ದಸರಾ ಮೈಸೂರಿಗಷ್ಟೇ ಅಲ್ಲ, ಊರೂರಿಗೂ!

By Web DeskFirst Published Sep 30, 2019, 9:07 AM IST
Highlights

ಮೈಸೂರು ದಸರಾದ ಆಸುಪಾಸಲ್ಲಿಯೇ ಮೈಸೂರು ಅರಸರ ಆಳ್ವಿಕೆ ಇದ್ದ ಸಣ್ಣಪುಟ್ಟಪಟ್ಟಣಗಳಲ್ಲೂ ದಸರಾ ನಡೆಯುತ್ತದೆ. ಮಡಿಕೇರಿಯ ದಸರಾ ಕೂಡ ಜನಪ್ರಿಯ. ಇಲ್ಲಿ ಶ್ರೀರಂಗಪಟ್ಟಣದ ಶ್ರೀನಿವಾಸ ಅಗ್ರಹಾರದ ದಸರಾ ಕುರಿತ ವಿವರ ಇದೆ. ಮೈಸೂರಿಗೆ ಹೋದರೆ ಇಲ್ಲಿಗೂ ಹೋಗಿ ನೋಡಿ.

ವಿಲ್.ವಿ.ನವೀನ್ ಕುಮಾರ್, ಶ್ರೀರಂಗಪಟ್ಟಣ

ಒಂಭತ್ತು ದಿನ ನಡೆಯುವ ಈ ದಸರಾ ಸಂಭ್ರಮ ನಾಡಿನ ಮನೆಮನೆಗಳ ಹಬ್ಬವಾಗಿ ಇತಿಹಾಸದಿಂದಲೂ ಬೆಳೆದುಬಂದಿದೆ. ಈ ಹಬ್ಬ ಮೊದಲು ಮೂಡಿದ್ದೇ ಹಳ್ಳಿ ವಾತಾವರಣದಿಂದ. ಹಳ್ಳಿಗಳಲ್ಲಿ ನವರಾತ್ರಿ ಹಬ್ಬವನ್ನು ಸಂ್ರಮ ಸಡಗರದಿಂದ ಆಚರಿಸಲಾಗುತ್ತೆ. ದೇಶ ವಿದೇಶದಿಂದ ಬರುವ ಪ್ರವಾಸಿಗರನ್ನು ಸೆಳೆಯಲು ಈ ಬಾರಿಯ ದಸರಾ ಸಂಭ್ರಮ ಮತ್ತಷ್ಟುಮೆರಗು ನೀಡುತ್ತಿದೆ. ಅದೂ ಸಹ ಹಳ್ಳಿಯ ಚಿತ್ರಣವನ್ನು ಕಣ್ತುಂಬಿಕೊಳ್ಳಬಹುದು. ಅದಕ್ಕಾಗಿ ಈ ಬಾರಿ ವಿಶೇಷವಾಗಿ ಹಳ್ಳಿ ದಸರಾ ಉತ್ಸವವನ್ನು ನಡೆಸಲಾಗುತ್ತಿದೆ. ಮೈಸೂರಿಗೆ ಹೋದರೆ ಈ ಹಳ್ಳಿ ಸೊಗಡನ್ನು ಅನುಭವಿಸುವುದನ್ನು ಮರೆಯದಿರಿ.

ಫಿಯರ್ ಫ್ಯಾಕ್ಟರ್: ಮೈಸೂರಿನಲ್ಲಿ ಪ್ರಥಮ ಸಾಹಸ ಕ್ರೀಡೆ ಉದ್ಯಾನವನ

ಎಲ್ಲಿ ಹೇಗೆ ನಡೆಯುತ್ತೆ ಈ ಹಳ್ಳಿ ದಸರಾ

ದಸರಾ ಎನ್ನುವುದು ಕೇವಲ ಪಟ್ಟಣಕ್ಕೆ ಸೀಮಿತವಾಗದೆ, ಹಳ್ಳಿಳ ದಸರಾ ಸಂಭ್ರಮವನ್ನು ಪ್ರವಾಸಿಗರಿಗೆ ತೋರಿಸಲು, ಅನುಭವಿಸಲು ದಸರಾ ಉತ್ಸವ ಸಮಿತಿ ಈ ಹೊಸ ಪ್ರಯೋಗವನ್ನು ವಿಭಿನ್ನ ಹಾಗೂ ವಿಶಿಷ್ಟಶೈಲಿಯಲ್ಲಿ ಆಯೋಜಿಸಿದೆ. ಇದೇ ಮೊದಲ ಬಾರಿಗೆ ಶ್ರೀರಂಗಪಟ್ಟಣ ತಾಲೂಕಿನ ಶ್ರೀನಿವಾಸ ಅಗ್ರಹಾರದಲ್ಲಿ ನಡೆಯಲಿದೆ. ಅಕ್ಟೋಬರ್‌ 3ರಿಂದ ನಾಲ್ಕು ದಿನಗಳ ಕಾಲ ದಸರಾ ಸಂಭ್ರಮವನ್ನು ಅದ್ದೂರಿಯಾಗಿ 2 ಕೋಟಿ ವ್ಯಚ್ಚದಲ್ಲಿ ಆಚರಿಸಲಾಗುತ್ತಿದೆ.

