Asianet Suvarna News Asianet Suvarna News

ಭಾರತ ಭೇಟಿ ಮುಂದೂಡಿದ ಬೆನ್ನಲ್ಲೇ ಎಲಾನ್‌ ಮಸ್ಕ್‌ ದಿಢೀರ್‌ ಚೀನಾಕ್ಕೆ ಭೇಟಿ

ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಪ್ರವಾಸ ಮುಂದೂಡಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌, ಭಾನುವಾರ ದಿಢೀರ್‌ ಚೀನಾಕ್ಕೆ ಭೇಟಿ ನೀಡಿದ್ದಾರೆ. 

Tesla CEO Elon Musk unexpectedly traveled to China  just canceling a planned trip to India gow
Author
First Published Apr 29, 2024, 12:27 PM IST

ಬೀಜಿಂಗ್‌ (ಏ.29): ಕಂಪನಿಯ ತುರ್ತು ಕಾರ್ಯಗಳ ಹಿನ್ನೆಲೆಯಲ್ಲಿ ಇತ್ತೀಚೆಗಷ್ಟೇ ಎರಡು ದಿನಗಳ ಭಾರತ ಪ್ರವಾಸ ಮುಂದೂಡಿದ್ದ ಟೆಸ್ಲಾ ಕಂಪನಿ ಮುಖ್ಯಸ್ಥ ಎಲಾನ್‌ ಮಸ್ಕ್‌, ಭಾನುವಾರ ದಿಢೀರ್‌ ಚೀನಾಕ್ಕೆ ಭೇಟಿ ನೀಡಿದರು. ಈ ವೇಳೆ ಅವರು ಚೀನಾ ಪ್ರಧಾನಿ ಲಿ ಕಿಯಾಂಗ್‌ ಅವರನ್ನು ಭೇಟಿ ಮಾಡಿ ಉದ್ಯಮ ವಿಸ್ತರಣೆಯ ಕುರಿತು ಮಾತುಕತೆ ನಡೆಸಿದ್ದಾರೆ. ಸ್ಥಳೀಯ ಆಟೋಮೊಬೈಲ್‌ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗುವಂತೆ ಬಂದಿದ್ದ ಆಹ್ವಾನದ ಹಿನ್ನೆಲೆಯಲ್ಲಿ ಮಸ್ಕ್‌ ಈ ದಿಢೀರ್‌ ಭೇಟಿ ನೀಡಿದ್ದಾರೆ. ಚೀನಾ, ಟೆಸ್ಲಾದ ಎರಡನೇ ಅತಿದೊಡ್ಡ ಮಾರುಕಟ್ಟೆಯಾಗಿದೆ.

ಭಾರತ ಭೇಟಿ ಮುಂದೂಡಿದ ಎಲಾನ್ ಮಸ್ಕ್;'ಎಕ್ಸ್' ಪೋಸ್ಟ್ ನಲ್ಲಿ ಕಾರಣ ಬಹಿರಂಗಪಡಿಸಿದ ಟೆಸ್ಲಾ ಸಿಇಒ

ಮಸ್ಕ್‌ರಿಂದ ಹೊಸ ವಿಡಿಯೋ ಆ್ಯಪ್: ಯೂಟ್ಯೂಬ್‌ಗೆ ಸವಾಲು
ಗೂಗಲ್ ಒಡೆತನದ ಜನಪ್ರಿಯ ಯುಟ್ಯೂಬ್ ಗೆ ಸ್ಪರ್ಧೆ ನೀಡಲು ಎಲಾನ್ ಮಸ್ಕ್ ಒಡೆತನದ ಎಕ್ಸ್ ಕಂಪೆನಿಯು ಟೀವಿ ಅಪ್ಲಿಕೇಶನ್ ತರುವುದಕ್ಕೆ ಸಿದ್ಧವಾಗಿದೆ. ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಉತ್ತಮ ಕ್ವಾಲಿಟಿ ವಿಡಿಯೋಗಳನ್ನು ಪೋಸ್ಟ್ ಮಾಡಬಹುದು ಎಂದು ‘ಎಕ್ಸ್ ’ ಸಿಇಓ ಲಿಂಡಾ ಯಾಕರಿನೋ ಘೋಷಿಸಿದ್ದಾರೆ.

'ಎಕ್ಸ್' ಬಳಕೆದಾರರಿಗೆ ಶಾಕ್; ಪೋಸ್ಟ್ ,ರಿಪ್ಲೈ, ಲೈಕ್ಸ್ ಗೂ ಹಣ ಪಾವತಿಸಬೇಕು; ಹೊಸ ನಿಯಮ ಜಾರಿ ದೃಢಪಡಿಸಿದ ಮಸ್ಕ್

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಯಾಕರಿನೋ ‘ಸಣ್ಣ ಪರದೆಯಿಂದ ದೊಡ್ಡ ಪರದೆಯವರೆಗೆ, ಎಕ್ಸ್ ಎಲ್ಲವನ್ನೂ ಬದಲಾಯಿಸಲಿದೆ’ ಎಂದು ಬರೆದುಕೊಂಡಿದ್ದಾರೆ. ಎಐ ಚಾಲಿತ ವಿಷಯಗಳನ್ನು ಈ ಅಪ್ಲಿಕೇಶನ್ ಒಳಗೊಳ್ಳಲಿದ್ದು, ಬಿಡುಗಡೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ. ಈ ಎಕ್ಸ್ ಟಿವಿ ಆ್ಯಪ್ ಹೆಚ್ಚುಕಮ್ಮಿ ಯುಟ್ಯೂಬ್ ಫೀಚರ್ ಗಳನ್ನೇ ಹೋಲಲಿದೆ.

Follow Us:
Download App:
  • android
  • ios