ತಿರುಪತಿಯಲ್ಲಿ ಒಂದೇ ವರ್ಷಕ್ಕೆ 1451 ಕೋಟಿ ರು. ಹುಂಡಿ ಹಣ ಸಂಗ್ರಹ

By Kannadaprabha NewsFirst Published Jan 2, 2023, 12:10 PM IST
Highlights

ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಸಂಬಂಧಿಸಿದ 2022ರ ವರ್ಷದ ಅಂಕಿ ಅಂಶಗಳ ಪ್ರಕಟಣೆ ಮಾಡಿದೆ. ಈ ಪ್ರಕಾರ 2022ರ ಜನವರಿ 1 ರಿಂದ ಡಿಸೆಂಬರ್‌ 30ರ ವರೆಗೆ ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 1,451.15 ಕೋಟಿ ರು. ಹಣ ಸಂಗ್ರಹವಾಗಿದೆ.

ತಿರುಪತಿ: ಪ್ರಸಿದ್ಧ ತಿರುಪತಿ ವೆಂಕಟೇಶ್ವರ ದೇವಾಲಯದ ಆಡಳಿತ ಮಂಡಳಿಯು ದೇವಸ್ಥಾನಕ್ಕೆ ಸಂಬಂಧಿಸಿದ 2022ರ ವರ್ಷದ ಅಂಕಿ ಅಂಶಗಳ ಪ್ರಕಟಣೆ ಮಾಡಿದೆ. ಈ ಪ್ರಕಾರ 2022ರ ಜನವರಿ 1 ರಿಂದ ಡಿಸೆಂಬರ್‌ 30ರ ವರೆಗೆ ದೇವಾಲಯದ ಹುಂಡಿಯಲ್ಲಿ ಬರೋಬ್ಬರಿ 1,451.15 ಕೋಟಿ ರು. ಹಣ ಸಂಗ್ರಹವಾಗಿದೆ. ಇದು 2021ರಲ್ಲಿ ಸಂಗ್ರಹವಾಗಿದ್ದ 833 ಕೋಟಿ ರು. ಗಿಂತ ಶೇ.74ರಷ್ಟು ಹೆಚ್ಚಾಗಿದೆ ಎಂದು ಟಿಟಿಡಿ ಹೇಳಿದೆ. 2021ರಲ್ಲಿ ಕೋವಿಡ್‌ ಅಬ್ಬರದ ಕಾರಣ ಸಂಗ್ರಹ ಕುಸಿದಿತ್ತು. ಅಲ್ಲದೇ ಈ ಸಾಲಿನಲ್ಲಿ ಒಟ್ಟು 2,36,88,734 ಭಕ್ತರು ದೇವಾಲಯಕ್ಕೆ ಆಗಮಿಸಿದ್ದು 11.42 ಕೋಟಿ ಲಡ್ಡುಗಳನ್ನು ಮಾರಾಟ ಮಾಡಲಾಗಿದೆ. ಯಾತ್ರಿಕರಿಗೆ ಒಟ್ಟು 3 ಕೋಟಿಗೂ ಹೆಚ್ಚು ಅನ್ನ ಪ್ರಸಾದ ವಿತರಣೆ ಮಾಡಲಾಗಿದೆ.

ಇಂದಿನಿಂದ ವೈಕುಂಠ ದ್ವಾರ ದರ್ಶನ:

ಇಂದು ವೈಕುಂಠ ಏಕಾದಶಿ (Vaikunta Ikadashi) ಇದ್ದು, ಸರ್ವ ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಬಾರಿ ಜ.2 ರಿಂದ 11ರ ವೆರೆಗೆ ವೈಕುಂಠ ದ್ವಾರ (Vaikunta Dwara) ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಆಡಳಿತ ಮಂಡಳಿಯು ಅನೇಕ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದು ಮುಖ್ಯ ದೇವಾಲಯ (Temple) ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ವೈದ್ಯರು ಮತ್ತು ಅಂಬುಲೆನ್ಸ್‌ ಅನ್ನು ನಿಯೋಜನೆ ಮಾಡಲಾಗಿದೆ. ಭಕ್ತರಿಗೆ ನಿರಂತರವಾಗಿ ಅನ್ನ ಪ್ರಸಾದ, ಕಾಫಿ, ಟೀ, ಹಾಲು, ಮತ್ತು ಇತರ ಪಾನೀಯಗಳನ್ನು ವಿತರಿಸಲಾಗುತ್ತಿದೆ. ಹಾಗೂ ಟೋಕನ್‌ ನೀಡುವ ಕೇಂದ್ರಗಳಲ್ಲಿ ಕ್ಯೂಆರ್‌ಕೋಡ್‌ ವ್ಯವಸ್ಥೆ ಮಾಡಲಾಗಿದ್ದು ಟೋಕನ್‌ ಸ್ಕಾನ್‌ ಮಾಡುವ ಮೂಲಕ ಭಕ್ತರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವುದು ಸುಲಭವಾಗಿದೆ.

