userpic
user icon
0 Min read

ಅಭ್ಯಾಸ ಆರಂಭಿಸಿದ ವಿಶ್ವದ ಮೊದಲ ರೋಬೋಟ್ ವಕೀಲ ವಿರುದ್ಧ ದಾಖಲಾಯ್ತು ಕೇಸ್!

Chicago Law firm sued world first robot lawyer for practicing law without licence developed by donotpay California ckm
court

Synopsis

ವಿಶ್ವದ ಮೊದಲ ರೋಬೋಟ್ ವಕೀಲ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಇದೀಗ ಇದೇ ರೋಬೋಟ್ ವಕೀಲ ವಿರುದ್ಧ ಮೊಕದ್ದಮೆ ದಾಖಲಾಗಿದೆ. ಕಾನೂನು ಸಂಸ್ಥೆ ದೂರು ದಾಖಲು ಮಾಡಿದೆ. ಅಷ್ಟಕ್ಕೂ ಕಾನೂನು ಸಂಸ್ಥೆ ರೋಬೋಟ್ ವಕೀಲ ವಿರುದ್ಧ ದೂರು ದಾಖಲಿಸಿದ್ದು ಯಾಕೆ? ಇದಕ್ಕೆ ಕಾರಣವೇನು?
 

ಕ್ಯಾಲಿಫೋರ್ನಿಯಾ(ಮಾ.18): ಊಹಿಸಲೂ ಸಾಧ್ಯವಾಗದ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಆರ್ಟಿಫೀಶಿಯಲ್ ಇಂಟೆಲಿಜೆನ್ಸ್,ಚಾಟ್ ಜಿಪಿಟಿ ಸೇರಿದಂತೆ  ಹಲವು ಟೆಕ್ನಾಲಜಿ ಡಿಜಿಟಲ್ ಯುಗದ ಆಲೋಚನೆಯನ್ನೇ ಬದಲಿಸಿದೆ. ವಿಶ್ವದಲ್ಲಿ ರೋಬೋಟ್ ಹೊಸವಿಚಾರವಲ್ಲ. ಆದರೆ ಇದೀಗ ರೋಬೋಟ್‌ಗಳ ಬಳಕೆ ವಿಸ್ತಾರಗೊಂಡಿದೆ. ಅತ್ಯಂತ ಕಠಿಣ ಕ್ಷೇತ್ರಗಳಲ್ಲೂ ರೋಟೋಬ್ ಬಳಕೆಯಾಗುತ್ತಿದೆ.ಹೀಗೆ ವಕೀಲ ವೃತ್ತಿಗೆ ಅಮೆರಿಕದ ಕ್ಯಾಲಿಫೋರ್ನಿಯಾ ಕಂಪನಿ ರೋಬೋಟ್ ನಿರ್ಮಿಸಲಾಗಿತ್ತು.ಇಷ್ಟೇ ಅಲ್ಲ ಲಾಯರ್ ಪ್ರಾಕ್ಟೀಸ್ ಕೂಡ ಮಾಡಲು ಅವಕಾಶ ನೀಡಲಾಗಿತ್ತು. ಇದು ವಿಶ್ವದ ಮೊದಲ ರೋಬೋಟ್ ಲಾಯರ್ ಅನ್ನೋ ಹೆಗ್ಗಳಿಕೆಗೂ ಪಾತ್ರವಾಗಿತ್ತು. ಆದರೆ ಈ ರೋಬೋಟ್ ಲಾಯರ್ ವಿರುದ್ದ ಮೊಕದ್ದಮೆ ದಾಖಲಾಗಿದೆ. ಕಾರಣ ಯಾವುದೇ ಲೈಸೆನ್ಸ್ ಇಲ್ಲದೆ ವಕೀಲ ವೃತ್ತಿ ಅಭ್ಯಾಸ ಮಾಡಲಾಗುತ್ತಿದೆ ಎಂದು ಕಾನೂನು ಸಂಸ್ಥೆಯೊಂದು ರೋಬೋಟ್ ಲಾಯರ್ ವಿರುದ್ಧ ದೂರು ದಾಖಲಿಸಿದೆ.

ಕ್ಯಾಲಿಫೋರ್ನಿಯಾ ಡುನಾಟ್‌ಪೇ ಟೆಕ್ ಕಂಪನಿ ರೋಬೋಟ್ ಲಾಯರ್ ಅಭಿವೃದ್ಧಿ ಮಾಡಿತ್ತು. ಕೋಟ್ಯಾಂಜರ ಜನರ ಕಾನೂನು ಸಮಸ್ಯೆ ಬಗೆಹರಿಸಲು ಚಾಟ್‌ಬೂಟ್ ಟೆಕ್ ತಂತ್ರ್ರಜ್ಞಾನದ ರೋಬೋಟ್ ಲಾಯರ್ ಅಭಿವೃದ್ಧಿ ಮಾಡಲಾಗಿತ್ತು. ಆದರೆ ಚಿಕಾಗೋ ಮೂಲದ ಎಡೆಲ್ಸನ್ ಕಾನೂನು ಸಂಸ್ಥೆ, ರೋಬೋಟ್ ಲಾಯರ್ ಪ್ರಾಕ್ಟೀಸ್ ಕಾನೂನು ಬಾಹಿರ ಎಂದು ಮೊಕದ್ದಮೆ ದಾಖಲಿಸಿದೆ. ರೋಬೋಟ್ ಲಾಯರ್‌ ಯಾವುದೇ ಲೈಸೆನ್ಸ್ ಇಲ್ಲದೆ ಕೋರ್ಟ್‌ನಲ್ಲಿ ಪ್ರಾಕ್ಟೀಸ್ ಮಾಡುತ್ತಿದೆ. ಇದು ಹೇಗೆ ಸಾಧ್ಯ ಎಂದು ದೂರಿನಲ್ಲಿ ಪ್ರಶ್ನಿಸಲಾಗಿದೆ.