ಹೇಗಿರುತ್ತೆ ಹಳ್ಳಿ ಹಬ್ಬ?

ಈ ಹಳ್ಳಿ ದಸರಾ ಉತ್ಸವ ಹೆಸರಿಗೆ ತಕ್ಕಂತೆ ಹಳ್ಳಿಯ ಸೊಬಗನ್ನು ಬಿಂಬಿಸುತ್ತೆ. ಅಂದರೆ ಹಳ್ಳಿಯ ಸಂಪ್ರದಾಯ, ಆಚರಣೆ, ಹಬ್ಬದ ಸಂಭ್ರಮ, ಅಲ್ಲಿಯ ಜೀವನಶೈಲಿ ಹೀಗೆ ಎಲ್ಲವನ್ನೂ ಒಳಗೊಂಡಿದೆ. ಅಷ್ಟೇ ಅಲ್ಲದೆ ಮೈಸೂರು ಮತ್ತು ಶ್ರೀರಂಗಪಟ್ಟಣ ದಸರಾಗೆ ಬರುವ ಎಲ್ಲಾ ಪ್ರವಾಸಿಗರನ್ನೂ ಶ್ರೀನಿವಾಸ ಅಗ್ರಹಾರಕ್ಕೆ ಕರೆದುಕೊಂಡು ಹೋಗಿ ಹಳ್ಳಿ ವೈಭೋಗವನ್ನು ಪರಿಚಯಿಸುವ ಉದ್ದೇಶ ಸಮಿತಿಯದು. ಅಲ್ಲಿ ಹಳ್ಳಿಯ ತೊಟ್ಟಿಮನೆಗಳು, ಭತ್ತ, ಕಬ್ಬು ಬೆಳೆಯುವುದು ಹೇಗೆ?, ಆಲೆಮನೆಗಳಲ್ಲಿ ಬೆಲ್ಲ ತಯಾರಿಸುವುದು, ಗಾಡಿ ಹೊಡೆಯುವುದು(ಎತ್ತಿನ ಬಂಡಿ), ಹಾಲು ಕರೆಯುವುದು, ಬೆಣ್ಣೆ ತೆಗೆಯುವುದು, ಗ್ರಾಮೀಣ ಅಡುಗೆ ಪದ್ಧತಿ ಮಾಹಿತಿ ನೀಡಲಾಗುತ್ತೆ.

ದಸರಾ: ಹೂಗಳಲ್ಲಿ ಮೂಡಿಬರಲಿದೆ ಚಂದ್ರಯಾನ, ಏರ್‌ ಶೋ ಮಾದರಿ..!

ರೈತಾಪಿ ವರ್ಗದ ಜನ ದುಡುಮೆಯ ಭಾಗವಾಗಿರುವ ತೆಂಗಿನ ಕಾಯಿ ಕೀಳುವುದು, ಸುಲಿಯುವ ವಿಧಾನ ತಿಳಿಸಿಕೊಡಲಾಗುತ್ತೆ ಜೊತೆಗೆ ಅನುಭವವನ್ನೂ ಪಡೆಯಬಹುದು. ಸಮೀಪದಲ್ಲಿನ ಕರೀಘಟ್ಟಕ್ಕೂ ಪ್ರವಾಸಿಗರನ್ನು ಕರೆದೊಯ್ದು ಅಲ್ಲಿನ ವೃಕ್ಷ ವೈವಿಧ್ಯ, ವನ್ಯ ಜೀವಿಗಳು ಪೌರಾಣಿಕ ಹಿನ್ನೆಲೆಯನ್ನು ತಿಳಿಸಿಕೊಡಲು ಸಿದ್ಧತೆಗಳು ಭರ್ಜರಿಯಾಗಿ ಸಾಗುತ್ತಿದೆ.

ಶ್ರೀರಂಗಪಟ್ಟಣ ಇತಿಹಾಸದಲ್ಲಿ ದಸರಾ ವೈಭವ

* ವಿಜಯನಗರ ಸಾಮ್ರಾಜ್ಯದ ನಂತರ ದಸರಾ ಉತ್ಸವ ಆರಂಭವಾದದ್ದು ಮೈಸೂರು ಒಡೆಯರ್‌ ಕಾಲದಲ್ಲಿ.

