Numerology:ಜನ್ಮಸಂಖ್ಯೆ 4 ಹೊಂದಿರೋರಿಗೆ ಆಸ್ತಿ ಖರೀದಿ ಯೋಗ

By Chirag DaruwallaFirst Published Jan 2, 2023, 7:03 AM IST
Highlights

ಜನವರಿ 2nd 20223 ಸೋಮವಾರ ನಿಮ್ಮ ಜನ್ಮಸಂಖ್ಯೆಗೆ ಈ ದಿನ ಹೇಗಿರಲಿದೆ? ಸಂಖ್ಯಾ ಭವಿಷ್ಯವು ನಿಮ್ಮ ಜನ್ಮ ದಿನಾಂಕದ ಆಧಾರದ ಮೇಲೆ ಈ ದಿನದ ಭವಿಷ್ಯದ ಬಗ್ಗೆ ತಿಳಿಸುತ್ತದೆ. 
 

ಸಂಖ್ಯೆ 1 (ಯಾವುದೇ ತಿಂಗಳ 1, 10, 19 ಮತ್ತು 28ರಂದು ಜನಿಸಿದ ಜನರು)
ನೀವು ಕೈಗೊಳ್ಳುವ ಕೆಲಸಗಳಲ್ಲಿ ಜಯ. ಸಮಸ್ಯೆಯನ್ನು ಶಾಂತಿ ಹಾಗೂ ಸಹನೆಯಿಂದ ಪರಿಹರಿಸಿಕೊಳ್ಳಿ. ಉದ್ಯಮ ವಿಚಾರದಲ್ಲಿ ಪ್ರಮುಖ ನಿರ್ಣಯ ಕೈಗೊಳ್ಳಲು ಇದು ಸಕಾಲ. ಒಡಹುಟ್ಟಿದವರ ಜೊತೆಗಿನ ನಿಮ್ಮ ಸಂಬಂಧ ಸುಧಾರಿಸುತ್ತದೆ. ಯಾವುದೇ ಸಮಸ್ಯೆ ಎದುರಾದರೂ ಶಾಂತಿ ಹಾಗೂ ಸಹನೆಯಿಂದ ಪರಿಹರಿಸಿಕೊಳ್ಳಿ. ಮಾತಿನಲ್ಲಿ ಕಾಲಹರಣ ಮಾಡುವ ಬದಲು ಸೂಕ್ತವಾದ ನಿರ್ಧಾರ ಕೈಗೊಳ್ಳಿ. ಹೊಸ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸಿ.

ಸಂಖ್ಯೆ 2 (ಯಾವುದೇ ತಿಂಗಳ 2, 11, 20 ಅಥವಾ 29 ರಂದು ಜನಿಸಿದ ಜನರು)
ಇಂದು ಖರ್ಚು ಹೆಚ್ಚಾಗಬಹುದು. ಇದ್ರಿಂದ ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಕಷ್ಟವಾಗಬಹುದು. ಹಳೆಯ ಸ್ನೇಹಿತನ ಭೇಟಿಯಿಂದ ಮನಸ್ಸಿಗೆ ನೆಮ್ಮದಿ. ಯಾವುದೇ ಕೆಲಸ ಮಾಡುವಾಗಲೂ ಶಾಂತವಾಗಿರಿ. ಪತಿ ಹಾಗೂ ಪತ್ನಿ ನಡುವೆ ವೈಮನಸ್ಸು ಮೂಡಬಹುದು. ಯಾವುದೇ ಕೆಲಸ ಮಾಡುವ ಮುನ್ನ ಯೋಚಿಸಿ ಮುಂದೂಡಿ ಇಡಿ.

Latest Videos

ಸಂಖ್ಯೆ 3 (ಯಾವುದೇ ತಿಂಗಳ 3, 12, 21, 30 ರಂದು ಜನಿಸಿದ ಜನರು)
ಗುರಿಗಳ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ದುಃಖದ ಘಟನೆ ನಿಮ್ಮನ್ನು ಭಾವನಾತ್ಮಕವಾಗಿ ದುರ್ಬಲಗೊಳಿಸುತ್ತದೆ. ಯಾವುದೇ ರೀತಿಯ ವಿವಾದ ಹಾಗೂ ಚರ್ಚೆಗಳಿಂದ ದೂರವಿರಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ಹಿರಿಯರೊಂದಿಗೆ ಬೆರೆತು ಅವರ ನೋವು-ನಲಿವುಗಳಿಗೆ ಸ್ಪಂದಿಸುತ್ತೀರಿ. ಹಿಂದಿನ ಕಹಿ ಘಟನೆಯೊಂದು ಮನಸ್ಸಿಗೆ ನೋವುಂಟು ಮಾಡುವ ಸಾಧ್ಯತೆ ಇದೆ. ಈ ಬಗ್ಗೆ ಯೋಚಿಸಿ.

