ಪ್ರಲೋಭನೆಗಳೊಡ್ಡಿ ಪರೀಕ್ಷಿಸುವ ದೇಗುಲಗಳಿವು!

By Web Desk  |  First Published Jul 20, 2019, 3:45 PM IST

ಯಾರಾದರೂ ಸ್ವಲ್ಪ ಶಾಸ್ತ್ರಸಂಪ್ರದಾಯದ ಮಾತನಾಡಿದರೆ ಅಡಗೂಲಜ್ಜಿ ಕಾಲದವನು ಎನ್ನುತ್ತೇವೆ. ಆದರೆ, ನಮ್ಮ ದೇಶ ಆಗಲೇ ಎಷ್ಟು ಸಮಕಾಲೀನವಾಗಿತ್ತು, ಅಡಗೂಲಜ್ಜಿ ಕಾಲದಲ್ಲೇ ಸೆಕ್ಸ್ ಎಂಬುದು ಎಷ್ಟು ಸಾಮಾನ್ಯವಾದ ವಿಷಯವಾಗಿತ್ತು ಎಂಬುದನ್ನು ತಿಳಿದುಕೊಳ್ಳಬೇಕೆಂದರೆ ಈ ದೇವಾಲಯಗಳಿಗೆ ಭೇಟಿ ನೀಡಿ. 


ವಾತ್ಸಾಯನ ಹಾಗೂ ಆತನ ಕಾಮಸೂತ್ರ ಹುಟ್ಟಿದ್ದು ಭಾರತದಲ್ಲಿಯೇ ಆದರೂ ನಮ್ಮ ದೇಶ ಸಂಪ್ರದಾಯವಾದಿ ಎನಿಸಿಕೊಂಡಿರುವುದು ಮಾತ್ರ ವಿಪರ್ಯಾಸ. ಕಾಮಸೂತ್ರದ ಮಾತು ಹೋಗಲಿ, ಇಲ್ಲಿನ ಜನಸಂಖ್ಯೆಯೇ ಹೇಳುತ್ತದೆ ನಮ್ಮ ಸಂಪ್ರದಾಯವಾದತನ ಎಂಥದ್ದು ಎಂದು! ತಮಾಷೆ ಮಾತು ಬಿಡಿ, ಕೆಲ ಶತಮಾನಗಳ ಹಿಂದಿನವರೆಗೂ ಭಾರತದಲ್ಲಿ ಕಾಮ ಅಷ್ಟೊಂದು ಹುಶ್ ಹುಶ್ ವಿಷಯವಾಗಿರಲಿಲ್ಲ. ಇದಕ್ಕೆ ಕಾಮಪ್ರಚೋದಕ ಶಿಲೆಗಳ ಗೋಡೆಗಳಿಂದ ನಿರ್ಮಿತವಾದ ನಮ್ಮ ದೇಶದ ಕೆಲ ದೇವಾಲಯಗಳೇ ಸಾಕ್ಷಿ. ಇಷ್ಟಕ್ಕೂ ದೇವಾಲಯದಂಥ ಪವಿತ್ರ ಸ್ಥಳಗಳಲ್ಲಿ ನಾವು ಗುಪ್ತ್ ಗುಪ್ತ್ ಆಗಿ ಮಾತನಾಡುವ ವಿಷಯ ಖುಲ್ಲಂಖುಲ್ಲಾ ಆಗಿರುವುದು ಏಕೆ? ನಿಜವೆಂದರೆ, ಸೆಕ್ಸ್ ಕುರಿತು ಜಾಗೃತಿ ಮೂಡಿಸುವುದು ಅಂದಿನ ಶಿಕ್ಷಣ ವ್ಯವಸ್ಥೆಯ ದೊಡ್ಡಭಾಗವೇ ಆಗಿತ್ತು. 

