ಐಫೋನ್ ಬಳಕೆದಾರರಿಗೆ ಆ್ಯಪಲ್ ವಾರ್ನಿಂಗ್, ಹ್ಯಾಕರ್ಸ್ ದಾಳಿಯಿಂದ ಸುರಕ್ಷಿತವಾಗಲು ಸಲಹೆ

Synopsis
ಹ್ಯಾಕರ್ಸ್ ಐಫೋನ್ ಮೇಲೆ ದಾಳಿಗೆ ಪ್ರಯತ್ನಿಸಿದ್ದಾರೆ. ಅಡ್ವಾನ್ಸ್ ಟೆಕ್ ಬಳಕೆ ಮಾಡಿ ಈ ದಾಳಿ ಸಂಘಟಿಸಲಾಗಿದೆ. ಹೀಗಾಗಿ ಎಲ್ಲಾ ಐಫೋನ್ ಬಳಕೆದಾರರಿಗೆ ಆ್ಯಪಲ್ ಮಹತ್ವದ ಭದ್ರತಾ ವಾರ್ನಿಂಗ್ ನೀಡಿದೆ. ಹ್ಯಾಕರ್ಸ್ ದಾಳಿಯಿಂದ ಸುರಕ್ಷಿತವಾಗಿರಲು ಆ್ಯಪಲ್ ಕೊಟ್ಟ ಸಲಹೆ ಏನು?
ನವದೆಹಲಿ(ಮಾ.13) ಬಹುತೇಕರು ಐಫೋನ್ ಸೇರಿದಂತೆ ಆ್ಯಪಲ್ ಉತ್ಪನ್ನಗಳನ್ನೇ ಬಳಸುತ್ತಾರೆ. ಸರಕ್ಷತೆ, ಗುಣಮಟ್ಟ ಸೇರಿದಂತೆ ಹಲವು ಕಾರಣಗಳಿಂದ ಆ್ಯಪಲ್ ಉತ್ಪನ್ನಗಳು ಭಾರಿ ಬೇಡಿಕೆ ಪಡೆದುಕೊಂಡಿದೆ. ಹ್ಯಾಕಿಂಗ್ ಸೇರಿದಂತೆ ಹಲವು ಸೈಬರ್ ಸೆಕ್ಯೂರಿಟಿಯಲ್ಲಿ ಐಫೋನ್ ಉತ್ತಮ ರಕ್ಷಣೆ ನೀಡುತ್ತದೆ. ಆದರೆ ಇದೀಗ ಇಂತಹ ಗರಿಷ್ಠ ಸುರಕ್ಷತೆಯ ಐಫೋನ್ ಸೇರಿದಂತೆ ಆ್ಯಪಲ್ ಉತ್ಪನ್ನದ ಮೇಲೆ ಹ್ಯಾಕರ್ಸ್ ಕಣ್ಣು ಬಿದ್ದಿದೆ, ಹ್ಯಾಕರ್ಸ್ ಇದೀಗ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಐಫೋನ್ ಸೇರಿದಂತೆ ಆ್ಯಪಲ್ ಉತ್ಪನ್ನಗಳ ಮೇಲೆ ದಾಳಿ ನಡೆಸುವ ಪ್ರಯತ್ನ ನಡೆದಿದೆ. ಹೀಗಾಗಿ ಆ್ಯಪಲ್ ತನ್ನ ಬಳಕೆದಾರರಿಗೆ ಮಹತ್ವದ ಸೆಕ್ಯೂರಿಟಿ ವಾರ್ನಿಂಗ್ ನೀಡಿದೆ. ಇಷ್ಟೇ ಅಲ್ಲ ಈ ದಾಳಿಯಿಂದ ಸುರಕ್ಷಿತವಾಗಲು ಕೆಲ ಸಲಹೆಗಳನ್ನು ನೀಡಿದೆ.
