ಮದ್ಯ ನೇವೇದ್ಯದೊಂದಿಗೆ ಸತ್ತವರ ಬೂದಿಯಿಂದಲೇ ಜ್ಯೋತಿರ್ಲಿಂಗಕ್ಕೆ ಅಭಿಷೇಕ...
ನೀವು ಯಾವುದೇ ದೇವಾಲಯದಲ್ಲಾದರೂ ಸತ್ತವರ ಬೂದಿಯಿಂದ ದೇವರಿಗೆ ಅಭಿಷೇಕವನ್ನು ಮಾಡುವ ಬಗ್ಗೆ ಕೇಳಿದ್ದೀರಾ? ಗೊತ್ತು, ಕಲ್ಪನೆಗೆ ನಿಲುಕದ್ದು ಇದು. ಆದರೆ, ಅಂಥದ್ದೊಂದು ದೇವಾಲಯವಿದೆ.
ಎಲ್ಲಿ?
ಶಿವ ಸ್ಮಶಾನ ವಾಸಿ. ಸತ್ತವರನ್ನು ಸುಡುವ ಈ ಜಾಗಕ್ಕೂ, ಶಿವನಿಗೂ ಆವಿನಾಭಾವ ಸಂಬಂಧ. ಇಂಥ ಸತ್ತವರ ಬೂದಿಯೇ ಶಿವನಿಗೆ ಪ್ರಿಯವಾದ ಭಸ್ಮ. ಇದೇ ಶ್ರೀ ಮಹಾಕಾಳೇಶ್ವರಿನೂ ಅಚ್ಚುಮೆಚ್ಚು. ಮಧ್ಯಪ್ರದೇಶದ ಉಜ್ಜಯಿನಿ ಜಿಲ್ಲೆಯ ಜ್ಯೋತಿರ್ಲಿಂಗದ ವಿಶೇಷವೂ ಹೌದು.
ಉಜ್ಜಯನಿ ಬಹಳ ಪುರಾತನವಾದ ಐತಿಹಾಸಿಕ ಮಹತ್ವ ಪಡೆದ ನಗರ. ಅದು ಕ್ಷಿಪ್ರಾನದಿಯ ದಡದ ಮೇಲಿದೆ. ಈ ದೇವಾಲಯ ರುದ್ರಸಾಗರ ಸಮೀಪದಲ್ಲಿದೆ. ಕ್ಷಿಪ್ರ ನದಿ ತೀರದಲ್ಲಿ ಮಂತ್ರ ಶಕ್ತಿಯಿಂದ ಉದ್ಭವಿಸಿದ ಏಕೈಕ ಸ್ವಯಂಭೂ ಜ್ಯೋತಿರ್ಲಿಂಗವಿದು. ಆಲಯದ ಮುಖ್ಯದ್ವಾರ ದಕ್ಷಿಣಾಭಿಮುಖವಾಗಿ, ಐದು ಮಹಡಿಯಲ್ಲಿರುವ ಈ ಆಲಯದಲ್ಲಿ ಪ್ರಾತಃಕಾಲದಲ್ಲಿ ಭಸ್ಮಾಭಿಷೇಕವೂ ಆಗುತ್ತದೆ. ಇಲ್ಲಿನ ಕಾಲಭೈರವನಿಗೆ ಮದ್ಯದ ನೈವೇದ್ಯವೂ ಸಮರ್ಪಿತವಾಗುತ್ತದೆ.
ರಾಕ್ಷಸಿ ಹಿಡಿಂಬಿಗೂ ಇದೆ ಮನಾಲಿಯಲ್ಲಿ ದೇವಸ್ಥಾನ!
ಈ ದೇವಾಲಯವು ಭೂಮಿ ಮೇಲೆ ಇರುವ 12 ಜ್ಯೋತಿರ್ಲಿಂಗಗಳಲ್ಲಿ ಒಂದು. ಲಕ್ಷಾಂತರ ವರ್ಷಗಳಿಂದ ಇಲ್ಲಿ ಶಿವನನ್ನು ಪೂಜಿಸಲಾಗುತ್ತದೆ. ಇಲ್ಲಿನ ಮಹಾಕಾಳೇಶ್ವರನ ಮುಖ ದಕ್ಷಿಣಕ್ಕೆ ಮುಖ ಮಾಡಿರುವುದರಿಂದ ಈ ದೇವನನ್ನು ದಕ್ಷಿಣ ಮೂರ್ತಿ ಎಂದೂ ಕರೆಯುತ್ತಾರೆ. ಈ ರೀತಿಯ ಮೂರ್ತಿಯು ಬೇರೆ ಯಾವ ಶಿವಾಲಯದಲ್ಲಿಯೂ ಇಲ್ಲ.
