Chanakya Niti ಗಂಡ-ಹೆಂಡತಿ ಸಂಬಂಧ ಹೇಗಿರಬೇಕು? ಲೈಂಗಿಕ ಜೀವನದ ಕುರಿತ ಸಲಹೆಗಳನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ, ಚಾಣಕ್ಯ ನೀತಿಯಲ್ಲಿ ಪುರುಷರ ಲೈಂಗಿಕ ಜೀವನ ಅಂದ್ರೆ ವೀರ್ಯ ವೃದ್ಧಿಗೆ ಏನು ಮಾಡಬೇಕು ಎಂದು ಹೇಳಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ಚಾಣಕ್ಯ ನೀತಿ ಅಂದ್ರೆ ಬಹುತೇಕರಿಗೆ ರಾಜಕೀಯಕ್ಕೆ (Politics) ಸಂಬಂಧಿಸಿದ್ದು ಅಂತ ತಿಳಿದುಕೊಂಡಿರುತ್ತಾರೆ. ಚಂದ್ರಗುಪ್ತ ಮೌರ್ಯ ತನ್ನ ಸಾಮ್ರಾಜ್ಯ ಕಟ್ಟಲು ಚಾಣಕ್ಯ (Economist Acharya Chanakya) ಎಂದು ಇತಿಹಾಸ ಹೇಳುತ್ತದೆ. ಇಂದಿನ ರಾಜಕೀಯದಲ್ಲಿಯೂ ಚಾಣಕ್ಯ ಎಂಬ ಪದ ಚಾಲ್ತಿಯಲ್ಲಿದೆ. ಚಾಣಕ್ಯರನ್ನು ಆರ್ಥಿಕ ತಜ್ಞ ಎಂದು ಕರೆಯಲಾಗುತ್ತದೆ. ಚಾಣಕ್ಯ ಹೇಳಿದ ಸಂದೇಶ, ಸಲಹೆ, ಸೂತ್ರಗಳನ್ನು ನೀತಿ (Chanakya Niti) ಎಂದು ವಿವರಿಸಲಾಗುತ್ತದೆ. ಆಚಾರ್ಯ ಚಾಣಕ್ಯರು ಶ್ಲೋಕಗಳ (Chanakya Shlokas) ಮೂಲಕ ಜನತೆಗೆ ಹೇಳಿದ್ದಾರೆ. ರಾಜಕೀಯದ ಜೊತೆ ಜೊತೆಯಲ್ಲಿ ಸಾಮಾಜಿಕ, ಸಂಬಂಧ, ವ್ಯಾಪಾರ, ಆರೋಗ್ಯದ ಕುರಿತು ಚಾಣಕ್ಯ ನೀತಿಯಲ್ಲಿದೆ. ನಿಮ್ಮ ಯಾವುದೇ ಸಮಸ್ಯೆ ಇದ್ದರೂ ಅದಕ್ಕೆ ಚಾಣಕ್ಯ ನೀತಿಯಲ್ಲಿ ಉತ್ತರ ಸಿಗುತ್ತದೆ ಎಂದು ತಜ್ಞರು ಹೇಳುತ್ತಾರೆ.
ಪ್ರಖ್ಯಾತ ತತ್ವಜ್ಞಾನಿ ಮತ್ತು ಆರ್ಥಿಕ ತಜ್ಞ ಚಾಣಕ್ಯನ ಮಾತುಗಳು ಇಂದಿನ ಜನರ ಜೀವನಕ್ಕೂ ಹೊಂದಾಣಿಕೆ ಆಗುತ್ತವೆ. ಪ್ರಸ್ತುತ ಜೀವನ ಮತ್ತು ನಡವಳಿಕೆಗಳ ಬಗ್ಗೆ ಚಾಣಕ್ಯ ನೀತಿಯಲ್ಲಿ ಹೇಳಲಾಗಿದೆ. ಚಾಣಕ್ಯ ನೀತಿಯಲ್ಲಿ ಗಂಡ-ಹೆಂಡತಿ ಸಂಬಂಧ ಹೇಗಿರಬೇಕು? ಲೈಂಗಿಕ ಜೀವನದ ಕುರಿತ ಸಲಹೆಗಳನ್ನು ಚಾಣಕ್ಯ ನೀತಿಯಲ್ಲಿ ವಿವರಿಸಲಾಗಿದೆ, ಚಾಣಕ್ಯ ನೀತಿಯಲ್ಲಿ ಪುರುಷರ ಲೈಂಗಿಕ ಜೀವನ ಅಂದ್ರೆ ವೀರ್ಯ ವೃದ್ಧಿಗೆ ಏನು ಮಾಡಬೇಕು ಎಂದು ಹೇಳಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.
