್​ ಅನುಶ್ರೀ: ಫ್ಯಾನ್ಸ್​ ಶಾಕ್​!

ತಮಗೆ ಆಗಿಲ್ಲದವರ ಮೇಲೆ ಈ ತಂತ್ರವನ್ನು ಬಳಸಲು ಹೆಚ್ಚಾಗಿ ಬಳಸುವ ಸಾಧನ ಅವರ ಕೂದಲು, ಉಗುರು. ಅದರಲ್ಲಿಯೂ ಹೆಚ್ಚಾಗಿ ಆಹಾರ ನೀಡುವ ಮೂಲಕ ಈ ತಂತ್ರವನ್ನು ಬಳಸಲಾಗುತ್ತದೆ. ತಮ್ಮ ಮೇಲೆಯೂ ಈ ಪ್ರಯೋಗ ನಡೆದಿದೆ ಎಂದು ತಿಳಿಸಿದ್ದಾರೆ ಅವರು. ಇದೇ ವಿಷಯದಲ್ಲಿ ಸುಮಾರು 25 ವರ್ಷಗಳ ಕಾಲ ಅಧ್ಯಯನ ನಡೆಸಿರುವ ಶೀಲಾ ಅವರು, ಇದಾಗಲೇ ಹಲವಾರು ಮಂದಿಗೆ ಬ್ಲ್ಯಾಕ್​ ಮ್ಯಾಜಿಕ್ ತೆಗೆಯಲಾಗಿದೆ. ಆದರೆ ಇದರಿಂದ ಅನುಭವಿಸುವ ಹಿಂಸೆಗಳು ಅಷ್ಟಿಷ್ಟಲ್ಲ ಎಂದಿದ್ದಾರೆ.

ತಮ್ಮ ಮೇಲೆ ಬ್ಲ್ಯಾಕ್​ ಮ್ಯಾಜಿಕ್​ ಪ್ರಯೋಗ ಆಗಿದ್ದು ತಿಳಿಯುವುದು ಕಷ್ಟವೇ. ಆದರೆ ಪದೇ ಪದೇ ಅನಾರೋಗ್ಯ ಬರುವುದು, ಯಾವುದೇ ವೈದ್ಯರ ಬಳಿ ಹೋದರೂ ಹುಷಾರು ಆಗದೇ ಇರುವುದು, ಒಂದು ರೀತಿಯ ಯಾತನೆ, ಯಾವ ಔಷಧಗಳಿಗೂ ಗುಣಮುಖರಾಗದೇ ಹೋಗುವುದು ಇಂಥ ಸಂದರ್ಭಗಳಲ್ಲಿ ಬ್ಲ್ಯಾಕ್​ ಮ್ಯಾಜಿಕ್​ ಆಗಿದೆ ಎನ್ನುವುದು ತಿಳಿಯುತ್ತದೆ. ಕೆಲವರಿಗೆ ಇಂಥವರೇ ತಮ್ಮ ಮೇಲೆ ಈ ಪ್ರಯೋಗ ಮಾಡಿಸಿದ್ದು ಎನ್ನುವ ಅರಿವು ಇರುತ್ತದೆ. ಆದರೆ ನಮ್ಮದೇ ಆದ ವಿಧಾನದಿಂದ ಅದನ್ನು ತೆಗೆಯಲಾಗುವುದು ಎಂದು ತಿಳಿಸಿದ್ದಾರೆ. 
 

ನಿಖಿಲ್​ ಎಲ್ಲಿದ್ದೀಯಪ್ಪ... ಡೈಲಾಗ್​ ರೂವಾರಿ ಇವ್ರೇ ನೋಡಿ... ಅಂದು ನಡೆದ ಘಟನೆ ವಿವರಿಸಿದ ನಟಿ ಶಾಲಿನಿ...

click me!