* ಮೈಸೂರು ಅರಸರ ಮೊದಲ ರಾಜಧಾನಿಯಾದ ಶ್ರೀರಂಗಪಟ್ಟಣದಲ್ಲಿ ರಾಜ ಒಡೆಯರ್‌ ಕ್ರಿ.ಶ.1610ರಲ್ಲಿ ಅಧಿಕಾರ ವಹಿಸಿಕೊಂಡ ಬಳಿಕ ದಸರಾ ಉತ್ಸವ ಆಚರಣೆಗೆ ಚಾಲನೆ ನೀಡಿದರು.

* ಸುಮಾರು 3 ಶತಮಾನಗಳ ಕಾಲ ಆಶ್ವಿಜ ಮಾಸದಲ್ಲಿ ರಂಗನಾಥಸ್ವಾಮಿ ದೇವಾಲಯದ ಬಳಿಯ ಅರಮನೆಯ ಆವರಣದಲ್ಲಿ 10ದಿನಗಳ ಕಾಲ ನಡೆಯುತ್ತಿತ್ತು.

ದಸರಾ ಆಹಾರ ಮೇಳದಲ್ಲಿ ಏಡಿ ಸಾರು, ಬಿದಿರು ಕಳ್ಳೆ ಪಲ್ಯ..!

* ಮಹಾರಾಜನೇ ಖುದ್ದು ಧಾರ್ಮಿಕ ಕೈಂಕರ್ಯದಲ್ಲಿ ಪರಿವಾರ ಸಹಿತ ಪಾಲ್ಗೊಳ್ಳುತ್ತಿದ್ದರು.

* 9 ದಿನ ಕಾರ್ಯಕ್ರಮಗಳಲ್ಲಿ ಕವಿಗೋಷ್ಠಿ, ಜಾನಪದ ಆಟೋಟಗಳು ಜರುಗುತ್ತಿದ್ದವು, ಟಗರು ಕಾಳಗ, ಗರುಡ ಬೇಟೆ, ಯಕ್ಷಿಣಿ ವಿದ್ಯೆ ಪ್ರದರ್ಶನ, ಕತ್ತಿ ಸವಾರಿ, ಕತ್ತಿಕಾಳಗ ಇತರೆ ಚಟುವಟಿಕೆಗಳು ಜರುತ್ತಿದ್ದವು.

* ವಿಜಯದಶÜಮಿಯಂದು ಅರಮನೆಯಿಂದ ರಾಜಧಾನಿಗೆ ಪೂರ್ವ ಭಾಗದಲ್ಲಿದ್ದ ಬನ್ನಿ ಮಂಟಪದವರೆಗೆ ಉತ್ಸವ ನಡೆಯುತ್ತಿತ್ತು.

* ಆನೆಯ ಮೇಲೆ ಒಡೆಯರ್‌ ದೊರೆಗಳ ಕುಲದೇವತೆ ಚಾಮುಂಡೇಶ್ವರಿ ದೇವಿಯ ಚಿನ್ನದ ವಿಗ್ರಹ ಇರಿಸಿ ಮೆರವಣಿಗೆ ಮಾಡಲಾಗುತ್ತಿತ್ತು.

* ಗಂಗಾಧರೇಶ್ವರ ದೇವಾಲಯ ಬಳಿ ಮಾರ್ಕಂಡೇಯ ಮಂಟಪ ಪೂರ್ವವಾಗಿ ರಾಜ ಬೀದಿಗಳಲ್ಲಿ ಉತ್ಸವ ನಡೆಯುತ್ತಿತ್ತು.

* ಒಡ್ಡೋಲಗ ಸಹಿತ ನಡಯುತ್ತಿದ್ದ ಉತ್ಸವಕ್ಕೆ ಒಡೆಯರ್‌ ದೊರೆಗಳು ತಮ್ಮ ರಾಜ್ಯದ ಸಾಮಂತರು ಹಾಗೂ ಪಾಳೇಗಾರರನ್ನು ಆಹ್ವಾನಿಸುತ್ತಿದ್ದರು. ಸುತ್ತ ಮುತ್ತಲಿನ ಪುರಜನರು ಉತ್ಸವ ನೋಡಲು ಆಗಮಿಸುತ್ತಿದ್ದರು.

ನವದುರ್ಗಿಯರ ಪ್ರಸಿದ್ಧ ನವದೇಗುಲಗಳು

* ಸ್ವತಃ ರಾಜರೇ ಪಟ್ಟದ ಆನೆ ಮೇಲೆ ಕುಳಿತು ಸರ್ವಾಲಂಕಾರ ಭೂಷಿತರಾಗಿ ಉತ್ಸವದ ಜತೆ ತೆರಳುತ್ತಿದ್ದರು.

