Asianet Suvarna News Asianet Suvarna News

ಪೀರಿಯೆಡ್ಸ್ ಟೈಂನಲ್ಲಿ ಟ್ಯಾಂಪೂನ್ ಬಳಸಿ ಕಾಲು ಕಳೆದುಕೊಂಡ ಮಹಿಳೆ!

ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ಪೀರಿಯೆಡ್ಸ್ ಸಮಯದಲ್ಲಿ ಸ್ಯಾನಿಟರಿ ಪ್ಯಾಡ್ ಬದಲು ಮೆನ್‌ಸ್ಟ್ರುವಲ್ ಕಪ್‌, ಟ್ಯಾಂಪೂನ್ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಇಲ್ಲೊಬ್ಬ ಮಹಿಳೆ ಟ್ಯಾಂಪೂನ್ ಬಳಸಿ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ.

Woman loses her legs, almost dies after using a tampon, know what happened Vin
Author
First Published May 9, 2024, 5:05 PM IST

ಹಿಂದಿನ ಕಾಲದಲ್ಲಿ ಪೀರಿಯೆಡ್ಸ್ ಆದಾಗ ಮಹಿಳೆಯರು ಕಾಟನ್ ಬಟ್ಟೆಗಳನ್ನು ಬಳಸುತ್ತಿದ್ದರು. ನಂತರದ ವರ್ಷಗಳಲ್ಲಿ ಸ್ಯಾನಿಟರಿ ಪ್ಯಾಡ್ ಬಳಕೆಗೆ ಬಂತು. ಈಗ ಬಹುತೇಕ ಹಳ್ಳಿಗಳಲ್ಲೂ ಮಹಿಳೆಯರು ಪ್ಯಾಡ್ ಬಳಸುತ್ತಾರೆ. ಆದರೆ ಇದಲ್ಲದೆ ಸುರಕ್ಷತೆ ದೃಷ್ಟಿಯಿಂದ ಮಹಿಳೆಯರು ಪೀರಿಯೆಡ್ಸ್ ಸಮಯದಲ್ಲಿ ಮೆನ್‌ಸ್ಟ್ರುವಲ್ ಕಪ್‌, ಟ್ಯಾಂಪೂನ್ ಬಳಸುವಂತೆ ಜಾಗೃತಿ ಮೂಡಿಸಲಾಗುತ್ತಿದೆ. ಪೀರಿಯೆಡ್ಸ್‌ ರಾಸಾಯನಿಕಯುಕ್ತವಾಗಿರುವ ಕಾರಣ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಅನ್ನೋ ಕಾರಣಕ್ಕೆ ಟ್ಯಾಂಪೂನ್‌ ಬಳಸುವಂತೆ ಸೂಚಿಸುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಟ್ಯಾಂಪೂನ್ ಬಳಸಿ ಕಾಲು ಕಳೆದುಕೊಂಡಿರುವ ಘಟನೆ ನಡೆದಿದೆ.

ಮಾಡೆಲ್ ಒಬ್ಬರು ಟ್ಯಾಂಪೂನ್ ಬಳಸಿ ತನ್ನ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದಾರೆ. ಮುಟ್ಟಿನ ನೈರ್ಮಲ್ಯ ಉತ್ಪನ್ನವನ್ನು ಸುರಕ್ಷಿತವಾಗಿ ಬಳಸಿದರೂ ಈ ರೀತಿ ಅನಾಹುತವಾಗಿರುವುದು ಆತಂಕಕ್ಕೆ ಕಾರಣವಾಗಿದೆ. 24 ವರ್ಷ ವಯಸ್ಸಿನ ಲಾರೆನ್ ವಾಸ್ಸರ್ ಟ್ಯಾಂಪೂನ್ ಬಳಸಿ ಸಮಸ್ಯೆ ಅನುಭವಿಸಿದ್ದಾರೆ.

ತಮ್ಮನಿಗೆ ಪಿರಿಯಡ್ಸ್ ಪಾಠ ಹೇಳಿದ ಅಣ್ಣನ ವೀಡಿಯೋ ವೈರಲ್, ಮಗಳಿಗೆ ಮಾತ್ರವಲ್ಲ, ಮಗಂಗೂ ಗೊತ್ತಿರಲಿ ಮುಟ್ಟಿನ ಗುಟ್ಟು!