ಇತಿಹಾಸದ ಪುಟಗಳನ್ನು ಕೆದಕಿದರೆ ಈ ಕುರಿತ ಹತ್ತು ಹಲವು ಥಿಯರಿಗಳು, ವಿವರಣೆಗಳು ಸಿಗುತ್ತವೆ. ಜನಪ್ರಿಯ ಥಿಯರಿಗಳ ಪ್ರಕಾರ, ಪವಿತ್ರವಾದ ದೇಗುಲವನ್ನು ಪ್ರವೇಶಿಸುವಾಗ ವ್ಯಕ್ತಿಯು ತನ್ನೆಲ್ಲ ದುರಾಲೋಚನೆಗಳನ್ನು ಹಾಗೂ ಲೋಭ, ಮೋಹಗಳನ್ನು ತೊರೆದು ಒಳಗೆ ಹೋಗಬೇಕು. ಇಂಥ ಆಸೆಗಳನ್ನು ದೂರವಿಡುವುದು ಹೇಗೆ ಎಂಬುದನ್ನು ವ್ಯಕ್ತಿಯು ಕಲಿತುಕೊಳ್ಳಬೇಕು. ಅದೇ ಕಾರಣಕ್ಕೆ ಈ ಕಾಮಶಿಲೆಗಳು ಕೆಲ ಪ್ರಮುಖ ದೇವಸ್ಥಾನದ ಹೊರಗೋಡೆಯಲ್ಲಿ ಮಾತ್ರ ಇವೆಯೇ ಹೊರತು ಒಳಗೆ ಇಲ್ಲ. ಇದು ಜನರು ತಮ್ಮ ಕಾಮಾಂಕ್ಷೆಗಳನ್ನು ಹೊರಬಿಟ್ಟು ಒಳಬರಬೇಕೆಂದು ಸೂಚಿಸುತ್ತದೆ. ಅಲ್ಲದೆ, ಯಾವುದೇ ಪ್ರಚೋದನೆಗೂ ವ್ಯಕ್ತಿ ಮಣಿಯಲಾರ ಎಂಬುದನ್ನು ಪರೀಕ್ಷಿಸುವ ಕೆಲಸವೂ ಹೌದು. ಇಂಥ ಎರೋಟಿಕ್ ಕೆತ್ತನೆಗಳನ್ನು ಹೊಂದಿದ ಕೆಲ ಮುಖ್ಯ ದೇವಾಲಯಗಳನ್ನೊಮ್ಮೆ ಸುತ್ತಾಡಿ ಬರೋಣವೇ?

Tap to resize

Latest Videos

ಖಜುರಾಹೋ ದೇಗುಲ, ಮಧ್ಯಪ್ರದೇಶ

ನೀವು ಅಲ್ಲಿ ಇಲ್ಲಿ ಈ ಬಗ್ಗೆ ಕೇಳಿ ಇಂಟರ್ನೆಟ್‌ನಲ್ಲಿ ಸೀಕ್ರೆಟ್‌ ಆಗಿ ತಡಕಾಡಿರಬಹುದಾದ ದೇವಾಲಯವಿದು. ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ಖಜುರಾಹೋ, ತನ್ನ ಕಾಮಪ್ರಚೋದಕ ಕಲ್ಲುಗಳಿಂದಲೇ ಜಗತ್ಪ್ರಸಿದ್ಧಿ. ಚಾಂಡೇಲರ ಆಳ್ವಿಕೆಯ ಕಾಲದಲ್ಲಿ(900-1130 ಎಡಿ) ನಿರ್ಮಿತವಾದ ದೇವಾಲಯದ ಗೋಡೆಗಳಲ್ಲಿ ನೂರಾರು ವಿವಿಧ ಸೆಕ್ಷುಯಲ್ ಪೊಸಿಶನ್‌ಗಳಿವೆ. ಬಹುತೇಕ ಶಿಲೆಗಳು ಮನುಷ್ಯನ ದೈನಂದಿನ ಬದುಕನ್ನು ಬಿಂಬಿಸುತ್ತವೆ. ಉದಾಹರಣೆಗೆ ಮಡಿಕೆ ಮಾಡುವುದು, ಮೇಕಪ್ ಮಾಡಿಕೊಳ್ಳುತ್ತಿರುವ ಯುವತಿ, ಸಂಗೀತ ನುಡಿಸುತ್ತಿರುವವರು, ಪುರಾಣದ ಕತೆಗಳು... ಇದರ ಭಾಗವಾಗಿಯೇ ಕಾಮದ ಶಿಲೆಗಳು ಕೂಡಾ ಕೆತ್ತನೆಯಾಗಿವೆ ಎಂದು ನಂಬಲಾಗಿದೆ. 

ಮದ್ಯ ನೇವೇದ್ಯದೊಂದಿಗೆ ಸತ್ತವರ ಬೂದಿಯಿಂದಲೇ ಜ್ಯೋತಿರ್ಲಿಂಗಕ್ಕೆ ಅಭಿಷೇಕ...

ಮಾರ್ಕಂಡೇಶ್ವರ ದೇವಾಲಯ, ಮಹಾರಾಷ್ಟ್ರ

ಈ ದೇಗುಲ ಕುರಿತ ನಂಬಿಕೆಯೇ ವಿಚಿತ್ರವಾಗಿದೆ. ಒಂದು ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಈ ದೇವಾಲಯ ಎದ್ದು ನಿಂತಿತ್ತೆಂದೂ, ಆದ್ದರಿಂದ ಇದನ್ನು ರಾಕ್ಷಸರು ನಿರ್ಮಿಸಿದರೆಂದೂ ನಂಬಲಾಗುತ್ತದೆ. ಈ ದೇಗುಲದ ಗೋಡೆಗಳಲ್ಲಿ ಜೋಡಿಯೊಂದು ಓರಲ್ ಸೆಕ್ಸ್ ನಡೆಸುತ್ತಿರುವ ಶಿಲಾಕೆತ್ತನೆ ಬಹುತೇಕರ ಹುಬ್ಬೇರಿಸುವಂತೆ ಮಾಡಿದೆ. 