ಕವಿ ಗೋವಿಂದ ವೈದ್ಯ ಕಂಡ ದಸರಾ

ಬನ್ನಿಮಂಟಪದ ಬಳಿ ಶನಿ ವೃತ್ತ (ಬನ್ನಿ ವೃತ್ತ)ದ ಕೊಂಬೆಯನ್ನು ಛೇದಿಸಿ ಬಳಿಕ ಅಂತಿಮ ವಿಧಿ ವಿಧಾನÜಗಳು ನಡೆಯುತ್ತಿದ್ದವು. ರಾಜನು ವಿಜಯದಶಮಿಯಂದು ಪಂಡಿತರು, ವಿವಿಧ ಕ್ಷೇತ್ರಗಳ ಕಲಾವಿಧರುಗಳಿಗೆ ದಾರಾಳವಾಗಿ ದಾನ, ಧರ್ಮ ಮಾಡುತ್ತಿದ್ದರು. ದೀವಟಿಗೆಯ ಬೆಳಕಿನಲ್ಲಿ ಉತ್ಸವ ಅರಮನೆಯತ್ತ ಸಾಗುತ್ತಿತ್ತು. ಹೊಗಳು ಭಟ್ಟರು, ಮಹಾರಾಜನ ಬಿರುದು ಬಾವಟಿಗಳನ್ನು ಬಣ್ಣಿಸುತ್ತಾ ಬಹುಪರಾಕ್‌ ಹೇಳುತ್ತಾ ಮುನ್ನಡೆಯುತ್ತಿದ್ದರು.

ಇತ್ತ ಅರಮನೆ ಆವರಣದಲ್ಲಿ ಉತ್ಸವದಲ್ಲಿ ಪಾಲ್ಗೊಂಡಿದ್ದ ಜನರಿಗೆ ಮೃಷ್ಟಾನ್ನ ಭೋಜನ ಏರ್ಪಡಿಸಲಾಗುತ್ತಿತ್ತು. ಆಯುಧ ಪೂಜೆಯಂದು, ಪಟ್ಟದ ಕತ್ತಿ ಇತರೆ ಪ್ರಮುಖ ಆಯುಧಗಳನ್ನು ವಿಶೇಷವಾಗಿ ಪೂಜೆಸಲ್ಲಿಸಲಾಗುತ್ತಿತ್ತು. ಕಾವೇರಿ ನದಿಗೆ ಆಯುಧಗಳನ್ನು ಕೊಂಡೊಯ್ದು ನದಿಯ ದಡದಲ್ಲಿಟ್ಟು ಪೂಜೆಸಲ್ಲಿಸಲಾಗುತ್ತಿತ್ತು. ನಂತರ ಅರಮನೆ ಪಕ್ಕದ ವಸಂತಕೊಳದಲ್ಲಿ ಮಜ್ಜನ ನಡೆಸಿ ಕಸ್ತೂರಿ, ಸಾಂಮ್ರಾಣಿ, ಪನ್ನೀರುಗಳಿಂದ ಸಿಂಪಡಿಸುತ್ತಿದ್ದರು.

ಮೈಸೂರು ದಸರಾ ಎಷ್ಟೊಂದು ಸುಂದರ! ಇವುಗಳನ್ನು ನೋಡೋದು ಮಿಸ್ ಮಾಡ್ಲೇಬೇಡಿ!

ಅರಮನೆ ಆವರಣ ಸೇರಿ ಪಟ್ಟಣವನ್ನು ತಳಿರು ತೋರಣಗಳಿಂದ ಅಲಂಕರಿಸಲಾಗುತ್ತಿತ್ತು ಎಂದು ಕವಿ ಗೋವಿಂದ ವೈದ್ಯರು ‘ಕಂಠೀರವ ನರಸರರಾಜ ವಿಜಯಂ’ ಕೃತಿಯಲ್ಲಿ ವರ್ಣಿಸಿದ್ದಾರೆ. ಕಂಠೀರವ ನರಸರಾಜರ ಕಾಲದಲ್ಲಿ ನಡೆಯುತ್ತಿದ್ದ ದಸರಾ ಆಚರಣೆಗೆ ಮಲಯಾಳ, ತಮಿಳುದೇಶ, ಮರಾಠವಾಡಗಳಿಂದಲೂ ಜನರು ಬರುತ್ತಿದ್ದರು ಎಂಬುದಕ್ಕೆ ಇತಿಹಾಸ ಕೃತಿಯಲ್ಲಿ ಉಲ್ಲೇಖವಾಗಿದೆ.

 

click me!