Asianet Suvarna News Asianet Suvarna News

ಅಡಲ್ಟ್‌ ವೆಬ್‌ಸೈಟ್‌ Pornhub, XVideos, Stripchat ವಿರುದ್ಧ ಶುರುವಾಯ್ತು ಬಿಗಿ ಕ್ರಮ!

ವಿಶ್ವದ ಅತೀದೊಡ್ಡ ಅಡಲ್ಟ್‌ ಸೈಟ್‌ ಎನಿಸಿರುವ ಪೋರ್ನ್‌ಹಬ್‌ ಹಾಗೂ ಸ್ಟ್ರಿಪ್‌ಚಾಟ್‌ ಡಿಎಸ್‌ಎ ನಿಯಮಗಳನ್ನು ಅತ್ಯಂತ ಕಟ್ಟುನಿಟ್ಟಾಗಿ ಏಪ್ರಿಲ್‌ 21 ರಿಂದ ಅನುಸರಿಸಬೇಕಾಗಿದ್ದರೆ. XVideos  ಏಪ್ರಿಲ್‌ 23 ರಿಂದ ಇದನ್ನು ಜಾರಿಗೆ ತರಬೇಕಿದೆ ಎಂದು ಯುರೋಪಿಯನ್‌ ಯೂನಿಯನ್‌ ವ್ಯವಸ್ಥಾಪಕರು ತಿಳಿಸಿದ್ದಾರೆ.

DSA obligations Adult Sites Pornhub XVideos Stripchat Now Face Strict Content Rules san
Author
First Published Apr 20, 2024, 12:18 PM IST

ಬ್ರಸೆಲ್ಸ್‌ (ಏ.20): ಅಡಲ್ಟ್‌ ಕಂಟೆಂಟ್‌ ಕಂಪನಿಯಾದ ಪೋರ್ನ್‌ಹಬ್‌, ಸ್ಟ್ರಿಪ್‌ಚಾಟ್‌ ಮತ್ತು ಎಕ್ಸ್‌ವಿಡಿಯೋಸ್‌, ಹೊಸ ಯುರೋಪಿಯನ್‌ ಯೂನಿಯನ್‌ ಆನ್‌ಲೈನ್ ವಿಷಯ ನಿಯಮಗಳನ್ನು ಅನುಸರಿಸಲು ಅಪಾಯದ ಮೌಲ್ಯಮಾಪನ ವರದಿಗಳನ್ನುಕಡ್ಡಾಯವಾಗಿ ಮಾಡಬೇಕಾಗುತ್ತದೆ . ತಮ್ಮ ಸೇವೆಗಳಿಗೆ ಸಂಬಂಧಿಸಿದ ವ್ಯವಸ್ಥಿತ ಅಪಾಯಗಳನ್ನು ಪರಿಹರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ಯುರೋಪಿಯನ್ ಕಮಿಷನ್ ಶುಕ್ರವಾರ ತಿಳಿಸಿದೆ. ಕಳೆದ ಡಿಸೆಂಬರ್‌ನಲ್ಲಿ ಡಿಜಿಟಲ್ ಸರ್ವೀಸ್ ಆಕ್ಟ್ (ಡಿಎಸ್‌ಎ) ಅಡಿಯಲ್ಲಿ ಮೂರು ಕಂಪನಿಗಳನ್ನು ಅತಿ ದೊಡ್ಡ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಾಗಿ ಗೊತ್ತುಪಡಿಸಲಾಗಿದೆ, ಇದು ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿನ ಕಾನೂನುಬಾಹಿರ ಮತ್ತು ಹಾನಿಕಾರಕ ವಿಷಯವನ್ನು ತೆಗೆದುಹಾಕಲು ಇನ್ನಷ್ಟು ಹೆಚ್ಚಿನ ಶ್ರಮವಹಿಸಬೇಕಾಗಿದೆ.  ಪೋರ್ನ್‌ಹಬ್ ಮತ್ತು ಸ್ಟ್ರಿಪ್‌ಚಾಟ್ ಈ ಡಿಎಸ್‌ಎ ನಿಯಮಗಳನ್ನು ಕಟ್ಟುನಿಟ್ಟಾಗಿ ಏಪ್ರಿಲ್‌ 21 ರಿಂದ ಜಾರಿಗೆ ತರಬೇಕು ಎಂದು ತಿಳಿಸಲಾಗಿದ್ದರೆ, ಎಕ್ಸ್‌ವಿಡಿಯೋಸ್‌ ಏಪ್ರಿಲ್‌ 23ರ ಒಳಗಾಗಿ ಡಿಎಸ್‌ಎ ನಿಯಮಗಳ ಕಟ್ಟುಪಾಡಿಗೆ ಒಳಗಾಗಬೇಕು ಎಂದು ತಿಳಿಸಿದೆ.