ಉರಗದೊಂದಿಗೇ ಸಮರದ ಜೀವನ ನಡೆಸೋ ಗ್ರಾಮವಿದು!

ಸೂರ್ಯ ದೇವಸ್ಥಾನ, ಒರಿಸ್ಸಾ

ಈ ಪ್ರಖ್ಯಾತ ದೇವಾಲಯದ ಗೋಡೆಗಳು ಬಹಳಷ್ಟು ಲೈಂಗಿಕ ಭಂಗಿಗಳನ್ನು ಹೊತ್ತ ಶಿಲಾಕೆತ್ತನೆಗಳಿಂದ ಕೂಡಿದ್ದು, ಬಹುಸಂಗಾತಿಗಳೊಡನೆ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿರುವ, ಸಲಿಂಗಕಾಮಿಗಳ ಕುರಿತ ಕೆತ್ತನೆಗಳೂ ಕೂಡಾ ಇವೆ. ಇದನ್ನು ಗಮನಿಸಿದರೆ ಬಹಳ ಶತಮಾನಗಳ ಹಿಂದೆಯೇ ಅವೆಲ್ಲವೂ ಸಾಮಾನ್ಯ ಸಂಗತಿಯಾಗಿದ್ದವೆಂದು ತೋರುತ್ತದೆ. ಈ ದೇಗುಲದ ಶಿಲೆಗಳ ವೆರೈಟಿ ನೋಡಿದರೆ ಖಜುರಾಹೋಗೆ ಇದು ಖಂಡಿತಾ ದೊಡ್ಡ ಪ್ರತಿಸ್ಪರ್ಧಿ ಎಂದೇ ಹೇಳಬಹುದು. 

ವಿರೂಪಾಕ್ಷ, ಕರ್ನಾಟಕ

ವಿಶ್ವ ಪಾರಂಪರಿಕ ತಾಣ ಎನಿಸಿಕೊಂಡಿರುವ ಹಂಪಿಯ ವಿರೂಪಾಕ್ಷ ದೇವಾಲಯದ ಹೊರಗೋಡೆಗಳು ಕೂಡಾ ಎರೋಟಿಕ್ ಕೆತ್ತನೆಗಳಿಗೆ ಪ್ರಸಿದ್ಧಿ ಪಡೆದಿದೆ. ತುಂಗಭದ್ರಾ ನದಿಯ ತಟದಲ್ಲಿರುವ ಈ ಪುರಾತನ ದೇವಾಲಯದಲ್ಲಿ ಇಂದಿಗೂ ಪೂಜೆ ನಡೆದುಕೊಂಡು ಬರುತ್ತಿದೆ. ಇಲ್ಲಿ ಹಲವಾರು ಸುಂದರ ಎರೋಟಿಕ್ ಕೆತ್ತನೆಗಳಿದ್ದು, ಅವುಗಳಲ್ಲಿ ಬಹಳ ಜನಪ್ರಿಯವಾದುದು, ನಗ್ನ ಮಹಿಳೆಯತ್ತ ಸುತ್ತಲೂ ಇರುವ ಜನರು ಮೆಚ್ಚುಗೆಯ ನೋಟ ಹರಿಸಿರುವ ಶಿಲಾಕಲೆ.

ದೇಗುಲದ ವಿಶೇಷ ಪ್ರಸಾದ..ದೇವಲೋಕದ ದೈವೀ ಅನುಬಂಧ.. 

ಭೋರಾಂಡಿಯೋ, ಚತ್ತೀಸ್‌ಘಡ

ಈ ದೇವಾಲಯದ ಕಲ್ಲುಗಳ ಮೇಲಿರುವ ಎರೋಟಿಕ್ ಕಾರ್ವಿಂಗ್ಸ್‌ಗಳನ್ನು ನೋಡಿ, ಇದನ್ನು 'ಚತ್ತೀಸ್‌ಘಡದ ಖಜುರಾಹೋ' ಎಂದೇ ಕರೆಯಲಾಗುತ್ತದೆ. ತಾಂತ್ರಿಕ ಅಭ್ಯಾಸದಲ್ಲಿ ತೊಡಗಿದ್ದ ರಾಜರುಗಳು ಈ ದೇವಾಲಯವನ್ನು ನಿರ್ಮಿಸಿದರೆನ್ನಲಾಗುತ್ತದೆ. ಇದು 4 ದೇಗುಲಗಳ ಸಮೂಹವಾಗಿದ್ದು, ಕಲ್ಲಿನಲ್ಲಿ ಕಾವ್ಯದ ಕೆತ್ತನೆಗೆ ಫೇಮಸ್ ಆಗಿದೆ. 

click me!