ಏನೋ ಕಳೆದುಕೊಂಡ ಭಾವವೇ? ಮನೆ ಹೀಗಿಟ್ಟಕೊಂಡ್ರೆ ಸರಿ ಹೋಗುತ್ತೆ...

By Web Desk  |  First Published Jun 28, 2019, 1:33 PM IST

ಮನೆಗೆ ಬಂದೊಡನೆ ಕೆಲವೊಂದು ವಿಚಿತ್ರ ಭಾವ, ಏನೋ ಕಳೆದುಕೊಂಡಂಥ ನೋವು ಕಾಡುತ್ತದೆ. ಇದಕ್ಕೆ ಕಾರಣ ಮನೆಯಲ್ಲಿನ ನಕಾರಾತ್ಮಕ ಶಕ್ತಿ. ಆದುದರಿಂದ ಮನೆಯ ನೆಗೆಟಿವ್ ಎನರ್ಜಿ ದೂರ ಮಾಡಲು ಪಾಲಿಸಿ ಈ ಫೆಂಗ್ ಶುಯಿ  ಯಾವತ್ತಾದರೂ ಮನೆಗೆ ಬಂದು ಮನಸ್ಸು ಉದಾಸೀನವಾಗಿದೆಯೇ? ಅಥವಾ ಮೂಡ್ ಆಫ್ ಆಗುವುದು ಅಥವಾ ಬೇಸರವಾಗಿರುವುದು ಇದೆಯೇ? 


ಕಾರಣ ಇಲ್ಲದೆ ಹೀಗೆ ಆಗಲು ಮನೆಯಲ್ಲಿರುವ ನಕಾರಾತ್ಮಕ ಶಕ್ತಿ. ಇದರ ಪ್ರಭಾವ ಪರಿವಾರದ ಸದಸ್ಯರ ಮೇಲೂ ಬಿದ್ದಿರುತ್ತೆ. ನಿಮ್ಮ ಮನೆಯಲ್ಲಿ ಇಂಥ ಸಮಸ್ಯೆ ಕಾಡಲು ಆರಂಭವಾದರೆ ಫೆಂಗ್ ಶುಯಿಯನ್ನು ಅನುಸರಿಸಿ ನೆಗೆಟಿವ್ ಎನರ್ಜಿ ದೂರ ಮಾಡಿ. 

ಧನ ಲಾಭ ತರೋ ಫೆಂಗ್ ಶ್ಯೂ ಗಿಡಗಳಿವು...

Tap to resize

Latest Videos

undefined

- ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾದರೆ, ಕೋಣೆಯ ಮೂಲೆಯಲ್ಲಿ ಸ್ವಲ್ಪ ಉಪ್ಪನ್ನು ತಟ್ಟೆಯಲ್ಲಿ ಹಾಕಿಡಿ. ಎರಡು ದಿನಕ್ಕೊಮ್ಮೆ ಈ ಉಪ್ಪು ಬದಲಾಯಿಸಿ. ಅಲ್ಲದೆ ಹೊರಗೆ ಬಿಸಾಕಿ. 

- ಮನೆಯ ಪ್ರತಿ ಕೋಣೆಯನ್ನೂ ಉಪ್ಪು ನೀರಿನಿಂದ ಒರೆಸಿ ಕ್ಲೀನ್ ಮಾಡಿ. ಫೆಂಗ್ ಶುಯಿ ಪ್ರಕಾರ ಪ್ರತಿದಿನ ಇದನ್ನು ಮಾಡಿದರೆ ನಕಾರಾತ್ಮಕ ಶಕ್ತಿ ಕಡಿಮೆಯಾಗುತ್ತದೆ. 

- ಮನೆಯಲ್ಲಿ ಚೆನ್ನಾಗಿ ಗಾಳಿ ಬರುವೆಡೆ ವಿಂಡ್ ಚೈಮ್ ಹಾಕಿ. ಇದರಿಂದ ವಿಂಡ್ ಚೈಮ್ ಶಬ್ದ ಮಾಡಬೇಕು. ಇದನ್ನು ಮುಖ್ಯ ದ್ವಾರ ಅಥವಾ ಕಿಟಕಿ ಬಳಿ ಇಟ್ಟರೆ ಉತ್ತಮ. ಇದರ ಸದ್ದಿನಿಂದ ಮನೆಯೊಳಗೆ ನಕಾರಾತ್ಮಕ ಶಕ್ತಿ ಪ್ರವೇಶಿಸುವುದಿಲ್ಲ. ಅಲ್ಲದೆ ಮನಸು ಪ್ರಸನ್ನವಾಗಿರುತ್ತದೆ. 

ಜಗಳ ಆಡೋದ್ ಬಿಟ್ಹಾಕಿ, ಚೆನ್ನಾಗಿ ಲೈಫ್ ಲೀಡ್ ಮಾಡಲು ಹೀಗ್ ಮಾಡಿ!

- ಮನೆಯನ್ನು ಸ್ವಚ್ಛವಾಗಿಡಲು ಪ್ರಯತ್ನಿಸಿ. ಅವ್ಯವಸ್ಥಿತವಾಗಿರುವ ವಸ್ತುಗಳನ್ನು ಸರಿಯಾಗಿ ಜೋಡಿಸಿಡಿ. 

- ಟಾಯ್ಲೆಟ್‌ನಿಂದ ಹೊರಹೊಮ್ಮುವ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲು ಟಾಯ್ಲೆಟ್‌ನಲ್ಲಿ ಒಂದು ಗಾಜಿನ ತಟ್ಟೆಯಲ್ಲಿ ಸಮುದ್ರ ಉಪ್ಪು ಹಾಕಿಡಿ. ಇದು ನಕಾರಾತ್ಮಕ ಶಕ್ತಿಯನ್ನು ತನ್ನೆಡೆಗೆ ಸೆಳೆಯುತ್ತದೆ. 

- ಕೆಟ್ಟ ಶಕ್ತಿಯನ್ನು ದೂರ ಮಾಡಲು ಬೆಳಗ್ಗೆ ಸಂಜೆ ಮನೆಯಲ್ಲಿ ಸುಗಂಧವಾದ ಅಗರಬತ್ತಿ ಹಚ್ಚಿಡಿ. ಅಗರಬತ್ತಿಯ ಪರಿಮಳ ಪವಿತ್ರವಾದುದು. ಇದರಿಂದ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ. 

- ಸಿಂಗಿಂಗ್ ಬೌಲ್ಸ್, ಕ್ರಿಸ್ಟಲ್ ಸಿಂಗಿಂಗ್ ಬೌಲ್ಸ್, ಫೂ ಡಾಗ್ಸ್ ಮೊದಲಾದ ಫೆಂಗ್ ಶುಯಿ ವಸ್ತುಗಳನ್ನು ಹಾಕಿ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುವಂತೆ ಮಾಡಿ. 

ಬ್ಯುಸಿನೆಸ್‌ನ ಶ್ರೇಯಸ್ಸಿಗೆ ಆಫೀಸಲ್ಲಿರಲಿ ಇದು!

click me!