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ 7 ದಿನ ಬಾಕಿ; ಮಹಾದಾಸೋಹಕ್ಕೆ ಭರದ ಸಿದ್ಧತೆ

ಸಂಖ್ಯೆ 4 (ಯಾವುದೇ ತಿಂಗಳ 4, 13, 22 ಅಥವಾ 31 ರಂದು ಜನಿಸಿದ ಜನರು)
ಇಂದು ಯಾರಿಗೂ ಸಾಲ ನೀಡಬೇಡಿ. ಮಕ್ಕಳು ಚಿಂತಿತರಾಗುವ ಸಾಧ್ಯತೆ. ಈ ಸಮಯದಲ್ಲಿ ಅವರಿಗೆ ನಿಮ್ಮ ಮಾರ್ಗದರ್ಶನದ ಅಗತ್ಯವಿದೆ. ನಿಮ್ಮ ವೈಯಕ್ತಿಕ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಿಕೊಳ್ಳಿ. ಯಾರ ಬಗ್ಗೆಯೂ ಹೆಚ್ಚು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವಿಲ್ಲ. ಸಮಯ ಎಲ್ಲವನ್ನೂ ಸರಿಪಡಿಸುತ್ತದೆ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಿ. 

ಸಂಖ್ಯೆ 5 (ಯಾವುದೇ ತಿಂಗಳ 5, 14, 23 ರಂದು ಜನಿಸಿದ ಜನರು)
ಅನೇಕ ದಿನಗಳಿಂದ ಚಿಂತೆಗೆ ಕಾರಣವಾಗಿದ್ದ ಸಮಸ್ಯೆ ಬಗೆಹರಿಯಲಿದೆ. ಆಲಸ್ಯದ ಕಾರಣದಿಂದ ಯಾವುದೇ ಕೆಲಸವನ್ನು ನಿರ್ಲಕ್ಷ್ಯಿಸಬೇಡಿ. ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಕಡೆಗೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ಕಠಿಣ ಪರಿಶ್ರಮ ಹಾಗೂ ಆತ್ಮವಿಶ್ವಾಸದಿಂದ ಉದ್ಯಮವನ್ನು ಮುನ್ನಡೆಸಿ. ಹೊಸ ಯೋಜನೆ ರೂಪಿಸಲು ಸೂಕ್ತವಾದ ವೇದಿಕೆ ಸಿಗಲಿದೆ. 

ಸಂಖ್ಯೆ 6 (ಯಾವುದೇ ತಿಂಗಳ 6, 15 ಅಥವಾ 24 ರಂದು ಜನಿಸಿದ ಜನರು)
ಹಣಕಾಸಿನ ತೊಂದರೆ ಕಾರಣಕ್ಕೆ ಕೆಟ್ಟ ಕಾರ್ಯಗಳತ್ತ ನೀವು ಮುಖ ಮಾಡುವ ಸಾಧ್ಯತೆ. ಹೀಗಾಗಿ ಸಕಾರಾತ್ಮಕ ಚಟುವಟಿಕೆಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ.  ನಿತ್ಯದ ಕೆಲಸ ಕಾರ್ಯಗಳು ನಿಮ್ಮ ಭೌತಿಕ ಹಾಗೂ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರಲಿವೆ. ಯಾವುದೇ ಕೆಲಸ ಕೈಗೊಳ್ಳುವ ಮುನ್ನ ಯೋಚಿಸಿ ಮುಂದಡಿ ಇಡಿ. ಹೊಸ ಕನಸುಗಳು ಮೂಡಲು ಇದು ಸಕಾಲ. 

