Asianet Suvarna News Asianet Suvarna News

ಕ್ಷಣ ಕ್ಷಣಕ್ಕೂ ಆತಂಕ, ಭಯ ಕಣ್ಣೀರ ಕೋಡಿ: ಗಂಡನ ಜೀವ ಉಳಿಸಿಕೊಳ್ಳಲು ನಿತ್ಯ ಅಲೆದಾಟ!

ರಾಮಯ್ಯ ಆಸ್ಪತ್ರೆಯಲ್ಲಿ ಸಂತೋಷ್‌​ಗೆ ಡಯಾಲಿಸಿಸ್
ಆಗಸ್ಟ್ 17ರೊಳಗೆ ಸಂತೋಷ್‌​ಗೆ ಕಿಡ್ನಿ ಕಸಿ ಆಗಬೇಕಿದೆ
ಸಂತೋಷ್ ಪ್ರಾಣ ಉಳಿಸಲು ಪತ್ನಿ ಐಶ್ವರ್ಯ ಹೋರಾಟ

ಆಸ್ಪತ್ರೆಯ ಬೆಡ್ ಮೇಲೆ ಮಲಗಿರೋ ಸಂತೋಷ್​ ಕಿಡ್ನಿ(kidney) ಸಮಸ್ಯೆಯಿಂದ ಬಳಲುತ್ತಿದ್ದಾರೆ. ಸಂತೋಷ್‌ ಮತ್ತು ಐಶ್ವರ್ಯ 2016ರ ಜೂನ್ 24ರಲ್ಲಿ ಪರಸ್ಪರ ಪ್ರೀತಿಸಿ ಮದುವೆ ಆಗಿದ್ರು. ಮದುವೆ ಆದ್ಮೇಲೇ ಹ್ಯಾಪಿ ಆಗಿಯೇ ಲೈಫ್ ಲೀಡ್ ಮಾಡ್ತಾ ಇದ್ರು, ಜೊತೆಗೆ ಇಬ್ಬರು ಮಕ್ಕಳಾದ 5 ವರ್ಷದ ಶರತ್, 6 ವರ್ಷದ ತನೀಶ್ ಜೊತೆಯಲ್ಲಿ ಹಾಯಾಗಿ ಖುಷಿಯಾಗಿದ್ದರು. ಇವರ ಬದುಕು ಅಂದ್ಕೊಂಡಂಗೇ ಸಾಗ್ತಾ ಇತ್ತು. ಆದ್ರೆ, ಇದ್ದಕ್ಕಿದ್ದಂತೆ ಇವರ ಜೀವನದಲ್ಲಿ ಎದ್ದ ಬಿರುಗಾಳಿಗೆ ದಿಕ್ಕು ತೋಚದಂತೆ ಆಗಿದ್ದಾರೆ. 2019ರಲ್ಲಿ ಮೂತ್ರದ ಸೋಂಕು ಎಂದು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂತೋಷ್‌​​ಗೆ ಆಸ್ಪತ್ರೆಯೇ ಖಾಯಂ ಆಗಿ ಬಿಟ್ಟಿತ್ತು, ಹೊಟ್ಟೆಯಲ್ಲಿ ಗಡ್ಡೆ ಇದೆ. ಆಪರೇಷನ್ ಮಾಡಬೇಕು ಎಂದವರು ಕೊನೆಗೆ ಕಿಡ್ನಿ ವೈಫಲ್ಯ ಆಗಿದೆ ಎಂದು ಹೇಳಿಬಿಟ್ಟರು. ವೈದ್ಯರ ಮಾತಿಗೆ ಕಂಗಾಲಾದ ಪತ್ನಿ ಐಶ್ವರ್ಯಗೆ ದಿಕ್ಕುತೋಚದಂತೆ ಆಗಿದೆ.

ಯಾವಾಗ ಕಿಡ್ನಿ ವೈಫಲ್ಯ(kidney failure) ಅನ್ನೋದು  ಗೊತ್ತಾಯ್ತೋ  ಗಂಡನನ್ನ ಉಳಿಸಿಕೊಳ್ಳಲು ಅಲೆಯದ ಆಸ್ಪತ್ರೆಯಿಲ್ಲ. ಕಾಣದ ದೇವರುಗಳಿಲ್ಲಿ. ಗಂಡನ ಚಿಕಿತ್ಸೆಗೆ ಅಲ್ಲಿ ಇಲ್ಲಿ ಹಣಕಾಸು ಹೊಂಚಿ ಲಕ್ಷ..ಲಕ್ಷ.. ಖರ್ಚು ಮಾಡಿ ಟ್ರೀಟ್ಮೆಂಟ್ ಕೊಡಿಸಿದ್ದಾರೆ. ಈ ಹಿಂದೇ ಕೂಡ ನಮ್ಮ ಏಷ್ಯಾನೆಟ್​ ಸುವರ್ಣ ನ್ಯೂಸ್‌​ನ ಬಿಗ್​3ಯಲ್ಲಿ ಸಹಾಯ ಕೇಳಿಕೊಂಡು ಬಂದಿದ್ದರು. ಆಗ ಚಿಕಿತ್ಸೆಗೆ  ಕರೆಂಟ್ ಅಫೇರ್ಸ್ ಎಡಿಟರ್ ಆಗಿರೋ ಜಯಪ್ರಕಾಶ್​​ಶೆಟ್ಟಿ ಅವರು 50 ಸಾವಿರ ಸಹಾಯ ಮಾಡಿದ್ದರು. ಇದೀಗ, ಸಂತೋಷ್‌ಗೆ ತುರ್ತಾಗಿ ಕಿಡ್ನಿ ಕಸಿ ಮಾಡಿಸಬೇಕಿದೆ. ಕಿಡ್ನಿ ದಾನಕ್ಕೆ ಸಂತೋಷ್ ಸೋದರ ಅರುಣ್ ಮುಂದಾಗಿದ್ದು, ಬೆಂಗಳೂರಿನ(Bengaluru) ರಾಮಯ್ಯ ಆಸ್ಪತ್ರೆಯವರು ಆಗಸ್ಟ್ 17ರೊಳಗೆ  7 ಲಕ್ಷ  ಅರೇಂಜ್ ಮಾಡಿಕೊಂಡು ಬಂದ್ರೆ ಸಂತೋಷ್​ ಪ್ರಾಣ ಉಳಿಸಬಹುದು ಅಂದಿದ್ದಾರೆ.​ ಹೀಗಾಗಿ ಈ ಹುಡುಗಿ ಹಣಕ್ಕಾಗಿ ಕಂಡ ಕಂಡವರ ಮನೆ ಬಾಗಿಲು, ರಾಜಕಾರಣಿಗಳ ಮನೆ ಕಾದರು ಯಾರೂ ಈಕೆಯ ನೆರವಿಗೆ ದಾವಿಸಿಲ್ಲ.

ಇದನ್ನೂ ವೀಕ್ಷಿಸಿ:  ಅನಧಿಕೃತ ಖಾಸಗಿ ಶಾಲೆಗಳಿಗೆ ಸದ್ಯದ್ರಲ್ಲೇ ಬೀಳುತ್ತೆ ಬೀಗ: ಆ.14ರೊಳಗೆ ಮುಚ್ಚುವಂತೆ ಖಡಕ್ ಆದೇಶ !

Video Top Stories