Asianet Suvarna News Asianet Suvarna News

ಅಣುಯುದ್ಧಕ್ಕೆ ಅಣಿಯಾಗಿದೆ ಪುಟಿನ್ ಪಡೆ, ಮೋದಿ ಸಂಧಾನ ಮಾಡ್ತಾರೆ ಅಂತಿದೆ ಬ್ರಿಟನ್‌, ಅಮೆರಿಕಾ!

ವಿಶ್ವಸಂಸ್ಥೆಯ ಮಹಾಧಿವೇಶನ ಮತ್ತೊಮ್ಮೆ ಜಗತ್ತಿನ ಬಲಾಢ್ಯ ರಾಷ್ಟ್ರಗಳ ವಾಕ್ಸಮರಕ್ಕೆ ಕಾರಣವಾಗಿದೆ. ರಷ್ಯಾದ ತಂಟೆಗೆ ಬಂದರೆ, ಅಣುಯುದ್ಧಕ್ಕೂ ರೆಡಿ, ನಾನು ಈ ಮಾತನ್ನ ತಮಾಷೆಯಾಗಿ ಹೇಳುತ್ತಿಲ್ಲ ಎಂದು ರಷ್ಯಾದ ಅಧ್ಯಕ್ಷ ಪುಟಿನ್‌ ಹೇಳುತ್ತಿದ್ದರೆ, ಎಲ್ಲರಿಗೂ ನಡುಕ ಆರಂಭವಾಗಿದೆ.
 

ಬೆಂಗಳೂರು (ಸೆ. 24): ಪುಟಿನ್ ಎದುರಲ್ಲೇ ಕೂತು ಯುದ್ಧ ಬೇಡ ಅಂದಿದ್ದರು ಪ್ರಧಾನಿ ನರೇಂದ್ರ ಮೋದಿ. ಈಗ ಅದೇ ಮೋದಿ ಸಂಧಾನ ಮಾಡಲಿ ಅಂತ ಕಾದು ಕೂತಿವೆ ಬ್ರಿಟನ್, ಅಮೆರಿಕಾದಂಥಾ ದೇಶಗಳು.. ಅಣುಯುದ್ಧಕ್ಕೆ ಅಣಿಯಾಗಿದೆ ಪುಟಿನ್ ಪಡೆ. ಆ ಅನಾಹುತ ತಪ್ಪಿಸೋಕೆ ಮೋದಿ  ಮುಂದಾಗ್ತಾರಾ..? ಯುಎಸ್ ಅಲ್ಲ.. ನ್ಯಾಟೋ ಅಲ್ಲ.. ಭಾರತವನ್ನೇ ಉಕ್ರೇನ್‌ ದೇಶ ನಂಬಿರೋದೇಕೆ?

ಮೋದಿ ಅವರು ಯುದ್ಧ ಮಾಡೋದು ಬೇಡ ಅಂತ ಹೇಳಿ ಒಂದು ವಾರವೂ ಆಗಿಲ್ಲ, ಆಗಲೇ ಈ ಯುದ್ಧ ಮುಂದಿನ ಹಂತಕ್ಕೆ ಅಣಿಯಾಗಿದೆ. ಯಾವತ್ತೋ ಕ್ಲೈಮ್ಯಾಕ್ಸ್ ತಲುಪಬೇಕಿದ್ದ ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧ, ಈಗೀಗ ತಾನೆ ಇಂಟರ್ವಲ್ ಕಡೆ ಹೊರಟಿದೆ.. ಅಷ್ಟ್ರಲ್ಲೇ ಮೋದಿ ಮಾಡಲಿರೋ ಮ್ಯಾಜಿಕ್ ಯುದ್ಧ ಸನ್ನಿವೇಶವನ್ನೇ ಬದಲಾಯಿಸಿ ಬಿಡುತ್ತಾ ಅನ್ನೋ ಅನುಮಾನ ಕಾಡಿದೆ.

Russia ತಂಟೆಗೆ ಬಂದರೆ ಅಣುಬಾಂಬ್‌ ಹಾಕಲೂ ಸಿದ್ಧ ಎಂದ Putin: Ukraine ಬೆಂಬಲಕ್ಕೆ ನಿಂತ ದೇಶಗಳಿಗೆ ಬೆದರಿಕೆ 

ಪ್ರಧಾನಿ ಮೋದಿ ಅವರು ಸಂಧಾನ ಮಾಡಿದರೆ ಉಕ್ರೇನ್ ರಷ್ಯಾ ಯುದ್ಧ ಮುಗಿಯುತ್ತಾ..? ಮೋದಿ ಈ ವಿಚಾರದಲ್ಲಿ ಹೆಜ್ಜೆ ಇಡಲಿ ಅಂತ ಜೆಲೆನ್ಸ್ಕಿ ಕಾಯುತ್ತಿದ್ದಾರೆ. ಈಗ ಪ್ರಪಂಚದಲ್ಲಿ ಯುದ್ಧ ನಡೆಯುವ ಸ್ಥಿತಿ ಇಲ್ಲ ಎಂದು ಮೋದಿ ಹೇಳಿದ ಬೆನ್ನಲ್ಲಿಯೇ ಹೆಚ್ಚಿನವರಿಗೆ ಸಮಾಧಾನವಾಗಿದೆ.