"ಈ ನಿರ್ದಿಷ್ಟ ಕಟ್ಟುಪಾಡುಗಳಲ್ಲಿ ಆಯೋಗಕ್ಕೆ ಅಪಾಯದ ಮೌಲ್ಯಮಾಪನ ವರದಿಗಳನ್ನು ಸಲ್ಲಿಸುವುದು, ಅವರ ಸೇವೆಗಳ ನಿಬಂಧನೆಗೆ ಸಂಬಂಧಿಸಿದ ವ್ಯವಸ್ಥಿತ ಅಪಾಯಗಳನ್ನು ಪರಿಹರಿಸಲು ತಗ್ಗಿಸುವ ಕ್ರಮಗಳನ್ನು ಹಾಕುವುದು" ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ. ಕಂಪನಿಗಳು ಜಾಹೀರಾತುಗಳಿಗೆ ಸಂಬಂಧಿಸಿದ ಮತ್ತು ಸಂಶೋಧಕರಿಗೆ ಡೇಟಾಗೆ ಪ್ರವೇಶವನ್ನು ಒದಗಿಸುವುದು ಸೇರಿದಂತೆ ಹೆಚ್ಚುವರಿ ಪಾರದರ್ಶಕತೆ ಬಾಧ್ಯತೆಗಳನ್ನು ಪೂರೈಸಬೇಕಾಗುತ್ತದೆ.

ನೀಲಿ ಲೋಕದಲ್ಲಿ ಸರಣಿ ದುರಂತ: ಹೃದಯಾಘಾತದ ಬಳಿಕ ಕೋಮಾಗೆ ಜಾರಿದ ನೀಲಿ ಚಿತ್ರ ತಾರೆ ಎಮಿಲಿ ವಿಲ್ಲಿಸ್‌

ಹಾಗೇನಾದರೂ, ಡಿಎಸ್‌ಎ ಉಲ್ಲಂಘನೆಯಾಗಿದ್ದು ಗೊತ್ತಾದಲ್ಲಿ, ಈ ಕಂಪನಿಗಳು ಜಾಗತಿಕ ವಾರ್ಷಿಕ ವಹಿವಾಟಿನ ಮೊತ್ತ ಎಷ್ಟು ಇರುತ್ತದೆಯೋ ಅದರಲ್ಲಿ ಶೇ. 6ರಷ್ಟು ಮೊತ್ತದಷ್ಟು ದಂಡವನ್ನು ಹಾಕಲಾಗುತ್ತದೆ ಎಂದು ತಿಳಿಸಲಾಗಿದೆ.

ಪ್ರಸಿದ್ಧ ನೀಲಿ ಚಿತ್ರ ತಾರೆ ಸೋಫಿಯಾ ಲಿಯೋನ್ ಶವವಾಗಿ ಪತ್ತೆ, 26ನೇ ವಯಸ್ಸಿಗೆ ಸಾವು ಅಭಿಮಾನಿಗಳಿಗೆ ಆಘಾತ

Follow Us:
Download App:
  • android
  • ios