ತಿರುಪತಿ ಗರ್ಭಗುಡಿ ಮುಚ್ಚಲ್ಲ: ಮುಖ್ಯ ಅರ್ಚಕ ಸ್ಪಷ್ಟನೆ

ಅತಿ ಹೆಚ್ಚು ಭಕ್ತರ ಸೆಳೆದ ಎರಡನೇ ದೇವಾಲಯ
ತಿರುಮಲ ವೆಂಕಟೇಶ್ವರ ದೇವಸ್ಥಾನ(Tirumala Venkateshwara Temple)ವು ಅತ್ಯಂತ ಶ್ರೀಮಂತ ದೇವರೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮತ್ತು ಭಗವಾನ್ ವಿಷ್ಣುವಿನ ಅವತಾರವೆಂದು ಪ್ರಸಿದ್ಧವಾಗಿದೆ. ಈ ದೇವಾಲಯವನ್ನು ಕೃಷ್ಣದೇವರಾಯನ ಆಳ್ವಿಕೆಯಲ್ಲಿ ನಿರ್ಮಿಸಲಾಯಿತು ಮತ್ತು ದ್ರಾವಿಡ ವಾಸ್ತುಶಿಲ್ಪ ಶೈಲಿಯನ್ನು ಹೊಂದಿದೆ. ಇದು ಭಾರತದಲ್ಲಿ ಭಕ್ತರು ಹೆಚ್ಚು ಭೇಟಿ ನೀಡುವ ದೇವಾಲಯಗಳಲ್ಲಿ ಒಂದಾಗಿದೆ. OYO ಕಲ್ಚರಲ್ ಟ್ರಾವೆಲ್ ರಿಪೋರ್ಟ್ ಪ್ರಕಾರ, ಈ ವರ್ಷ ವೆಂಕಟೇಶ್ವರನ ದೇವಾಲಯವು ಭಾರತದಲ್ಲಿ ಅತಿ ಹೆಚ್ಚು ಭಕ್ತರನ್ನು ಸೆಳೆದ ದೇವಾಲಯಗಳ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ(second most visited temple in India 2022). ದೇಶಾದ್ಯಂತ ಭಕ್ತರು ಭೇಟಿ ನೀಡುವ ವಿವಿಧ ಜನಪ್ರಿಯ ಯಾತ್ರಾ ಸ್ಥಳಗಳನ್ನು ಓಯೋ ಸಂಸ್ಥೆ ಸಮೀಕ್ಷೆ ಮಾಡಿದೆ.

ಮೊದಲ ಸ್ಥಾನ ಯಾವ ದೇವಾಲಯಕ್ಕೆ?
ಸಮೀಕ್ಷೆಯಲ್ಲಿ ವಾರಣಾಸಿ ಮೊದಲ ಸ್ಥಾನದಲ್ಲಿದ್ದು, ತಿರುಮಲ ಕ್ಷೇತ್ರ ಎರಡನೇ ಸ್ಥಾನದಲ್ಲಿದೆ. ಶಿರಡಿಯ ಸಾಯಿಬಾಬಾ ದೇವಾಲಯ ಮೂರನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸರ್ಕಾರ ಕೊರೋನಾ ನಿರ್ಬಂಧಗಳನ್ನು ಸಡಿಲಿಸಿರುವುದರಿಂದ, ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಪ್ರಕಾರ, ತಿರುಪತಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಯಾತ್ರಿಕರು ಕಾಯ್ದಿರಿಸಿದ ಕೊಠಡಿಗಳಲ್ಲಿ ಶೇಕಡಾ 238ರಷ್ಟು ಹೆಚ್ಚಳವಾಗಿದೆ.

ತಿರುಪತಿ ದೇವಾಲಯದ ಗೋಪುರಕ್ಕೆ ಚಿನ್ನದ ಲೇಪನ, 6-8 ತಿಂಗಳು ದೇಗುಲ ಕ್ಲೋಸ್?

ಭಕ್ತರು ತಿರುಮಲದಲ್ಲಿರುವ ಪೀಠಾಧಿಪತಿ ವೆಂಕಟೇಶ್ವರ ಸ್ವಾಮಿಯನ್ನು ತಮ್ಮ ಕುಲದೇವರೆಂದು ಪರಿಗಣಿಸಿ ಅತ್ಯಂತ ಭಕ್ತಿಯಿಂದ ಗೌರವ ಸಲ್ಲಿಸುತ್ತಿದ್ದಾರೆ. 1950ರಿಂದೀಚೆಗೆ ಬೆಟ್ಟದ ದೇಗುಲಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ತೀವ್ರ ಏರಿಕೆ ಕಂಡುಬಂದಿದೆ. ಅಧಿಕೃತ ವರದಿಗಳ ಪ್ರಕಾರ ಪ್ರತಿದಿನ 30,000 ರಿಂದ 40,000 ಭಕ್ತರು ತಿರುಮಲಕ್ಕೆ ಭೇಟಿ ನೀಡುತ್ತಾರೆ. ಈಗ ಈ ಸಂಖ್ಯೆಯು ಪ್ರತಿನಿತ್ಯ 80,000ದಿಂದ ಒಂದು ಲಕ್ಷ ಯಾತ್ರಾರ್ಥಿಗಳು ಬೆಟ್ಟಕ್ಕೆ ಭೇಟಿ ನೀಡುವುದನ್ನು ದಾಖಲಿಸಿದೆ. ತಿರುಪತಿ ಬಾಲಾಜಿ ದೇವಸ್ಥಾನವು ಭಕ್ತರಿಂದ ಪಡೆಯುವ ದೇಣಿಗೆಯ ಕಾರಣದಿಂದಾಗಿ ಭಾರತದ ಎರಡನೇ ಶ್ರೀಮಂತ ದೇವಾಲಯವಾಗಿದೆ. ಮೊದಲ ಸ್ಥಾನದಲ್ಲಿ ಕೇರಳದ ಅನಂತ ಪದ್ಮನಾಭ ದೇವಾಲಯವಿದೆ.

ತಿರುಪತಿ ತಿಮ್ಮಪ್ಪನ ಸ್ಪೆಷಲ್‌ ದರ್ಶನ ಟಿಕೆಟ್‌ ಏಜೆಂಟರ ಪಾಲು!

click me!