ಟ್ಯಾಂಪೂನ್‌ನ್ನು ನಾನು ಸರಿಯಾದ ರೀತಿಯಲ್ಲಿ ಬಳಸಿದ್ದೇನೆ ಪ್ರತಿ ನಾಲ್ಕು ಗಂಟೆಗಳಿಗೊಮ್ಮೆ ಅದನ್ನು ಬದಲಾಯಿಸುವುದರಿಂದ ಹಿಡಿದು ಅದನ್ನು ಸರಿಯಾಗಿ ಇರಿಸುವ ಮತ್ತು ತೆಗೆದು ಹಾಕುವವರೆಗೆ ಸರಿಯಾದ ಕ್ರಮವನ್ನು ಪಾಲಿಸಿದ್ದೇನೆ. ಆದರೂ,ಶೀಘ್ರದಲ್ಲೇ ಜ್ವರ ತರಹದ ರೋಗಲಕ್ಷಣಗಳನ್ನು ಅನುಭವಿಸಿದೆ. ಕೆಲವೇ ಗಂಟೆಗಳಲ್ಲಿ ಕಾಲು ಸ್ವಾಧೀನ ಕಳೆದುಕೊಂಡಿರು ಎಂದು ಲಾರೆನ್ ಹೇಳಿದ್ದಾರೆ.

ಲಾರೆನ್ ವಿಪರೀತ ಕಾಲು ನೋವಿನಿಂದ ಬಳಲುತ್ತಿದ್ದ ಕಾರಣ ತಕ್ಷಣ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಈ ಸಂದರ್ಭದಲ್ಲಿ ಅವರ ಎರಡೂ ಮೂತ್ರಪಿಂಡಗಳು ಫೈಲ್ಯೂರ್ ಆಗಿದೆ ಎಂಬುದು ಗೊತ್ತಾಯಿತು. ಅಂಗಾಂಶಗಳು ಕೊಳೆಯಲು ಪ್ರಾರಂಭಿಸಿದವು. ಪರಿಣಾಮವಾಗಿ, ವೈದ್ಯರು ಆಕೆಯ ಬಲಗಾಲು ಮತ್ತು ಎಡ ಪಾದದ ಕೆಲವು ಬೆರಳುಗಳನ್ನು ಕತ್ತರಿಸಲು ಸೂಚಿಸಿದರು. ಕೊನೆಗೆ ಎಡಗಾಲನ್ನು ಸಹ ತೆಗೆಯಬೇಕಾಯಿತು. ಇದು ವಿಷಕಾರಿ ಆಘಾತ ಸಿಂಡ್ರೋಮ್ (ಟಿಎಸ್ಎಸ್) - ಸಂಭಾವ್ಯ-ಮಾರಣಾಂತಿಕ ಸೋಂಕು ಎಂದು ವೈದ್ಯರು ಹೇಳಿದ್ದಾರೆ. 

ಪಿರಿಯಡ್ಸ್ ನೋವು ಅಂತಾ ಇದನ್ನು ತಿಂದು ಕೋಮಾಕ್ಕೆ ಜಾರಿದ ಮಹಿಳೆ!

ಬಳಸುತ್ತಿರುವ ಟ್ಯಾಂಪೂನ್ ಅಥವಾ ಮುಟ್ಟಿನ ಕಪ್ ಗಾಯದಿಂದ ಸೋಂಕಿಗೆ ಒಳಗಾದಾಗ ಇದು ಸಂಭವಿಸಬಹುದು ಎಂದು ತಜ್ಞರು ಹೇಳುತ್ತಾರೆ. ರೋಗಿಗಳು ಸಾಮಾನ್ಯವಾಗಿ ಸ್ನಾಯು ನೋವು, ಚರ್ಮದಲ್ಲಿ ದದ್ದುಗಳು ಕಾಣಿಸಿಕೊಳ್ಳಬಹುದು ಎಂದಿದ್ದಾರೆ.

ವಿಷಕಾರಿ ಆಘಾತ ಸಿಂಡ್ರೋಮ್ (ಟಿಎಸ್ಎಸ್) ತುಂಬಾ ಗಂಭೀರವಾದ ಆರೋಗ್ಯ ಸಮಸ್ಯೆಯಾಗಿದ್ದು, ಸಿ-ಸೆಕ್ಷನ್ ಅಥವಾ ಯೋನಿ ಜನನದ ನಂತರ ಮುಟ್ಟಿನ ಕಪ್, ಟ್ಯಾಂಪೂನ್, ಗರ್ಭನಿರೋಧಕ ಕ್ಯಾಪ್‌ನ್ನು ಬಳಸಿದಾಗ ಇದು ಸಂಭವಿಸಬಹುದು. ಮುಟ್ಟಿನ ನೈರ್ಮಲ್ಯ ಉತ್ಪನ್ನವು ಗಾಯ, ಕುದಿಯುವ ಅಥವಾ ಸೋಂಕಿತ ಜಾಗದ ಸಂಪರ್ಕಕ್ಕೆ ಬಂದಾಗ ಇದು ಉಂಟಾಗಬಹುದು. ಈ ಸ್ಥಿತಿಗೆ ತುರ್ತು ಚಿಕಿತ್ಸೆಯ ಅಗತ್ಯವಿದೆ ಎಂದು ವೈದ್ಯರು ಹೇಳುತ್ತಾರೆ. 

Follow Us:
Download App:
  • android
  • ios