userpic
user icon

ಪೆಟ್ರೋಲ್‌ ಉಳಿಸಲು ಜನರಿಂದ ಹೊಸ ತಂತ್ರ: ಇವಿ ಬೈಕ್‌ ಖರೀದಿಸಲು ಮುಂದಾದ ಜನ

Santosh Naik  | Updated: Jun 6, 2023, 7:19 PM IST

ಬೆಂಗಳೂರು (ಜೂ.6): ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಉಚಿತ 200 ಯುನಿಟ್‌ ಯೋಜನೆಯಾದ ಗೃಹಜ್ಯೋತಿಯ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಇದರ ಬೆನಲ್ಲಿಯೇ ಅದರ ಮಾರ್ಗಸೂಚಿಗಳನ್ನು ಜನರಲ್ಲಿ ಗೊಂದಲ ಉಂಟು ಮಾಡಿದೆ. ಇನ್ನೊಂದೆಡೆ ಸರ್ಕಾರ ನೀಡುತ್ತಿರುವ 200 ಯುನಿಟ್‌ಗಳ ಉಚಿತ ವಿದ್ಯುತ್‌ ಯೋಜನೆಯ ಸಂಪೂರ್ಣ ಲಾಭ ಪಡೆಯಬೇಕು ಎನ್ನುವ ನಿಟ್ಟಿನಲ್ಲೂ ಜನರು ಕೂಡ ಮುಂದಾಗಿದ್ದಾರೆ. ರಾಜ್ಯ ರಾಜಧಾನಿಯಲ್ಲಿ ಇದರ ಲಾಭ ಪಡೆಯುವ ದೃಷ್ಟಿಯಲ್ಲಿ ಜನರು ಎಲೆಕ್ಟ್ರಿಕ್‌ ಬೈಕ್‌ಗಳ ಖರೀದಿಗೆ ಮುಂದಾಗಿದ್ದಾರೆ. ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಎಲೆಕ್ಟ್ರಿಕ್‌ ಬೈಕ್‌ಗಳ ಬೇಡಿಕೆ ವ್ಯಾಪಕವಾಗಿ ಕಂಡುಬಂದಿದೆ ಎನ್ನಲಾಗಿದೆ.

ಬಾಡಿಗೆದಾರರಿಗೆ ಗುಡ್‌ ನ್ಯೂಸ್‌ ..!: ಫ್ರೀ ವಿದ್ಯುತ್‌ ಗೊಂದಲಕ್ಕೆ ತೆರೆ ಎಳೆದ ಸಿಎಂ ಸಿದ್ದರಾಮಯ್ಯ ..!

Must See