ಕೊರೋನಾ ಲಾಕ್‌ಡೌನ್ - ಪಾಕಿಸ್ತಾನದಲ್ಲಿ ಹಿಟ್ಟಿಗೂ ಹಾಹಾಕಾರ
ಕರೋನಾ ವೈರಸ್‌ನಿಂದಾಗಿ ಪಾಕಿಸ್ತಾನವೂ ಲಾಕ್‌ಡೌನ್ ಆಗಿದೆ. ಜನರು ಹಿಟ್ಟು ಮತ್ತು ಪ್ರಮುಖ ವಸ್ತುಗಳನ್ನು ಸಂಗ್ರಹಿಸಲು ಪ್ರಾರಂಭಿಸಿದ್ದಾರೆ. ಕರಾಚಿಯಲ್ಲಿ ಬ್ರಾಂಡೆಡ್ ಹಿಟ್ಟಿನ ಕೊರತೆ ಉಂಟಾಗಿದೆ. ಅಕ್ಕಿ, ಬೇಳೆ ಕಾಳುಗಳು, ಸಕ್ಕರೆ, ತುಪ್ಪ, ಅಡುಗೆ ಎಣ್ಣೆ, ಚಹಾ ಎಲೆ, ಹಾಲಿಗೆ ಹೋಲಿಸಿದರೆ ಹಿಟ್ಟಿನ ಬೇಡಿಕೆ ಗಮನಾರ್ಹವಾಗಿ ಹೆಚ್ಚಾಗಿದೆ ಎಂದು ಪಾಕಿಸ್ತಾನದ ಪತ್ರಿಕೆ 'ಡಾನ್' ವರದಿ ಮಾಡಿದೆ. ಲಾಕ್‌ಡೌನ್ ಕಾರಣದಿಂದ ಮನೆಗಳಲ್ಲಿ ಅಪಾರ ಪ್ರಮಾಣದ ಹಿಟ್ಟು ಮತ್ತು ಇತರ ವಸ್ತುಗಳನ್ನು ಜನರು ಖರೀದಿಸುತ್ತಿರುವುದು ಇದಕ್ಕೆ ಕಾರಣ.
ಎಲ್ಲೆಡೆಯಂತೆ ಕೊರೋನಾ ವೈರಸ್ ಕಾರಣದಿಂದ ಪಾಕಿಸ್ತಾನವೂ ಲಾಕ್‌ಡೌನ್ ಆಗಿದೆ.
ಜನರು ಅಗತ್ಯ ವಸ್ತುಗಳನ್ನು ಸಿಕ್ಕಾಪಟ್ಟೆ ಸಂಗ್ರಹಿಸಿಟ್ಟುಕೊಳ್ಳುತ್ತಿದ್ದಾರೆ. ಈ ಕಾರಣದಿಂದ ಹಿಟ್ಟು ಕೊಳ್ಳಲು ಎಲ್ಲರೂ ಮುಗಿ ಬಿದ್ದಿದ್ದಾರೆ.
ಪಾಕಿಸ್ತಾನದ ಹಿಟ್ಟಿನ ಗಿರಣಿಗಳ ಸಂಘದ (ಸಿಂಧ್ ವಲಯ) ಸದಸ್ಯರೊಬ್ಬರು, ಗಿರಣಿಗಳು ಹಗಲು ರಾತ್ರಿ ಹೊಸ ಗೋಧಿಯನ್ನು ರುಬ್ಬುತ್ತಿವೆ, ಆದರೆ ಖರೀದಿದಾರರು ಹೆಚ್ಚುತ್ತಿದ್ದು, ಬೇಡಿಕೆಯನ್ನು ಪೂರೈಸಲು ಸಾಧ್ಯವಿಲ್ಲ, . ಪ್ರತಿ ತಿಂಗಳು 10 ರಿಂದ 20 ಕೆಜಿ ಹಿಟ್ಟು ಅಗತ್ಯವಿರುವ ಕುಟುಂಬವು 40 ರಿಂದ 60 ಕೆಜಿ ಹಿಟ್ಟು ಕೊಂಡುಕೊಳ್ಳುತ್ತಿವೆ ಎಂದು ಅವರು ಹೇಳಿದರು.
ಪಾಕಿಸ್ತಾನದಲ್ಲಿ ಕರೋನಾ ವೈರಸ್ ಸೋಂಕಿತರ ಸಂಖ್ಯೆ 799 ತಲುಪಿದೆ . ದೇಶದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಪ್ರಕಾರ, ಈ ವೈರಸ್‌ನಿಂದಾಗಿ ಪಾಕಿಸ್ತಾನದಲ್ಲಿ ಸಾಯುತ್ತಿರುವವರ ಸಂಖ್ಯೆ ಕನಿಷ್ಠ ಐದು ಮತ್ತು ಚಿಕಿತ್ಸೆಯ ನಂತರ ಗುಣವಾಗುತ್ತಿರುವವರ ಸಂಖ್ಯೆ ಆರು.
ಪಾಕಿಸ್ತಾನದ ಸ್ಥಿತಿಯನ್ನು ಕಂಟ್ರೋಲ್ ಮಾಡಲು ಸರ್ಕಾರ ಪರದಾಡುತ್ತಿದೆ.
ಭಾರತೀಯರು ಅಗತ್ಯ ವಸ್ತುಗಳನ್ನು ಪೂರೈಸಲು ಅಂಗಡಿಗಳಿಗೆ ಮುಗಿ ಬೀಳುತ್ತಿದ್ದಾರೆ. ಅಲ್ಲಿಯೇ ನೂಕು ನುಗ್ಗಲು ಹೆಚ್ಚಾಗಿ, ವೈರಸ್ ಹರಡುವ ಸಾಧ್ಯತೆ ಹೆಚ್ಚುತ್ತಿದೆ.
ಈಗಾಗಲೇ ಪ್ರಧಾನಿ ಮೋದಿ ಭಾರತದಲ್ಲಿ ಅನಗತ್ಯಕ್ಕಿಂತ ಹೆಚ್ಚು ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಡಿ ಎಂದು ಕರೆ ನೀಡಿದ್ದಾರೆ.