Asianet Suvarna News Asianet Suvarna News

ರಾಜ್ಯಾದ್ಯಂತ ಬರ ಅಧ್ಯಯನ ಕೈಗೊಂಡ ‘ಕೇಸರಿ’ ಪಡೆ: ರೈತರೊಂದಿಗೆ ಸಮಾಲೋಚನೆ ನಡೆಸಿದ ಬಿಜೆಪಿ ಲೀಡರ್ಸ್

ಈ ಬಾರಿ ಮುಂಗಾರು ಕೈಕೊಟ್ಟ ಪರಿಣಾಮ ಕರ್ನಾಟಕದ ಬಹುತೇಕ ಜಿಲ್ಲೆಗಳು ಬರದ ಶಾಪಕ್ಕೆ ತುತ್ತಾಗಿವೆ. ಬೆಳೆದ ಬೆಳೆ ಉಳಿಸಿಕೊಳ್ಳಲು ಅನ್ನದಾತ ಪರದಾಡುತ್ತಿದ್ದಾರೆ. ಒಂದು ಕಡೆ ನೀರಿಗಾಗಿ ಹಾಹಾಕಾರ ಜೋರಾಗಿದ್ದು, ಮತ್ತೊಂದೆಡೆ ಸರ್ಕಾರ ಸರಿಯಾಗಿ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ಹೆಚ್ಚಾಗಿದೆ.

ರಾಜ್ಯ ಸರ್ಕಾರ ಸರಿಯಾಗಿ ವಿಮರ್ಶೆ ಮಾಡದೆ ಬರ ಪೀಡಿತ(Drought) ಜಿಲ್ಲೆಗಳ ಘೋಷಣೆ ಮಾಡಿದೆ. ಕೆಲವು ಜಿಲ್ಲೆಗಳಲ್ಲಿ ಬರ ಸಮಸ್ಯೆ ಇದ್ರೂ ಘೋಷಿಸಿಲ್ಲ. ಇನ್ನೂ ಬರ ಘೋಷಣೆಯಾದ ತಾಲೂಕುಗಳಿಗೂ ಪರಿಹಾರ ಕೈ ಸೇರಿಲ್ಲ. ಇದೆಲ್ಲವನ್ನೂ ಮುಂದಿಟ್ಟುಕೊಂಡು ರೈತರ ಸಂಕಷ್ಟ ಆಲಿಸಲು ಬಿಎಸ್ ಯಡಿಯೂರಪ್ಪ(B. S. Yediyurappa) ನೇತೃತ್ವದಲ್ಲಿ ಒಟ್ಟು 17 ತಂಡಗಳ ಮೂಲಕ ಬಿಜೆಪಿ(BJP) ಬರ ಅಧ್ಯಾಯನಕ್ಕೆ  ಇಳಿದಿದೆ. ಕಲ್ಪತರು ನಾಡು(Tumakuru) ಮಳೆ ಇಲ್ಲದೆ ಬರದಿಂದ ಕಂಗೆಟ್ಟಿದೆ. ಆದ್ರಿಂದ ಬಿ.ಎಸ್ ಯಡಿಯೂರಪ್ಪ ಶಿರಾ, ಬೆಳ್ಳಾವಿಯಲ್ಲಿ ರೈತರ ಬೆಳೆ ವೀಕ್ಷಣೆ ಮಾಡಿದ್ರು. ಬಳಿಕ ಕೈಗಾರಿಕೋದ್ಯ ಜೊತೆ ಸಭೆ ನಡೆಸಿದ್ರು. ಇನ್ನೂ ಗಣಿನಾಡು ಬಳ್ಳಾರಿಯಲ್ಲಿ ಮಾಜಿ ಸಚಿವ ಈಶ್ವರಪ್ಪ ಬೆಳೆ ಹಾನಿ ಸಮೀಕ್ಷೆ ನಡೆಸಿದ್ರು. ನಂತರ ರೈತರ ಜೊತೆ ಸಂವಾದ ನಡೆಸಿದ್ರು. ಸಂವಾದ ವೇಳೆ  ನೀರಿನ ಲಭ್ಯತೆಯ ಮಾಹಿತಿಯೇ ಇಲ್ಲದೇ ಬಂದ ಈಶ್ವರಪ್ಪ ಉಸ್ತುವಾರಿ ಸಚಿವ ನಾಗೇಂದ್ರಗೆ ಕರೆ ಮಾಡಿದ್ರು. ಅವರು ಸ್ವೀಕಾರ ಮಾಡದೇ ಇದ್ದಾಗ ಅವರ ಪಿಎ ಮತ್ತು ಜಿಲ್ಲಾಧಿಕಾರಿಗೆ ಕರೆ ಮಾಡಿ ನೀರು ಬಿಡುವಂತ ಒತ್ತಾಯಿಸಿದ್ರು. ಇತ್ತ ಬಿಜೆಪಿ ಫೈರ್ ಬ್ರಾಂಡ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್  ಚಾಮರಾಜನಗರದಲ್ಲಿ ಪ್ರವಾಸ ಕೈಗೊಂಡಿದ್ರು.  ಬಳಿಕ ಮಾತನಾಡಿದ ಯತ್ನಾಳ್,  ರಾಜ್ಯದಲ್ಲಿ ಸಿದ್ದರಾಮಯ್ಯ ಕಾಲು ಗುಣದಿಂದ ಬರಗಾಲ ಬಂದಿದೆ. ಆದರೆ ನಮ್ಮ ಪ್ರವಾಸ ಆರಂಭ ಆಗುತ್ತೆ ಅಂದಾಕ್ಷಣ ವರುಣ ಕೃಪೆ ತೋರಿದ್ದಾನೆ ಚಾಮರಾಜನಗರ, ಮೈಸೂರು ಭಾಗದಲ್ಲಿ ಮಳೆಯಾಗಿದೆ ಎಂದರು. 

ಇದನ್ನೂ ವೀಕ್ಷಿಸಿ:  ಪ್ರಪೋಸ್ ಮಾಡಿದ ವಾರಕ್ಕೆ 2ನೇ ಮದುವೆಯಾದ ನಟಿ ಅಮಲಾ ಪೌಲ್!