ಗಂಗಾಜಲದಿಂದ ಕೆಟ್ಟ ಕನಸಿಗೆ ಬೈ; ಸುಖ ಸಂಪತ್ತಿಗೆ ಹಾಯ್!

By Web DeskFirst Published Aug 16, 2019, 3:33 PM IST
Highlights

 ಹಿಂದೂ ಧರ್ಮೀಯರ ಪ್ರತಿಯೊಂದೂ ಮನೆಯಲ್ಲಿಯೂ ಗಂಗಾ ಜಲ ಇಟ್ಟುಕೊಳ್ಳುವುದು ಸಾಮಾನ್ಯ. ಮನುಷ್ಯ ಜೀವನದ ಅಂತಿಮ ಪಯಣ ಆರಂಭಿಸುತ್ತಿದ್ದಾನೆಂಬ ಸುಳಿವು ಸಿಗುತ್ತಿದ್ದಂತೆ ಗಂಗಾ ಜಲ ಬಾಯಿಗೆ ಬಿಟ್ಟರೆ ಮೋಕ್ಷ ಪ್ರಾಪ್ತಿ ಎಂಬ ನಂಬಿಕೆಯೂ ಹಿಂದೂಗಳಲ್ಲಿದೆ. ಇದರಿಂದ ವಾಸ್ತು ದೋಷವೂ ನಿವಾರಣೆಯಾಗಬಲ್ಲದು. ಹೇಗೆ?

ಹಿಂದೂ ಧರ್ಮದಲ್ಲಿ ಮಾತೃ ಸ್ಥಾನ ನೀಡಿರುವ ಗಂಗೆಯೊಂದಿಗೆ ಭಾರತೀಯರಿಗೇ ವಿಶೇಷ ಬಾಂಧವ್ಯವಿದೆ. 'ಗಂಗಾ ಸ್ನಾನ ತುಂಗಾ ಪಾನ..' ಎಂಬ ಗಾದೆಯೊಂದು ಚಾಲ್ತಿಯಲ್ಲಿದ್ದು, ಗಂಗೆಯಲ್ಲಿ ಸ್ನಾನ ಮಾಡಿದರೆ, ಮಾಡಿದ ಪಾಪವೆಲ್ಲವೂ ಪರಿಹಾರವಾಗುತ್ತದೆ ಎಂಬ ನಂಬಿಕೆ ಇದೆ. ಪಿತೃ ದೇವತೆಗಳ ದೋಷಕ್ಕೂ ಗಂಗೆಯೇ ಪರಿಹಾರ. ಈ ನೀರು ಎಲ್ಲಾ ವಸ್ತುಗಳನ್ನೂ ಶುದ್ಧ ಮಾಡುತ್ತದೆ. ಇದರಿಂದ ಯಾವೆಲ್ಲಾ ದೋಷ ಪರಿಹಾರವಾಗುತ್ತದೆ? 

ನಲ್ಲೀಲಿ ಹನಿ ನೀರು, ಪರಿಸರಕ್ಕೂ ಹಾನಿ, ಮನೆಗೂ ಅಶುಭ

ವಾಸ್ತು ದೋಷ: ಮನೆಯಲ್ಲಿ ನಿಯಮಿತವಾಗಿ ಗಂಗಾಜಲವನ್ನು ಪ್ರೋಕ್ಷಿಸಿದರೆ ವಾಸ್ತು ದೋಷ ದೂರವಾಗುತ್ತದೆ. ಸಕರಾತ್ಮಕ ಶಕ್ತಿಯೂ ಹೆಚ್ಚುತ್ತದೆ. 

ಕೆಟ್ಟ ಕನಸು: ಮಕ್ಕಳಿಗೆ ಭಯ ಬೀಳುವಂಥ ಕನಸು ಕಾಣುತ್ತಿದ್ದರೆ, ಮಲಗುವ ಮೊದಲು ಹಾಸಿಗೆ ಮೇಲೆ ಗಂಗಾ ಜಲವನ್ನು ಸಿಂಪಡಿಸಿ. ಇದರಿಂದ ಮಗು ಚೆನ್ನಾಗಿ ನಿದ್ರಿಸುತ್ತದೆ. 

ಸುಖ ಸಂಪತ್ತು: ಗಂಗಾ ಜಲವನ್ನು ಮನೆಯಲ್ಲಿಟ್ಟರೆ, ಯಾವಾಗಲೂ ಸುಖ ಸಂಪತ್ತು ನಿಮ್ಮದಾಗುತ್ತದೆ. 

ಆರೋಗ್ಯ ಭಾಗ್ಯಕ್ಕಾಗಿ ಆಮೆ ವಾಸ್ತು!

ಶಿವನಿಗೆ: ಗಂಗಾ ಜಲ ಅರ್ಪಿಸಿದರೆ ಶಿವ ಪ್ರಸನ್ನನಾಗುತ್ತಾನೆ. ಇದರಿಂದ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. 

ಮನೆಯಲ್ಲಿ ಸಮಸ್ಯೆ: ಮನೆಯಲ್ಲಿ ಸಮಸ್ಯೆಗಳು ಹೆಚ್ಚಾದರೆ ಒಂದು ತಾಮ್ರದ ಪಾತ್ರೆಯಲ್ಲಿ ಗಂಗಾ ಜಲವನ್ನು ತುಂಬಿ ಈಶಾನ್ಯ ದಿಕ್ಕಿನಲ್ಲಿಡಿ. ಮುಂಜಾನೆ ಮನೆ ಬಾಗಿಲು ತೆರೆಯುವಾಗ ಈ ಜಲವನ್ನು ಅಂಗಳಕ್ಕೆ ಪ್ರೋಕ್ಷಿಸಿ. 

ಕಿಟಕಿ ಪರದೆ ಮನೆ, ಮನಸ್ಸಿನ ಕತೆ ಹೇಳುತ್ತೆ!

click me!