ಸಂಖ್ಯೆ 7 (ಯಾವುದೇ ತಿಂಗಳ 7, 16 ಮತ್ತು 25 ರಂದು ಜನಿಸಿದ ಜನರು)
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವುದರಿಂದ ನಿಮ್ಮ ಗೌರವ ಹೆಚ್ಚಲಿದೆ. ಕೆಲವು ಸ್ನೇಹಿತರು ನಿಮಗೆ ತೊಂದರೆಯುಂಟು ಮಾಡುವ ಸಾಧ್ಯತೆ. ಹೀಗಾಗಿ ಅವರ ಮಾತುಗಳಲ್ಲಿ ನಂಬಿಕೆಯಿಡಬೇಡಿ. ಇದ್ರಿಂದ ಹಣಕಾಸಿನ ನಷ್ಟ ಎದುರಾಗುವ ಸಾಧ್ಯತೆ. ಉದ್ಯಮದಲ್ಲಿ ಅನುಭವ ಹೊಂದಿರುವವರ ಜೊತೆ ಸ್ವಲ್ಪ ಸಮಯ ಕಳೆಯಿರಿ. ಕೆಲಸದ ಕಾರಣಕ್ಕೆ ಕುಟುಂಬದ ಮೇಲೆ ಸಮಯ ಕೇಂದ್ರೀಕರಿಸಲು ಸಾಧ್ಯವಾಗೋದಿಲ್ಲ. 

New Year 2023: ಸಂಖ್ಯಾಶಾಸ್ತ್ರದ ಪ್ರಕಾರ ಈ ವರ್ಷ ನಿಮ್ಮ ಭವಿಷ್ಯ ಹೇಗಿದೆ ?

ಸಂಖ್ಯೆ 8 (ಯಾವುದೇ ತಿಂಗಳ 8, 17 ಮತ್ತು 26 ರಂದು ಜನಿಸಿದ ಜನರು)
ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಳ್ಳಿ. ನಕಾರಾತ್ಮಕ ವ್ಯಕ್ತಿತ್ವದ ಕೆಲವು ಜನರು ನಿಮಗೆ ತೊಂದರೆಯುಂಟು ಮಾಡಲಿದ್ದಾರೆ. ಮನೆಯ ಹಿರಿಯರ ಮಾತುಗಳಿಗೆ ಗಮನ ಕೊಡಿ. ಇದ್ರಿಂದ ಭವಿಷ್ಯದಲ್ಲಿ ನಿಮಗೆ ಲಾಭವಾಗಲಿದೆ. ನಿಮ್ಮ ಅಹಂ ಭಾವವನ್ನು ತಗ್ಗಿಸಿಕೊಳ್ಳಿ. ಎಲ್ಲರ ಬಗ್ಗೆ ಗೌರವ ಬೆಳೆಸಿಕೊಳ್ಳಿ. ಭವಿಷ್ಯಕ್ಕಾಗಿ ಹೂಡಿಕೆ ಮಾಡಲು ಯೋಚಿಸುತ್ತೀರಿ. 

ಸಂಖ್ಯೆ 9 (ಯಾವುದೇ ತಿಂಗಳ 9, 18 ಮತ್ತು 27 ರಂದು ಜನಿಸಿದ ಜನರು)
ವಿಶೇಷ ವ್ಯಕ್ತಿ ಅಥವಾ ಗೆಳೆಯನ ಭೇಟಿಯಿಂದ ಖುಷಿ. ಅವ್ಯಕ್ತ ಭಯ  ಕಾಡಬಹುದು. ಆದರೆ, ಇದು ನಿಮ್ಮ ಮನಸ್ಸಿನ ಕಲ್ಪನೆಯೇ ಆಗಿದ್ದು, ತೊಂದರೆ ಎದುರಾಗದು. ಕೆಲಸದ ಸ್ಥಳದಲ್ಲಿ ಉನ್ನತಾಧಿಕಾರಿಗಳು ಹಾಗೂ ಅನುಭವಿ ಜನರ ನೆರವು ದೊರೆಯಲಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಎಲ್ಲರೊಂದಿಗೂ ಬೆರೆತು ಖುಷಿಯಿಂದ ದಿನ ಕಳೆಯಲಿದ್ದೀರಿ. ಶುಭ ಕಾರ್ಯಗಳಲ್ಲಿ ಭಾಗಿಯಾಗುತ್ತೀರಿ. 
 

click me!