ವೀರ್ಯ ವೃದ್ಧಿ ಕುರಿತ ಶ್ಲೋಕ
ಶಾಕೇನ ರೋಗಾ ವರ್ಧಂತೇ ಪಯಸಾ ವರ್ಧತೇ ತನುಃ|
ಘೃತೇನ ವರ್ಧತೇ ವೀರ್ಯಂ ಮಾಸಾನ್ಮಾಸುಂ ಪ್ರವರ್ಧತೇ ||
ವೇಶ್ಯೆಯರು ಇವರನ್ನು ಶತ್ರುಗಳಂತೆ ಕಾಣ್ತಾರೆ; ಯಾಕೆ ಗೊತ್ತಾ? ಚಾಣಕ್ಯ ನೀತಿಯಲ್ಲಿದೆ ವಿವರ
ಶ್ಲೋಕದ ಅರ್ಥ
ಸಸ್ಯಾಹಾರದ ಸೇವನೆಯಿಂದ ರೋಗ ಉಲ್ಭಣಿಸುತ್ತವೆ. ಶಾರೀರಿಕವಾಗಿ ಸದೃಢರಾಗಲು, ವೀರ್ಯ ವೃದ್ಧಿಗೆ ತುಪ್ಪ ಮತ್ತು ಮಾಂಸ ಸೇವನೆಯಿಂದ ದೇಹದ ಮಾಂಸಖಂಡಗಳ ವೃದ್ಧಿಯಾಗುತ್ತದೆ.
ಶ್ಲೋಕದ ವಿವರಣೆ
ಸಸ್ಯಾಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ಸಸ್ಯಾಹಾರ ನೇರವಾಗಿ ಭೂಮಿಯಿಂದ ಸಿಗುವ ಆಹಾರ ಪದಾರ್ಥವಾಗಿದೆ. ಆದ್ದರಿಂದ ತರಕಾರಿಗಳನ್ನು ಶುಚಿಯಾಗಿ ಸ್ವಚ್ಛಗೊಳಿಸಿ ಸೇವಿಸಬೇಕು. ಇಲ್ಲವಾದ್ರೆ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇರುತ್ತದೆ. ಜನರು ಮಳೆಗಾಲದಲ್ಲಿ ಸೊಪ್ಪು ಸೇವನೆ ಬಳಕೆ ಕಡಿಮೆ ಮಾಡುತ್ತಾರೆ. ಅದೇ ರೀತಿ ದೈಹಿಕವಾಗಿ ಬಲಿಷ್ಠರಾಗಲು ಹಾಲು ಕುಡಿಯಬೇಕು. ಹಿಂದಿನ ಕಾಲದಲ್ಲಿ ಸೇನೆಯಲ್ಲಿರುವ ಸಿಬ್ಬಂದಿಗೆ ಕಡ್ಡಾಯವಾಗಿ ಹಾಲು ನೀಡಲಾಗುತ್ತಿತ್ತು. ಪೈಲ್ವಾನ್‌ಗಳ ಆಹಾರದಲ್ಲಿ ಹಾಲಿಗೆ ಮೊದಲ ಆದ್ಯತೆ ನೀಡಲಾಗುತ್ತಿತ್ತು.
ಚಾಣಕ್ಯ ನೀತಿ: ಹೆಂಡತಿ ತನ್ನ ಪತಿಗೆ ಎಂದಿಗೂ ಈ ವಿಷಯಗಳನ್ನು ಹೇಳಿಕೊಳ್ಳಬಾರದು!
ಪುರುಷರ ಲೈಂಗಿಕ ಆರೋಗ್ಯದ ಕುರಿತು ಮೇಲಿನ ಶ್ಲೋಕದಲ್ಲಿ ಉಲ್ಲೇಖಿಸಲಾಗಿದೆ. ಪುರುಷರು ಆಹಾರದಲ್ಲಿ ತುಪ್ಪ ಬಳಕೆ ಮಾಡಬೇಕು. ತುಪ್ಪ ಬಳಸೋದರಿಂದ ವೀರ್ಯದ ವೃದ್ಧಿಯಾಗುತ್ತದೆ. ತುಪ್ಪ ಹಲವು ಆರೋಗ್ಯಕರ ಲಾಭಗಳನ್ನು ಹೊಂದಿದೆ. ಆರೋಗ್ಯ ತಜ್ಞರು ಸಹ ತುಪ್ಪ ಸೇವನೆಗೆ ಸಲಹೆ ನೀಡುತ್ತಾರೆ. ದೇಹದ ಮಾಂಸಖಂಡಗಳ ವೃದ್ಧಿಗೆ ಮಾಂಸ ಸೇವನೆಗೂ ಆಚಾರ್ಯ ಚಾಣಕ್ಯ ಸಲಹೆ ನೀಡುತ್ತಾರೆ. ಸಸ್ಯಾಹಾರದ ಜೊತೆಯಲ್ಲಿಯೂ ಮಾಂಸಾಹಾರ ಸೇವನೆಯ ಪ್ರಾಮುಖ್ಯತೆಯ ಬಗ್ಗೆಯೂ ಉಲ್ಲೇಖಿಸಿದ್ದಾರೆ.