ಬ್ಲೀಪಿಂಗ್ ಕಂಪ್ಯೂಟರ್ ವರದಿ ಪ್ರಕಾರ, ಆ್ಯಪಲ್ ವೆಬ್‌ಕಿಟ್‌ನಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ. ಆ್ಯಪಲ್ ಬ್ರೌಸರ್ ಎಂಜಿನ್ ಆ್ಯಪಲ್ ಸಫಾರಿ ಸೇರಿದಂತೆ ಹಲವು ಆ್ಯಪಲ್ ಆ್ಯಪ್ ಮೇಲೆ ಈ ಹ್ಯಾಕಿಂಗ್ ಪ್ರಯತ್ನ ನಡೆದಿದೆ. ಇದು ಕೇವಲ ಐಫೋನ್ ಮಾತ್ರವಲ್ಲ ಆ್ಯಪಲ್ ಉತ್ಪನ್ನಗಳಾದ ಮ್ಯಾಕ್OS, iOS, ಲಿನಕ್ಸ್ ಹಾಗೂ ವಿಂಡೋಸ್ ಮೇಲೂ ನಡೆದಿದೆ. ಹೀಗಾಗಿ ಆ್ಯಪಲ್ ಉತ್ಪನ್ನಗಳನ್ನು ಬಳಸುವ ಪ್ರತಿಯೊಬ್ಬರು ಆ್ಯಪಲ್ ನೀಡಿದ ಸೆಕ್ಯೂರಿಟಿ ವಾರ್ನಿಂಗ್ ಪಾಲಿಸಲು ಸೂಚಿಸಿದೆ.
16 ಸಾವಿರ ರೂ. ಕಡಿಮೆ ಬೆಲೆಗೆ ಐ ಫೋನ್ 16 ಪ್ರೋ ಖರೀದಿಸೋ ಅವಕಾಶ
ಹ್ಯಾಕರ್ಸ್ ಬಗ್ ಪತ್ತೆ ಹಚ್ಚಲಾಗಿದೆ. CVE-2025-24201 ಈ ಬಗ್ ಐಫೋನ್, ಐಪ್ಯಾಡ್, ಮ್ಯಾಕ್, ಆ್ಯಪಲ್ ವಿಷನ್ ಪ್ರೋ ಮೇಲೂ ಪರಿಣಾ ಬೀರಬಲ್ಲದು. ಹೀಗಾಗಿ ಬಳಕೆದಾರರು ತಕ್ಷಣವೇ ಆ್ಯಪಲ್ ಉತ್ಪನ್ನಗಳನ್ನು ಅಪ್‌ಡೇಟ್ ಮಾಡಲು ಸೂಚಿಸಿದೆ. ಆ್ಯಪಲ್ ಉತ್ಪನ್ನದಲ್ಲಿದ್ದ ಸಣ್ಣ ನ್ಯೂನತೆ ಬಳಸಿಕೊಂಡ ಹ್ಯಾಕರ್ಸ್ ಈ ಪ್ರಯತ್ನ ಮಾಡಿದೆ. ಆದರೆ ತಕ್ಷಣವೇ ಆ್ಯಪಲ್ ಟೆಕ್ ಇದಕ್ಕೆ ಸ್ಪಂದಿಸಿದೆ. ಇಷ್ಟೇ ಅಲ್ಲ ಆ್ಯಪಲ್ ತನ್ನ ನ್ಯೂನತೆ ಸರಿಪಡಿಸಿಕೊಂಡಿದೆ. ಇದೀಗ ಎಲ್ಲಾ ಬಳಕೆದಾರರು ತಮ್ಮ ಐಫೋನ್ ಸೇರಿದಂತೆ ಆ್ಯಪಲ್ ಉತ್ಪನ್ನ ಅಪ್‌ಡೇಟ್ ಮಾಡಲು ಮನವಿ ಮಾಡಿದೆ.