ಕೇರಳ ದೇಗುಲದ ಜಾತ್ರೆಯಲ್ಲಿ ರೋಬೋಟ್‌ ಆನೆಯ ಬಳಕೆ: ದೇಶದಲ್ಲೇ ಮೊದಲು ವಿದ್ಯುಚ್ಛಾಲಿತ ಆನೆ ಮೆರವಣಿಗೆ

ರೋಬೋಟ್ ಲಾಯರ್ ಪ್ರಾಕ್ಟೀಸ್ ಕಾನೂನು ಬಾಹಿರ ಎಂದಿದೆ. ರೋಬೋಟ್ ಅಭಿವೃದ್ಧಿ ಪಡಿಸಿದ ಡುನಾಟ್‌ಪೇ ಕಂಪನಿ ಯಾವುದೇ ಕಾನೂನು ಪದವಿ ಹೊಂದಿಲ್ಲ. ಯಾವುದೇ ನ್ಯಾಯಾಲದಲ್ಲಿ ಕೆಲಸ ಮಾಡಿಲ್ಲ. ಯಾವುದೇ ವಕೀಲ ಬಳಿಯೂ ಕೆಲಸ ಮಾಡಿಲ್ಲ. ಹೀಗಿರುವಾಗ ಈ ಕಂಪನಿ ಅಭಿವೃದ್ಧಿಪಡಿಸಿದ ರೋಬೋಟ್ ಲಾಯರ್ ಪ್ರಾಕ್ಟೀಸ್‌ಗೆ ಯಾವ ಅಧಾರದಲ್ಲಿ ಲೈಸೆನ್ಸ್ ನೀಡಲು ಸಾಧ್ಯ? ಇಷ್ಟೇ ಅಲ್ಲ ಇದೀಗ ರೋಬೋಟ್ ಲಾಯರ್ ಲೈಸೆನ್ಸ್ ಇಲ್ಲದೆ ಪ್ರಾಕ್ಟೀಸ್ ಆರಂಭಿಸಿದೆ. ಇದು ನಿಯಮ ಉಲ್ಲಂಘನೆ ಎಂದು ಎಡೆಲ್ಸೆನ್ ಕಾನೂನು ಸಂಸ್ಥೆ ಹೇಳಿದೆ.

ಘಟನೆ ಪರಿಸ್ಥಿತಿ, ವಯಸ್ಸು, ಕಾಲಕ್ಕೆ ತಕ್ಕಂತೆ ಶಿಕ್ಷೆಯ ಪ್ರಮಾಣ ಬದಲಾಗುತ್ತದೆ. ಪ್ರಕರಣವನ್ನು ಪರಿಗಣಿಸುವ ರೀತಿಯೂ ಬದಲಾಗುತ್ತದೆ. ಇದಕ್ಕೆ ಸಂಬಂಧಿಸಿ ಎಡೆಲ್ಸನ್ ಕಂಪನಿ ರೋಟೋಬ್ ವಕೀಲ ವಾದದ ಕೆಲ ಉದಾಹರಣೆಯನ್ನೂ ಉಲ್ಲೇಖಿಸಿದೆ. ರೋಬೋಟ್ ವಕೀಲ ಪ್ರಾಕ್ಟೀಸ್ ಸಮಯದಲ್ಲಿ ಆಗಿರುವ ಕೆಲ ತಪ್ಪುಗಳನ್ನು ಉಲ್ಲೇಖಿಸಿದೆ. ಇದರಿಂದ ಗ್ರಾಹಕರಿಗೆ ಯಾವ ರೀತಿ ನ್ಯಾಯ ಸಿಗಲು ಸಾಧ್ಯ ಎಂದು ಪ್ರಶ್ನಿಸಲಾಗಿದೆ.

ರೋಬೋಟ್ ನಡೆಸುತ್ತೆ ಕೋವಿಡ್ ಪರೀಕ್ಷೆ, ಮಾತುಕತೆ ಹಾಗೂ ಹರಟೆ, ಬೆರುಗುಗೊಳಿಸಿದ ತಂತ್ರಜ್ಞಾನ ಉತ್ಸವ!

ಸಾಮಾಜಿಕ ಜಾಲಾತಾಣದಲ್ಲಿ ರೋಬೋಟ್ ವಕೀಲ ಅಮೆರಿಕ ಶ್ರೀಮಂತ ವ್ಯಕ್ತಿಗಳ ವಕೀಲ ಎಂದು ಟ್ರೋಲ್ ಮಾಡಲಾಗುತ್ತದೆ. ಇತ್ತ ಡುನಾಟ್ ಪೇ ಕಂಪನಿ, ದೂರಿನ ವಿರುದ್ದ ಕಾನೂನು ಹೋರಾಟ ಮಾಡುವುದಾಗಿ ಹೇಳಿದೆ.
 

Latest Videos