ತರಕಕ್ಕೆ ನಿಲುಕದ ಅದ್ಭುತ :
ಯುಗ ಯುಗಗಳಿಂದಲೂ ವಿಜ್ಞಾನಕ್ಕೂ ಉತ್ತರಿಸಲು ಆಗದಂಥ ಘಟನೆಯೊಂದು ಇಲ್ಲಿ ನಡೆಯುತ್ತಿದೆ. ಪ್ರತಿ ವರ್ಷ ಮಳೆಗಾಲಕ್ಕೂ ಮುನ್ನ ಇಲ್ಲಿ ಪರ್ಜನ್ಯ ಹೋಮ ನಡೆಯುತ್ತಿದೆ. ಇದು ಪೂರ್ತಿಯಾದ ಕ್ಷಣದಲ್ಲಿಯೇ
ಆಕಾಶದಲ್ಲಿ ಕಪ್ಪಗಿನ ಮೋಡ ಕವಿದು, ಧಾರಾಕಾರ ಮಳೆಯಾಗುತ್ತದೆ. ಈ ಮಹಾ ಅದ್ಭುತವು ಹೇಗೆ ನಡೆಯುತ್ತದೆ ಎಂಬುದು ಇಂದಿಗೂ ರಹಸ್ಯವಾಗಿಯೇ ಉಳಿದಿದೆ.
ಭಸ್ಮರಾತಿ ಮತ್ತೊಂದು ವಿಶೇಷ...
ಈ ದೇವಾಲಯದಲ್ಲಿ ನಡೆಯುವ ಮತ್ತೊಂದು ವಿಶೇಷವೆಂದರೆ 'ಭಸ್ಮಾರತಿ'. ಭಸ್ಮಾರತಿ ಎಂಬ ದೇವಾಲಯವೇ ಇಲ್ಲಿದೆ. ಇದರಲ್ಲಿಯೇ ಈ ಕಾರ್ಯವನ್ನು ನಿರ್ವಹಿಸುತ್ತಾರೆ. ಸ್ಮಶಾನ ವಾಸಿಯಾದ ಶಿವನಿಗೆ ಭಸ್ಮ ಎಂದರೆ ಬಲು ಪ್ರಿಯ. ಆದುದರಿಂದ ಇಲ್ಲಿ ಅವನಿಗೆ ಭಸ್ಮದಿಂದ ಅಭಿಷೇಕ ಮಾಡುತ್ತಾರೆ. ಪ್ರತಿದಿನ ಮುಂಜಾನೆ 4 ಗಂಟೆಗೆ ಸರಿಯಾಗಿ ಭಸ್ಮಾಭಿಷೇಕ ನಡೆಯುತ್ತದೆ. ಈ ಅಭಿಷೇಕವು 2 ರೀತಿಯಲ್ಲಿರುತ್ತದೆ. ಮೊದಲನೆಯದು ಸಗಣಿಯನ್ನು ಒಣಗಿಸಿ ಅದನ್ನು ಬೂದಿಮಾಡಿ ಮಾಡುತ್ತಾರೆ. ಅಭಿಷೇಕ ಮಾಡುವ ಸಮಯದಲ್ಲಿ ಬಿಳಿ ವಸ್ತ್ರದಿಂದ ಶಿವನ ಮುಖವನ್ನು ಹೊದಿಸಿ, ಭಸ್ಮ ಮೂಟೆಯೊಂದಿಗೆ ಲಿಂಗದ ಸುತ್ತ ಸುತ್ತುತ್ತಾ ಭಸ್ಮಾರತಿ ಮಾಡುತ್ತಾರೆ.
ಕೇರಳದಲ್ಲಿದೆ ವಿಶ್ವದ ಅತಿ ದೊಡ್ಡ ಪಕ್ಷಿ ಶಿಲ್ಪ!
ಸ್ಮಶಾನವಾಸಿಯಾದ ಶಿವನಿಗೆ ಆಗಷ್ಟೇ ಬೆಂಕಿ ಇಟ್ಟು ಸುಟ್ಟ ಶವದ ಭಸ್ಮವನ್ನೂ ತೆಗೆದುಕೊಂಡು ಹೋಗಿ ಶಿವಲಿಂಗಕ್ಕೆ ಅಭಿಷೇಕವನ್ನು ಹತ್ತು ನಾಗಸಾಧುಗಳು ಮಾಡುತ್ತಾರೆ. ಇದರಿಂದಾಗಿಯೇ ಈ ದೇವಾಲಯವನ್ನು ಮಹಾಸ್ಮಶಾನವೆಂದೂ ಕರೆಯುತ್ತಾರೆ. ಈ ಪವಿತ್ರವಾದ ಕಾರ್ಯವನ್ನು ಯಾರು ಮಾಡುತ್ತಾರೆಯೋ ಅಂಥವರಿಗೆ ಮರುಜನ್ಮ ಇರುವುದಿಲ್ಲ ಎಂಬ ನಂಬಿಕೆ ಇದೆ. ಶಿವನನ್ನು ಇಲ್ಲಿ ನೆಲೆಸಿ 'ಭಕ್ತರನ್ನು ಹರಸು' ಎಂದು ಕೋರಿದ ಕಾರಣಕ್ಕೆ ಈ ಪ್ರದೇಶದಲ್ಲಿ ಸ್ವಯಂ ಭೂವಾಗಿ ಮಹಾಶಿವನು ನೆಲೆಸಿದನು ಎಂಬ ಕಥೆ ಪುರಾಣ ಗ್ರಂಥಗಳಲ್ಲಿದೆ.