ಪ್ರಮುಖವಾಗಿ ಆ್ಯಪಲ್ iOS 18.3.2, ಐ್ಯಪಾಡ್ OS 18.3.2, ಮ್ಯಾಕ್ OS ಸೀಕ್ಯೋ 15.3.2, ವಿಶನ್ OS 2.3.2 ಹಾಗೂ ಸಫಾರಿ 18.3.1 ನಲ್ಲಿನ ಸಮಸ್ಯೆ ಪತ್ತೆ ಹಚ್ಚಿ ಸರಿಪಡಿಸಲಾಗಿದೆ. ಹ್ಯಾಕರ್ಸ್ ಬಗ್‌ನ್ನು ನಿಯಂತ್ರಿಸಲಾಗಿದೆ. ಈಗಾಗಲೇ ಆ್ಯಪಲ್ ಅಪ್‌ಗ್ರೇಡೇಶನ್ ಮಾಡಿದೆ. ಇದೀಗ ಬಳಕೆದಾರರು ತಮ್ಮ ಡಿವೈಸ್‌ಗಳನ್ನು ಅಪ್‌ಡೇಟ್ ಮಾಡಿಕೊಳ್ಳಬೇಕಿದೆ. ಪ್ರಮುಖವಾಗಿ iOS, iPadOS, tvOS, watchOS ಹಾಗೂ visionOS ಸಾಫ್ಟ್‌ವೇರ್ ಅಪ್‌ಗ್ರೇಡ್ ಮಾಡಲಾಗಿದೆ. ಹೀಗಾಗಿ ಮತ್ತೆ ಒಲ್ಡ್ ವರ್ಶನ್‌ಗೆ ಡೌನ್‌ಗ್ರೇಡ್ ಮಾಡಲು ಸಾಧ್ಯವಿಲ್ಲ ಅನ್ನೋದು ಬಳಕೆದಾರರು ಗಮನಿಸಬೇಕು.
ಆಪಲ್ ಉತ್ಪನ್ನದಲ್ಲಿ ಹೊಸ ಅಪ್‌ಡೇಟ್ ವರ್ಶನ್ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡುವುದು ಹೇಗೆ?
OS ಅಥವಾ iPadOS ಗಳಲ್ಲಿ ಆ್ಯಪಲ್‌ನ ಅಪ್‌ಡೇಟೆಟ್ ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಲು ಸೆಟ್ಟಿಂಗ್ಸ್ ಟ್ಯಾಪ್ ಮಾಡಿ ಬಳಿಕ ಜನರಲ್ ಆಯ್ಕೆ ಟ್ಯಾಪ್ ಮಾಡಿ, ಇಲ್ಲಿ ಸಾಪ್ಟ್‌ವೇರ್ ಅಪ್‌ಡೇಟ್ ಹಾಗೂ ಡೌನ್ಲೋಡ್ ಆ್ಯಂಡ್ ಇನ್‌ಸ್ಟಾಲ್ ಟ್ಯಾಪ್ ಮಾಡಿ.
ನಿಮ್ಮ ಐಫೋನ್ ಅಥವಾ ಐಪ್ಯಾಡ್ ಮೂಲಕ ಹೋಮ್ ಸ್ಕ್ರೀನ್‌ನಲ್ಲಿ ಒಪನ್ ಸೆಟ್ಟಿಂಗ್ಸ್ ಆ್ಯಪ್ ಟ್ಯಾಪ್ ಮಾಡಿ
ಜನರಲ್ ಆಯ್ಕೆ ಮಾಡಿ ಸಾಫ್ಟ್‌ವೇರ್ ಅಪ್‌ಡೇಟ್ ಕೊಡಿ
ಡೌನ್ಲೋಡ್ ಮತ್ತು ಇನ್‌ಸ್ಟಾಲ್ ಕ್ಲಿಕ್ ಮಾಡಿ ಸೂಚನೆ ಪಾಲಿಸಿ
ಐಫೋನ್ 16e: 5 ಗೇಮ್ ಚೇಂಜಿಂಗ್ ಆಪಲ್ ಇಂಟೆಲಿಜೆನ್ಸ್ ಫೀಚರ್ಸ್ ಇರೋದು ಗೊತ್ತಾ?