Asianet Suvarna News Asianet Suvarna News

ಗ್ಯಾರಂಟಿ ಗದ್ದಲದ ನಡುವೆ ಹಳ್ಳ ಹಿಡಿತಾ ಅನುಗ್ರಹ ಯೋಜನೆ ? ತಮ್ಮ ಸಮುದಾಯವನ್ನೇ ಮರೆತ್ರಾ ಸಿಎಂ?

ಗ್ಯಾರಂಟಿ ಭರಾಟೆಯಲ್ಲಿ ಸರ್ಕಾರ ಬೇರೆ ಯೋಜನೆಗಳತ್ತ ಗಮನ ಹರಿಸುತ್ತಿಲ್ಲ ಅನ್ನೋ ಆರೋಪ ಕೇಳಿಬರ್ತಿದೆ. ಹಿಂದೆ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ತಂದ ಯೋಜನೆಗಳೇ ಈಗ ಹಳ್ಳ ಹಿಡಿಯುತ್ತಿದೆ. 

ಪಂಚ ಗ್ಯಾರಂಟಿಗಳಿಗೆ ಹಣ ಹೊಂದಿಸೋದ್ರಲ್ಲಿ ಬ್ಯುಸಿಯಾಗಿರೋ (Congress) ಮಹತ್ವಾಕಾಂಕ್ಷಿ ಯೋಜನೆಗಳೇ ಮರೆತು ಹೋಗಿವೆ. ಸಿಎಂ ಸಿದ್ದರಾಮಯ್ಯನವರೇ ಜಾರಿಗೆ  ತಂದ ಯೋಜನೆಗಳಿಗೆ ಈಗ ಹಣ ಇಲ್ಲದಂತಾಗಿದ್ದು, ಸರ್ಕಾರದ ಮಹತ್ವದ ಯೋಜನೆಗಳು ಕೂಡ ಹಳ್ಳ ಹಿಡಿಯುತ್ತಿವೆ. ಕುರಿಗಾಹಿಗಳ ಕಷ್ಟ ದೇವರೇ ಬಲ್ಲ. ಮಳೆ, ಚಳಿ ಎನ್ನದೆ ಕುರಿ ಕಾಯುತ್ತಾ ಬದುಕು ಕಟ್ಟಿಕೊಳ್ಳುತ್ತಾರೆ. ಸಾಲ ಸೂಲ ಮಾಡಿ ಕುರಿ ಸಾಕಿದ ಮಾಲೀಕ, ಅವಘಡದಲ್ಲಿ ತನ್ನ ಕುರಿ ಕಳೆದುಕೊಂಡರೆ, ಆತನ ಕಣ್ಣೀರೊರೆಸಲು ಅನುಗ್ರಹ ಯೋಜನೆ(Anugraha Scheme) ಜಾರಿಗೆ ತರಲಾಗಿತ್ತು. ಅವಘಡದಲ್ಲಿ ಕುರಿಗಳು ಮೃತಪಟ್ಟರೆ ಪರಿಹಾರ ಒದಗಿಸುವ ಈ ಅನುಗ್ರಹ ಯೋಜನೆಗೆ ಈಗ ಗ್ರಹಣ ಹಿಡಿದಿದೆ. ಸಿದ್ದರಾಮಯ್ಯ(Siddaramaiah) ಮೊದಲ ಬಾರಿ ಸಿಎಂ ಆದಾಗ ಜಾರಿ ಮಾಡಿದ್ದ ಮಹತ್ವಾಕಾಂಕ್ಷಿ ಯೋಜನೆಯೇ ಈ ಅನುಗ್ರಹ ಯೋಜನೆ. ಅಂದು ಜಾರಿಯಾಗಿದ್ದೇ ಬಂತು.ನಂತರ ಹಳ್ಳ ಹಿಡಿಯಿತು. ಈಗ ಮತ್ತೆ ಅಧಿಕಾರದ ಗದ್ದುಗೆ ಏರಿರೋ ಸಿದ್ದರಾಮಯ್ಯನವರು ತಮ್ಮದೇ ಸಮುದಾಯದವರಿಗೆ ಆಸರೆಯಾಗಿದ್ದ ಅನುಗ್ರಹ ಯೋಜನೆ ಬಗ್ಗೆ ಗಮನವನ್ನೇ ಹರಿಸುತ್ತಿಲ್ಲ. ಬಜೆಟ್ನಲ್ಲಿ ಅನುಗ್ರಹ ಯೋಜನೆ ಮರುಜಾರಿ ಮಾಡುವುದಾಗಿ ಘೋಷಣೆ ಮಾಡಿದ್ರೂ ಅನುಷ್ಠಾನ ಮಾಡೋದಕ್ಕೆ ಹಿಂದೇಟು ಹಾಕ್ತಿದ್ದಾರೆ.ಕುರಿ, ಮೇಕೆಗಳು ಆಕಸ್ಮಿಕವಾಗಿ ಮೃತಪಟ್ರೆ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡಲಾಗುತ್ತಿತ್ತು. ಇದು ಹೊಸ ಕುರಿ ಖರೀದಿಗೆ, ಜೀವನೋಪಾಯಕ್ಕೆ ನೆರವಾಗುತ್ತಿತ್ತು. ಆದ್ರೀಗ ಕುರಿ, ಮೇಕೆ ಕಳೆದುಕೊಂಡ್ರೆ ಕಣ್ಣೀರೇ ಗತಿ ಅಂತ ಕುರಿಗಾಹಿಗಳು ಅಳಲು ತೋಡಿಕೊಳ್ತಿದ್ದಾರೆ.

ಇದನ್ನೂ ವೀಕ್ಷಿಸಿ:  ಮಳೆ ..ಬೆಳೆ ಇಲ್ಲ..ಅನ್ನದಾತ ಕಂಗಾಲು: ರೈತರ ಕೈ ಸೇರದ ಬರ ಪರಿಹಾರ..!

Video Top Stories